Home
ಸುದ್ದಿಜಾಲ

ಏಲಿಯನ್‌ಗಳು ಭೂಮಿಯನ್ನು ಪ್ರವೇಶಿಸಿವೆ, ನಾವೇ ಗಮನಿಸಿಲ್ಲ: ನಾಸಾ ವಿಜ್ಞಾನಿ

ಅನ್ಯಗ್ರಹ ಜೀವಿಗಳು ಇದಾಗಲೇ ಭೂಮಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ, ಆದರೆ ಮಾನವರು ಅವುಗಳನ್ನು ಗುರುತಿಸಲು ಅಸಮರ್ಥರಾಗಿದ್ದಾರೆ ಎಂದು ನಾಸಾ ವಿಜ್ಞಾನಿಯೋರ್ವರು ಹೇಳಿದ್ದಾರೆ. ಏಲಿಯನ್‌ಗಳು ಭೂಮಿಗೆ ಮೊದಲೇ ಬಂದಿದ್ದವು, ಆದರೆ ನಮ್ಮ ಗಮನಕ್ಕೆ ಬಂದಿಲ್ಲವಷ್ಟೇ. ನಾವು ಊಹಿಸಿಕೊಂಡಿರುವ ಏಲಿಯನ್‌ಗಳಿಗಿಂತಲೂ ವಿಭಿನ್ನ ಆಕಾರ ಹೊಂದಿವೆ ಎಂದು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿನ ನಾಸಾ ಅಮೆಸ್ ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ನಾಸಾ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ಒಂದು ಸಂಶೋಧನಾ ಪ್ರಬಂಧದಲ್ಲಿ ಹೇಳಿದಂತೆ, ಮಾನವರು ಭೂಮಿಗೆ ಬಂದಿರುವ ಅನ್ಯಗ್ರಹ ಜೀವಿಗಳನ್ನು ನೋಡಲು ವಿಫಲರಾಗಿದ್ದಾರೆ, ಏಕೆಂದರೆ ಅವರು ಇಂಗಾಲ ಆಧಾರಿತ ಜೀವಿಗಳನ್ನು ಹೋಲುವುದಿಲ್ಲ. ಜೊತೆಗೆ ಈಗಾಗಲೇ ಪತ್ತೆ ಮಾಡಲಾಗದ ಅನ್ಯಗ್ರಹದ ಜೀವಿಗಳು ಭೂಮಿಗೆ ಬಂದಿರಬಹುದು ಎಂದು ನಾನು ಕಲ್ಪಿಸುತ್ತೇನೆ. ನಾವು ಅವುಗಳ ಬಗ್ಗೆ ಇರುವ ಕಲ್ಪನೆಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಏಲಿಯನ್‌ಗಳು ಭೂಮಿಯನ್ನು ಪ್ರವೇಶಿಸಿವೆ, ನಾವೇ ಗಮನಿಸಿಲ್ಲ: ನಾಸಾ ವಿಜ್ಞಾನಿ

ನಾವಂದುಕೊಂಡಂತೆ ಏಲಿಯನ್‌ಗಳು ಕಾರ್ಬನ್‌ ಆಧಾರಿತ ಜೀವಿಗಳಲ್ಲ. ಅವುಗಳನ್ನು ಅಷ್ಟು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ. ಆದರೆ, ನಾವು ಕೇವಲ ಕಲ್ಪನೆ ಮಾತ್ರದಿಂದ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಉನ್ನತ ತಂತ್ರಜ್ಞಾನ ಹಾಗೂ ಇಂಟೆಲಿಜೆನ್ಸ್ ಬಳಸಿ ಇವುಗಳನ್ನು ಪತ್ತೆ ಹಚ್ಚಲು ಮುಂದಾಗಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡರೂ ಇವೆಲ್ಲವನ್ನೂ ಹೊರತಾಗಿಸಿ ಅನ್ಯಗ್ರಹ ಜೀವಿಗಳು ಭೂಮಿಯನ್ನು ಪ್ರವೇಶಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದೋ ನಾವೇ ಅವುಗಳನ್ನು ಹುಡುಕಬೇಕು ಅಥವಾ ಅವುಗಳಿಗೆ ನಮ್ಮ ಗುರುತು ಸಿಗುವಂತೆ ಮಾಡಬೇಕು (ಒಂದು ವೇಳೆ ಅವುಗಳು ಮನುಷ್ಯರನ್ನು ಗುರುತಿಸಿಲ್ಲ ಎಂದಾದರೆ) ಎಂದು ಕೊಲಂಬನೊ ಬಹಳ ಸರಳವಾಗಿ ವಿವರಿಸಿದ್ದಾರೆ. ಗಾತ್ರದಲ್ಲಿ ಅತ್ಯಂತ ಸಣ್ಣ ಜೀವಿಗಳಾಗಿದ್ದು, ಅವುಗಳ ಪತ್ತೆಗೆ ಉನ್ನತ ತಂತ್ರಜ್ಞಾನ ಮತ್ತು ಬುದ್ಧಿಮತ್ತೆ ಬೇಕು. ಅವುಗಳ ಗಾತ್ರದ ಆಧಾರದಲ್ಲಿ ಏಲಿಯನ್‌ಗಳನ್ನು ಊಹಿಸಿಕೊಂಡು ಪತ್ತೆಗೆ ಗಂಭೀರ ಯತ್ನ ನಡೆಸಬೇಕು ಎಂದು ನಾಸಾ ವಿಜ್ಞಾನಿ ಲೇಖನದಲ್ಲಿ ತಿಳಿಸಿದ್ದಾರೆ.

ಏಲಿಯನ್‌ಗಳು ಭೂಮಿಯನ್ನು ಪ್ರವೇಶಿಸಿವೆ, ನಾವೇ ಗಮನಿಸಿಲ್ಲ: ನಾಸಾ ವಿಜ್ಞಾನಿ

ಭೂಮಿಯಲ್ಲಿ ನಾಗರಿಕತೆಯ ಹುಟ್ಟಿನ ಬಗ್ಗೆ ಮತ್ತೆ ಸಂಶೋಧನೆ ನಡೆಸಬೇಕು. ಉನ್ನತ ತಂತ್ರಜ್ಞಾನದ ಮೂಲಕ 10,000 ವರ್ಷಗಳ ಹಿಂದಿನಿಂದ ನಾಗರಿಕತೆಯ ಅಭಿವೃದ್ಧಿ ಹೇಗಾಯಿತು ಎಂಬುದರ ಸಂಶೋಧನೆಯಾಗಬೇಕು. 500 ವರ್ಷಗಳ ಹಿಂದೆಯಷ್ಟೇ ವೈಜ್ಞಾನಿಕ ಬೆಳವಣಿಗೆ ಕಂಡಿರುವುದನ್ನು ನಾವಿಲ್ಲಿ ಗಮನಿಸಬಹುದು ಎಂದಿದ್ದಾರೆ. ಅವರ ಈ ಅಭಿಪ್ರಾಯಗಳೆಲ್ಲವೂ ಸಂಶೋಧನಾ ಪತ್ರಿಕೆ ಇಂಡಿಪೆಂಡೆಂಟ್‌ನಲ್ಲಿ ಪ್ರಕಟವಾಗಿದೆ.

Best Mobiles in India

English summary
Aliens might have visited earth in the past, but humans may not have noticed them as they may look very different from the way we visualise them, says Silvano P Colombano. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+