Home
ಸುದ್ದಿಜಾಲ

2022 ರ ವೇಳೆಗೆ ಭಾರತದ ಎಲ್ಲಾ ಹಳ್ಳಿಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ!

ಭಾರತ ದೇಶಾದ್ಯಂತ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸೇವೆಯೂ ಸಾರ್ವತ್ರಿಕವಾಗಿದ್ದು ಎಲ್ಲರಿಗೂ ಸಮನಾಗಿ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್‌ ಮಿಷನ್ ಹಮ್ಮಿಕೊಳ್ಳಲಾಗಿದೆ. ಈ ಮಿಷನ್ ವಿವಿಧ ಪಾಲುದಾರರ ಮೂಲಕ ಸುಮಾರು 7 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು 2022 ರ ವೇಳೆಗೆ ಭಾರತದ ಎಲ್ಲಾ ಹಳ್ಳಿಗಳೂ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆಯಲಿವೆ, ಎಂದು ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ದೇಶ

ಹೌದು ದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮೊಬೈಲ್ ಮತ್ತು ಇಂಟರ್‌ನೆಟ್ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹ ಕೆಲಸ ಮಾಡುತ್ತಿದ್ದು, ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಯೋಜನೆಯಡಿ 30 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಹಾಕಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಬೇಕಾದ ಸರಿಸುಮಾರು 7 ಲಕ್ಷ ಕೋಟಿ ರೂ. ಹೂಡಿಕೆಗಳಲ್ಲಿ ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ (USOF) ನಿಂದ 70,000 ಕೋಟಿ ರೂ. ಹೂಡಿಕೆಯಾಗಿದೆ.

ಟವರ್‌

ಇನ್ನು ಈ ಯೋಜನೆಯಡಿಯಲ್ಲಿ ಟವರ್‌ಗಳ ಸಾಂದ್ರತೆಯನ್ನ 1,000 ಜನಸಂಖ್ಯೆಯ ಒಂದು ಘಟಕಕ್ಕೆ 1 ಟವರ್‌ ಅನ್ನ ಹೆಚ್ಚಿಸಲು ಯೋಜಿಸಲಾಗಿರುವುದರಿಂದ ಸೆಲ್ ಟವರ್ ಸಂಖ್ಯೆಗಳು ಹೆಚ್ಚಾಗುವ ಸಾಧ್ಯತೆ ಕೂಡ ದಟ್ಟವಾಗಿದ್ದು. ಸದ್ಯ 0.42ಅನುಪಾತದಂತೆ ಪ್ರಸ್ತುತ 5.56 ಲಕ್ಷದ ಟವರ್‌ಗಳಿದ್ದು ಇದರ ಸಂಖ್ಯೆ 10 ಲಕ್ಷಕ್ಕೆ ಹೋಗುತ್ತದೆ. ಅಲ್ಲದೆ ಪೈಬರ್‌ನಿಂದ ಸಂಯೋಜನೆಗೊಂಡ ಟವರ್‌ಗಳ ಸಂಖ್ಯೆಯನ್ನು 30% ನಿಂದ 70%ಕ್ಕೆ ಹೆಚ್ಚಿಸಲಾಗುತ್ತೆ. ಇದರಿಂದಾಗಿ 50 Mbps ವರೆಗಿನ ವೇಗವನ್ನು ಹಂತ ಹಂತವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.

ಡಿಜಿಟಲ್

ಸದ್ಯ ಡಿಜಿಟಲ್ ಮೂಲಸೌಕರ್ಯ ವಿಸ್ತರಣೆಗೆ ಸಂಬಂಧಿಸಿದಂತೆ ಸ್ಥಿರವಾದ ನೀತಿಗಳನ್ನು ನಿರ್ವಹಿಸಲು ಸರ್ಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಕೇಬಲ್ ವಿನ್ಯಾಸಗಳಿಗೆ ಅಗತ್ಯವಾದ ರೈಟ್ ಆಫ್ ವೇ (ರೋಡಬ್ಲ್ಯೂ) ಅನುಮೋದನೆಗಳು ಇದರಲ್ಲಿ ಸೇರಿದೆ. ಈ ಮಿಷನ್ ಇಡೀ ದೇಶವನ್ನು ಡಿಜಿಟಲೀಕರಣಗೊಳಿಸುವ ಒಂದು ಉತ್ತಮ ಹೆಜ್ಜೆಯಾಗಿದೆ.

ಆನ್‌ಲೈನ್

ಈಗಾಗಲೇ ಡಿಜಿಲಾಕರ್‌ನಂತಹ ಆನ್‌ಲೈನ್ ಸೇವೆಗಳು ನಾಗರಿಕರಿಗೆ ಕಾಗದಪತ್ರಗಳಿಗಿಂತ ಸುಲಭಗೊಳಿಸಿದರೂ, ಅವು ಇಂಟರ್ನೆಟ್ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಮಾತ್ರ ಸೀಮಿತವಾಗಿವೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ತಂದರೆ ಇನ್ನೂ ಅನೇಕ ನಾಗರಿಕರು ಇಂತಹ ಸೇವೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿನ ಪ್ರಕ್ರಿಯೆಗಳನ್ನು ಎಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಅಲ್ಲದೆ ಅಂತರ್ಜಾಲಕ್ಕೆ ಎಲ್ಲಾ ಜನರು ಒಡ್ಡಿಕೊಳ್ಳುವುದರಿಂದ ಅಪಾರವಾದ ಬೆಳವಣಿಗೆಯೂ ಇದೆ ಎಂದು ಸಚಿವರು ತಿಳಿಸಿದ್ದಾರೆ.

Best Mobiles in India

English summary
On Tuesday, the Indian government announced that all Indian villages will get broadband access by 2022. The mission attracted investments of about Rs 7 lakh crore through various stakeholders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+