ನೀವು ಜಿಯೋ 5G ಸಿಮ್ ಬಳಸುತ್ತಿದ್ದರೆ ಈ ಭರ್ಜರಿ ಸಿಹಿಸುದ್ದಿ ನೋಡಿ!
ಭಾರತದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಇದೀಗ ತನ್ನ ಎಲ್ಲಾ ಗ್ರಾಹಕರಿಗೆ 18 ತಿಂಗಳ ಕಾಲ ಉಚಿತ Google AI Pro (Gemini Pro) ಸಬ್ಸ್ಕ್ರಿಪ್ಶನ್ ಒದಗಿಸುತ್ತಿದೆ. ಕೆಲವೇ ದಿನಗಳ ಹಿಂದೆ ಘೋಷಣೆಯಾದ ಈ ಕೊಡುಗೆಯನ್ನು, ಆರಂಭದಲ್ಲಿ 18 ರಿಂದ 25 ವರ್ಷದ ಯುವಕರಿಗೆ ಮಾತ್ರ ನೀಡಲಾಗಿತ್ತು. ಇದೀಗ ಜಿಯೋದ ಎಲ್ಲ ವಯಸ್ಸಿನ ಬಳಕೆದಾರರು ಈ ಆಫರ್ ಅನ್ನು ಪಡೆಯಬಹುದು. ಹಾಗಾದರೆ, ಜಿಯೋ ಬಳಕೆದಾರರು ಉಚಿತವಾಗಿ Google AI Pro ಸಬ್ಸ್ಕ್ರಿಪ್ಶನ್ ಪಡೆಯುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.
ಏನಿದು ಈ Google AI Pro?
Google AI Pro ಅಥವಾ Gemini Pro ಎಂದು ಕರೆಯಲ್ಪಡುವ ಈ ಪ್ರೀಮಿಯಂ ಸಬ್ಸ್ಕ್ರಿಪ್ಶನ್‌ನಲ್ಲಿ Googleನ ಮುಂದಿನ ತಲೆಮಾರಿನ AI ಮಾದರಿ Gemini 2.5 Pro ಒಳಗೊಂಡಿದೆ. ಇದು ಪಠ್ಯದಿಂದ ಚಿತ್ರ, ವಿಡಿಯೋ ಮತ್ತು ಕೋಡ್ ರಚನೆಗೂ ಸಹಕಾರ ನೀಡುತ್ತದೆ. ಸಾಮಾನ್ಯ ಉಚಿತ ಆವೃತ್ತಿಯಿಗಿಂತ ಇದು ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರೀಮಿಯಂ ಸಬ್ಸ್ಕ್ರಿಪ್ಶನ್‌ನಲ್ಲಿ Googleನ ಹೊಸ ಕೃತಕ ಬುದ್ಧಿಮತ್ತೆ ಸೇವೆಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬಳಸಿಕೊಳ್ಳಬಹುದು.
ಯಾರು ಪಡೆಯಬಹುದು?
ಪ್ರಸ್ತುತ ಸಕ್ರಿಯ ಜಿಯೋ ಸಿಮ್ ಕಾರ್ಡ್ ಹೊಂದಿರುವ ಎಲ್ಲಾ ಬಳಕೆದಾರರು ಉಚಿತವಾಗಿ Google AI Pro ಸಬ್ಸ್ಕ್ರಿಪ್ಶನ್ ಪಡೆಯಬಹುದು. ಆದರೆ, ಈ ಗ್ರಾಹಕರು ಅನ್ಲಿಮಿಟೆಡ್ 5G ಪ್ಲ್ಯಾನ್ ಸಬ್ಸ್ಕ್ರಿಪ್ಶನ್ ಹೊಂದಿರಬೇಕು. ಅಂದರೆ, ಈ ಕೊಡುಗೆಯು 4G ಬಳಕೆದಾರರಿಗೆ ಲಭ್ಯವಿಲ್ಲ ಎಂದೇ ಹೇಳಬಹುದು.

ಉಚಿತ ಸಬ್ಸ್ಕ್ರಿಪ್ಶನ್ ಪಡೆಯುವ ವಿಧಾನ!
- ಮೊದಲು ನಿಮ್ಮ ಫೋನ್‌ನಲ್ಲಿ MyJio ಆಪ್ ತೆರೆಯಿರಿ (ಆಪ್ ಇಲ್ಲದಿದ್ದರೆ ಡೌನ್‌ಲೋಡ್ ಮಾಡಿ).
- ಹೋಮ್ ಪೇಜ್‌ನಲ್ಲಿ 'Early Access' ಎಂಬ ಬ್ಯಾನರ್ ಕಾಣುತ್ತದೆ.
- ಅದರಲ್ಲಿ 'Claim Now' ಆಯ್ಕೆ ಮಾಡಿ.
- ಹೊಸ ವೆಬ್ ಪುಟ ತೆರೆದು ಪ್ಲ್ಯಾನ್ ವಿವರಗಳನ್ನು ತೋರಿಸುತ್ತದೆ.
- ಕೆಳಗೆ ಸ್ಕ್ರೋಲ್ ಮಾಡಿ 'Agree' ಬಟನ್ ಒತ್ತಿ.
- ನಂತರ Gemini ಆಪ್ ತೆರೆಯಿರಿ ಮತ್ತು ನಿಮ್ಮ Pro Status ದೃಢೀಕರಿಸಿ.
- ಇಷ್ಟೇ. ಈಗ ನೀವು 18 ತಿಂಗಳ ಉಚಿತ Google AI Pro ಸೌಲಭ್ಯವನ್ನು ಹೊಂದಿದ್ದೀರಾ.!
Google AI Pro ಸಬ್ಸ್ಕ್ರಿಪ್ಶನ್‌ನ ಪ್ರಮುಖ ಪ್ರಯೋಜನಗಳು
ಒಮ್ಮೆ ನೀವು ಈ ಕೊಡುಗೆಗೆ ಚಂದಾದಾರರಾದರೆ, ಸಾಮಾನ್ಯ ಬಳಕೆದಾರರಿಗಿಂತ Pro ಸದಸ್ಯರಿಗೆ ಹೆಚ್ಚಿನ AI ವೈಶಿಷ್ಟ್ಯಗಳು ಲಭ್ಯವಿರಲಿವೆ. ಇದರಲ್ಲಿ,
- Gemini 2.5 Pro AI ಮಾದರಿಗೆ ಪೂರ್ಣ ಪ್ರವೇಶ
- Nano Banana ಮತ್ತು Deep Research ಮೂಲಕ ಚಿತ್ರ ರಚನೆ
- Veo 3.1 Fast ತಂತ್ರಜ್ಞಾನದಿಂದ ಪಠ್ಯದಿಂದಲೇ ವಿಡಿಯೋ ನಿರ್ಮಾಣ
- Gemini Code Assist ಮತ್ತು CLI ಉಪಕರಣಗಳಿಗೆ ಹೆಚ್ಚಿನ ಬಳಕೆ ಮಿತಿ
- Gmail, Drive, Docs, Sheets ಸೇರಿದಂತೆ Google Workspace ಆ್ಯಪ್‌ಗಳಲ್ಲಿ AI ಸಹಾಯ
- 2TB ಕ್ಲೌಡ್ ಸ್ಟೋರೇಜ್ (Drive, Gmail ಮತ್ತು Photos ಸೇರಿ)
- Whisk, Flow, ಮತ್ತು NotebookLMಗೆ ಹೆಚ್ಚುವರಿ ವೇಗ ಮತ್ತು ಸಾಮರ್ಥ್ಯ.
ಜಿಯೋ ಮತ್ತು ಗೂಗಲ್ ನಡುವಿನ ಈ ಸಹಭಾಗಿತ್ವವು ಭಾರತದಲ್ಲಿ AI ತಂತ್ರಜ್ಞಾನವನ್ನು ಪ್ರತಿಯೊಬ್ಬ ಸಾಮಾನ್ಯ ಬಳಕೆದಾರರ ಮಟ್ಟಕ್ಕೆ ತರುತ್ತಿದೆ. ಈಗ ಯಾವುದೇ ವಯಸ್ಸಿನ ಜಿಯೋ ಗ್ರಾಹಕರು ತಮ್ಮ ಫೋನ್‌ನಲ್ಲೇ Gemini Pro ಸಬ್ಸ್ಕ್ರಿಪ್ಶನ್ ಅನ್ನು ಸಕ್ರಿಯಗೊಳಿಸಿ, ಅತ್ಯಾಧುನಿಕ AI ಅನುಭವವನ್ನು ಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಇದರ ಮೂಲಕ ಜಿಯೋ ಬಳಕೆದಾರರು Googleನ ಇತ್ತೀಚಿನ ಕೃತಕ ಬುದ್ಧಿಮತ್ತೆ ಸೇವೆಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಪಯೋಗಿಸಲು ಸಾಧ್ಯವಾಗುತ್ತದೆ.


Click it and Unblock the Notifications








