ಸರ್ಕಾರದ ಒಂದು ಆದೇಶಕ್ಕೆ ಬೇಸಿಕ್ ಮೊಬೈಲ್ ಬೆಲೆ 80% ಇಳಿಕೆ!! ಏಕೆ ಗೊತ್ತಾ?

Written By:

2018 ಜನವರಿ 1 ನೇ ತಾರೀಖಿನವರಗೂ ಕಡಿಮೆ ಬೆಲೆಯ ಬೇಸಿಕ್ ಮೊಬೈಲ್ ಖರೀದಿಸುವವರಿಗೆ ಸುಗ್ಗಿಕಾಲವೆಂದು ಹೇಳಬಹುದು. ಹೌದು 2018 ಜನವರಿ ವರೆಗೂ ಬೇಸಿಕ್ ಫೋನ್‌ಗಳ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ.! ಸರ್ಕಾರದ ಒಂದೇ ಒಂದು ಆದೇಶಕ್ಕೆ ಮೊಬೈಲ್‌ ಕಂಪೆನಿಗಳು ಕಂಗಾಲಾಗಿದ್ದು, ಇಂತದೊಂದು ಸುದ್ದಿ ಹೊರಬಿದ್ದಿದೆ.!!

2018 ಜ.1ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲೂ ಜಿಪಿಎಸ್ ವ್ಯವಸ್ಥೆ ಅಳವಡಿಸಿರಲೇಬೇಕು. ಇಲ್ಲದಿದ್ದರೆ ಅಂತಹ ಮೊಬೈಲ್‌ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಮೊಬೈಲ್ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಹಾಗಾಗಿ, ಮೊಬೈಲ್‌ ಕಂಪೆನಿಗಳು ಕಂಗಾಲಾಗಿವೆ.

2018 ಜನವರಿ 1 ನೇ ತಾರೀಖಿನವರಗೂ ಕಡಿಮೆ ಬೆಲೆಯ ಬೇಸಿಕ್ ಮೊಬೈಲ್ ಖರೀದಿಸುವವರಿಗೆ ಸುಗ್ಗಿಕಾಲವಾಗಲಿದ್ದು, ಹಾಗಾದರೆ, ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಇಳಿಕೆಯಾಗಲಿದೆ.! ಎಲ್ಲಾ ಮೊಬೈಲ್‌ಗಳಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಏಕೆ? ಎಂಬೆಲ್ಲಾ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲಾ ಮೊಬೈಲ್‌ಗಳಲ್ಲಿ ಜಿಪಿಎಸ್ ವ್ಯವಸ್ಥೆ ಏಕೆ?

ಎಲ್ಲಾ ಮೊಬೈಲ್‌ಗಳಲ್ಲಿ ಜಿಪಿಎಸ್ ವ್ಯವಸ್ಥೆ ಏಕೆ?

ಸುರಕ್ಷತೆಯ ದೃಷ್ಟಿಯಿಂದ, ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ಮೊಬೈಲ್ ಬಳಕೆದಾರರಿರುವ ಸ್ಥಳವನ್ನು ಸುಲಭವಾಗಿ ಪತ್ತೆಹಚ್ಚುವ ಸಲುವಾಗಿ ಜಿಪಿಎಸ್ ಒಂದು ಅತ್ಯುತ್ತಮ ವಿಧಾನ. ಹಾಗಾಗಿ, ಎಲ್ಲಾ ಮೊಬೈಲ್‌ಗಳಲ್ಲಿಯೂ ಜಿಪಿಎಸ್ ವ್ಯವಸ್ಥೆ ಇರಬೇಕು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.!!

ಮೊಬೈಲ್ ತಯಾರಿಕಾ ಕಂಪೆನಿಗಳಿಗೆ ತಲೆನೊವು!!

ಮೊಬೈಲ್ ತಯಾರಿಕಾ ಕಂಪೆನಿಗಳಿಗೆ ತಲೆನೊವು!!

ಇನ್ನು ಸರ್ಕಾರದ ಈ ಆದೇಶಕ್ಕೆ ಮೊಬೈಲ್ ತಯಾರಿಕಾ ಕಂಪೆನಿಗಳು ತಲೆಕೆಡಿಸಿಕೊಂಡಿದ್ದು, ಕಡಿಮೆ ಬೆಲೆಯ ಮೊಬೈಲ್ ಫೋನ್ಗಳಲ್ಲಿ ಪರ್ಯಾಯ ತಂತ್ರಜ್ಞಾನ ಬಳಕೆ ಮಾಡುವ ಕುರಿತು ಟೆಲಿಕಾಂ ಇಲಾಖೆಯಲ್ಲಿ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ, ಅವರ ಬೇಡಿಕೆಯನ್ನು ಟೆಲಿಕಾಂ ಇಲಾಖೆ ತಿರಸ್ಕರಿಸಿದೆ !!

ಬೇಸಿಕ್ ಮೊಬೈಲ್ ಬೆಲೆ ಶೇ 80 ರಷ್ಟು ಇಳಿಕೆ ಸಂಭವ.!!

ಬೇಸಿಕ್ ಮೊಬೈಲ್ ಬೆಲೆ ಶೇ 80 ರಷ್ಟು ಇಳಿಕೆ ಸಂಭವ.!!

ಈಗಾಗಲೇ ಬೇಸಿಕ್ ಮೊಬೈಲ್‌ಗಳಿಗೆ ಬೇಡಿಕೆ ಇಲ್ಲದೇ ಕೊರಗುತ್ತಿರುವ ಮೊಬೈಲ್‌ ಕಂಪೆನಿಗಳಿಗೆ 2018 ಜನವರಿ 1 ಒಳಗೆ ಇರುವ ಮೊಬೈಲ್‌ಗಳನ್ನು ಮಾರಲೇಬೇಕಾದ ಪರಿಸ್ಥಿತಿಗೆ ಸಿಲುಕಿವೆ. ಹಾಗಾಗಿ, ನಷ್ಟ ಅನುಭವಿಸಿದರೂ ಪರವಾಗಿಲ್ಲ ಎಂದು ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡುವ ಸಂಭವ ಇದೆ.!!

2018 ರ ನಂತರ ಬೇಸಿಕ್ ಮೊಬೈಲ್‌ಗಳ ಬೆಲೆ ಭಾರಿ ಏರಿಕೆ!!

2018 ರ ನಂತರ ಬೇಸಿಕ್ ಮೊಬೈಲ್‌ಗಳ ಬೆಲೆ ಭಾರಿ ಏರಿಕೆ!!

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಬೇಸಿಕ್ ಮೊಬೈಲ್‌ಗಳಲ್ಲಿ ಜಿಪಿಎಸ್ ಅಳವಿಸಿರಲೇಬೇಕು ಎನ್ನುವ ನಿರ್ಧಾರದಿಂದ 2018 ರಿಂದ ಬೇಸಿಕ್ ಹ್ಯಾಂಡ್‌ಸೆಟ್‌ಗಳ ಬೆಲೆ ಶೇ.50ರಷ್ಟು ಏರಿಕೆಯಾಗುವ ಸಾಧ್ಯತೆ ಇದೇ ಎಂದು ಮೊಬೈಲ್ ವಿಶ್ಲೇಷಕರು ಅಂದಾಜು ಮಾಡಿದ್ದಾರೆ.!!

ಓದಿರಿ:ಜಿಯೋವಿನ ಹೊಸ 12 ಪ್ಲಾನ್‌ಗಳಿಂದ ಏರ್‌ಟೆಲ್, ಐಡಿಯಾಗೆ ಭಾರಿ ಎಫೆಕ್ಟ್!!..ಏನು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
DoT has said no to handset makers' demand for using alternative technology instead of Global Positioning System. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot