'ವೈಫೈ' ರೂಟರ್ ಉಪಯೋಗಿಸುತ್ತಿರುವ ಎಲ್ಲರೂ ತಿಳಿಯಲೇಬೇಕಾದ ಶಾಕಿಂಗ್ ಸುದ್ದಿ ಇದು!!

|

ಮನೆಯ ಎಲ್ಲ ಸದಸ್ಯರಿಗೆ ಅನುಕೂಲವಾಗುವ ಉದ್ದೇಶಕ್ಕೆ ವೈ-ಫೈ ಸೌಲಭ್ಯವನ್ನು ನಾವು ಬಳಸುತ್ತಿರುತ್ತೇವೆ ಅಥವಾ ಯಾವುದೋ ಒಂದು ಕಂಪೆನಿ ಉಚಿತ ನೀಡಿದೆ ಎಂದು ವೈ-ಫೈ ಸೌಲಭ್ಯವನ್ನು ನಾವು ಬಳಸುತ್ತಿರುತ್ತೇವೆ. ಆದರೆ, ಹೀಗೆ ಸಂಪರ್ಕ ಪಡೆದುಕೊಂಡ ವೈ-ಫೈ ರೂಟರ್‌ ಎಷ್ಟು ಸುರಕ್ಷಿತ ಎಂದು ನಾವು ಯಾವತ್ತು ಯೋಚಿಸುವುದಿಲ್ಲ.

ಹೌದು, ಮನೆಯಲ್ಲಿ ವೈ-ಫೈ ರೂಟರ್ ಇದ್ದರೆ ವಿಡಿಯೊ-ಫೋಟೊ ಡೇಟಾ ಬಹುಬೇಗ ಡೌನ್‌ಲೋಡ್ ಆಗುತ್ತವೆ. ಇನ್ನು ಎಲ್ಲರ ಮೊಬೈಲ್‌ಗಳಿಗೆ ಒಂದೇ ಸಾಧನ ಡೇಟಾ ಪೂರೈಸುತ್ತದೆ ಎಂಬುದಷ್ಟೇ ನಮಗೆ ಮುಖ್ಯವಾಗಿರುತ್ತದೆ. ನಮ್ಮ ಗಮನವೇನಿದ್ದರೂ, ದತ್ತಾಂಶಗಳು ವರ್ಗಾವಣೆಯಾಗುವ ವೇಗ, ಸಂಪರ್ಕದ ಗುಣಮಟ್ಟದತ್ತ ಮಾತ್ರವಿರುತ್ತದೆ.

'ವೈಫೈ' ರೂಟರ್ ಉಪಯೋಗಿಸುತ್ತಿರುವ ಎಲ್ಲರೂ ತಿಳಿಯಲೇಬೇಕಾದ ಶಾಕಿಂಗ್ ಸುದ್ದಿ ಇದು!!

ಆದರೆ, ನಿಮಗೆ ಗೊತ್ತಾ? ನೀವು ಬಳಸುವ ವೈಫೈ ವೇಗಕ್ಕಿಂತ ಸುರಕ್ಷಿತ ನೆಟ್‌ವರ್ಕ್‌ ನಿಮ್ಮ ಆದ್ಯತೆಯಾಗಬೇಕಾಗಿದೆ. ಕೆಲವೊಂದು ವೈ-ಫೈ ನೆಟ್‌ವರ್ಕ್‌ ವೈರಸ್‌ನಿಂದ ಕೂಡಿದ್ದರೆ ನಿಮ್ಮ ಎಲ್ಲ ಸಾಧನಗಳು ಹಾಳಾಗಿ ಹೋಗುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ವೈ-ಫೈ ಸೌಲಭ್ಯವನ್ನು ನಾವು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕಾದ ಅಂಶಗಳನ್ನು ತಿಳಿಯಿರಿ.

ಸುರಕ್ಷಿತ ವೈಫೈ ನೆಟ್‌ವರ್ಕ್‌ ಏಕೆ ಬೇಕು?

ಸುರಕ್ಷಿತ ವೈಫೈ ನೆಟ್‌ವರ್ಕ್‌ ಏಕೆ ಬೇಕು?

ಇತ್ತೀಚಿನ ಸೈಬರ್ ದಾಳಿಗಳು ಸುರಕ್ಷಿತ ವೈಫೈ ನೆಟ್‌ವರ್ಕ್‌ ಅನ್ನು ಸಹ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಖ್ಯಾತ ಕಂಪನಿಗಳು ಅಭಿವೃದ್ಧಿ ಪಡಿಸಿದ ವೈ-ಫೈ ರೂಟರ್‌ಗಳಿಗೇ ಮಾಲ್‌ವೇರ್‌ ಸಮಸ್ಯೆ ತಗುಲಿದ್ದ ಪ್ರಕರಣಗಳು ಸಹ ನಡೆದಿರುವುದರಿಂದ ಸುರಕ್ಷಿತ ವೈಫೈ ನೆಟ್‌ವರ್ಕ್‌ ಅವಶ್ಯಕಥೆ ಇದೆ.

ಸಮಸ್ಯೆಗೆ ತುತ್ತಾಗಿದ್ದು ಹಲವು ವೈಫೈ!

ಸಮಸ್ಯೆಗೆ ತುತ್ತಾಗಿದ್ದು ಹಲವು ವೈಫೈ!

ವೈ-ಫೈ ನೆಟ್‌ವರ್ಕ್‌ ಪೂರೈಸುವಂತಹ ಹೆಸರಾಂತ ಕಂಪನಿಗಳ ನೆಟ್‌ವರ್ಕ್‌ಗಳೇ ಮಾಲ್‌ವೇರ್‌ಗೆ ತುತ್ತಾಗಿವೆ. ಆಸುಸ್‌, ಡಿಲಿಂಕ್‌ನಂತಹ ಕಂಪನಿಗಳು ಒದಗಿಸಿರುವ ವೈ-ಫೈ ನೆಟ್‌ವರ್ಕ್‌ಗಳೂ ವೈರಸ್‌ಗೆ ತುತ್ತಾಗಿದ್ದವು ಎಂದು ಟಾಲೋಸ್‌ ಹೇಳಿದೆ. ಈಗ ಈ ವೈರಸ್‌ ಅನ್ನು ವಿಪಿಎನ್‌ಫಿಲ್ಟರ್‌ ಎಂದು ಕರೆಯಲಾಗುತ್ತಿದೆ.

ಹಾನಿಕಾರಕ ವೈಫೈ ಸಮಸ್ಯೆ ಏನು?

ಹಾನಿಕಾರಕ ವೈಫೈ ಸಮಸ್ಯೆ ಏನು?

ನಿಮ್ಮ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌ ಅಥವಾ ಟಿವಿಗೆ ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸಲು ವೈ-ಫೈ ನೆಟ್‌ವರ್ಕ್‌ ಮುಖ್ಯದ್ವಾರದಂತೆ ಕೆಲಸ ಮಾಡುತ್ತದೆ.ಇಂತಹ ಹಾನಿಕಾರಕ ನೆಟ್‌ವರ್ಕ್‌ನ ಸಂಪರ್ಕ ಪಡೆದ ನಿಮ್ಮ ಎಲ್ಲ ಸಾಧನಗಳು ಹಾಳಾಗಿ ಹೋಗುತ್ತವೆ.

ಅಪಾಯಕಾರಿ ತಂತ್ರಾಂಶ!!

ಅಪಾಯಕಾರಿ ತಂತ್ರಾಂಶ!!

ಇಂತಹ ಹಾನಿಕಾರಕ ವೈ-ಫೈ ನೆಟ್‌ವರ್ಕ್‌ ಸಂಪರ್ಕದಿಂದ ನಿಮ್ಮ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌ ಅಥವಾ ಟಿವಿ ಸಾಧನಗಳು ಹಾಳಾಗುವುದಲ್ಲದೇ, ನಕಲಿ ಬ್ಯಾಂಕಿಂಗ್‌ ವೆಬ್‌ಸೈಟ್‌ಗಳಿಗೆ ದಾಳಿಕೋರರು ಇಂತಹ ಅಪಾಯಕಾರಿ ತಂತ್ರಾಂಶವನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದು ಹೆಚ್ಚು ಅಪಾಯಕಾರಿಯಾಗಿದೆ.

ಇದರಿಂದ ನಮಗೆ ಅಪಾಯಗಳೇನು?

ಇದರಿಂದ ನಮಗೆ ಅಪಾಯಗಳೇನು?

ನೀವು ಸಹಜವಾಗಿ ಬಳಸುವ ತಂತ್ರಾಂಶದ ರೂಪದಲ್ಲಿಯೇ ಮಾಲ್‌ವೇರ್‌ಗಳು ಕೂಡ ಕಾಣಿಸಿಕೊಳ್ಳುತ್ತವೆ. ಇಂತಹ ದೋಷಪೂರಿತ ತಂತ್ರಾಂಶಗಳು, ಸಂಪರ್ಕ ಪಡೆದ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳನ್ನು ಹಾಳುಗೆಡುವುದಲ್ಲದೆ, ಮಾಹಿತಿಯನ್ನೂ ಕದಿಯುತ್ತವೆ. ಹೀಗೇ, ಪಾಸ್‌ವರ್ಡ್‌ಗಳನ್ನೂ ಕದ್ದು, ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನೂ ದೋಚಬಹುದು.

ಇದಕ್ಕೆ ಪರಿಹಾರವೇನು? ಪರಿಹಾರ 1

ಇದಕ್ಕೆ ಪರಿಹಾರವೇನು? ಪರಿಹಾರ 1

ಹೊಸದಾಗಿ ವೈ-ಫೈ ಸಂಪರ್ಕಕ್ಕೆ ಪಡೆಯುವವರು ಆ ವೈ-ಫೈ ಸ್ಟೇಷನ್‌ ನಡೆಸುವ ತಂತ್ರಾಂಶವು ಪರಿಷ್ಕರಿಸಲ್ಪಟ್ಟಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.ಲೇಟೆಸ್ಟ್ ವರ್ಶನ್ ತಂತ್ರಾಂಶವನ್ನು ಆ ವೈಫೈ ಹೊಂದಿರಬೇಕು.ನಿಮ್ಮ ಸ್ಮಾರ್ಟ್‌ಫೋನ್‌ ಆಪರೇಟಿಂಗ್‌ ಸಿಸ್ಟಂನಿಯಮಿತವಾಗಿ ಅಪ್‌ಡೇಟ್‌ ಮಾಡಿಕೊಳ್ಳುತ್ತಿರಬೇಕು.

ಇದಕ್ಕೆ ಪರಿಹಾರವೇನು? ಪರಿಹಾರ 2

ಇದಕ್ಕೆ ಪರಿಹಾರವೇನು? ಪರಿಹಾರ 2

ರೂಟರ್ ಸಂಪರ್ಕ ಪಡೆದಾದ ಇರುವ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳು ಸರಳವಾಗಿರುತ್ತವೆ.ಹಾಗಾಗಿ, ಎಲ್ಲ ಕಂಪನಿಗಳು ನಿಮಗೆ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳನ್ನು ಬದಲಿಸಿಕೊಳ್ಳಿ ಎಂದೇ ಸಲಹೆ ನೀಡಿರುತ್ತವೆ. ಬಳಕೆದಾರರ ಹೆಸರು ಮತ್ತು ಗುಪ್ತಸಂಖ್ಯೆಯನ್ನೇ ನೀವು ಬದಲಿಸದಿದ್ದರೆ ಸುಲಭವಾಗಿ ವೈರಸ್‌ಗೆ ತುತ್ತಾಗಬೇಕಾಗುತ್ತದೆ.

ರೂಟರ್‌ ಅನ್ನು ಬದಲಿಸುವುದು ಉತ್ತಮ!

ರೂಟರ್‌ ಅನ್ನು ಬದಲಿಸುವುದು ಉತ್ತಮ!

ಪಾಸ್‌ವರ್ಡ್‌ ಬದಲಾಯಿಸಿದಂತೆ ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರೂಟರ್ ಅನ್ನು ಕೂಡ ಬದಲಾಯಿಸುವುದು ಉತ್ತಮ. ನಿಮ್ಮ ರೂಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅದರ ಸಂಪರ್ಕ ಪಡೆದ ಸಾಧನಗಳು ಅಪ್‌ಡೇಟ್‌ ಪಡೆಯಲು ವಿಫಲವಾದಾಗಲೂ ವೈರಸ್‌ಗಳು ದಾಳಿ ನಡೆಯಬಹುದು.

Best Mobiles in India

English summary
WPA2 protocol used by vast majority of wifi connections has been broken by Belgian researchers, highlighting potential for internet traffic to be exposed. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X