ಬ್ಯಾಂಕ್‌ಗಳ ಮೋಸಕ್ಕೆ ಬ್ರೇಕ್ ಹಾಕಿ..ಇಂದೇ 'ಅಂಚೆ ಪೇಮೆಂಟ್' ಖಾತೆ ತೆರೆಯಿರಿ!

|

ಇತ್ತೀಚೆಗಿನ ದಿನಗಳಲ್ಲಿ ಪೇಮೆಂಟ್ ಬ್ಯಾಂಕ್‌ ಎನ್ನುವ ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಏರ್‌ಟೆಲ್‌ , ಪೇಟಿಎಂ ಇತ್ಯಾದಿ ಕಂಪೆನಿಗಳು ಇದೀಗ ಪೇಮೆಂಟ್ ಬ್ಯಾಂಕುಗಳನ್ನು ಸ್ಥಾಪಿಸಿದ್ದು ಹಲವಾರು ಜನರು ಚಿಕ್ಕಪುಟ್ಟ ವ್ಯವಹಾರಗಳಿಗೆ ಅವನ್ನು ಉಪಯೋಗಿಸುತ್ತಲೂ ಇದ್ದಾರೆ. ಅದಕ್ಕಿಂತಲೂ ಹೆಚ್ಚಿನದಾಗಿ, ದಿನಕ್ಕೊಂದು ನಿಯಮ, ಶುಲ್ಕಗಳನ್ನು ಹೇರುವ ಬ್ಯಾಂಕ್‌ಗಳಿಂದ ಆಗುತ್ತಿರುವ ಕಿರಿಕಿರಿಗೆ ಪರಿಹಾರವೆಂದರೆ ಖಂಡಿತಾ ಅದು ' ಅಂಚೆ ಪೇಮೆಂಟ್ ಬ್ಯಾಂಕ್'.!

ಹೌದು, ಕಳೆದ ಸೆಪ್ಟೆಂಬರ್‌ 1, 2018ರಂದು ದೇಶದ 3250 ಕಡೆಗಳಲ್ಲಿ ಐಪಿಪಿಬಿ ಅಥವಾ "ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌' ಕಾರ್ಯಾರಂಭ ಮಾಡಿದೆ. ವರ್ಷಾಂತ್ಯದ ಒಳಗಾಗಿ ಎಲ್ಲಾ 1.55 ಲಕ್ಷ ಪೋಸ್ಟಾಫಿಸುಗಳಲ್ಲೂ ಈ ಸೌಲಭ್ಯ ತೆರೆಯುವ ಇರಾದೆ ಸರಕಾರಕ್ಕೆ ಇದೆ. ಇದು ಪೋಸ್ಟಾಫೀಸಿನ ಆಧೀನದಲ್ಲಿ ಕೆಲಸ ಮಾಡುತ್ತದೆಯಾದರೂ ಕಾನೂನು ರೀತ್ಯಾ ಐಪಿಪಿಬಿ ಒಂದು ಪ್ರತ್ಯೇಕ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಯಾಗಿರುವುದು ಸಾರ್ವಜನಿಕರಿಗೆ ಭಾರೀ ಲಾಭವೇ ಹೌದು.

ಬ್ಯಾಂಕ್‌ಗಳ ಮೋಸಕ್ಕೆ ಬ್ರೇಕ್ ಹಾಕಿ..ಇಂದೇ 'ಅಂಚೆ ಪೇಮೆಂಟ್' ಖಾತೆ ತೆರೆಯಿರಿ!

ಬ್ಯಾಂಕುಗಳಂತೆ ಲೇವಾದೇವಿ ವ್ಯವಹಾರದಲ್ಲಿ ತೊಡಗದೇ ಇರುವ ಕಾರಣ ಈ ಪಾವತಿ ಬ್ಯಾಂಕುಗಳು ಒಂದು ದಿನ ದಿವಾಳಿಯೆದ್ದು ಹೋಗುವ ಸಂಭವ ವಿರಳ. ರಿಸ್ಕ್ ರಹಿತವಾಗಿ ಹಳ್ಳಿ ಹಳ್ಳಿಗಳಲ್ಲೂ ಜನಸಾಮಾನ್ಯರು ಬ್ಯಾಂಕ್‌ ವ್ಯವಹಾರ ನಡೆಸಿ ಅಭಿವೃದ್ಧಿಗೆ ಸಹಾಯಕವಾಗುವ ಸಲುವಾಗಿ ಆರ್‌ಬಿಐ ಇಂತಹ ಒಂದು ಬ್ಯಾಂಕ್‌ ನಡೆಸಲು ಪರವಾನಿಗೆ ನೀಡಿದೆ. ಹಾಗಾಗಿ, ನೀವು ಅಂಚೆ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಏಕೆ ತೆರೆಯಬೇಕು? ಇದು ಹೇಗೆ ಸಹಾಯಕವಾಗಲಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಏನಿದು ಪೇಮೆಂಟ್ ಬ್ಯಾಂಕ್‌?

ಏನಿದು ಪೇಮೆಂಟ್ ಬ್ಯಾಂಕ್‌?

ಅಷ್ಟಕ್ಕೂ ಏನಿದು ಪೇಮೆಂಟ್ ಬ್ಯಾಂಕು? ಹೆಸರೇ ಸೂಚಿಸುವಂತೆ ಇದು ಜನ ಸಾಮಾನ್ಯರ ಪೇಮೆಂಟ್ ಅಥವಾ ಪಾವತಿಗಳಿಗೆ ಅನುಕೂಲವಾಗುವಂತಹ ಒಂದು ಬ್ಯಾಂಕ್‌. ಇದೊಂದು ಸರಳವಾದ ಖಾತೆ ಮಾತ್ರವಾಗಿದ್ದು, ಈ ಖಾತೆಯ ಮೂಲಕ ಮಾಮೂಲಿ ದುಡ್ಡಿನ ವರ್ಗಾವಣೆ, ಪೆನ್ಶನ್ ಪಡೆಯುವುದು, ವಿದ್ಯುತ್‌/ನೀರು/ಟೆಲಿಫೋನ್‌/ಮೊಬೈಲ್‌ ಬಿಲ್‌ ಪಾವತಿ ಇತ್ಯಾದಿ ವ್ಯವಹಾರಗಳನ್ನು ಮಾಡಬಹುದು.

ಇದೊಂದು ಬ್ಯಾಂಕು ಅಲ್ಲವೇ ಅಲ್ಲ.

ಇದೊಂದು ಬ್ಯಾಂಕು ಅಲ್ಲವೇ ಅಲ್ಲ.

ಅರ್‌ಬಿಐ ಕಾನೂನಿನ ಪ್ರಕಾರ ಈ ಬ್ಯಾಂಕುಗಳು ಎಫ್ಇಆರ್‌ಡಿ ರೀತಿಯ ಡೆಪಾಸಿಟ್‌ಗಳನ್ನು ಪಡೆಯುವಂತಿಲ್ಲ. ಸಾಲಗಳನ್ನು, ಕ್ರೆಡಿಟ್‌ ಕಾರ್ಡುಗಳನ್ನು ನೀಡುವಂತಿಲ್ಲ. ಹಾಗಾಗಿ ಇದೊಂದು ಸಂಪೂರ್ಣವಾದ ಬ್ಯಾಂಕು ಅಲ್ಲವೇ ಅಲ್ಲ. ಕೇವಲ ಪಾವತಿಗಳನ್ನು ನೋಡಿಕೊಳ್ಳಲು ಇರುವಂತಹ ಒಂದು ಸೌಲಭ್ಯ ಮಾತ್ರ. ಇದು ಹಳ್ಳಿಗರಿಗೆ, ವಲಸಿ ಕೆಲಸಗಾರರಿಗೆ,ಅಸಂಘಟಿತ ನೌಕರಿ ವರ್ಗಕ್ಕೆ, ಸಣ್ಣ ಬಿಸಿನೆಸ್‌ ಮಾಡುವವರಿಗೆ ಸಹಾಯಕವಾಗುವ ಬ್ಯಾಂಕ್ ಅಲ್ಲದ ಬ್ಯಾಂಕ್ ಇದಾಗಿದೆ.

ಅಂಚೆ ಪೇಮೆಂಟ್ ಬ್ಯಾಂಕ್ ಹೇಗಿರುತ್ತದೆ?

ಅಂಚೆ ಪೇಮೆಂಟ್ ಬ್ಯಾಂಕ್ ಹೇಗಿರುತ್ತದೆ?

ಪೋಸ್ಟಾಫೀಸುಗಳಲ್ಲಿ ಅಥವಾ ಮನೆ ಬಾಗಿಲಿಗೆ ಬಂದು ಉಚಿತವಾಗಿ ಖಾತೆ ತೆರೆಯುವ ಸೌಲಭ್ಯ ಈ ಅಂಚೆ ಪೇಮೆಂಟ್ ಬ್ಯಾಂಕ್‌ನಲ್ಲಿದೆ. ಇಲ್ಲಿ ಚೆಕ್‌ಬುಕ್‌ ಸೌಲಭ್ಯವಿಲ್ಲ ಖಾತೆ ಬಳಸಲು ATM ಕಾರ್ಡಿನ ಬದಲಾಗಿ ನೀಡಲಾಗುವ ಕಾರ್ಡಿಗೆ ಯಾವುದೇ ಶುಲ್ಕವಿಲ್ಲ. ಶೂನ್ಯ ಉಳಿಕೆಯೊಂದಿಗೆ ಖಾತೆಯನ್ನು ತೆರೆಯಬಹುದು, ನಿರ್ವಹಿಸಬಹುದು. ಕನಿಷ್ಠ ಮಾಸಿಕ ಉಳಿಕೆ ಅಗತ್ಯವಿಲ್ಲ. ಮೊಬೈಲ್‌ ಅಂತರ್ಜಾಲವನ್ನು ಬಳಸಿಕೊಳ್ಳುವ ಈ ಪದ್ಧತಿಯನ್ನು ಸುಲಭವಾಗಿ ದೇಶದ ಯಾವ ಮೂಲೆಯಲ್ಲೂ ಬಳಸಲು ಸಾಧ್ಯ.

ಮನೆಮನೆಗೆ ಡಿಜಿಟಲ್ ಪಾವತಿ!

ಮನೆಮನೆಗೆ ಡಿಜಿಟಲ್ ಪಾವತಿ!

ಈಗಾಗಲೇ ಅಂಚೆ ಕಚೇರಿಯಲ್ಲಿ ಇರುವ 17 ಕೋಟಿ ಉಳಿತಾಯ ಖಾತೆಗಳಿಗೆ ಪೇಮೆಂಟ್ಸ್ ಬ್ಯಾಂಕ್‌ ವ್ಯವಸ್ಥೆಯ ಲಾಭ ಸಿಗಲಿದೆ. ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಯುಪಿಐ ಮತ್ತು ಬಿಲ್‌ ಪಾವತಿ ಸೇವೆಗಳು ಈ ಎಲ್ಲಾ ಖಾತೆ ಬಳಕೆದಾರರಿಗೆ ಲಭ್ಯವಾಗಲಿದ್ದು, ಎಲ್ಲರೂ ಡಿಜಿಟಲ್ ಪ್ರಪಂಚಕ್ಕೆ ಕಾಲಿಡಲಿದ್ದಾರೆ. ಸುಮಾರು 3 ಲಕ್ಷ ಪೋಸ್ಟ್‌ ಮ್ಯಾನ್‌ಗಳು ಮನೆ ಬಾಗಿಲಿಗೇ ಬಂದು ಖಾತೆ ತೆರೆಯಲು ಸಹರಿಸಲಿದ್ದಾರೆ. ಪೋಸ್ಟ್‌ಮನ್‌ ಮತ್ತು ಗ್ರಾಮೀಣ ಅಂಚೆ ಸೇವಕರಿಗೆ ಪೇಮೆಂಟ್ಸ್ ಸೇವೆ ಒದಗಿಸುವ ಸಾಧನ ನೀಡಲಿದ್ದು, ಮನೆಬಾಗಲಿಗೆ ಡಿಜಿಟಲ್‌ ಪಾವತಿ ಸೇವೆ ಲಭ್ಯವಾಗಲಿದೆ.

ಅಂಚೆ ಪೇಮೆಂಟ್ ಬ್ಯಾಂಕಿನ ಸೌಲಭ್ಯಗಳೇನು?

ಅಂಚೆ ಪೇಮೆಂಟ್ ಬ್ಯಾಂಕಿನ ಸೌಲಭ್ಯಗಳೇನು?

ಸರ್ವರನ್ನೂ ಒಳಗೊಂಡ ವಿತ್ತೀಯ ಅಭಿವೃದ್ಧಿಗೆ ಪೂರಕವಾಗಿರುವ ಅಂಚೆ ಪೇಮೆಂಟ್ ಬ್ಯಾಂಕ್ ಅನ್ನು ಮೂಲತಃ ಬಡವರನ್ನು ಉದ್ದೇಶಿಸಿ ತೆರೆಯಲಾಗಿದೆ.ಈ ಖಾತೆಯಲ್ಲಿ ದುಡ್ಡನ್ನು ಎಷ್ಟು ಬಾರಿ ಬೇಕಾದರೂ ಹಾಕಬಹುದು, ತೆಗೆಯಬಹುದು. ವ್ಯವಹಾರಗಳ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ. ಅಂಚೆಯಣ್ಣನೇ ನಿಮ್ಮ ಮನೆ ಬಾಗಿಲ ಸೇವೆ ಒದಗಿಸಬೇಕು ಅಂದರೆ ಅದೂ ಕೂಡಾ ಸಾಧ್ಯ. ಆದರೆ ಅದಕ್ಕೆ ಸ್ವಲ್ಪ ಶುಲ್ಕವಿರುತ್ತದೆ. ಮೊಬೈಲ್‌ ಆಪ್‌ಮೂಲಕವೂ ಬಿಲ್‌ ಪಾವತಿ, ಬ್ಯಾಲನ್ಸ್ ಪರಿಶೀಲನೆ, ಆನ್‌ಲೈನ್‌ ವರ್ಗಾವಣೆಗಳನ್ನು ಮಾಡಬಹುದು.

ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?

ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?

ಯಾವುದೇ ಪೇಮೆಂಟ್ ಬ್ಯಾಂಕ್‌ಗಳಲ್ಲಿ 1 ಲಕ್ಷ ರೂಪಾಯಿಗಳ ವರೆಗೂ ಗ್ರಾಹಕರು ಹಣವನ್ನು ಡೆಪಾಸಿಟ್ ಮಾಡಿಡಬಹುದಾಗಿದೆ. ಗ್ರಾಹಕರು ಡೆಪಾಸಿಟ್ ಮಾಡಿದ ಹಣವನ್ನು ಯಾವುದೇ ಸಮಯವಾದರೂ ವಾಪಸ್ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಗ್ರಾಹಕರು ಉಳಿತಾಯ ಮಾಡುವ ಹಣಕ್ಕೆ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ ಶೇ. 7.3 ರಷ್ಟು ಬಡ್ಡಿಯನ್ನು ನೀಡುತ್ತಿದ್ದರೆ, ಪೇಟಿಎಂ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ. ಆದರೆ, ಸರ್ಕಾರಿ ಅಂಚೆ ಪೇಮೆಂಟ್ ಬ್ಯಾಂಕ್‌ ಶೇ. 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿಪಡಿಸಿದೆ.

Best Mobiles in India

English summary
India Post will launch its long-awaited payments bank by launching 650 branches across the country today, making it the fourth such entity to. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X