ವೈಯರ್ ಲೆಸ್ ಚಾರ್ಜರ್ ಗೆ ಹಾಯ್ ಹಾಯ್ ಹೇಳಿದ್ರೆ ಏನಾಗುತ್ತೆ?
ಟೆಕ್ನಾಲಜಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಫೋನಿಗೊಂದು ಉದ್ದ ಹಗ್ಗದಂತ ಕೇಬಲ್ ಸಿಕ್ಕಿಸಿ ಯಾವುದೋ ಗೋಡೆಯ ಮೂಲೆಯಲ್ಲಿ ತೂಗುಹಾಕಿ ಚಾರ್ಜ್ ಮಾಡಬೇಕಾಗಿರುವ ಕಾಲ ಇದಲ್ಲ. ವಯರ್ರೇ ಇಲ್ಲದ ಚಾರ್ಜರ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿದೆ.

ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಫಟಾಫಟ್ ಎಂದು ಚಾರ್ಜ್ ಮಾಡುವ ಕೆಪಾಸಿಟಿಯನ್ನು ವಯರ್ ಲೆಸ್ ಚಾರ್ಜರ್ ಗಳೂ ಕೂಡ ಹೊಂದಿದೆ. ಆದರೂ ಇದರ ಪ್ರಸಿದ್ಧಿ ಕೊಂಚ ಕಡಿಮೆಯೇ ಇದೆ. ನಿಜಕ್ಕೂ ವಯರ್ ಲೆಸ್ ಚಾರ್ಜರ್ ಗಳು ನಮ್ಮ ಈಗಿನ ಚಾರ್ಜರ್ ಗಳಿಗೆ ಹೋಲಿಸಿದರೆ ಬೆಟರ್ ಹೌದಾ ಅಲ್ವಾ ಅನ್ನೋದನ್ನು ತಿಳಿಸುವುದೇ ಈ ಲೇಖನದ ಉದ್ದೇಶ. ಈ ವಿಚಾರವನ್ನು ತಿಳಿಯಲು ಮುಂದೆ ಓದಿ.
• ಚಾರ್ಜಿಂಗ್ ಕೇಬಲ್ ಗೆ ಹೋಲಿಸಿದರೆ ವಯರ್ ಲೆಸ್ ಚಾರ್ಜರ್ ಗಳು ಹೆಚ್ಚು ನಿರ್ಬಂಧಕ್ಕೆ ಒಳಪಟ್ಟಿವೆ.
ವಯರ್ ಲೆಸ್ ಚಾರ್ಜರ್ ನಲ್ಲಿ ನೀವು ಮೊಬೈಲ್ ನ್ನು ಹೇಗೆ ಚಾರ್ಜ್ ಮಾಡುತ್ತೀರೆಂದರೆ, ಒಂದು ಚಾರ್ಜಿಂಗ್ ಮ್ಯಾಟ್ ಇರುತ್ತೆ. ಆ ಮ್ಯಾಟ್ ಕರೆಂಟ್ ಗೆ ಪ್ಲಗ್ ಇನ್ ಆಗಿರುತ್ತೆ. ನಿಮ್ಮ ಮೊಬೈಲ್ ಚಾರ್ಜ್ ಆಗಬೇಕು ಅಂದರೆ ನೀವು ಆ ಮ್ಯಾಟ್ ಮೇಲೆ ನಿಮ್ಮ ಫೋನನ್ನು ಇಡಬೇಕು. ಒಂದು ವೇಳೆ ಆ ಮ್ಯಾಟ್ ನಿಂದ ತೆಗೆದಿರಿ ಅಂದರೆ ಚಾರ್ಜಿಂಗ್ ನಿಲ್ಲುತ್ತದೆ.
ಈಗ ಯೋಚಿಸೋಣ, ಇನ್ನು ಯಾವೆಲ್ಲ ವಯರ್ ಲೆಸ್ ಟೆಕ್ನಾಲಜಿಗಳು ಹೀಗೆ ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತೆ. ವಯರ್ ಲೆಸ್ ಇಂಟರ್ನೆಂಟ್..ಅರ್ಥಾತ್ ವೈಫೈ...ನೀವು ನಿಮ್ಮ ಲ್ಯಾಪ್ ಟಾಪ್ ನ್ನು ಇಂಟರ್ ನೆಟ್ ಆಕ್ಸಿಸ್ ಗಾಗಿ ರೂಟರ್ ನ ಮೇಲೇನೂ ಇಡಬೇಕಾಗಿಲ್ಲ. ವಯರ್ ಲೆಸ್ ಅಂದರೆ ನಿಮಗೆ ಎಲ್ಲೆಂದರಲ್ಲಿ ಓಡಾಡಲು ಅವಕಾಶವಿದ್ದು, ನೀವದನ್ನು ಬಳಸುವಂತಿರಬೇಕು. ಎಸ್ ವೈಫೈ ಆ ನಿಟ್ಟಿನಲ್ಲಿ ಪರ್ಫೆಕ್ಟ್ ಆಗಿದೆ. ನೀವು ಲ್ಯಾಪ್ ಟಾಪ್ ಹಿಡಿದು ಮನೆಯಲ್ಲಿ ಎಲ್ಲಿ ಓಡಾಡಿದರೂ ರೂಟರ್ ಕನೆಕ್ಟ್ ಆಗಿದ್ದಾಗ ವೈಫೈ ಸೌಲಭ್ಯ ಪಡೆಯಲು ಸಾಧ್ಯವಿದೆ.
ಇದನ್ನು ನೋಡಿದರೆ ವಯರ್ ಲೆಸ್ ಚಾರ್ಜರ್ ಗಳಿಗಿಂತ, ಈಗ ನಾವು ಬಳಸುತ್ತಿರುವ ಚಾರ್ಜರ್ ಬೆಟರ್ ಎಂದು ಅನ್ನಿಸುತ್ತದೆ. ಕೆಲವು ಚಾರ್ಜಿಂಗ್ ಕೇಬಲ್ ಗಳು ಕುಳ್ಳಗಿರುತ್ತೆ. ಆದರೆ ನೀವು ಉದ್ದದ ಕೇಬಲ್ ಇರುವ ಚಾರ್ಜರ್ ಖರೀದಿಸಿದರೆ ನೀವು ಮೊಬೈಲ್ ನ್ನು ಚಾರ್ಜ್ ಮಾಡುತ್ತಿರುವಾಗಲೂ ಬಳಕೆ ಮಾಡಬಹುದು. ಆದರೆ ವಯಲ್ ಲೆಸ್ ಚಾರ್ಜರ್ ನಲ್ಲಿ ನೀವು ಮ್ಯಾಟ್ ಯಿಂದ ಮೊಬೈಲ್ ನ್ನು ಮೇಲೆತ್ತುವಂತೆಯೇ ಇಲ್ಲ. ಈಗಿನ ಚಾರ್ಜರ್ ನಲ್ಲಾದರೆ ನೀವು ಫೋನ್ ಮೇಲೆತ್ತಿಕೊಂಡು ನಿಮಗೆ ಬೇಕಾದ ಕೆಲಸ ಚಾರ್ಜ್ ಮಾಡುತ್ತಲೇ ಮಾಡುವ ಅವಕಾಶವಿರುತ್ತೆ.
ಅಷ್ಟೇ ಅಲ್ಲ ಉದ್ದನೆಯ ಕೇಬಲ್ ಇರುವ ಚಾರ್ಜರ್ ಗಳು ವಯರ್ ಲೆಸ್ ಚಾರ್ಜರ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ, ಕಡಿಮೆ ಉಪಕಾರಿಯಾಗಿರುವ ಡಿವೈಸ್ ಗೆ ಹೆಚ್ಚು ಬೆಲೆ ಪಾವತಿ ಮಾಡಬೇಕಾಗುತ್ತದೆ. ಹೆಚ್ಚು ಕಡಿಮೆ 1000 ರುಪಾಯಿಯೇ ಅಧಿಕವಿರಬಹುದು.
ಇನ್ನೊಂದು ಪ್ರಮುಖ ವಿಚಾರವೆನೆಂದರೆ ವಯರ್ ಲೆಸ್ ಚಾರ್ಜರ್ ನಲ್ಲಿ ನೀವು ಮೊಬೈಲ್ ಚಾರ್ಜ್ ಮಾಡ ಹೊರಟರೆ ಒಂದು ವೇಳೆ ಮ್ಯಾಟ್ ನಿಂದ ಮೊಬೈಲ್ ಮೇಲೆತ್ತಿದರೆ ಮತ್ತೆ ಚಾರ್ಜ್ ಗೆ ಇಡುವಾಗ ಚಾರ್ಜ್ ಆಗುತ್ತಿದೆಯಾ ಎಂದು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಆದರೆ ನಮ್ಮ ಈಗಿನ ಚಾರ್ಜರ್ ಗಳು ಜಸ್ಟ್ ಒಂದು ವಯರ್ ನ್ನು ಪ್ಲಗ್ ಇನ್ ಇಲ್ಲವೇ ಪ್ಲಗ್ ಔಟ್ ಮಾಡಿದರೆ ಮುಗೀತು. ಸುಲಭದಲ್ಲೇ ಚಾರ್ಜ್ ಆಗುತ್ತಿದೆಯಾ ಇಲ್ಲವಾ ಪರೀಕ್ಷಿಸಬಹುದು. ಆದರೆ ವಯರ್ ಲೆಸ್ ಚಾರ್ಜರ್ ನಲ್ಲಿ ಸೆಟ್ಟಿಂಗ್ಸ್ ಗಳನ್ನೆಲ್ಲ ಪರೀಕ್ಷೆ ಮಾಡಬೇಕಾಗುತ್ತದೆ.
. ಹೆಚ್ಚು ಸಮಯಬೇಕು, ಹೆಚ್ಚು ಪವರ್ ಬೇಕು, ಹೆಚ್ಚು ಬಿಸಿಯೂ ಆಗುತ್ತೆ.
ವಯರ್ ಲೆಸ್ ಚಾರ್ಜರ್ ಗಳು ಪ್ರಸಿದ್ಧಿ ಪಡೆಯದಿರಲು ಇನ್ನೂ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ನಿಧಾನಗತಿಯ ಚಾರ್ಜಿಂಗ್. ಹೌದು ಈಗಿನ ನಮ್ಮ ಚಾರ್ಜರ್ ಗಳು ಫಾಸ್ಟ್ ಆಗಿ ಮೊಬೈಲ್ ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿವೆ.ಆದರೆ ಹೆಚ್ಚು ದುಡ್ಡು ಕೊಟ್ರೂ ವಯರ್ ಲೆಸ್ ಚಾರ್ಜರ್ ಗಳು ಈ ಕೆಲಸವನ್ನು ಮಾಡುವುದಿಲ್ಲ. ಸ್ಯಾಮಸಂಗ್ ಗ್ಯಾಲಕ್ಸಿ ಎಸ್ 6 ಮೊಬೈಲ್ ಸೊನ್ನೆಯಿಂದ ನೂರು ಶೇಕಡಾ ಬ್ಯಾಟರಿಗೆ ಬರಬೇಕು ಎಂದರೆ ವಯರ್ ಚಾರ್ಜಿಂಗ್ ನಲ್ಲಿ 1.48 ಗಂಟೆ ಸಾಕಾಗುತ್ತೆ. ಅದೇ ವಯರ್ ಲೆಸ್ ಚಾರ್ಜರ್ ಬಳಸಿದರೆ ದುಪ್ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ. ಹೆಚ್ಚು ಕಡಿಮೆ 3.01 ಗಂಟೆ ಸಮಯ ಬೇಕಾಗುತ್ತೆ. ಹೀಗಾದರೆ ಯಾರು ತಾನೆ ವಯರ್ ಲೆಸ್ ಚಾರ್ಜರ್ ಇಷ್ಟ ಪಡುತ್ತಾರೆ ಅಲ್ವಾ?

ಅಷ್ಟೇ ಅಲ್ಲ, ಇವು ಲೆಸ್ ಎಫೀಶಿಯಂಟ್ ಗಳು., ಅಂದರೆ ವಯರ್ ಲೆಸ್ ಚಾರ್ಜಿಂಗ್ ಮಾಡಿದರೆ ನಿಮ್ಮ ಕರೆಂಟ್ ಬಿಲ್ ಹೆಚ್ಚಾಗುತ್ತೆ. ಯಾಕೆಂದರೆ ಇದು ಹೆಚ್ಚಿನ ವಿದ್ಯುತ್ ಪಡೆದು ಮೊಬೈಲ್ ಚಾರ್ಜ್ ಮಾಡುತ್ತೆ. ಅಷ್ಟೇ ಅಲ್ಲ ಅತಿಯಾಗಿ ಮೊಬೈಲ್ ಬಿಸಿಯಾಗುತ್ತೆ.ಹಾಗಂತ ಈ ಬಿಸಿ ನಿಮ್ಮ ಮೊಬೈಲ್ ನ್ನು ಕೂಡಲೇ ನಾಶ ಮಾಡುವುದಿಲ್ಲ. ಬದಲಾಗಿ ಇದು ನಿಮ್ಮ ಮೊಬೈಲ್ ಬ್ಯಾಟರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.
ಹಾಗಂತ ಇದೆಲ್ಲವೂ ಟೆಕ್ನಾಲಜಿಯ ಅಂತಿಮ ಏನಲ್ಲ. ಮುಂದೊಂದು ನಮ್ಮ ಬೇಡಿಕೆಯ ಅನುಸಾರಕ್ಕೆ ತಕ್ಕಂತ ವಯರ್ ಲೆಸ್ ಚಾರ್ಜರ್ ಗಳು ಮಾರುಕಟ್ಟೆಗೆ ಬರಬಹುದು. ನಿರೀಕ್ಷಿಸೋಣ. ಹಾಗಾಗಿ ಸದ್ಯಕ್ಕೆ ಅನುಕೂಲಕರವಲ್ಲದ ಮತ್ತು ಫ್ಲೆಕ್ಸಿಬಲ್ ಅಲ್ಲದ ವಯರ್ ಲೆಸ್ ಚಾರ್ಜರ್ ಗಳನ್ನು ಬಳಸುವ ಬದಲು ನಮ್ಮ ಈಗಿನ ಉದ್ದದ ವಯರ್ ಗಳೇ ಚಾರ್ಜ್ ಮಾಡಲು ಬೆಸ್ಟ್ ಆಗಿವೆ ಅಲ್ವಾ?


Click it and Unblock the Notifications








