ಬಂತು 'ಫೇಸ್‌ ಪವರ್' ಚೇರ್!..ವಿಜ್ಞಾನಿಗಳು ಇನ್ನು ಏನೇನೆಲ್ಲಾ ಕಂಡುಹಿಡಿಯಬಹುದು?

|

18ನೇ ಶತಮಾನದಲ್ಲಿ ವಿಶ್ವದ ವಿಜ್ಞಾನಿಗಳೆಲ್ಲಾ ಒಮ್ಮೆ ಸಭೆ ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದರಂತೆ. ಈ ವಿಶ್ವದಲ್ಲಿ ಏನೆಲ್ಲವನ್ನು ಕಂಡುಹಿಡಿಯಬೇಕೊ ಅದೆಲ್ಲವನ್ನು ಕಂಡುಹಿಡಿದಿದ್ದಾಗಿದೆ. ಇನ್ನು ಕಂಡುಹಿಡಿಯಲು ಏನು ಬಾಕಿ ಉಳಿದಿಲ್ಲ ಎಂದು ಅವರು ತೀರ್ಮಾನಿಸಿದ್ದರಂತೆ.! ಇದು ನಿಜವೂ ಸುಳ್ಳೂ ಗೊತ್ತಿಲ್ಲ. ಆದರೆ, ಆ ವಿಜ್ಞಾನಿಗಳು ಇಂದು ಮತ್ತೆ ಹುಟ್ಟಿಬಂದರೆ, ಇಂದಿನ ಆವಿಷ್ಕಾರಗಳನ್ನು ನೋಡಿ ಮೂರ್ಛೆಹೋಗುತ್ತಿದ್ದರು. ಏಕೆಂದರೆ, ಅವರ ಕಲ್ಪನೆಗೂ ಮೀರಿದ ತಂತ್ರಜ್ಞಾನಗಳು ಈಗ ಬಳಕೆಯಲ್ಲಿವೆ.

ಬಂತು 'ಫೇಸ್‌ ಪವರ್' ಚೇರ್!..ವಿಜ್ಞಾನಿಗಳು ಇನ್ನು ಏನೇನೆಲ್ಲಾ ಕಂಡುಹಿಡಿಯಬಹುದು?

ಅಷ್ಟಕ್ಕೂ ಇದು ಈಗ ನನಗೆ ನೆನಪಾಗಲು ಕಾರಣವೊಂದಿದೆ. ಬ್ರೆಜಿಲ್‌ನ ಹೂಬಾಕ್ಸ್ ರೋಬೊಟಿಕ್ಸ್ ಎಂಬ ನವೋದ್ಯಮವೊಂದು ಹೊಸ ತಂತ್ರಜ್ಞಾನದ ಬೆನ್ನು ಬಿದ್ದಿದೆ. ಇಂಟೆಲ್ ರಿಯಲ್ ಸೆನ್ಸ್ ಫೇಷಿಯಲ್ ರೆಕನೈಸೇಷನ್ ತಂತ್ರಜ್ಞಾನ ಆಧಾರಿತ ಮೊದಲ ಗಾಲಿ ಕುರ್ಚಿಯನ್ನು ಈ ಸಂಸ್ಥೆ ತಯಾರಿಸಿದೆ. ಇದರಲ್ಲಿ ಹಲವು ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ನಮ್ಮ ಮುಖದ ಲಕ್ಷಣಗಳನ್ನು ಚಲನಗಳನ್ನು ಗಮನಿಸಿ ಬೇಕೆಂದ ಕಡೆಗೆ ಈ ಕುರ್ಚಿ ಚಲಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆ ಕುರ್ಚಿಗೆ ವೀಲಿ (wheelie) ಎಂದು ಸಂಶೋಧಕರು ಹೆಸರಿಸಿದ್ದಾರೆ. ಈ ವೀಲಿ ಚೇಲ್ ಇಂಟೆಲ್ ರಿಯಲ್ ಸೆನ್ಸ್ ಫೇಷಿಯಲ್ ರೆಕನೈಸೇಷನ್ ತಂತ್ರಜ್ಞಾನದ ಸಹಾಯದಿಂದ ಕೆಲಸ ಮಾಡಲಿದ್ದು, ಇದನ್ನು 'ಫೇಸ್‌ ಪವರ್' ಎಂಬುದಾಗಿಯೂ ಕರೆಯಬಹುದಾಗಿದೆ. ಮುಖದ ಚಲನೆ ಮತ್ತು ಸಂಜ್ಞೆಗಳಿಂದಲೇ ಪ್ರತಿಯೊಂದು ಚಲನಕ್ಕೂ ಒಂದೊಂದು ಕಮಾಂಡ್ ಕೊಟ್ಟು ಕಾರ್ಯನಿರ್ವಹಿಸುವಂತೆ ಈ ಕುರ್ಚಿಯನ್ನು ತಯಾರಿಸಲಾಗಿದೆ. ಉದಾಹರಣೆಗೆ ಕಿರು ನಗೆ ಬೀರಿದರೆ ಸಾಕು ಕುರ್ಚಿ ಮುಂದಕ್ಕೆ ಚಲಿಸುತ್ತದೆ.

ಬಂತು 'ಫೇಸ್‌ ಪವರ್' ಚೇರ್!..ವಿಜ್ಞಾನಿಗಳು ಇನ್ನು ಏನೇನೆಲ್ಲಾ ಕಂಡುಹಿಡಿಯಬಹುದು?

ಮುಖವನ್ನು ಎಡಕ್ಕೆ, ಬಲಕ್ಕೆ ತಿರುಗಿಸುವುದರಿಂದ ಕುರ್ಚಿಯು ಎಡಕ್ಕೆ, ಬಲಕ್ಕೆ ತಿರುಗುತ್ತದೆ. ತುಟಿಗಳನ್ನು ಬಿಗಿದರೆ ಕುರ್ಚಿಗೆ ಬ್ರೇಕ್ ಹಾಕಬಹುದು. ಯಂತ್ರಚಾಲಿತ ಈ ಕುರ್ಚಿಯನ್ನು ಕೇವಲ 7 ನಿಮಿಷಗಳಲ್ಲಿ ಸೆಟ್ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. 'ಫೇಸ್‌ ಪವರ್' ಸಾಮರ್ಥ್ಯದ ವೀಲಿ (wheelie) ಚೇರ್ ಏನಾದರೂ ಬಳಕೆಗೆ ಬಂದರೆ, ಪಾರ್ಶ್ವವಾಯು, ಹೃದ್ರೋಗ, ಕಾಲಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಕುರ್ಚಿ ಹಲವು ವಿಧದಲ್ಲಿ ನೆರವಾಗುತ್ತದೆ ಎಂದು ಆ ನವೋದ್ಯಮ ಹೇಳಿಕೊಂಡಿದೆ.

'ಫೇಸ್ಆಪ್' ಬಳಸದಿರಲು 5 ಶಾಕಿಂಗ್ ಕಾರಣಗಳು!'ಫೇಸ್ಆಪ್' ಬಳಸದಿರಲು 5 ಶಾಕಿಂಗ್ ಕಾರಣಗಳು!

ಮುಂದಿನ ದಿನಗಳಲ್ಲಿ 'ಫೇಸ್‌ ಪವರ್' ಎಂಬ ಶಬ್ದ ವಿಶ್ವ ವಿಜ್ಞಾನದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ. ಮುಖದ ಚಲನ-ವಲನಗಳನ್ನೇ ಬಳಸಿಕೊಂಡು ನಮ್ಮ ನಿತ್ಯ ಕಾರ್ಯಗಳನ್ನು ಮಾಡಿಕೊಳ್ಳುವ ಫೇಸ್‌ ಪವರ್‌ ತಂತ್ರಜ್ಞಾನವನ್ನು ಬಳಕೆಗೆ ತರಲು ಸಂಶೋಧಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದು ಇನ್ನು ಪ್ರಾಯೋಗಿಕ ಹಂತದಲ್ಲಿದೆ. ಇದರಿಂದ ಉತ್ತೇಜಿತರಾಗಿ ಫೇಸ್‌ ಪವರ್‌ ಅನ್ನು ಇನ್ನೂ ಹಲವು ರೂಪಗಳಲ್ಲಿ ಬಳಸಿಕೊಳ್ಳುವ ತಂತ್ರಜ್ಞಾನ ಮುಂದೆ ಬರಲೂಬಹುದು ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Best Mobiles in India

English summary
Now, apparently, we have face power. ... Wheelie utilizes a laptop and Intel's RealSense facial-recognition camera to capture and decipher. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X