ಇಂಜಿನಿಯರುಗಳ ದಿನದ ಮಹತ್ವವೇನು ಗೊತ್ತೇ?

By Shwetha

  ಭಾರತದಲ್ಲಿ ಸಪ್ಟೆಂಬರ್ 15 ಅನ್ನು ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನವನ್ನಾಗಿ ಆಚರಿಸುತ್ತಿದ್ದು ಇಂಜಿನಿಯರುಗಳ ದಿನವೆಂದೇ ಇದನ್ನು ಕರೆಯಲಾಗುತ್ತದೆ. ನೀರನ್ನು ಬಳಸಿ ಅವರು ಮಾಡಿದಂತಹ ಅದ್ಭುತ ಸಾಧನೆಗಳನ್ನು ಈ ದಿನದಂದು ಕೊಂಡಾಡಲಾಗುತ್ತದೆ. ವಿಶ್ವೇಶ್ವರಯ್ಯನವರು ಕರ್ನಾಟಕದಲ್ಲಿ ಮಾತ್ರವೇ ಅಭಿವೃದ್ಧಿಗಳನ್ನು ಮಾಡಿದ್ದಾರೆ ಎಂಬ ವದಂತಿ ಇದ್ದರೂ ಇಡೀ ಭಾರತವನ್ನೇ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಸಾಧನೆಯನ್ನು ಅವರು ಮಾಡಿದ್ದಾರೆ. ಅವರು ಇಂಜಿನಿಯರಾಗಿ 30 ವರ್ಷಗಳು ಕೆಲಸ ಮಾಡಿದ್ದು, 20 ವರ್ಷಗಳು ನಿರ್ವಾಹಕರು, 20 ವರ್ಷಗಳು ಸಲಹೆಗಾರರು ಮತ್ತು ಮುತ್ಸದ್ದಿಯಾಗಿ ಕೂಡ ಜನಮೆಚ್ಚುವ ಕೆಲಸವನ್ನು ಮಾಡಿದ್ದಾರೆ.

  ಇವರು ತಮ್ಮ ಪದವಿಯನ್ನು ಪೂನಾ ವಿಶ್ವವಿದ್ಯಾನಿಲಯದಿಂದ 1884 ರಲ್ಲಿ ಪಡೆದುಕೊಂಡಿದ್ದು ಬಾಂಬೆ ಸರಕಾರವು ಅವರನ್ನು ಸಾರ್ವಜನಿಕ ಕೆಲಸಗಳ ವಿಭಾಗದಲ್ಲಿ ಉಪ ಇಂಜಿನಿಯರಾಗಿ ನೇಮಿಸಿತು. ಇವರು ಕಲಿಕೆಯಲ್ಲೂ ತುಂಬಾ ಮುಂದಿದ್ದು, ವಿಶ್ವವಿದ್ಯಾನಿಲಯದ ಪ್ರತೀ ಪರೀಕ್ಷೆಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದರು.

  ಇಂಜಿನಿಯರುಗಳ ದಿನದ ಮಹತ್ವದ ಅಂಶಗಳಿವು

  ಇವರು 1890 ರ ಮಧ್ಯಭಾಗದಲ್ಲಿ ತಮ್ಮ ಜೀವನಚರಿತ್ರಯಾದ "ಮೆಮೊರೀಸ್ ಆಫ್ ಮೈ ವರ್ಕಿಂಗ್ ಲೈಫ್" ಎಂಬ ಪುಸ್ತಕವನ್ನು ಬರೆದಿದ್ದು ಇವರಿಗೆ ಇದು ಜನಪ್ರಿಯತೆಯನ್ನು ತಂದುಕೊಟ್ಟಿತು ಮತ್ತು ಇಂಜಿನಿಯರುಗಳ ಕಠಿಣ ಸಮಸ್ಯೆಗಳನ್ನು ಇದು ನೀಗಿಸಿದೆ.

  ಈ ದಿನದ ನೆನಪಿಗಾಗಿ ವಿಶ್ವೇಶ್ವರಯ್ಯನವರು ಮಾಡಿರುವಂತಹ ಕೆಲವು ಕೆಲಸಗಳನ್ನು ಇಲ್ಲಿ ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ.
  1. ಹೈದ್ರಾಬಾದ್‌ನ ಒಳಚರಂಡಿ ವ್ಯವಸ್ಥೆಯನ್ನು ಇವರು ದುರಸ್ತಿ ಮಾಡಿ ಸಂಪೂರ್ಣ ನಗರವನ್ನೇ ಇವರು ಹೊಸತಾಗಿ ರೂಪಿಸಿದರು.

  2. ಬಾಂಬೆಯ ನೀರಿನ ಸಮಸ್ಯೆಯನ್ನು ಇವರು ನೀಗಿಸಿ ಉತ್ತಮ ಅಣೆಕಟ್ಟುಗಳನ್ನು ಇವರು ನಿರ್ಮಿಸಿದರು.

  3. ಬಿಹಾರ ಮತ್ತು ಒರಿಸ್ಸಾದಲ್ಲಿ ರೈಲ್ವೇ ಸೇತುವೆಗಳ ನಿರ್ಮಾಣವನ್ನು ಇವರು ಮಾಡಿದರು.

  4. ಆ ಸಮಯದಲ್ಲೇ, ಮೈಸೂರ್‌ನ KRS ಡ್ಯಾಮ್ ಅನ್ನು ಅವರು ನಿರ್ಮಿಸಿ ಏಷ್ಯಾದ ದೊಡ್ಡ ಅಣೆಕಟ್ಟನ್ನು ನಿರ್ಮಿಸಿದ ಖ್ಯಾತಿಗೆ ಭಾಜನರಾದರು.

  ತಮ್ಮ ನಿವೃತ್ತಿಯ ನಂತರ ಕೂಡ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಸರ್‌ ಎಮ್ ವಿಶ್ವೇಶ್ವರಯ್ಯನವರು ದೇಶ ಕಂಡ ಒಬ್ಬ ಧೀಮಂತ ಪ್ರಗತಿಪರ ವ್ಯಕ್ತಿ ಮತ್ತು ಆಡಳಿತಾ ರೂಢರಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.

  English summary
  This article tells about All you want to know about Engineers Day.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more