Home
ಸುದ್ದಿಜಾಲ

'ಒನ್‌ಪ್ಲಸ್ 7' ಫೋನಿನ ಮೊದಲ ಚಿತ್ರ ಲೀಕ್!..ಕಾಲಿಡಲು ಸಜ್ಜಾಗಿದೆ ಮೊದಲ 5G ಪೋನ್!!

'ಒನ್‌ಪ್ಲಸ್ 6ಟಿ' ಮೂಲಕ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲೀಲಾಜಾಲವಾಗಿ ಮುನ್ನುಗ್ಗುತ್ತಿರುವ ಒನ್‌ಪ್ಲಸ್ ಮೊಬೈಲ್ ಕಂಪೆನಿಯ ಮುಂದಿನ ಸ್ಮಾರ್ಟ್‌ಫೋನಿನ ಚಿತ್ರವೊಂದು ಹೊರಬಿದ್ದಿದೆ. 2019 ರಲ್ಲಿ ಒನ್‌ಪ್ಲಸ್ ಕಂಪೆನಿ ಬಿಡುಗಡೆ ಮಾಡಲಿರುವ ಹೊಸ 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನ ಫೀಚರ್ಸ್ ಬಗ್ಗೆ ಈಗಾಗಲೇ ಮಾಹಿತಿ ಲೀಕ್ ಆಗಿದ್ದು, ಇದೀಗ 'ಒನ್‌ಪ್ಲಸ್ 7' ಚಿತ್ರ ಕೂಡ ಲೀಕ್ ಆಗುವ ಮೂಲಕ ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದೆ.

ಹೌದು, ಈಗಾಗಲೇ ತನ್ನ ವಿಶಿಷ್ಟ ಫೀಚರ್ಸ್ ಸ್ಮಾರ್ಟ್‌ಫೋನ್‌‌ಗಳಿಂದ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಒನ್‌ಪ್ಲಸ್‌ , ಇದೇ ವರ್ಷದ ಮಧ್ಯದಲ್ಲಿ 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. 2019 ರಲ್ಲಿ ಕಂಪೆನಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ವಿನೂತನ ಫೀಚರ್ಸ್‌ಗಳನ್ನು ಅಳವಡಿಸುವುದಾಗಿ ಕಂಪನಿಯು ಘೋಷಿಸಿಕೊಂಡಿದ್ದು, ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ ನೀಡಲು ತಯಾರಾಗಿದೆ.

'ಒನ್‌ಪ್ಲಸ್ 7' ಫೋನಿನ ಮೊದಲ ಚಿತ್ರ ಲೀಕ್!..ಕಾಲಿಡಲು ಸಜ್ಜಾಗಿದೆ ಮೊದಲ 5G ಪೋನ್!!

ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್, 5G ಸಪೋರ್ಟ್ ಸೇರಿದಂತೆ ಅತ್ಯುತ್ತಮ ಸಾಮರ್ಥ್ಯವನ್ನು ಸಹ ಹೊಂದಿರಲಿರುವ 'ಒನ್‌ಪ್ಲಸ್ 7' ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಹಾಗಾದರೆ, ಒನ್‌ಪ್ಲಸ್ ಕಂಪನಿಯು ತನ್ನ ನೂತನ 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸಲಿರುವ ಕೆಲವು ಪ್ರಮುಖ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡ್ರಾಪ್ ನಾಚ್ ಸ್ಕ್ರೀನ್

ಡ್ರಾಪ್ ನಾಚ್ ಸ್ಕ್ರೀನ್

ಕಂಪನಿ ಈಗಾಗಲೇ ತನ್ನ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ನಾಚ್ ಡಿಸ್‌ಪ್ಲೇಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಹೊಸ ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನಲ್ಲಿ ವಾಟರ್ ಡ್ರಾಪ್ ನಾಚ್ ಹೊಂದಿರುವ ಸ್ಕ್ರೀನ್ ಪರಿಚಯಿಸಲಿದೆ. ಇದು ಸ್ಮಾರ್ಟ್‌ಪೋನ್ ಡಿಸ್‌ಪ್ಲೇಗೆ ಅಂದ ತಂದುಕೊಡಲಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ.

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಮೂಲಕ ಕಂಪನಿ ಮೊದಲ ಬಾರಿಗೆ 'ಪೊಪ್ ಅಪ್ ಸೆಲ್ಫಿ ಕ್ಯಾಮೆರಾ' ವನ್ನು ಪರಿಚಯಿಸುತ್ತಿದ್ದು, ಪೊಪ್ ಅಪ್ ಕ್ಯಾಮೆರಾದ ವಿಶೇಷವೆಂದರೇ, ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಪಾಪ್ಅಪ್ ಸೆಲ್ಫಿ ಕ್ಯಾಮೆರಾಗಳನ್ನು ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುವುದಾಗಿ ಹೇಳಿವೆ.

ಎಚ್‌ಡಿಆರ್ ಸ್ಟ್ರೀಮಿಂಗ್

ಎಚ್‌ಡಿಆರ್ ಸ್ಟ್ರೀಮಿಂಗ್

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿವೆ ಎಂದು ಹೇಳಲಾಗುತ್ತಿದೆ.

ವಾರ್ಪ್ ಚಾರ್ಜ್ 30

ವಾರ್ಪ್ ಚಾರ್ಜ್ 30

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. 'ವಾರ್ಪ್ ಚಾರ್ಜ್ 30' ವೇಗದ ಚಾರ್ಜರ್ ಅನ್ನು ತನ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ನೀಡಲಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎಂದು ತಿಳಿದುಬಂದಿದೆ. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಸೋನಿಯ IMX586 ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.

 5G ಇರಲಿದೆಯಂತೆ!

5G ಇರಲಿದೆಯಂತೆ!

ಒನ್‌ಪ್ಲಸ್ ಕಂಪನಿ ಈ ಮೊದಲೆ ಹೇಳಿರುವಂತೆ ಈ ವರ್ಷ ಅಂದರೇ 2019 ರಲ್ಲಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳು 5G ಸೌಲಭ್ಯ ಬೆಂಬಲಿಸಲಿವೆ. ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್ ಸಹ 5G ನೆಟವರ್ಕ್ ಸೌಲಭ್ಯ ಹೊಂದಿರಲಿದ್ದು, ಆ ಮೂಲಕ ಒನ್‌ಪ್ಲಸ್ 5G ನೆಟವರ್ಕ್ ಫೀಚರ್ ಪರಿಚಯಿಸಿದ ಕೀರ್ತಿ ಪಡೆಯಲಿದೆ.

Best Mobiles in India

English summary
OnePlus is expected to launch OnePlus 7 in the first half of 2019 and its successor in the second half.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+