ಬರಲಿದೆ 22.5W ಫಾಸ್ಟ್‌ ಚಾರ್ಜಿಂಗ್‌ ಬೆಂಬಲಿಸುವ ರೆಡ್‌ಮಿಯ ಹೊಸ ಸ್ಮಾರ್ಟ್‌ಫೋನ್‌!

|

ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ ಶಿಯೋಮಿ ಕಂಪೆನಿಯು ಈಗಾಗ್ಲೆ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರಾಂಡ್‌ ಆಗಿ ಗುರುತಿಸಿಕೊಂಡಿದೆ. ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಶಿಯೋಮಿ ಇದೀಗ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಸಿದ್ದಪಡಿಸುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹೊಸ ಮಾದರಿಯ ಆವೃತ್ತಿಯಾಗಿದ್ದು ವಿಭಿನ್ನ ಫೀಚರ್ಸ್‌ಗಳನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸುತ್ತಿದೆ. ಇನ್ನು ಈ ಸ್ಮಾರ್ಟ್‌ಫೊನ್‌ 4G ನೆಟ್‌ವರ್ಕ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಆಗಿದ್ದು, 5G ಮೊಡೆಮ್‌ ಅನ್ನು ಸಹ ಹೊಂದಿರುವ ಸಾದ್ಯತೆ ಇದೆ ಎಂದು ಹೇಳಲಾಗ್ತಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಕುರಿತು ಹಲವು ಮಾಹಿತಿಗಳು ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ಲೀಕ್‌ ಆಗಿದೆ. ಸದ್ಯ ಲೀಕ್‌ ಮಾಹಿತಿಯಲ್ಲಿ ಯಾವೆಲ್ಲಾ ಆಂಶಗಳು ಬಹಿರಂಗಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿ.

ಶಿಯೋಮಿ

ಸದ್ಯ ಶಿಯೋಮಿ ಸಿದ್ದಪಡಿಸುತ್ತಿರುವ ಸ್ಮಾರ್ಟ್‌ಫೋನ್‌ ಅನ್ನು ರೆಡ್‌ಮಿ ನೋಟ್‌9 ಅಥವಾ ರೆಡ್‌ಮಿ 9 ಎಂದು ಗುರುತಿಸಲಾಗಿದೆ. ಇನ್ನು ಈ ಹೊಸ ಸ್ಮಾರ್ಟ್‌ಫೋನ್ ಮಾದರಿ ಸಂಖ್ಯೆ M2002J9E ಅನ್ನು ಹೊಂದಿದೆ. ಈ ಮಾದರಿಯ ಸಂಖ್ಯೆ ಆದಾರದ ಮೇಲೆ ಈ ಸ್ಮಾರ್ಟ್‌ಫೋನ್‌ 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗ್ತಿದೆ.ಹಾಗೇ ನೊಡುವುದಾದರೆ ಇಗಾಗಲೇ ಲಭ್ಯವಿರುವ ರೆಡ್‌ಮಿ ನೋಟ್ 9 ಸರಣಿಯ ಸ್ಮಾರ್ಟ್‌ಫೋನ್‌ ಗಳು ಈಗಾಗಲೇ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಗಮನಿಸಬೇಕಾದ ಮತ್ತೊಂದು ವಿಶೇಷತೆ ಅಂದರೆ ಅದು 5 ಜಿ ನೆಟ್‌ವರ್ಕ್‌ಗಳಿಗೆ ಬೆಂಬಲ. ಪ್ರಸ್ತುತ ರೆಡ್‌ಮಿ ನೋಟ್ 9 ಸ್ಮಾರ್ಟ್‌ಫೋನ್‌ಗಳು 4G LTE, 3G ಮತ್ತು 2G ನೆಟ್‌ವರ್ಕ್‌ಗಳನ್ನು ಮಾತ್ರ ಬೆಂಬಲಿಸುತ್ತವೆ. ಸದ್ಯ ಈ ಸ್ಮಾರ್ಟ್‌ಫೋನ್‌ ಚೀನಾದ ಮಾರುಕಟ್ಟೆಗೆ 5G ಆವೃತ್ತಿಯೊಂದಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮಾದರಿ ಹೇಗಿರಲಿದೆ ಎಂಬ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ. ಅಲ್ಲದೆ ಇದರ ಪ್ರೊಸೆಸರ್‌ ವೇಗದ ಬಗ್ಗೆ ಕೂಡ ಮಾಹಿತಿ ಲಬ್ಯವಾಗಿಲ್ಲ.

ಮಾಡೆಲ್‌

ಸದ್ಯ ಮಾಡೆಲ್‌ ನಂಬರ್‌ M2003J15SC ಕಳೆದ ಜನವರಿಯ ಆರಂಭದಲ್ಲಿಯೇ MIIT ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಯಾವ ರೂಪದಲ್ಲಿ ಅಂದರೆ ನೋಟ್‌ ಇಲ್ಲವೇ ಪ್ರೊ ರೂಪದಲ್ಲಿ ಬರಲಿದೆಯಾ ಅನ್ನುವುದರ ಬಗ್ಗೆ ಯಾವುದೇ ಖಚಿತತೆಯನ್ನ ಕಂಪೆನಿ ನಿಡಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಹೊಸ ಆಕರ್ಷಕ ಫೀಚರ್ಸ್‌ಗಳ ಜೊತೆಗೆ ಬರುವುದ ಮಾತ್ರ ಪಕ್ಕಾ ಆಗಿದೆ. ಇನ್ನು ಈಗಾಗ್ಲೇ ರೆಡ್ಮಿ ನೊಟ್‌ ಸರಣಿಯ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ಉತ್ತಮ ಮಾದರಿಯನ್ನ ಹೊಂದಿರುವುದರಿಂದ ಇದರ ಡಿಸ್‌ಪ್ಲೇ ಕುಡ ವೀಡಿಯೋ ವೀಕ್ಷಣೆಗೆ ಅನುಕೂಲಕರವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Alleged Redmi Note 9 spotted at 3C with 4G connectivity, 22.5W fast charging support.to know more visit to kannada.gizbot.comr

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X