ಆಲೈಡ್ ಕಂಪ್ಯೂಟರ್ಸ್ ನಿಂದ 4,999 ಲ್ಯಾಪ್ಟಾಪ್
oi
-Varun
By Varun

ಟ್ಯಾಬ್ಲೆಟ್ ಗಳ ಭರಾಟೆಯಲ್ಲಿ ಲ್ಯಾಪ್ಟಾಪ್ ಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ UK ಯ ಲ್ಯಾಪ್ಟಾಪ್ ತಜ್ಞ ಆಲೈಡ್ ಕಂಪ್ಯೂಟರ್ಸ್, 4,999 ರೂಪಾಯಿಯ ಕಡಿಮೆ ಬಜೆಟ್ ಲ್ಯಾಪ್ಟಾಪ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ತಿಳಿಸಿದೆ.
ಮುಂಬೈ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿರುವ ಆಲೈಡ್ ಕಂಪ್ಯೂಟರ್ಸ್, ಜೂನ್ ಮಧ್ಯಭಾಗದಲ್ಲಿ ಈ ಲ್ಯಾಪ್ಟಾಪ್ ಅನ್ನು ಹೊರತರಲಿದ್ದು, ವಿಂಡೋಸ್ ತಂತ್ರಾಂಶ ಇರಲಿದೆ ಎಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್, ಹಿರ್ಜಿ ಪಟೇಲ್ ತಿಳಿಸಿದ್ದಾರೆ.
ಚೀನಾದಿಂದ ಆಮದು ಮಾಡಿಕೊಂಡು, ಅತಿ ಕಡಿಮೆ ಲಾಭ ಇಟ್ಟುಕೊಂಡು ಭಾರತೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ ಕೊಡಬೇಕೆಂಬ ಆಶಯ ಇಟ್ಟುಕೊಂಡಿರುವ ಆಲೈಡ್ ಕಂಪ್ಯೂಟರ್ಸ್, 4,999 ರೂಪಾಯಿಯ 10 ಇಂಚ್ ಸ್ಕ್ರೀನ್ ಲ್ಯಾಪ್ಟಾಪ್ ಜೊತೆಗೆ, 9,999 ರೂಪಾಯಿಯ ಲ್ಯಾಪ್ಟಾಪ್ ಹಾಗು 19,999 ರೂಪಾಯಿ ಬೆಲೆಯ ಇಂಟೆಲ್ i3 CPU ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲಿದೆಯಂತೆ.
ಕ್ಷಿಪಣಿ ವಿಜ್ಞಾನಿಯಾಗಿದ್ದ ಹಿರ್ಜಿ ಪಟೇಲ್, 2002 ರಲ್ಲಿ ಈ ಕಂಪನಿಯನ್ನು ಶುರು ಮಾಡಿದ್ದು, ಯುನೈಟೆಡ್ ಕಿಂಗ್ಡಮ್ ನಲ್ಲಿ ಬಜೆಟ್ ಲ್ಯಾಪ್ಟಾಪ್ ಗಳಿಗೆ ಹೆಸರುವಾಸಿಯಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications