Home
ಸುದ್ದಿಜಾಲ

ಸುನಾಮಿಯಂತೆ ಅಪ್ಪಳಿಸಿದ ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌: ಜಬರ್ದಸ್ತ್‌ ಫೀಚರ್ಸ್‌!

ಅಮಾಜ್‌ಫಿಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರತದಲ್ಲಿ ಸಾಕಷ್ಟು ಡಿಮ್ಯಾಂಡ್‌ ಇದೆ. ಇದಕ್ಕೆ ತಕ್ಕಂತೆ ಅಮಾಜ್‌ಫಿಟ್‌ ಸಂಸ್ಥೆ ಕೂಡ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್‌ AI-ಚಾಲಿತ ಝೆಪ್ ಕೋಚ್ ಅನ್ನು ಹೊಂದಿದ್ದು, ಎಲ್ಲಾ ತರಬೇತಿ ಹಿನ್ನೆಲೆಯ ಬಳಕೆದಾರರನ್ನು ಪೂರೈಸುತ್ತದೆ. ಜೊತೆಗೆ ವೈಯಕ್ತೀಕರಿಸಿದ ಮತ್ತು ಸುರಕ್ಷಿತ ಜೀವನಕ್ರಮವನ್ನು ಒದಗಿಸುತ್ತದೆ. ಹಾಗಾದ್ರೆ ಹೊಸ ಅಮಾಜ್‌ಫಿಟ್‌ ಆಕ್ಟಿವ್‌ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸುನಾಮಿಯಂತೆ ಅಪ್ಪಳಿಸಿದ ಅಮಾಜ್‌ಫಿಟ್ ಆಕ್ಟಿವ್ ವಾಚ್‌: ಜಬರ್ದಸ್ತ್‌ ಫೀಚರ್ಸ್‌!

ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌ 1.75 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 390 x 450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇಯು 2.5D ಟೆಂಪರ್ಡ್ ಗ್ಲಾಸ್ + ಆಂಟಿಫಿಂಗರ್‌ಪ್ರಿಂಟ್ ಲೇಪನವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ 7.0 ಮತ್ತು ಅದಕ್ಕೂ ಮೇಲಿನ, iOS 14.0 ಬೆಂಬಲಿಸುವ ಡಿವೈಸ್‌ಗಳೊಂದಿಗೆ ಕನೆಕ್ಟ್‌ ಮಾಡಬಹುದು. ಇದಕ್ಕಾಗಿ ಬ್ಲೂಟೂತ್‌ 5.2 ಅನ್ನು ಕನೆಕ್ಟಿವಿಟಿಯನ್ನು ಹೊಂದಿದೆ.

ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಫೋನ್ ಕಾಲ್‌ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚ್‌ ಮೂಲಕವೇ ಕಂಟ್ರೋಲ್‌ ಮಾಡಬಹುದಾಗಿದೆ. ಇದಕ್ಕಾಗಿ ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ Amazon Alexa ಆನ್‌ಲೈನ್ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ವಾಚ್ ಬಯೋಟ್ರ್ಯಾಕರ್ 3 PPG ಬಯೋಮೆಟ್ರಿಕ್ ಸೆನ್ಸಾರ್‌ ಹೊಂದಿದೆ.

ಸುನಾಮಿಯಂತೆ ಅಪ್ಪಳಿಸಿದ ಅಮಾಜ್‌ಫಿಟ್ ಆಕ್ಟಿವ್ ವಾಚ್‌: ಜಬರ್ದಸ್ತ್‌ ಫೀಚರ್ಸ್‌!

ಇನ್ನು ಸ್ಮಾರ್ಟ್‌ವಾಚ್‌ ಝೆಪ್ ಕೋಚ್ ಚಾಲನೆಯಲ್ಲಿರುವ ತರಬೇತುದಾರ ಟ್ರ್ಯಾಕ್ ರನ್ ಮೋಡ್, ಸ್ಮಾರ್ಟ್ ಪಥ ತಿದ್ದುಪಡಿ, ವರ್ಚುವಲ್ ಪೇಸರ್, ರೇಸ್ ಸಾಧನೆ ಮುನ್ನೋಟಗಳನ್ನು ನೀಡಲಿದೆ. ಅಲ್ಲದೆ 24H ಹೃದಯ ಬಡಿತ, SpO2 ಮತ್ತು ಒತ್ತಡದ ಮಾನಿಟರಿಂಗ್ ಫೀಚರ್ಸ್‌ಗಳನ್ನು ಹೊಂದಿದೆ. ಇದರೊಂದಿಗೆ ಕ್ಯಾಲೆಂಡರ್ ಜ್ಞಾಪನೆ, ಕರೆ ಅಧಿಸೂಚನೆ, ಕುಳಿತುಕೊಳ್ಳುವ ಜ್ಞಾಪನೆಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಅಧಿಸೂಚನೆಗಳನ್ನು ಸಹ ನೀಡಲಿದೆ.

ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌ ಸ್ಟೇನ್‌ಲೆಸ್-ಸ್ಟೀಲ್ ಫ್ರೇಮ್ ಮತ್ತು ಹಗುರವಾದ ವಿನ್ಯಾಸವನ್ನು ಒಳಗೊಂಡಿದೆ. ಬ್ಲೂಟೂತ್ ಕರೆ, ಆಫ್‌ಲೈನ್ ಮ್ಯೂಸಿಕ್ ಪ್ಲೇಬ್ಯಾಕ್, 120+ ಸ್ಪೋರ್ಟ್ಸ ಮೋಡ್‌ಗಳು, ಸ್ಮಾರ್ಟ್ ರೆಕಗ್ನಿಷನ್, ಅಮೆಜಾನ್ ಅಲೆಕ್ಸಾ ಇಂಟಿಗ್ರೇಷನ್ ಫೀಚರ್ಸ್‌ಗಳನ್ನು ಹೊಂದಿದೆ. ಜೊತೆಗೆ 5 ATM ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಸಹ ನೀಡಲಾಗಿದೆ. ಜೊತೆಗೆ ಮ್ಯೂಸಿಕ್‌ ಕಂಟ್ರೋಲ್‌, ಕ್ಯಾಮರಾ ಕಂಟ್ರೋಲ್‌ ಅನ್ನು ಕೂಡ ಹೊಂದಿದೆ.

ಸುನಾಮಿಯಂತೆ ಅಪ್ಪಳಿಸಿದ ಅಮಾಜ್‌ಫಿಟ್ ಆಕ್ಟಿವ್ ವಾಚ್‌: ಜಬರ್ದಸ್ತ್‌ ಫೀಚರ್ಸ್‌!

ಈ ವಾಚ್‌ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 14 ದಿನಗಳ ಬ್ಯಾಟರಿ ಬಾಳಿಕೆಯೊಂದಿಗೆ ಬರಲಿದೆ. ಅಲ್ಲದೆ ಹೆಚ್ಚಿನ ಬಳಕೆಯಲ್ಲಿ 10 ದಿನಗಳವರೆಗೆ ಮತ್ತು ಬ್ಯಾಟರಿ ಸೇವರ್ ಮೋಡ್‌ನಲ್ಲಿ 30 ದಿನಗಳವರೆಗೆ ಬಾಳಿಕೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಉಪಗ್ರಹ ಸ್ಥಾನೀಕರಣವನ್ನು ಸಹ ನೀಡಲಿದೆ. ಇದರಿಂದ ಸ್ಮಾರ್ಟ್‌ವಾಚ್‌ ಸಾಕಷ್ಟು ಮಾಡ್ರನ್‌ ಆಗಿದ್ದು, ಸ್ಟೈಲಿಶ್‌ ಲುಕ್‌ನೊಂದಿಗೆ ಎಲ್ಲರ ಗಮನಸೆಳೆದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್‌ವಾಚ್‌ 12,999ರೂ ಬೆಲೆಯನ್ನು ಹೊಂದಿದೆ. ಇದನ್ನು ಮಿಡ್‌ನೈಟ್ ಬ್ಲ್ಯಾಕ್, ಪೆಟಲ್ ಪಿಂಕ್ ಮತ್ತು ಲ್ಯಾವೆಂಡರ್ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು Amazon.in, Amazfit ಇಂಡಿಯಾ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Amazfit Active with GPS launched in India: Price And Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+