ಭಾರತದಲ್ಲಿ ಅಮಾಜ್‌ಫಿಟ್ ಬಿಪ್ 5 ವಾಚ್ ಲಾಂಚ್.. ಬೆಲೆ ಎಷ್ಟು?
ಸ್ಟೈಲಿಶ್ ಹಾಗೂ ಆಕರ್ಷಕ ಸ್ಮಾರ್ಟ್‌ವಾಚ್‌ಗಳಿಗೆ ಅಮಾಜ್‌ಫಿಟ್ ಬ್ರ್ಯಾಂಡ್ ಪ್ರಸಿದ್ಧಿ ಪಡೆದುಕೊಂಡಿದೆ. ತನ್ನ ವಿಭಿನ್ನ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ಸ್ಮಾರ್ಟ್‌ವಾಚ್ ಪ್ರಿಯರ ಗಮನಸೆಳೆದಿದೆ. ಇದೀಗ ಅಮಾಜ್‌ಫಿಟ್ ಹೊಸ ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.
ಹೌದು, ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ಚಾಚ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಹತ್ತುದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಅಮಾಜ್‌ಫಿಟ್ ಹೇಳಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಟೆಂಪರ್ಡ್ ಗ್ಲಾಸ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್ ಬಿಪ್ 5 ಫೀಚರ್ಸ್ ಹೇಗಿದೆ?
ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ 1.91 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 320x380 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 2.5D ಟೆಂಪರ್ಡ್ ಗ್ಲಾಸ್ ಮತ್ತು ಆಂಟಿಫಿಂಗರ್‌ಪ್ರಿಂಟ್ ಲೇಪನವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ನಿಯಂತ್ರಿಸಬಹುದಾಗಿದೆ.
ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ GPS ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಸೈಕ್ಲಿಂಗ್, ಓಟ, ವಾಕಿಂಗ್ ಮತ್ತು ಈಜು ಸೇರಿದಂತೆ 120 ಕ್ರೀಡಾ ವಿಧಾನಗಳನ್ನು ಟ್ರ್ಯಾಕ್ ಮಾಡುವ ಅವಕಾಶ ನೀಡಿದೆ. ಅಲ್ಲದೆ ರಕ್ತದ ಆಮ್ಲಜನಕ ಸೆನ್ಸಾರ್, ಹೃದಯ ಬಡಿತ ಟ್ರ್ಯಾಕರ್ ಮತ್ತು ಬಯೋ ಟ್ರ್ಯಾಕರ್ 3 ಸೆನ್ಸಾರ್ ಅನ್ನು ಬಳಸಿಕೊಂಡು ಒತ್ತಡದ ಮಾನಿಟರಿಂಗ್ ಮಾಡಬಹುದಾಗಿದೆ. ಇದಲ್ಲದೆ ಹಲವಾರು ಸ್ಮಾರ್ಟ್ ಹೆಲ್ತ್ ಮಾನಿಟರ್‌ಗಳನ್ನು ಸಹ ಹೊಂದಿದೆ.
ಈ ಸ್ಮಾರ್ಟ್‌ವಾಚ್ 70 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದೆ. ಇದರಲ್ಲಿ ಮಿನಿ ಗೇಮ್‌ಗಳನ್ನು ಸಹ ಅಳವಡಿಸಲಾಗಿದ್ದು, 30ಕ್ಕೂ ಹೆಚ್ಚು ಮಿನಿ ಗೇಮ್‌ಗಳನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ ಮ್ಯೂಸಿಕ್ ಕಂಟ್ರೋಲ್, ಈವೆಂಟ್ ರಿಮೈಂಡರ್, ಸ್ಮಾರ್ಟ್ ಅಧಿಸೂಚನೆಗಳು ಮತ್ತು ಫೈಂಡ್ ಮೈ ಫೋನ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಸಾಮನ್ಯ ಬಳಕೆಯಲ್ಲಿ 10 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಬ್ಯಾಟರಿ ಸೇವರ್ ಮೋಡ್ ಆನ್‌ನೊಂದಿಗೆ 30 ದಿನಗಳವರೆಗೆ ಕೂಡ ಬ್ಯಾಟರಿ ಬಾಳಿಕೆ ನೀಡಲಿದ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ Zepp OS 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಸ್ಮಾರ್ಟ್‌ವಾಚ್ ಗೂಗಲ್ ಫಿಟ್ ಮತ್ತು ಆಪಲ್ ಹೆಲ್ತ್ ಅನ್ನು ಬೆಂಬಲಿಸಲಿದೆ.
ಅಮಾಜ್‌ಫಿಟ್ ಬಿಪ್ 5 ಬೆಲೆ ಮತ್ತು ಲಭ್ಯತೆ
ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ ಭಾರತದಲ್ಲಿ 7,499ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಇದು ಕ್ರೀಮ್ ವೈಟ್, ನೀಲಿಬಣ್ಣದ ಗುಲಾಬಿ ಮತ್ತು ಮೃದು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಲಿದೆ.
ಇನ್ನು ಅಮಾಜ್‌ಫಿಟ್ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಅಮಾಜ್‌ಫಿಟ್ GTR 4 ಮತ್ತು GTS 4 ಅನ್ನು ಪರಿಚಯಿಸಿದೆ. ಇದು ಡ್ಯುಯಲ್-ಬ್ಯಾಂಡ್ ವೃತ್ತಾಕಾರದ-ಧ್ರುವೀಕೃತ GPS ಆಂಟೆನಾ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ಗಳು ಐದು ಉಪಗ್ರಹ ಸ್ಥಾನೀಕರಣ ವ್ಯವಸ್ಥೆಗಳನ್ನು ಬೆಂಬಲಿಸುತ್ತವೆ. ಅಲ್ಲದೆ ರಿಯಲ್ ಟೈಂ GPS ಟ್ರ್ಯಾಕಿಂಗ್‌ಗಾಗಿ ಕೂಡ ಬಳಸಬಹುದಾಗಿದೆ. ಇವುಗಳು ರನ್ನಿಂಗ್, ಸ್ಲೈಕಿಂಗ್ ಸೇರಿದಂತೆ 150ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ.


Click it and Unblock the Notifications








