ಅಮಾಜ್‌ಫಿಟ್‌ ಬಿಪ್‌ S ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿದ್ಯಮಯ ಸ್ಮಾರ್ಟ್‌ವಾಚ್‌ಗಳನ್ನ ಬಿಡುಗಡೆ ಮಾಡಿವೆ. ಇನ್ನು ಹಲವು ಮಾದರಿಯ ಸ್ಮಾರ್ಟ್‌ವಾಚ್‌ಗಳು ಲಭ್ಯವಿದ್ದರೂ ಸಹ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಸ್ಮಾರ್ಟ್‌ವಾಚ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಸ್ಮಾರ್ಟ್‌ವಾಚ್‌ ಕಂಪೆನಿಗಳಲ್ಲಿ ಅಮಾಜ್‌ ಫಿಟ್‌ ಕಂಪೆನಿ ಕೂಡ ಒಂದಾಗಿದ್ದು, ತನ್ನ ವಿಶೇಷ ವಿನ್ಯಾಸದ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಅಮಾಜ್ ಫಿಟ್ ಬಿಪ್ ಎಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸ್ಮಾರ್ಟ್‌ವಾಚ್

ಹೌದು, ಸ್ಮಾರ್ಟ್‌ವಾಚ್‌ ವಲಯದಲ್ಲಿ ಜನಪ್ರಿಯತೆಯನ್ನ ಗಳಿಸಿಕೊಂಡಿರುವ ಅಮಾಜ್‌ಫಿಟ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್ ವಾಚ್ ಅಮಾಜ್‌ ಫಿಟ್‌ ಬಿಪ್‌ ಎಸ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 5ATM ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಒಳಗೊಂಡಿದೆ. ಅಲ್ಲದೆ 40 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಸಹ ನೀಡಲಿದೆ ಎಂದು ಕಂಪೆನಿ ಹೇಳಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು? ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ GPS ಬೆಂಬಲವನ್ನು ಸಹ ಹೊಂದಿದ್ದು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ಲೇ ಆಗಿರುವ ಮ್ಯೂಸಿಕ್‌ ಅನ್ನು ಸ್ಮಾರ್ಟ್‌ವಾಚ್‌ನಿಂದಲೇ ಕಂಟ್ರೋಲ್‌ ಮಾಡುವ ಅವಕಾಶವನ್ನು ನೀಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.x- ಇಂಚಿನ ಟ್ರಾನ್ಸ್‌ಫ್ಲೆಕ್ಟಿವ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 176x176 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಸಹ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 2.5 ಡಿ ಬಾಗಿದ ವಿನ್ಯಾಸವನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನಯ ಸಹ ಒಳಗೊಂಡಿದೆ.

ಸ್ಮಾರ್ಟ್‌ವಾಚ್

ಅಲ್ಲದೆ ಈ ಸ್ಮಾರ್ಟ್‌ವಾಚ್‌ ಮೇಲ್ಭಾಗದಲ್ಲಿ ಫಿಂಗರ್‌ಪ್ರಿಂಟ್‌ ಲೇಪನವನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್ ಅನುಭವಕ್ಕಾಗಿ, ಬಯೋಟ್ರಾಕರ್ ಪಿಪಿಜಿ ಆಪ್ಟಿಕಲ್ ಸೆನ್ಸರ್, ಮೂರು-ಅಕ್ಷದ ವೇಗವರ್ಧನೆ ಮತ್ತು ಮೂರು-ಅಕ್ಷದ ಭೂಕಾಂತೀಯ ಸೆನ್ಸಾರ್‌ ಅನ್ನು ಒಳಗೊಂಡಿರುವ ಸೆನ್ಸಾರ್‌ಗಳ ಶ್ರೇಣೀಯನ್ನ ನೀಡಲಾಗಿದೆ. ಇನ್ನು ಈ ಸೆನ್ಸಾರ್‌ಗಳು ಫಿಟ್‌ನೆಸ್ ಮತ್ತು ಸ್ಲೀಪ್ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತವೆ. ಜೊತೆಗೆ ಟ್ರೆಡ್‌ಮಿಲ್, ವಾಕಿಂಗ್, ಒಳಾಂಗಣ ಸೈಕ್ಲಿಂಗ್, ಹೊರಾಂಗಣ ಸೈಕ್ಲಿಂಗ್, ಓಪನ್ ವಾಟರ್, ಪೂಲ್, ಯೋಗ, ಎಲಿಪ್ಟಿಕಲ್ ಟ್ರೈನರ್ ಮತ್ತು ಫ್ರೀಸ್ಟೈಲ್ ಸೇರಿದಂತೆ 10 ಮಾದರಿಯ ಸ್ಪೋರ್ಟ್ಸ್‌ ವಿಧಾನಗಳನ್ನು ಅಮಾಜ್‌ಫಿಟ್ ಒದಗಿಸಿದೆ.

ಸ್ಮಾರ್ಟ್ ವಾಚ್

ಇನ್ನು ಈ ಸ್ಮಾರ್ಟ್ ವಾಚ್ ನಿರಂತರ ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು ಹೃದಯ ಬಡಿತದ ಎಚ್ಚರಿಕೆಯನ್ನು ಸಹ ಹೊಂದಿದೆ. ಸದ್ಯ ಈ ಅಮಾಜ್‌ಫಿಟ್ ಬಿಪ್ ಎಸ್ ಸಂಪರ್ಕದ ಮುಂಭಾಗದಲ್ಲಿ ಬ್ಲೂಟೂತ್ ವಿ 5.0 ಮತ್ತು ಬ್ಲೂಟೂತ್ ಲೋ ಎನರ್ಜಿ ಬೆಂಬಲವನ್ನು ಹೊಂದಿದೆ. ಇದು ಜಿಪಿಎಸ್ + ಗ್ಲೋನಾಸ್ ಅನ್ನು ಸಹ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ 200mAh ಬ್ಯಾಟರಿಯನ್ನು ಅನ್ನು ಸಹ ಹೊಂದಿದ್ದು, 30 ದಿನಗಳವರೆಗೆ ಅಥವಾ 90 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಸಿಂಗಲ್‌ ಚಾರ್ಜ್‌ನಲ್ಲಿ ನೀಡಲಿದೆ ಎಂದು ಕಂಪೆನಿ ಹೇಳಿದೆ.

ಅಮಾಜ್‌ಫಿಟ್

ಸದ್ಯ ಭಾರತದಲ್ಲಿ ಅಮಾಜ್‌ಫಿಟ್ ಬಿಪ್ ಎಸ್ ಬೆಲೆಯನ್ನು ರೂ. 4,999 ರೂ. ಗೆ ನಿಗಧಿ ಪಡಿಸಲಾಗಿದ್ದು, ಈ ಸ್ಮಾರ್ಟ್ ವಾಚ್ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೈಂಟ್ರಾ ಮೂಲಕ ಖರೀದಿಸಲು ಲಭ್ಯವಿರುತ್ತದೆ ಮತ್ತು ಆಫ್‌ಲೈನ್ ಮಳಿಗೆಗಳಾದ ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಪೂರ್ವಿಕ ಮೊಬೈಲ್‌ಗಳ ಮೂಲಕ ಲಭ್ಯವಾಗಲಿದೆ.

Best Mobiles in India

English summary
Amazfit Bip S features a 1.28-inch transflective colour TFT display with a 176x176 pixels resolution.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X