ಭಾರತದಲ್ಲಿ ಧೂಳೆಬ್ಬಿಸಿದ ಅಮಾಜ್‌ಫಿಟ್ ಚೀತಾ ಸ್ಮಾರ್ಟ್‌ವಾಚ್ ಸರಣಿ! ಬೆಲೆ ಎಷ್ಟು?
ಸ್ಮಾರ್ಟ್‌ವಾಚ್ ವಲಯದಲ್ಲಿ ಧೂಳೆಬ್ಬಿಸುತ್ತಿರುವ ಅಮಾಜ್‌ಫಿಟ್ ಕಂಪೆನಿ ಇದೀಗ ಮತ್ತೊಂದು ವಾಚ್ ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ ಅಮಾಜ್‌ಫಿಟ್ ಚೀತಾ ರೌಂಡ್ ಮತ್ತು ಅಮಾಜ್‌ಫಿಟ್ ಚೀತಾ ಸ್ಕ್ವೇರ್ ವಾಚ್‌ಗಳನ್ನು ಕಾಣಬಹುದಾಗಿದೆ. ಈ ವಾಚ್‌ಗಳು AI ನಿಂದ ನಡೆಸಲ್ಪಡುವ Zepp ಕೋಚ್‌ನೊಂದಿಗೆ ಬರುತ್ತವೆ.
ಹೌದು, ಅಮಾಜ್‌ಫಿಟ್ ಚೀತಾ ಸ್ಮಾರ್ಟ್‌ವಾಚ್ ಸರಣಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್‌ಗಳು ಉನ್ನತ ದರ್ಜೆಯ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದು ಓಟಗಾರರಿಗೆ ತಮ್ಮ ತರಬೇತಿ ಮತ್ತು ರನ್ನಿಂಗ್ ಗೋಲ್‌ಗಳನ್ನು ಸೆಟ್ ಮಾಡಲು ಸಹಾಯಕವಾಗಿದೆ. ಇನ್ನುಳಿದಂತೆ ಅಮಾಜ್‌ಫಿಟ್ ಚೀತಾ ಸ್ಮಾರ್ಟ್‌ವಾಚ್ ಸರಣಿ ಏನೆಲ್ಲಾ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್ ಚೀತಾ ಸರಣಿ ಫೀಚರ್ಸ್ ಹೇಗಿದೆ?
ಅಮಾಜ್‌ಫಿಟ್ ಚೀತಾ ಸರಣಿ ಸ್ಮಾರ್ಟ್‌ವಾಚ್‌ಗಳು ಫೈಬರ್-ಬಲವರ್ಧಿತ ಪಾಲಿಮರ್ ಮಧ್ಯದ ಚೌಕಟ್ಟಿನೊಂದಿಗೆ ಹಗುರ ವಿನ್ಯಾಸವನ್ನು ಹೊಂದಿವೆ. ಇದರಲ್ಲಿ ಅಮಾಜ್‌ಫಿಟ್ ಚೀತಾ ರೌಂಡ್ ವಾಚ್ 1.39 ಇಂಚಿನ HD ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 454×454 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 326 PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಆದರೆ ಅಮಾಜ್‌ಫಿಟ್ ಚೀತಾ ಸ್ಕ್ವೇರ್ ಸ್ಮಾರ್ಟ್‌ವಾಚ್ 1.75 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 341 PPI ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ.
ಅಮಾಜ್‌ಫಿಟ್ ಚೀತಾ ಸರಣಿ ವಾಚ್‌ಗಳು ಮ್ಯಾಕ್ಸ್‌ಟ್ರಾಕ್ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಜಿಪಿಎಸ್ ನಿಖರತೆಯನ್ನು ಸುಧಾರಿಸುತ್ತದೆ. ಇದು ಆರು ಉಪಗ್ರಹ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ. ಜೊತೆಗೆ ನಿಮ್ಮ ರನ್‌ಗಳ ಸಮಯದಲ್ಲಿ ನಿಖರವಾದ ನ್ಯಾವಿಗೇಷನ್‌ಗಾಗಿ Zepp ಅಪ್ಲಿಕೇಶನ್ ಮೂಲಕ ಆಫ್‌ಲೈನ್ ಮ್ಯಾಪ್‌ಗಳನ್ನು ನೀಡಲಿವೆ. ಇನ್ನು Zepp ಕೋಚ್ ನಿಮ್ಮ AI ರನ್ನಿಂಗ್ ಕೋಚ್ ಆಗಿದ್ದು, ಇದು ನಿಮಗಾಗಿ ಕಸ್ಟಮೈಸ್ ಮಾಡಿದ ವರ್ಕ್‌ಔಟ್ ಪ್ಲ್ಯಾನ್‌ಗಳನ್ನು ಕ್ರಿಯೆಟ್ ಮಾಡಲಿದೆ.
ಇನ್ನು Zepp OS 2.0 ಮೂಲಕ ವರ್ಧಿತ ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದರಿಂದ ನೀವು ಬಾಹ್ಯ ಸಾಧನಗಳಿಗೆ ಸಂಪರ್ಕಿಸಬಹುದು. ಅಲ್ಲದೆ ನಿಮ್ಮ ವಾಚ್‌ನಲ್ಲಿ ನೇರವಾಗಿ ಮ್ಯೂಸಿಕ್ ಅನ್ನು ಕೇಳುವುದಕ್ಕೆ ಸಾದ್ಯವಾಗಲಿದೆ. ಇದಕ್ಕಾಗಿ ಸ್ಮಾರ್ಟ್‌ವಾಚ್ 470 ಹಾಡುಗಳನ್ನು ಸ್ಟೋರೇಜ್ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಇನ್ನು Zepp ಅಪ್ಲಿಕೇಶನ್ ಮೂಲಕ Strava, Relive ಮತ್ತು Adidas ರನ್ನಿಂಗ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳೊಂದಿಗೆ ನಿಮ್ಮ ರನ್ ಡೇಟಾವನ್ನು ನೀವು ಸಿಂಕ್ ಮಾಡಬಹುದು.
ಅಮಾಜ್‌ಫಿಟ್ ಚೀತಾ ಸರಣಿಯು 150 ಕ್ಕೂ ಹೆಚ್ಚು ಸ್ಪೋರ್ಟ್ಸ್‌ಗಳನ್ನು ಬೆಂಬಲಿಸಲಿದೆ. ರನ್ನಿಂಗ್, ವಾಕಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್ ನಂತಹ ವಿವಿಧ ಚಟುವಟಿಕೆಗಳನ್ನು ಆಟೋಮ್ಯಾಟಿಕ್ ಆಗಿ ಗುರುತಿಸಲಿದೆ. ಇನ್ನು ಸ್ಮಾರ್ಟ್ ವಾಚ್ 5 ATM ನ ವಾಟರ್ ರೆಸಿಸ್ಟೆನ್ಸಿಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಬೆಲೆ ಮತ್ತು ಲಭ್ಯತೆ
ಅಮಾಜ್‌ಫಿಟ್ ಚೀತಾ ಸ್ಮಾರ್ಟ್‌ವಾಚ್ ಭಾರತದಲ್ಲಿ 20,999ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಸ್ಪೀಡ್‌ಸ್ಟರ್ ಗ್ರೇ ಬಣ್ಣದ ಆಯ್ಕೆಯಲ್ಲಿ ಬರಲಿದೆ. ಇದನ್ನು ನೀವು ನಿಮ್ಮ ಶೈಲಿಯನ್ನು ಸೆಟ್ ಮಾಡಲು ರೌಂಡ್ ಮತ್ತು ಸ್ಕ್ವೇರ್ ವಿನ್ಯಾಸಗಳ ನಡುವೆ ಆಯ್ಕೆ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ ಇದೇ ಸೆಪ್ಟೆಂಬರ್ 24, 2023 ರಿಂದ ಖರೀದಿಗೆ ಲಬ್ಯವಾಗಲಿದೆ. ಇದನ್ನು ನೀವು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು Helios ಮತ್ತು ಜಸ್ಟ್ ಇನ್ ಟೈಮ್ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಸಿಗಲಿದೆ.


Click it and Unblock the Notifications








