Home
ಸುದ್ದಿಜಾಲ

ಭಾರತದಲ್ಲಿ ಅಮಾಜ್‌ಫಿಟ್‌ GTS2 ಸ್ಮಾರ್ಟ್‌ವಾಚ್‌ ಲಾಂಚ್‌!..7 ದಿನಗಳ ಬ್ಯಾಟರಿ ಅವಧಿ!

ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಕ ಅಮಾಜ್‌ಫಿಟ್ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿರುವ ಅಮಾಜ್‌ಫಿಟ್‌ ಇದೀಗ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಇನ್ನು ಈ ವಾಚ್‌ ಅನ್ನು ಅಮಾಜ್‌ಫಿಟ್ ಜಿಟಿಎಸ್ 2 ಎಂದು ಹೆಸರಿಸಲಾಗಿದ್ದು, ಅಧಿಕೃತವಾಗಿ ಭಾರತದಲ್ಲಿ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ ತನ್ನ ಹೊಸ ಅಮಾಜ್‌ಫಿಟ್‌ GTS 2 ಅನ್ನು ಭಾರತದಲ್ಲಿ ಇದೇ ಡಿಸೆಂಬರ್‌ 21 ರಂದು ಬಿಡುಗಡೆ ಮಾಡಲಿದೆ. ಇದು ಜಿಟಿಆರ್ 2 ರ ನಂತರ ಅಮಾಜ್‌ಫಿಟ್‌ನ ಎರಡನೇ ಸ್ಮಾರ್ಟ್‌ವಾಚ್ ಆಗಿದೆ. ಇನ್ನು ಈ ಅಮಾಜ್‌ಫಿಟ್ ಜಿಟಿಎಸ್ 2 ಬೆಲೆ 12,999, ರೂ ಆಗಿದ್ದು, ಮಿಡ್‌ನೈಟ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್‌

ಸದ್ಯ ಅಮಾಜ್‌ಫಿಟ್‌ ಬಿಡುಗಡೆ ಮಾಡಲು ಸಿದ್ದವಿರುವ ಅಮಾಜ್‌ ಫಿಟ್‌ GTS 2 ಗಿಂತ ಅಮಾಜ್‌ಫಿಟ್ GTR2 ಗಿಂತ ಭಿನ್ನವಾಗಿದೆ. ಇನ್ನು ಅಮಾಜ್‌ಫಿಟ್‌ GTS 2 ಸ್ಮಾರ್ಟ್‌ವಾಚ್‌ 1.65-ಇಂಚಿನ ಹೆಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಯನ್ನು ಹೊಂದಿದೆ. ಇದರ ಮೇಲೆ ಆಂಟಿ-ಫಿಂಗರ್‌ಪ್ರಿಂಟ್ ಲೇಪನದೊಂದಿಗೆ 3D ಕಾರ್ನಿಂಗ್ ಗ್ಲಾಸ್ ಮತ್ತು ಸ್ಕ್ರ್ಯಾಚ್ ರೆಸಿಸ್ಟೆನ್ಸ್ ಲೇಪನವಿದೆ. ಈ ಸ್ಮಾರ್ಟ್ ವಾಚ್ 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ, ಮತ್ತು ಇದು ಆಲ್‌ವೆಸ್‌ ಡಿಸ್‌ಪ್ಲೇ ಯನ್ನು ಹೊಂದಿರುತ್ತದೆ.

ಅಮಾಜ್‌ಫಿಟ್

ಇನ್ನು ಅಮಾಜ್‌ಫಿಟ್ GTS 2 ಹೃದಯ ಬಡಿತ ಮೇಲ್ವಿಚಾರಣೆಗಾಗಿ ಬಯೋಟ್ರಾಕರ್ 2 ಪಿಪಿಜಿ ಆಪ್ಟಿಕಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರಲ್ಲಿ ಹೃದಯ ಬಡಿತ ವಿಶ್ರಾಂತಿ, ಹೃದಯ ಬಡಿತ ವಲಯಗಳು ಮತ್ತು ಅಸಹಜ ಹೃದಯ ಬಡಿತಗಳ ಎಚ್ಚರಿಕೆಗಳು ಸೇರಿವೆ. ಇದು ನಿಮ್ಮ ರಕ್ತ-ಆಮ್ಲಜನಕದ ಶುದ್ಧತ್ವವನ್ನು ಸಹ ಅಳೆಯಲಿದೆ. ಈ ಸ್ಮಾರ್ಟ್ ವಾಚ್ ನಿಮ್ಮ ನಿದ್ರೆಯನ್ನು REM ನಿದ್ರೆ ಮತ್ತು ಸಣ್ಣ ಕಿರು ನಿದ್ದೆ ಸೇರಿದಂತೆ ಮೇಲ್ವಿಚಾರಣೆ ಮಾಡಲಿದೆ. ಇದಲ್ಲದೆ ಅಮಾಜ್‌ಫಿಟ್ GTS2 ನಲ್ಲಿನ ಹೆಚ್ಚಿನ ಫೀಚರ್ಸ್‌ಗಳು 90 ಕ್ಕೂ ಹೆಚ್ಚು ಇಂಟರ್‌ಬಿಲ್ಟ್‌ ಕ್ರೀಡಾ ವಿಧಾನಗಳನ್ನು ಒಳಗೊಂಡಿವೆ.

ಅಮಾಜ್‌ ಫಿಟ್

ಅಮಾಜ್‌ ಫಿಟ್‌ GTS2 ವಾಚ್‌ 5 ಎಟಿಎಂ ವಾಟರ್‌ ರೆಸಿಸ್ಟೆನ್ಸ್‌ ಹೊಂದಿದ್ದು, 50 ಮೀಟರ್ ವರೆಗೆ ಇರುತ್ತದೆ. ಇನ್ನು ಲೋಕಲ್‌ ಮ್ಯೂಸಿಕ್‌ ಫೈಲ್‌ಗಳಿಗಾಗಿ ಸ್ಮಾರ್ಟ್ ವಾಚ್ 3GB ಸ್ಟೋರೇಜ್‌ ಸ್ಪೇಸ್‌ ಅನ್ನು ಹೊಂದಿದೆ. ಇದು ಫೋನ್ ಕರೆಗಳಿಗಾಗಿ ಇಂಟರ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಸಹ ಹೊಂದಿದೆ. GTS 2 ಸ್ಮಾರ್ಟ್ ವಾಚ್ ಅನ್ನು ಬ್ಲೂಟೂತ್ ಹೆಡ್‌ಫೋನ್‌ಗಳಿಗೆ ಸಹ ಸಂಪರ್ಕಿಸಬಹುದಾಗಿದೆ. ಇನ್ನು ಅಮಾಜ್‌ಫಿಟ್ GTS 2 ನಲ್ಲಿ 246mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು ಸಾಮಾನ್ಯ ಬಳಕೆಯಲ್ಲಿ ಏಳು ದಿನಗಳವರೆಗೆ ಮತ್ತು ಮೂಲ ಬಳಕೆಯಲ್ಲಿ 20 ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Amazfit today announced the launch of a new smartwatch in India. Amazfit GTS 2 will officially launch in India on December 21.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+