ಅಮಾಜ್‌ಫಿಟ್ ಸ್ಟ್ರಾಟೋಸ್ 3 ಸ್ಮಾರ್ಟ್‌ವಾಚ್‌ ಲಾಂಚ್‌! 14 ದಿನಗಳ ಬ್ಯಾಟರಿ ವಿಶೇಷ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲ , ಸ್ಮಾರ್ಟ್‌ವಾಚ್‌ಗಳಿಗೂ ಬಾರಿ ಭೇಡಿಕೆ ಇದೆ. ಟೆಕ್ನಾಲಜಿ ಮುಂದುವರೆದಂತೆ ವಾಚ್‌ ವಲಯವೂ ಕೂಡ ಸಾಕಷ್ಟು ಮುಂದುವರೆದಿದೆ. ನಿಮಗೆಲ್ಲಾ ತಿಳಿದಿರುವಂತೆ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳು ಇಂದು ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಲೇ ಇವೆ. ಇನ್ನು ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿವೆ. ಇದರಲ್ಲಿ ಅಮಾಜ್‌ಫಿಟ್‌ ಕಂಪೆನಿ ಕೂಡ ಒಂದಾಗಿದ್ದು, ತನ್ನ ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ ಕಂಪೆನಿ ತನ್ನ ಹೊಸ ಅಮಾಜ್‌ಫಿಟ್‌ ಸ್ಟ್ರಾಟೋಸ್‌ 3 ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಸ್ಮಾರ್ಟ್‌ವಾಚ್‌ 14 ದಿನಗಳ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 80 ವಿಭಿನ್ನ ಮಾದರಿಯ ಸ್ಪೋರ್ಟ್ಸ್‌ ಟ್ರ್ಯಾಕಿಂಗ್ ಬೆಂಬಲವನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ ಸ್ಟ್ರಾಟೋಸ್ 3 ಸ್ಮಾರ್ಟ್ ವಾಚ್ 320x320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನ ಹೊಂದಿರುವ 1.34ಇಂಚಿನ ಡಿಸ್‌ಪ್ಲೇ ಹೊಂದಿದೆ. ವೃತ್ತಾಕಾರದ ಡಯಲ್ ಮತ್ತು ಟ್ರಾನ್ಸ್‌ಫ್ಲೆಕ್ಟಿವ್ ಡಿಸ್‌ಪ್ಲೇಯನ್ನ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಹೊಂದಿದ್ದು, ನಾಲ್ಕು ಭೌತಿಕ ಗುಂಡಿಗಳು, ಸ್ಟೇನ್‌ಲೆಸ್ ಸ್ಟೀಲ್ ಡಯಲ್ ಮತ್ತು ಸಿಲಿಕೋನ್ ಪಟ್ಟಿಯನ್ನು ಸಹ ಹೊಂದಿದೆ. ಅಲ್ಲದೆ ಅಮಾಜ್‌ಫಿಟ್ ಸ್ಟ್ರಾಟೋಸ್ 3 ಸ್ನೋಬೋರ್ಡಿಂಗ್, ಸ್ಕೀಯಿಂಗ್, ಹೊರಾಂಗಣ ಸ್ಕೇಟಿಂಗ್, ಫೆನ್ಸಿಂಗ್, ಕರಾಟೆ ಸೇರಿದಂತೆ ಇತರೆ ಎಲ್ಲಾ ಮಾದರಿಯ 80ಕ್ಕೂ ಹೆಚ್ಚಿನ ಸ್ಪೋರ್ಟ್ಸ್‌ ಟ್ರ್ಯಾಕಿಂಗ್‌ ಅನ್ನು ಬೆಂಬಲಿಸಲಿದೆ.

ಸ್ಮಾರ್ಟ್ ವಾಚ್

ಇನ್ನು ಈ ಸ್ಮಾರ್ಟ್ ವಾಚ್ 1.2GHz ಡ್ಯುಯಲ್-ಕೋರ್ ಪ್ರೊಸೆಸರ್ ಹೊಂದಿದೆ. ಹಾಗೇಯೇ 512MB RAM ಮತ್ತು 2GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಅಮಾಜ್‌ಫಿಟ್ ಸ್ಟ್ರಾಟೋಸ್ 3 ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು ಅಲ್ಟ್ರಾ ಎಂಡ್ಯೂರೆನ್ಸ್ ಮೋಡ್‌ನಲ್ಲಿ ಬಳಸಿದಾಗ 14 ದಿನಗಳು ಮತ್ತು ಸ್ಮಾರ್ಟ್ ಮೋಡ್‌ನಲ್ಲಿ ಬಳಸಿದಾಗ 7 ದಿನಗಳು ಬಾಳಿಕೆ ಇರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಜಿಪಿಎಸ್ ಅನ್ನು ನಿರಂತರವಾಗಿ ಬಳಸುವಾಗ, ಸ್ಮಾರ್ಟ್ ವಾಚ್ ನಿಖರ ಮೋಡ್‌ನಲ್ಲಿ 35 ಗಂಟೆಗಳವರೆಗೆ, ಸಮತೋಲಿತ ಮೋಡ್‌ನಲ್ಲಿ 45 ಗಂಟೆಗಳವರೆಗೆ ಮತ್ತು ಪವರ್ ಸೇವಿಂಗ್ ಮೋಡ್‌ನಲ್ಲಿ 70 ಗಂಟೆಗಳವರೆಗೆ ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಮಾರ್ಟ್‌ವಾಚ್

ಅಲ್ಲದೆ ಈ ಸ್ಮಾರ್ಟ್‌ವಾಚ್ ತನ್ನ ಸೆನ್ಸಾರ್‌ ಯೂನಿಟ್‌ನಲ್ಲಿ ಬಯೋಟ್ರಾಕರ್ ಪಿಪಿಜಿ ಬಯೋ-ಟ್ರ್ಯಾಕಿಂಗ್ ಆಪ್ಟಿಕಲ್ ಸೆನ್ಸರ್, 6-ಆಕ್ಸಿಸ್ ಆಕ್ಸಿಲರೊಮೀಟರ್, 3-ಆಕ್ಸಿಸ್ ಜಿಯೋಮ್ಯಾಗ್ನೆಟಿಕ್ ಸೆನ್ಸರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಹೊಂದಿದೆ. ಜೊತೆಗೆ ವಿಒ 2 ಮ್ಯಾಕ್ಸ್, ವ್ಯಾಯಾಮ ಪರಿಣಾಮ , ವ್ಯಾಯಾಮ ಲೋಡ್ , ಮತ್ತು ರಿಕವರಿ ಟೈಮ್ ಡೇಟಾ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸ್ಮಾರ್ಟ್ ವಾಚ್ ಎನ್‌ಎಫ್‌ಸಿ, ಜಿಪಿಎಸ್ / ಗ್ಲೋನಾಸ್, ಬ್ಲೂಟೂತ್ ವಿ 5.0, ಮತ್ತು ವೈ-ಫೈ ಅನ್ನು ಒಳಗೊಂಡಿದೆ.

ಅಮಾಜ್‌ಫಿಟ್

ಇನ್ನು ಅಮಾಜ್‌ಫಿಟ್ ಸ್ಟ್ರಾಟೋಸ್ 3 ಸ್ಮಾರ್ಟ್‌ವಾಚ್‌ ಭಾರತದಲ್ಲಿ 13,999 ರೂ. ಬೆಲೆಯನ್ನ ಹೊಂದಿದ್ದು, ಇದೇ ಜೂನ್ 22 ರ ರಾತ್ರಿ 8 ರಿಂದ ಫ್ಲಿಪ್‌ಕಾರ್ಟ್ ಮತ್ತು ಅಮಾಜ್‌ಫಿಟ್ ಇಂಡಿಯಾ ವೆಬ್‌ಸೈಟ್‌ನಿಂದ ಸ್ಮಾರ್ಟ್ ವಾಚ್ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಬ್ಲ್ಯಾಕ್‌ ಕಲರ್‌ ಪಟ್ಟಿಯ ಆಯ್ಕೆಯಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
Amazfit Stratos 3 smartwatch has been launched in India with tracking support for 80 different sports modes.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X