ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಅಮೆಜಾನ್ ಅಲೆಕ್ಸಾ !

|

ಅಮೆಜಾನ್‌ನ ಅಲೆಕ್ಸಾ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹೊಸ ಆಪ್ಡೇಟ್‌ ಅನ್ನು ಮಾಡಿದೆ. ಈ ಮೂಲಕ ಹೊಸ ಹೋಮ್‌ಸ್ಕ್ರೀನ್ ಮತ್ತು ನವೀಕರಿಸಿದ ನ್ಯಾವಿಗೇಷನ್ ಆಯ್ಕೆಗಳನ್ನು ಪರಿಷ್ಕರಿಸಿದೆ. ಅಲ್ಲದೆ ಹೊಸ ಹೋಮ್‌ಸ್ಕ್ರೀನ್ ಮೂಲಕ ಹೆಚ್ಚಾಗಿ ಬಳಸುವ ಅಪ್ಲಿಕೇಶನ್ ಫೀಚರ್ಸ್‌ಗಳಿಗೆ ನೇರ ಪ್ರವೇಶವನ್ನು ನೀಡುತ್ತದೆ ಎಂದು ತಿಳಿಸಿದೆ. ಇನ್ನು ಈ ಹೊಸ ಆಪ್ಡೇಟ್‌ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಲಬ್ಯವಾಗಲಿದ್ದು, ಮುಂದಿನ ತಿಂಗಳಲ್ಲಿ ವಿಶ್ವಾದ್ಯಂತ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಲಾಗುತ್ತಿದೆ ಎಂದು ಅಮೆಜಾನ್ ಹೇಳಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ವಾಯಿಸ್‌ ಅಸಿಸ್ಟೆಂಟ್‌ ಅಮೆಜಾನ್‌ ಅಲೆಕ್ಸಾ ಅಪ್ಲಿಕೇಶನ್‌ ಹೊಸ ಆಪ್ಡೆಟ್‌ ಅನ್ನು ಪಡೆದುಕೊಂಡಿದೆ. ಗೂಗಲ್‌ ವಾಯಿಸ್‌ ಅಸಿಸ್ಟೆಂಟ್‌, ಆಪಲ್‌ನ ಸಿರಿ, ಇದಕ್ಕೆ ಪರ್ಯಾಯವಾಗಿ ಅಮೆಜಾನ್‌ನ ಅಲೆಕ್ಸಾ ಲಬ್ಯವಿರೋದು ನಿಮಗೆಲ್ಲಾ ತಿಳಿದೆ ಇದೆ. ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುವ ಮೂಲಕ ಗಮನ ಸೆಳೆದಿರುವ ಅಮೆಜಾನ್‌ ಇದೀಗ ಇನ್ನಷ್ಟು ಆಪ್ಡೇಟ್‌ಗಳ ಮೂಲಕ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಹೋಮ್‌ ಸ್ಕ್ರೀನ್‌ ನಲ್ಲಿಯೇ ಹೊಸ ಆಪ್ಡೆಟ್‌ ತಂದಿರುವ ಅಮೆಜಾನ್‌ ಹೋಮ್‌ ಸ್ಕ್ರೀನ್‌ ಮೂಲಕವೇ ಇತರೆ ಅಪ್ಲಿಕೇಶನ್‌ಗಳಿಗೆ ಡೈರೆಕ್ಟ್‌ ಎಂಟ್ರಿ ನೀಡುವ ಅವಕಾಶ ನೀಡಿದೆ.

ಅಮೆಜಾನ್‌ ಅಲೆಕ್ಸಾ

ಸದ್ಯ ಅಮೆಜಾನ್‌ ಅಲೆಕ್ಸಾ ಹೊಸ ಆಪ್ಡೇಟ್‌ನಲ್ಲಿ ಅಲೆಕ್ಸಾ ಅಪ್ಲಿಕೇಶನ್‌ಗೆ ಹೆಚ್ಚು ಪರ್ಸನಲೈಜ್ಡ್‌ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಅಲ್ಲದೆ ಇದೀಗ ಪರಿಷ್ಕರಿಸಿದ ಹೋಮ್‌ಸ್ಕ್ರೀನ್ ಅನ್ನು ಪರಿಚಯಿಸಲಾಗಿದ್ದು,ಇದು ಬಳಕೆದಾರರು ಹೆಚ್ಚು ಕಾಳಜಿವಹಿಸುವ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ಸಲಹೆಗಳನ್ನು ತೋರಿಸುತ್ತದೆ. ಜೊತೆಗೆ ಅಲೆಕ್ಸಾ ಗುಂಡಿಯನ್ನು ಹೋಮ್‌ಸ್ಕ್ರೀನ್‌ನ ಕೆಳಗಿನಿಂದ ಮೇಲ್ಭಾಗಕ್ಕೆ ಸರಿಸಲಾಗಿದೆ, ಇದರಿಂದ ಯಾವುದೇ ಮಾಹಿತಿಯನ್ನು ಸುಲಭವಾಗಿ ಹುಡುಕಲು ಮತ್ತು ವಾಯಿಸ್‌ ಅಸಿಸ್ಟೆಂಟ್‌ ಜೊತೆಗೆ ಮಾತನಾಡಲು ಸುಲಭವಾಗಲಿದೆ.

ಅಲೆಕ್ಸಾ

ಇದಲ್ಲದೆ ಹೊಸ ಬಳಕೆದಾರರು ಅಲೆಕ್ಸಾವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಮ್ಯೂಸಿಕ್‌ ಅನ್ನು ಪ್ಲೇ ಮಾಡುವುದು ಅಥವಾ ಅವರ ಶಾಪಿಂಗ್ ಪಟ್ಟಿಯನ್ನು ನಿರ್ವಹಿಸುವುದು ಮುಂತಾದ ವಿವಿಧ ವಿಷಯಗಳಿಗೆ ಹೇಗೆ ಬಳಸಬಹುದು ಎನ್ನುವ ಸಲಹೆಗಳನ್ನ ಹೋಮ್‌ಸ್ಕ್ರೀನ್‌ನಲ್ಲಿ ಕಾಣಬಹುದಾಗಿದೆ. ಅಲ್ಲದೆ ಹೆಚ್ಚುವರಿ ಆಯ್ಕೆಗಳನ್ನು ಡಿಸ್‌ಪ್ಲೇ ಮೇಲಿನ ಎಡಭಾಗದಲ್ಲಿರುವ ಮೆನು ಅಥವಾ ಇನ್ನಷ್ಟು ಆಯ್ಕೆಯನ್ನು ಹೋಮ್‌ಸ್ಕ್ರೀನ್‌ನ ಕೆಳಗಿನ ಬಲಕ್ಕೆ ಸರಿಸಲಾಗಿದೆ. ಟ್ಯಾಬ್ ನಲ್ಲಿ ಈಗ "ಪಟ್ಟಿಗಳು ಮತ್ತು ಟಿಪ್ಪಣಿಗಳು", "ಜ್ಞಾಪನೆಗಳು ಮತ್ತು ಅಲಾರಮ್‌ಗಳು", "ದಿನಚರಿಗಳು" ಮತ್ತು ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದೆ.

ಅಪ್ಲಿಕೇಶನ್‌

ಇನ್ನು ಈ ಅಪ್ಲಿಕೇಶನ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ನ್ಯಾವಿಗೇಷನ್ ನವೀಕರಣವನ್ನು ಸಹ ಮಾಡಲಾಗಿದೆ. ಇದರಿಂದ ಸುಲಭವಾಗೊಇ ನ್ಯಾವಿಗೇಷನ್‌ ಮಾಡಬಹುದಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ಎಲ್ಲಾ ಬಳಕೆದಾರರು ನವೀಕರಣವನ್ನು ಪಡೆಯಬೇಕು ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ಈ ಹೊಸ ಆಪ್ಡೇಟ್‌ ಮೂಲಕ ಅಮೆಜಾನ್‌ ಅಲೆಕ್ಸಾ ಬಳಕೆದಾರರಿಗೆ ಇನ್ನಷ್ಟು ಉಪಯುಕ್ತವಾಗುವ ಕೆಲಸ ಮಾಡಿದೆ. ಅಲ್ಲದೆ ಗ್ರಾಹಕರಿಗೆ ಯಾವುದೇ ರೀತಿಯ ಗೊಂದಲವಿಲ್ಲದ ಮಾಹಿತಿಯನ್ನು ಪಡೆದುಕೊಳ್ಳಲು ಸುಲಭವಾಗಲಿದೆ.

Most Read Articles
Best Mobiles in India

English summary
Amazon Alexa app update should reach all users by late August, the company states.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X