ಕೊಲೆ ಕೇಸಿನಲ್ಲಿ ಸಾಕ್ಷಿಯಾಗಬಲ್ಲದಾ ಅಮೇಜಾನ್ ಅಲೆಕ್ಸಾ !

By Gizbot Bureau
|

ಫ್ಲೋರಿಡಾದಲ್ಲಿ ನಡೆದ ಘಟನೆಯೊಂದರ ಸುದ್ದಿ ಹೀಗಿರುತ್ತದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ರಾತ್ರಿಯ ವೇಳೆ ವಾಗ್ವಾದಕ್ಕೆ ಇಳಿಯುತ್ತಾನೆ. ಇಬ್ಬರ ನಡುವೆಯೂ ನಡೆದ ಜಗಳ ಅತಿರೇಕಕ್ಕೆ ತಿರುಗಿ ಆಕೆಯ ಎದೆಗೆ ಪೆಟ್ಟು ಬೀಳುತ್ತದೆ. ಅತಿಯಾದ ಗಾಯ ಮತ್ತು ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಆಕೆಯ ಪೋಷಕರು ಆತನ ಮೇಲೆ ಕೊಲೆ ಆರೋಪವನ್ನು ಮಾಡುತ್ತಾರೆ(ಎನ್ ಬಿಸಿ ನ್ಯೂಸ್ ನಲ್ಲೂ ಕೂಡ ಇದು ವರದಿಯಾಗಿದೆ).ಆತನ ಮೇಲೆ ಸೆಕೆಂಡ್ ಡಿಗ್ರಿ ಕೊಲೆ ಆಪಾದನೆಯನ್ನು ಮಾಡಲಾಗುತ್ತದೆ.

ನಾನು ಕೊಲೆ ಮಾಡಿಲ್ಲ ಎಂದ ಗಂಡ:

ನಾನು ಕೊಲೆ ಮಾಡಿಲ್ಲ ಎಂದ ಗಂಡ:

ಪೋಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸುತ್ತಾರೆ. ಆದರೆ ಆತ ಮಾತ್ರ ತಾನು ಕೊಲೆ ಮಾಡಿಲ್ಲ ಎಂಬುದಾಗಿ ಹೇಳುತ್ತಾನೆ. ಆದರೆ ಇದನ್ನು ನಂಬುವುದು ಹೇಗೆ? ಗಂಡಹೆಂಡತಿ ನಡುವೆ ನಿಜವಾಗಲೂ ನಡೆದ್ದಾದರೂ ಏನು ಎಂಬುದನ್ನು ನೋಡಿದವರು ಯಾರದರೂ ಇದ್ದಾರೆಯೇ ಅಥವಾ ಇಲ್ಲವೇ?

ಅಮೇಜಾನ್ ಅಲೆಕ್ಸಾವೇ ಸಾಕ್ಷಿ:

ಅಮೇಜಾನ್ ಅಲೆಕ್ಸಾವೇ ಸಾಕ್ಷಿ:

ಎಸ್. ಒಬ್ಬರಿದ್ದಾರೆ. ಇದು ಪೋಲೀಸರ ತನಿಖೆಯಿಂದ ಬಹಿರಂಗಗೊಂಡ ಸತ್ಯ. ಹೌದು ನಾವು ಹೇಳುತ್ತಿರುವ ಅಮೇಜಾನ್ ಎಕೋ ಡಿವೈಸ್ ನ ಬಗ್ಗೆ! ತನಿಖೆಗಾಗಿ ಮನೆಯನ್ನು ಜಾಲಾಡಿದ ಪೋಲೀಸರು ಅಮೇಜಾನ್ ಎಕೋ ಡಿವೈಸ್ ನಿಂದ ಏನಾದರೂ ಸುಳಿವು ಸಿಗಬಹುದು ಎಂದು ಆಲೋಚಿಸುತ್ತಾರೆ ಮತ್ತು ಅದನ್ನು ಮುಂದಿನ ಹಂತದ ತನಿಖೆಗೆ ಬಳಸಿಕೊಳ್ಳುತ್ತಾರೆ. ಹೀಗೆ ಅಮೇಜಾನ್ ಎಕೋ ಡಿವೈಸ್ ಕೊಂಡೊಯ್ದ ಪೋಲೀಸರಿಗೆ ಕೆಲವು ಸಾಕ್ಷಿಗಳು ಸಿಗುವ ನಿರೀಕ್ಷೆ!

ಯಾರ ಕೊಲೆ? ಯಾರು ಆರೋಪಿ?

ಯಾರ ಕೊಲೆ? ಯಾರು ಆರೋಪಿ?

ಕೊಲೆ ಆರೋಪ ಎದುರಿಸುತ್ತಿರುವ ವ್ಯಕ್ತಿ 43 ವರ್ಷದ ಆಡಂ ಕ್ರೆಸ್ಪೋ. ಇನ್ನು ಮೃತಪ್ಪಟ್ಟ ಆತನ ಪತ್ನಿ 32 ವರ್ಷದ ಗಲ್ವಾ ಕ್ರೆಸ್ಪೋ. ಜುಲೈ ನಲ್ಲಿ ಫ್ಲೋರಿಡಾದ ಹಾಲ್ಯಾಂಡೇಲ್ ಬೀಚ್ ಸಮೀಪದಲ್ಲಿರುವ ಮನೆಯಲ್ಲಿ ಈಟಿಯ ಮಾರಣಾಂತಿಕ ಗಾಯದಿಂದ ಆಕೆಯ ಎದೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿರುತ್ತಾಳೆ.

ಫ್ಲೋರಿಡಾ ಪೋಲೀಸರ ತನಿಖೆ:

ಫ್ಲೋರಿಡಾ ಪೋಲೀಸರ ತನಿಖೆ:

ಸನ್ ಸೆಂಟಿನೆಲ್ ನ ವರದಿಯ ಪ್ರಕಾರ ಅಮೇಜಾನ್ ಎಕೋ ಸ್ಮಾರ್ಟ್ ಡಿವೈಸ್ ಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ವಿಚಾರವನ್ನು ದಾಖಲಿಸಿರುವ ಸಾಧ್ಯತೆ ಇದೆ. ಯಾಕೆಂದರೆ ಇವುಗಳು ಸಾಮಾನ್ಯವಾಗಿ ವೇಕ್ ಪದಗಳಿಂದ ಆಕ್ಟಿವೇಟ್ ಆಗಿರುತ್ತದೆ. ಫ್ಲೋರಿಡಾ ಪೋಲೀಸರು ಆಲೋಚಿಸಿರುವ ಪ್ರಕಾರ ಕೆಲವು ಸಾಕ್ಷ್ಯಾಧಾರಗಳು ಅಮೇಜಾನ್ ಸರ್ವರ್ ನಲ್ಲಿ ಮನೆಯಲ್ಲಿರುವ ಎಕೋ ಡಿವೈಸ್ ಗಳ ನೆರವಿನಿಂದ ದಾಖಲಾಗಿರುವ ಸಾಧ್ಯತೆಗಳಿರುತ್ತದೆ. ಇದರ ಪ್ರಕಾರ ಪರಿಶೀಲನೆ ಕೈಗೊಂಡ ಪೋಲೀಸರಿಗೆ ಕೆಲವು ರೆಕಾರ್ಡಿಂಗ್ ಗಳು ಮನೆಯ ಸ್ಮಾರ್ಟ್ ಡಿವೈಸ್ ನಲ್ಲಿ ಲಭ್ಯವಿದೆ ಮತ್ತು ಅದನ್ನು ಪರಿಶೀಲನೆಗೆ ಕಳುಹಿಸಿ ಕೊಡಲಾಗಿದೆ.

ನಡೆದದ್ದೇನು?

ನಡೆದದ್ದೇನು?

ಆಡಂ ಕ್ರಿಸ್ಪೋ ಹೇಳುವ ಪ್ರಕಾರ ಅವರ ನಡುವೆ ಜಗಳವಾದ ಸಂದರ್ಬದಲ್ಲಿ ಈಟಿ ಮುರಿದು 12 ಇಂಚಿನ ಬ್ಲೇಡ್ ಸಿಲ್ವಿಯಾ ಎದೆಗೆ ಚುಚ್ಚಲ್ಪಟ್ಟಿತು. ಆಗ ಆಡಂ ಅದನ್ನು ಹೊರತೆಗೆಯುವುದಕ್ಕೆ ಪ್ರಯತ್ನಿಸಿದ್ದಾರೆಯೇ ಹೊರತು ಅವಳನ್ನು ಸಾಯಿಸಲು ಪ್ರಯತ್ನಿಸಲಿಲ್ಲ. ಆಕೆಗೆ ಅದು ಹೆಚ್ಚು ಕೆಟ್ಟದ್ದನ್ನು ಮಾಡಿಲ್ಲ ಎಂದು ತಾನು ಭಾವಿಸಿದ್ದೆ ಆದರೆ ಅದು ಆಕೆ ಗಾಯಕ್ಕೆ ಬಲಿಯಾದಳು ಎಂದು ತಿಳಿಸಿದ್ದಾರೆ.

ಆಕೆ ಈಟಿಯಿಂದ ಗಾಯವಾಗಿ ರಕ್ತಸ್ರಾವದಿಂದ ಬಳಲುವಾಗ ಆಕೆಯ ಸ್ನೇಹಿತೆಯೊಬ್ಬಳು ಆಕೆಯ ಸಹಾಯಕ್ಕೆ ಧಾವಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಆದರೆ ಈಟಿಯನ್ನು ಮೊದಲು ತೆಗೆದುಕೊಂಡವರು ಯಾರು? ಗಂಡನೋ ಅಥವಾ ಹೆಂಡತಿಯೋ? ಚುಚ್ಚಿದ್ದೋ ಅಥವಾ ತಾನೇ ಚುಚ್ಚಿಕೊಂಡಿದ್ದೋ? ಇತ್ಯಾದಿ ಹಲವು ಪ್ರಶ್ನೆಗಳು ಇನ್ನೂ ಕೂಡ ನಿಗೂಢವಾಗಿದೆ.

65,000ಡಾಲರ್ ಬಾಂಡ್ ಪಡೆದು ಬಿಡುಗಡೆ:

65,000ಡಾಲರ್ ಬಾಂಡ್ ಪಡೆದು ಬಿಡುಗಡೆ:

ಗಂಡ ಮಾತ್ರ ತಾನು ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದಾನೆ. ಸದ್ಯ 65,000 ಡಾಲರ್ ನ ಬಾಂಡ್ ಬರೆಸಿಕೊಂಡು ಮುಕ್ತಗೊಳಿಸಲಾಗಿದೆ. ಸದ್ಯ ಅಮೇಜಾನ್ ಅಲೆಕ್ಸಾ ವಾಯ್ಸ್ ರೆಕಾರ್ಡಿಂಗ್ ಮಾತ್ರವೇ ಈ ಕೊಲೆ ಪ್ರಕರಣದ ರಹಸ್ಯ ವಿಚಾರಗಳನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ. ಹಾಗಾದ್ರೆ ಅಲೆಕ್ಸಾ ರೆಕಾರ್ಡಿಂಗ್ ನಲ್ಲಿ ಏನೇನಿದೆ? ಕೊಲೆಯ ಸುಳಿವು ನೀಡಲಿದೆಯೇ ಎಂಬಿತ್ಯಾದಿ ವಿಚಾರಗಳು ಮುಂದಿನ ದಿನಗಳಲ್ಲಿ ಬಹಿರಂಗಗೊಂಡು ನಿಜವಾದ ಅಪರಾಧಿಗೆ ಶಿಕ್ಷೆ ಸಿಗುವ ನಿರೀಕ್ಷೆ ಆಕೆಯ ಪೋಷಕರದ್ದಾಗಿದೆ.

Best Mobiles in India

Read more about:
English summary
Amazon Alexa Is Now A Witness To A Murder Case

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X