ಭಾರತದಲ್ಲಿ ಅಮೆಜಾನ್‌ ನಿಂದ $250 ಮಿಲಿಯನ್ ವೆಂಚರ್‌ ಫಂಡ್‌ ಹೂಡಿಕೆ!

|

ಜನಪ್ರಿಯ ಅಮೆಜಾನ್‌ ಪ್ಲಾಟ್‌ಫಾರ್ಮ್‌ ತನ್ನ ಇ-ಕಾಮರ್ಸ್‌ ಸೇವೆಯಿಂದ ಗುರುತಿಸಿಕೊಂಡಿದೆ. ಸದ್ಯ ಇದೇ ಏಪ್ರಿಲ್ 15 ಮತ್ತು ಏಪ್ರಿಲ್ 18 ರ ನಡುವೆ ಅಮೆಜಾನ್ ತನ್ನ ವಾರ್ಷಿಕ ಕಾರ್ಯಕ್ರಮವಾದ ಅಮೆಜಾನ್ ಸಂಭವ್‌ ಅನ್ನು ಭಾರತದಲ್ಲಿ ಆಯೋಜಿಸಿದೆ. ಈವೆಂಟ್‌ನ ಮೊದಲ ದಿನವಾದ ಇಂದು ಅಮೆಜಾನ್ ಭಾರತದಲ್ಲಿ ಆರಂಭಿಕ ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಲು ಸಹಾಯ ಮಾಡಲು $250 ಮಿಲಿಯನ್ ವೆಂಚರ್‌ ಫಂಡ್‌ ಅನ್ನು ಘೋಷಿಸಿದೆ.

ಡಿಜಿಟಲೀಕರಣ

ಹೌದು, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಸಹಾಯ ಮಾಡಲು 250 ಮಿಲಿಯನ್ ಸಂಭಾವ್ ವೆಂಚರ್ ಫಂಡ್ ಅನ್ನು ನೀಡಿದೆ. ಇದು ಭಾರತದಲ್ಲಿ SMBs ಡಿಜಿಟಲೀಕರಣ, ಕೃಷಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ಆವಿಷ್ಕಾರಗಳನ್ನು ಕೇಂದ್ರೀಕರಿಸುವ ಆರಂಭಿಕ ಮತ್ತು ಉದ್ಯಮಿಗಳಲ್ಲಿ ಹೂಡಿಕೆ ಮಾಡುವ ಗುರಿ ಹೊಂದಿದೆ. ಹಾಗಾದ್ರೆ ಅಮೆಜಾನ್‌ ಸಂಭಾವ್‌ ವೆಂಚರ್‌ ಫಂಡ್‌ ಅನ್ನು ಯಾವ ವಲಯಗಳ ಮೇಲೆ ಹೂಡಿಕೆ ಮಾಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್

ಅಮೆಜಾನ್ ಇಂಡಿಯಾ ತನ್ನ ಸಂಭಾವ್‌ ಫಂಡ್‌ ಅನ್ನು ನಿರ್ದಿಷ್ಟವಾಗಿ ಭಾರತದಲ್ಲಿ ಸ್ಮಾಲ್‌ ಮೀಡಿಯಂ ಬ್ಯಸಿನೆಸ್‌ ಅನ್ನು ಡಿಜಿಟಲೀಕರಣಗೊಳಿಸಲು ಘೋಷಿಸಿದೆ. ಅಮೆಜಾನ್‌ನ ಈ ಫಂಡ್‌ ಉತ್ತಮ ಆಲೋಚನೆಗಳನ್ನು ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ರೈತರ ಉತ್ಪಾದಕತೆಯನ್ನು ಸುಧಾರಿಸಲು ಕೃಷಿಯಲ್ಲಿ ತಂತ್ರಜ್ಞಾನ-ನೇತೃತ್ವದ ನಾವೀನ್ಯತೆಗೆ ಚಾಲನೆ ನೀಡುತ್ತದೆ. ಅಲ್ಲದೆ ಭಾರತದ ಬೆಸ್ಟ್‌ ಫಾರ್ಮ್ಸ್‌ ಅನ್ನು ಗ್ರಾಹಕರಿಗೆ ನೀಡುವುದಕ್ಕೆ ಸಹಾಯ ಮಾಡಲಿದೆ.

ವೆಂಚರ್ ಫಂಡ್

ಇನ್ನು ಕೃಷಿ-ತಂತ್ರಜ್ಞಾನ ಕ್ಷೇತ್ರದಲ್ಲಿ, ವೆಂಚರ್ ಫಂಡ್ ಗ್ರಾಹಕರಿಗೆ ಉತ್ತಮ ಉತ್ಪನ್ನಗಳನ್ನು ತರಲು ತಂತ್ರಜ್ಞಾನವನ್ನು ಬಳಸುತ್ತಿರುವ ಭಾರತೀಯ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತದೆ. ಕೃಷಿ ವಲಯದ ಮೇಲಿನ ಒಳಹರಿವು ರೈತರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಉತ್ಪಾದಕತೆಯನ್ನು ಸುಧಾರಿಸಲು ರೈತರಿಗೆ ಅನುಗುಣವಾದ ಕೃಷಿ ವಿಜ್ಞಾನ ಪರಿಹಾರಗಳನ್ನು ಒದಗಿಸುತ್ತದೆ. ಸಾಲ ಮತ್ತು ವಿಮೆಯನ್ನು ವಿತರಿಸುತ್ತದೆ. ಪೂರೈಕೆ ಸರಪಳಿಗಳಿಗೆ ಸಮರ್ಥವಾದ ಫಾರ್ಮ್ ಅನ್ನು ನಿರ್ಮಿಸುವ ಮೂಲಕ ರೈತರಿಗೆ ಅಥವಾ ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲಿದೆ.

ಹೆಲ್ತ್‌ಕೇರ್

ಇದಲ್ಲದೆ ಹೆಲ್ತ್‌ಕೇರ್ ವಲಯದಲ್ಲಿ, ವೈದ್ಯರ ನೆರವು, ಟೆಲಿಮೆಡಿಸಿನ್, ಇ-ಡಯಾಗ್ನೋಸಿಸ್, ಎಐ-ಚಾಲಿತ ಚಿಕಿತ್ಸಾ ಶಿಫಾರಸುಗಳು ಅಥವಾ ಸ್ವತಂತ್ರ ಪ್ರಾಥಮಿಕ ಆರೈಕೆ ಚಿಕಿತ್ಸಾಲಯಗಳು, ಡಯಾಗ್ನೋಸ್ಟಿಕ್ ಲ್ಯಾಬ್‌ಗಳು, ಫಾರ್ಮಸಿ ವ್ಯಾಲ್ಯೂ ಚೈನ್‌ನಂತಹ ಆರೋಗ್ಯ ಸೇವೆ ಒದಗಿಸುವವರ ಡಿಜಿಟಲೀಕರಣ ಕಾರ್ಯಾಚರಣೆಗಳಿಗೆ ತಂತ್ರಜ್ಞಾನವನ್ನು ಬಳಸುತ್ತಿರುವ ಭಾರತೀಯ ಸ್ಟಾರ್ಟ್ಅಪ್‌ಗಳಲ್ಲಿ ಈ ನಿಧಿ ಹೂಡಿಕೆ ಮಾಡುತ್ತದೆ. ಇದರ ಜೊತೆಗೆ, ಕಂಪನಿಯು 2025 ರ ಹೊತ್ತಿಗೆ ಅಮೆಜಾನ್ ಇಂಡಿಯಾ ಮಾರುಕಟ್ಟೆಯಲ್ಲಿ ತನ್ನ ಸ್ಥಳೀಯ ಅಂಗಡಿಗಳ ಆನ್ ಅಮೆಜಾನ್ ಕಾರ್ಯಕ್ರಮದ ಮೂಲಕ ಆನ್‌ಲೈನ್‌ನಲ್ಲಿ ಒಂದು ಮಿಲಿಯನ್ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮತ್ತು ನೆರೆಹೊರೆಯ ಮಳಿಗೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ.

ಆನ್‌ಲೈನ್‌

ಇದಲ್ಲದೆ, 2025 ರ ವೇಳೆಗೆ ಭಾರತದ ಈಶಾನ್ಯ ಪ್ರದೇಶದ ಎಂಟು ರಾಜ್ಯಗಳಿಂದ 50,000 ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉದ್ಯಮಗಳನ್ನು ಆನ್‌ಲೈನ್‌ನಲ್ಲಿ ತರಲು ಮತ್ತು ಚಹಾ, ಮಸಾಲೆಗಳು ಮತ್ತು ಪ್ರಮುಖ ಸರಕುಗಳ ರಫ್ತು ಹೆಚ್ಚಿಸಲು ಅಮೆಜಾನ್ ಇಂಡಿಯಾ 'ಸ್ಪಾಟ್‌ಲೈಟ್ ನಾರ್ತ್ ಈಸ್ಟ್' ಉಪಕ್ರಮವನ್ನು ಪ್ರಾರಂಭಿಸಿದೆ. ಈ ಪ್ರದೇಶದಾದ್ಯಂತ ಕುಶಲಕರ್ಮಿ ಮತ್ತು ನೇಕಾರ ಸಮುದಾಯಗಳನ್ನು ತೊಡಗಿಸಿಕೊಳ್ಳಲು, ಕೌಶಲ್ಯ ಮತ್ತು ಡಿಜಿಟಲ್‌ ಶಕ್ತಗೊಳಿಸಲು TRIFED ಮತ್ತು NEHHDC ಸೇರಿದಂತೆ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ಘೋಷಿಸಿದೆ. ವಿಶ್ವಾದ್ಯಂತ ಅಮೆಜಾನ್ ಗ್ರಾಹಕರಿಗೆ ಚಹಾ, ಜೇನುತುಪ್ಪ ಮತ್ತು ಮಸಾಲೆಗಳಂತಹ ಈಶಾನ್ಯ ಭಾರತದ ವಿಶೇಷ ಕೃಷಿ-ಸರಕುಗಳ ರಫ್ತು ಹೆಚ್ಚಿಸಲು ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ಸಹಕಾರಿಯಾಗುತ್ತದೆ ಎಂದು ಇ-ರಿಟೇಲ್ ದೈತ್ಯ ಹೇಳಿದೆ.

Most Read Articles
Best Mobiles in India

English summary
Amazon announced a $250 million venture fund to help digitise startups in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X