Home
ಸುದ್ದಿಜಾಲ

ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ ಮತ್ತು ಫ್ಯಾಬ್ ಟಿವಿ ಫೆಸ್ಟ್ ಸೇಲ್‌ ಡೇಟ್‌ ಫಿಕ್ಸ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಮಾಡೊರಿಗೆ ಬೆಸ್ಟ್‌ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಶಾಪಿಂಗ್‌ ಪ್ರಿಯರಿಗೆ ಡಿಸ್ಕೌಂಟ್‌ ಆಫರ್‌ಗಳನ್ನು ನೀಡುವ ಮೂಲಕ ಗಮನ ಸೆಳೆದಿದೆ. ಇನ್ನು ವಿಶೇಷ ದಿನಗಳಲ್ಲಿ ಒಂದಿಲ್ಲೊಂದು ಸೇಲ್‌ಗಳನ್ನು ನಡೆಸುವ ಅಮೆಜಾನ್‌ ಸಾಮಾನ್ಯ ದಿನಗಳಲ್ಲಿ ಕೂಡ ರಿಯಾಯಿತಿಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಮತ್ತು ಫ್ಯಾಬ್‌ ಟಿವಿ ಫೆಸ್ಟ್‌ ಸೇಲ್‌ ಅನ್ನು ಘೋಷಿಸಿದೆ.

ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌

ಹೌದು, ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಮತ್ತು ಫ್ಯಾಬ್‌ ಟಿವಿ ಫೆಸ್ಟ್‌ ಸೇಲ್‌ ಘೋಷಣೆ ಮಾಡಿದೆ. ಈ ಸೇಲ್‌ ಇದೇ ಫೆಬ್ರವರಿ 25 ರಿಂದ ಲೈವ್ ಆಗಲಿದ್ದು, ಫೆಬ್ರವರಿ 28ರ ವರೆಗೆ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಐಕ್ಯೂ Z5, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12, ಒನ್‌ಪ್ಲಸ್‌ 9RT ಮತ್ತು ರಿಯಲ್‌ಮಿ ನಾರ್ಜೋ 50A ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಪಡೆದುಕೊಳ್ಳಲಿವೆ ಎನ್ನಲಾಗಿದೆ. ಹಾಗಾದ್ರೆ ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳು

ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳು

ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಮತ್ತು ಫ್ಯಾಬ್‌ ಟಿವಿ ಫೆಸ್ಟ್‌ ಸೇಲ್‌ನಲ್ಲಿ ಐಕ್ಯೂ Z5 ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ 20,990ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಐಕ್ಯೂ Z3 ಸ್ಮಾರ್ಟ್‌ಫೋನ್‌ 17,990ರೂ. ಆರಂಭಿಕ ಬೆಲೆಯೊಂದಿಗೆ ಲಭ್ಯವಿರುತ್ತದೆ. ಈ ಎರಡೂ ಫೋನ್‌ಗಳಲ್ಲಿ 3,000ರೂ ಗಳ ತನಕ ರಿಯಾಯಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 50A 10,999ರೂ.ಗಳಿಗೆ ದೊರೆಯಲಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್‌ ನಿಮಗೆ 11,499ರೂ.ಗಳಿಗೆ ಬದಲಾಗಿ ಕೇವಲ 9,499ರೂ.ಗಳಿಗೆ ಲಭ್ಯವಾಗಲಿದೆ. ಇದಲ್ಲದೆ, ರೆಡ್ಮಿ ನೋಡ್‌ 11S ಫೋನ್‌ ಅನ್ನು 14,499ರೂ.ಗಳಿಗೆ ದೊರೆಯಲಿದೆ.

ರಿಯಾಯಿತಿ

ಇನ್ನು ಈ ಸೇಲ್‌ನಲ್ಲಿ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್‌ ಸರಣಿಯಲ್ಲಿ 8,000ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಒನ್‌ಪ್ಲಸ್‌ 9RT ಖರೀದಿಸುವಾಗ 4,000ರಿಯಾಯಿತಿ ದೊರೆಯಲಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ CE 2 5G ಸ್ಮಾರ್ಟ್‌ಫೋನ್‌ ಮೇಲೆ 1,500 ರಿಯಾಯಿತಿ ಸಿಗಲಿದೆ. ಇನ್ನು ಈ ಸೇಲ್‌ನಲ್ಲಿ ಹೆಡ್‌ಸೆಟ್‌ಗಳು ಮತ್ತು ಪವರ್‌ಬ್ಯಾಂಕ್‌ಗಳಂತಹ ಮೊಬೈಲ್ ಪರಿಕರಗಳ ಮೇಲೆ 60% ರಿಯಾಯಿತಿ ದೊರೆಯಲಿದೆ ಎಂದು ಅಮೆಜಾನ್‌ ಹೇಳಿದೆ.

ಟಿವಿಗಳ ಮೇಲೆ ರಿಯಾಯಿತಿಗಳು

ಟಿವಿಗಳ ಮೇಲೆ ರಿಯಾಯಿತಿಗಳು

ಅಮೆಜಾನ್‌ ತನ್ನ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಹೊಸದಾಗಿ ಬಿಡುಗಡೆಯಾದ ಒನ್‌ಪ್ಲಸ್‌ ಟಿವಿ Y1S ಸರಣಿ ಸೇರಿದಂತೆ ವಿವಿಧ ಸ್ಮಾರ್ಟ್ ಟಿವಿಗಳಲ್ಲಿ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಮತ್ತು ವಂಡರ್‌ಟೈನ್‌ಮೆಂಟ್ ಸರಣಿ ಕೂಡ ವಿಶೇಷ ಆಫರ್‌ಗಳನ್ನು ಪಡೆದುಕೊಂಡಿದೆ. ಇನ್ನು ಸ್ಯಾಮ್‌ಸಂಗ್‌ ಫ್ರೇಮ್‌ QLED TV ಸರಣಿಯು ICICI ಬ್ಯಾಂಕ್ ಕಾರ್ಡ್‌ಗಳೊಂದಿಗೆ 5,000 ಕ್ಯಾಶ್‌ಬ್ಯಾಕ್ ದೊರೆಯಲಿದೆ. ಹಾಗೆಯೇ ಅಮೆಜಾನ್‌ ಬೇಸಿಕ್ಸ್‌ 4K UHD ಫೈರ್‌ TV ಯಲ್ಲಿ 40% ಡಿಸ್ಕೌಂಟ್‌ ನೀಡಲಿದೆ ಎಂದು ಅಮೆಜಾನ್‌ ಹೇಳಿದೆ. ಇದಲ್ಲದೆ, ಸೇಲ್‌ ಸಮಯದಲ್ಲಿ ಗ್ರಾಹಕರು ಆಯ್ದ ಟಿವಿ ಮಾದರಿಗಳೊಂದಿಗೆ ತ್ವರಿತ ರಿಯಾಯಿತಿಗಳು ಮತ್ತು ನೋ-ಕಾಸ್ಟ್‌ EMI ಆಯ್ಕೆಗಳನ್ನು ದೊರೆಯಲಿದೆ.

Best Mobiles in India

English summary
Amazon announced Fab Phones Fest and Fab TV Fest sale date
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+