Home
ಸುದ್ದಿಜಾಲ

Amazon Grand Gaming Days: ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಭಾರಿ ಡಿಸ್ಕೌಂಟ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ವಿಕೆಂಡ್‌ ಸೇಲ್‌, ಮಂತ್‌ ಎಂಡ್‌ ಸೇಲ್‌ ಆಯೋಜಿಸಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡುತ್ತಲೇ ಇದೆ. ಸದ್ಯ ಇದೀಗ ಗೇಮಿಂಗ್ ಉತ್ಸಾಹಿಗಳಿಗಾಗಿ ಅಮೆಜಾನ್ ತನ್ನ 'ಗ್ರ್ಯಾಂಡ್ ಗೇಮಿಂಗ್ ಡೇಸ್' ಅನ್ನು ಘೋಷಿಸಿದೆ. ಇನ್ನು ಈ ಗೇಮಿಂಗ್ ಗ್ಯಾಜೆಟ್‌ಗಳಲ್ಲಿ ಹಲವಾರು ಕೊಡುಗೆಗಳು ಮತ್ತು ಡೀಲ್‌ಗಳನ್ನು ನೀಡಲು ಮುಂದಾಗಿದೆ. ಈ ಸೇಲ್‌ ಜೂನ್ 24, 2021 ರವರೆಗೆ ಲೈವ್ ಆಗಿರಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ಗ್ರ್ಯಾಂಡ್‌ ಗೇಮಿಂಗ್‌ ಡೇಸ್‌ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು ಮತ್ತು ಮಾನಿಟರ್‌ಗಳು, ಸುಧಾರಿತ ಹೆಡ್‌ಫೋನ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಗ್ರಾಫಿಕ್ ಕಾರ್ಡ್‌ಗಳು ಮತ್ತು ಜನಪ್ರಿಯ ಬ್ರಾಂಡ್‌ಗಳಾದ ಲೆನೊವೊ, ಏಸರ್, ಎಎಸ್ಯುಎಸ್, ಎಲ್ಜಿ, ಎಚ್‌ಪಿ, ಸೋನಿ, ಡೆಲ್, ಕೊರ್ಸೇರ್, ಕಾಸ್ಮಿಕ್ ಬೈಟ್, ಜೆಬಿಎಲ್ ಮತ್ತು ಇನ್ನಷ್ಟು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್‌ ನೀಡಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್ ನೈಟ್ರೊ 15.6 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್

ಏಸರ್ ನೈಟ್ರೊ 15.6 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್

ಏಸರ್ ನೈಟ್ರೊ 15.6 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್ ಇಂಟೆಲ್ ಐ 5 11 ನೇ ಜನ್ ಪ್ರೊಸೆಸರ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಎನ್‌ವಿಡಿಯಾ ಜೀಫೋರ್ಸ್ ಜಿಟಿಎಕ್ಸ್ 1650 ನಿಂದ 8GB ಡೆಡಿಕೇಟೆಡ್ RAM ಮತ್ತು 144Hz ರಿಫ್ರೆಶ್ ದರವನ್ನು ಹೊಂದಿರಲಿದೆ. ಈ ಗೇಮಿಂಗ್ ಲ್ಯಾಪ್‌ಟಾಪ್ ಸದ್ಯ ಅಮೆಜಾನ್‌ ಗ್ರ್ಯಾಂಡ್‌ ಗೇಮಿಂಗ್‌ ಡೇಸ್‌ ಸೇಲ್‌ನಲ್ಲಿ 67,990 ರೂ.ಬೆಲೆಗೆ ಖರೀದಿಗೆ ಲಭ್ಯವಾಗಲಿದೆ.

ಹೆಚ್‌ಪಿ ಪೆವಿಲಿಯನ್ ಗೇಮಿಂಗ್ 15.6 ಇಂಚಿನ ಎಫ್‌ಎಚ್‌ಡಿ ಲ್ಯಾಪ್‌ಟಾಪ್

ಹೆಚ್‌ಪಿ ಪೆವಿಲಿಯನ್ ಗೇಮಿಂಗ್ 15.6 ಇಂಚಿನ ಎಫ್‌ಎಚ್‌ಡಿ ಲ್ಯಾಪ್‌ಟಾಪ್

ಹೆಚ್‌ಪಿ ಪೆವಿಲಿಯನ್ ಗೇಮಿಂಗ್ ಲ್ಯಾಪ್‌ಟಾಪ್ ಎಎಮ್‌ಡಿ ರೈಜೆನ್ 5 4600 ಹೆಚ್ ಪ್ರೊಸೆಸರ್ ಹೊಂದಿದೆ. ಇದು 8GB RAM ಜೊತೆಗೆ 1TB ಎಚ್‌ಡಿಡಿ, ಎನ್‌ವಿಡಿಯಾ ಜೀಫೋರ್ಸ್ ಜಿಟಿಎಕ್ಸ್ 1650 4GB ಗ್ರಾಫಿಕ್ಸ್ ಕಾರ್ಡ್ ಹೊಂದಿದ್ದು, ಇದು ಸಂಪೂರ್ಣ ಪ್ಯಾಕೇಜ್ ಆಗಿದೆ. ಈ ಲ್ಯಾಪ್‌ಟಾಪ್‌ 52,990 ರೂ,ಗೆ ಲಭ್ಯವಾಗಲಿದೆ.

ಎಂಎಸ್ಐ ಬ್ರಾವೋ 15 ಫುಲ್‌ಹೆಚ್‌ಡಿ ಗೇಮಿಂಗ್ ಲ್ಯಾಪ್‌ಟಾಪ್

ಎಂಎಸ್ಐ ಬ್ರಾವೋ 15 ಫುಲ್‌ಹೆಚ್‌ಡಿ ಗೇಮಿಂಗ್ ಲ್ಯಾಪ್‌ಟಾಪ್

ಎಂಎಸ್ಐ ಬ್ರಾವೋ 15 ಫುಲ್‌ಹೆಚ್‌ಡಿ ಗೇಮಿಂಗ್ ಲ್ಯಾಪ್‌ಟಾಪ್ ಎಎಮ್‌ಡಿ ರೈಜೆನ್ 7 4800 ಹೆಚ್ ಮೊಬೈಲ್ ಪ್ರೊಸೆಸರ್‌ ಹೊಂದಿದೆ. ರೇಡಿಯನ್ ಆರ್ಎಕ್ಸ್ 5500 ಎಂ ಗ್ರಾಫಿಕ್ಸ್‌ನೊಂದಿಗೆ ಕಾನ್ಫಿಗರ್ ಮಾಡಲಾಗಿರುವ ಎಂಎಸ್‌ಐ ಬ್ರಾವೋ 15 ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಡೆಸ್ಕ್‌ಟಾಪ್-ಕ್ಯಾಲಿಬರ್ ಕಾರ್ಯಕ್ಷಮತೆಯನ್ನು ತಲ್ಲೀನಗೊಳಿಸುವ ಮಲ್ಟಿಮೀಡಿಯಾ ಮತ್ತು ಗೇಮಿಂಗ್ ಅನುಭವದೊಂದಿಗೆ ಒದಗಿಸುತ್ತದೆ. ಇದು 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಇದು 77,990 ರೂಗಳಿಗೆ ಲಭ್ಯವಿದೆ.

ಎಲ್‌ಜಿ 24 ಇಂಚಿನ ಗೇಮಿಂಗ್ ಮಾನಿಟರ್

ಎಲ್‌ಜಿ 24 ಇಂಚಿನ ಗೇಮಿಂಗ್ ಮಾನಿಟರ್

ಫ್ಲಿಕರ್-ಮುಕ್ತ ಟೆಕ್ನಾಲಜಿ ಮತ್ತು 75Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಈ ಅಲ್ಟ್ರಾ ಹೆಚ್‌ಡಿ 4 ಕೆ ಮಾನಿಟರ್ ಗೇಮಿಂಗ್ ದೃಶ್ಯ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ. ಡೈನಾಮಿಕ್ ಆಕ್ಷನ್ ಸಿಂಕ್, ಬ್ಲ್ಯಾಕ್ ಸ್ಟೆಬಿಲೈಜರ್ ಮತ್ತು ಗೇಮ್ ಮೋಡ್‌ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ಸ್ಪಷ್ಟತೆ ಮತ್ತು ಗೇಮಿಂಗ್ ಆಪ್ಟಿಮೈಸೇಶನ್ ಅನ್ನು ನೀಡುತ್ತದೆ. ಇದು 13,499 ರೂಗಳಿಗೆ ಲಭ್ಯವಿದೆ.

ಏಸರ್ 24-ಇಂಚಿನ ಫುಲ್‌ ಹೆಚ್‌ಡಿ ಕರ್ವ್ ವಿಎ ಪ್ಯಾನಲ್ ಗೇಮಿಂಗ್ ಮಾನಿಟರ್

ಏಸರ್ 24-ಇಂಚಿನ ಫುಲ್‌ ಹೆಚ್‌ಡಿ ಕರ್ವ್ ವಿಎ ಪ್ಯಾನಲ್ ಗೇಮಿಂಗ್ ಮಾನಿಟರ್

ಏಸರ್ 24-ಇಂಚಿನ ಫುಲ್‌ ಹೆಚ್‌ಡಿ 1800 ಆರ್ 144Hz ರಿಫ್ರೆಶ್ ರೇಟ್‌ ಮತ್ತು ಫಾಸ್ಟ್‌ ರೇಸ್ಪಾನ್ಸ್‌ ಟೈಂ ಬಾಗಿದ ವಿಎ ಪ್ಯಾನಲ್ ಗೇಮಿಂಗ್ ಮಾನಿಟರ್ ಅನ್ನು ಹೊಂದಿದೆ. ಇನ್ನು ಈ ಮಾನಿಟರ್ 10,999 ರೂಗಳಿಗೆ ಮಾರಾಟಕ್ಕೆ ಲಭ್ಯವಿದೆ.

Best Mobiles in India

English summary
Amazon Grand Gaming Days Sale: Check out some of the best deals including gaming laptops, monitors and more.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+