Home
ಸುದ್ದಿಜಾಲ

Amazonನಿಂದ ಹೊಸ ಮಿನಿ ಟಿವಿ ವೀಡಿಯೋ ಸ್ಟ್ರೀಮಿಂಗ್‌ ಸೇವೆ ಪ್ರಾರಂಭ!

ಇತ್ತೀಚಿನ ದಿನಗಳಲ್ಲಿ ವೀಡಿಯೋ ಸ್ಟ್ರೀಮಿಂಗ್‌ ಸೇವೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಅಮೆಜಾನ್‌ ಪ್ರೈಮ್‌ ವೀಡಿಯೋ ಕೂಡ ಒಂದಾಗಿದೆ. ಸದ್ಯ ಇದೀಗ ಅಮೆಜಾನ್ ಭಾರತದಲ್ಲಿ ಹೊಸ ಸ್ಟ್ರೀಮಿಂಗ್ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಮೆಜಾನ್ ಮಿನಿಟಿವಿ ಪ್ರೀ ಜಾಹೀರಾತು-ಬೆಂಬಲಿತ ವೀಡಿಯೊ ಸೇವೆಯಾಗಿದ್ದು, ಇದು ವೆಬ್ ಸರಣಿಗಳು, ಹಾಸ್ಯ ರೇಖಾಚಿತ್ರಗಳು, ತಂತ್ರಜ್ಞಾನ, ಜೀವನಶೈಲಿ ಮತ್ತು ಆಹಾರ ವೀಡಿಯೊಗಳನ್ನು ಒಳಗೊಂಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸಂಸ್ಥೆ ಹೊಸದಾಗಿ ಅಮೆಜಾನ್ ಮಿನಿಟಿವಿ ಪ್ರೀ ಜಾಹೀರಾತು-ಬೆಂಬಲಿತ ಸ್ಟ್ರೀಮಿಂಗ್‌ ಸೇವೆಯನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್‌ನಲ್ಲಿ ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಅಮೆಜಾನ್ ಮಿನಿಟಿವಿ ಲಭ್ಯವಿರುತ್ತದೆ. ಇನ್ನು ಐಒಎಸ್ ಮತ್ತು ಮೊಬೈಲ್ ವೆಬ್ ಆವೃತ್ತಿಗಳನ್ನು ಮುಂದಿನ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಅಮೆಜಾನ್‌ ಹೇಳಿದೆ. ಇನ್ನುಳಿದಂತೆ ಈ ಹೊಸ ಸ್ಟ್ರೀಮಿಂಗ್‌ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್

ಅಮೆಜಾನ್ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಅಮೆಜಾನ್ ಮಿನಿಟಿವಿ ಈಗಾಗಲೇ ಲಭ್ಯವಿದೆ. ಇದು ಅಪ್ಲಿಕೇಶನ್‌ನಲ್ಲಿ ಕೆಲವು ಸ್ಕ್ರಾಲ್‌ಗಳನ್ನು ಕೆಳಗೆ ಗೋಚರಿಸುತ್ತದೆ. ಒಮ್ಮೆ ನೀವು ಮಿನಿಟಿವಿ ಸ್ಕ್ರೀನ್‌ ಮೇಲೆ ಟ್ಯಾಪ್ ಮಾಡಿದರೆ ನಿಮ್ಮನ್ನು ಹೊಸ ವಿಭಾಗಕ್ಕೆ ಮರುನಿರ್ದೇಶಿಸಲಾಗುತ್ತದೆ. ಇದು ವಿವಿಧ ರೀತಿಯ ಪ್ರದರ್ಶನಗಳಿಂದ ತುಂಬಿರುತ್ತದೆ. ಅಮೆಜಾನ್ ಮಿನಿಟಿವಿ ಹೋಮ್‌ಸ್ಕ್ರೀನ್‌ನೊಂದಿಗೆ ಸರಿಯಾದ ಅಪ್ಲಿಕೇಶನ್ ಇಂಟರ್ಫೇಸ್ ಅನ್ನು ಹೊಂದಿದೆ. ಹಾಸ್ಯ, ಜೀವನಶೈಲಿ ಮತ್ತು ವೆಬ್ ಸರಣಿಗಳಿಗಾಗಿ ಟ್ಯಾಬ್‌ಗಳನ್ನು ಹೊಂದಿದೆ. ನಿರ್ಬಂಧಿತ ಮತ್ತು ಅನಿಯಂತ್ರಿತ ವೀಡಿಯೊಗಳಿಗಾಗಿ ಇದು ಪೋಷಕರ ನಿಯಂತ್ರಣಗಳನ್ನು ಸಹ ಹೊಂದಿದೆ.

ಅಮೆ

ಇನ್ನು ಅಮೆಜಾನ್‌ ಮಿನಿಟಿವಿಗಾಗಿ "ವೃತ್ತಿಪರವಾಗಿ ರಚಿಸಿದ ಮತ್ತು ಸಂಗ್ರಹಿಸಿದ ವಿಷಯವನ್ನು" ನೀಡಲು ಅಮೆಜಾನ್ ಜನಪ್ರಿಯ ಹಾಸ್ಯನಟರು, ಟೆಕ್ ಮತ್ತು ಫ್ಯಾಶನ್ ಯೂಟ್ಯೂಬರ್‌ಗಳನ್ನು ಸಹ ಒಳಗೊಂಡಿದೆ. ಇದು ಟಿವಿಎಫ್, ಪಾಕೆಟ್ ಏಸಸ್ ಮುಂತಾದ ಸ್ಟುಡಿಯೋಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಆಶಿಶ್ ಚಂಚಲಾನಿ, ಅಮಿತ್ ಭಡಾನಾ, ರೌಂಡ್ 2 ಹೆಲ್, ಹರ್ಷ್ ಬೆನಿವಾಲ್, ಶ್ರುತಿ ಅರ್ಜುನ್ ಆನಂದ್, ಎಲ್ವಿಶ್ ಯಾದವ್, ಪ್ರಜಕ್ತ ಕೋಲಿ ಮತ್ತು ಹೆಚ್ಚಿನ ಹಾಸ್ಯನಟರ ವೀಡಿಯೊಗಳನ್ನು ಹೊಂದಿದೆ.

ಅಮೆಜಾನ್

ಇದಲ್ಲದೆ ಅಮೆಜಾನ್ ಮಿನಿಟಿವಿ ಟ್ರಾಕಿನ್ ಟೆಕ್ ನಿಂದ ಟೆಕ್ ವೀಡಿಯೊಗಳು, ಸೆಜಲ್ ಕುಮಾರ್, ಮಾಲ್ವಿಕಾ ಸಿಟ್ಲಾನಿ ಮತ್ತು ಜೊವಿತಾ ಜಾರ್ಜ್ ಅವರ ಫ್ಯಾಷನ್ ಮತ್ತು ಸೌಂದರ್ಯ ವೀಡಿಯೊಗಳನ್ನು ಪ್ರದರ್ಶಿಸಲಿದೆ. ಇದು ಕಬಿತಾ ಕಿಚನ್, ಕುಕ್ ವಿತ್ ನಿಶಾ, ಮತ್ತು ಗೊಬಲ್ ನಿಂದ ಆಹಾರ ವೀಡಿಯೊಗಳನ್ನು ಸಹ ಹೊಂದಿರುತ್ತದೆ. ಅಮೆಜಾನ್ ಮಿನಿಟಿವಿ ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಹೊಸ ಮತ್ತು ವಿಶೇಷ ವೀಡಿಯೊಗಳನ್ನು ಸೇರಿಸಲು ಯೋಜಿಸಿದೆ.

ಅಮೆಜಾನ್

ಸದ್ಯ ಈ ಮಿನಿ ಟಿವಿಯೊಂದಿಗೆ, ಅಮೆಜಾನ್ ಯೂಟ್ಯೂಬ್‌ನೊಂದಿಗೆ ಸ್ಪರ್ಧಿಸುವುದಕ್ಕೆ ಮುಂದಾಗಿದೆ. ಆದರೂ ಇದು ಅಮೆಜಾನ್‌ ಪ್ರೈಮ್‌ಗಿಂತ ದೊಡ್ಡ ವೇದಿಕೆಯಾಗಿದೆ. ಇದು ಅಮೆಜಾನ್ ಪ್ರೈಮ್ ಸದಸ್ಯತ್ವದ ಅಗತ್ಯವಿರುವ ಪ್ರೈಮ್ ವೀಡಿಯೊಗಿಂತ ಭಿನ್ನವಾಗಿದೆ. ಅಮೆಜಾನ್ ಮಿನಿಟಿವಿ ಸಂಪೂರ್ಣವಾಗಿ ಉಚಿತವಾಗಿದೆ. ಇದನ್ನು ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿರುವ ಯಾರಾದರೂ ಪ್ರವೇಶಿಸಬಹುದು.

Best Mobiles in India

English summary
Amazon miniTV is available for free on Amazon's Android app. It will feature comedy, tech and lifestyle shows that are free to watch but with ads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+