Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ ಮೊಬೈಲ್‌ ಮತ್ತು ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್‌ ಡಿಸ್ಕೌಂಟ್‌!

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣವಾಗಿದೆ. ಇನ್ನು ಅಮೆಜಾನ್‌ ಕೂಡ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ವಿಕೆಂಡ್‌, ಮಂತ್‌ ಎಂಡ್‌ ಇಯರ್‌ ಎಂಡ್‌ ಸೇಲ್‌ಗಳು ಮಾತ್ರವಲ್ಲದೆ ಹಬ್ಬ ಹರಿದಿನಗಳಲ್ಲಿ ಡಿಸ್ಕೌಂಟ್‌ ಮೇಳಗಳನ್ನು ನಡೆಸುತ್ತಲೇ ಬಂದಿದೆ. ಸದ್ಯ ಇದೀಗ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್‌ ಮತ್ತು ಟಿವಿ ಸೇವಿಂಗ್ಸ್‌ ಡೇಸ್‌ ಸೇಲ್‌ ಅನ್ನು ಘೋಷಿಸಿದೆ. ಇದರಲ್ಲಿ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳಲ್ಲಿ 1,250ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಭಾರತದಲ್ಲಿ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳು, ಸ್ಮಾರ್ಟ್‌ಫೋನ್‌ಗಳಲ್ಲದೆ ಇತರ ಗ್ಯಾಜೆಟ್ಸ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ ನೀಡಿದೆ. ಅದರಲ್ಲೂ ಗ್ರಾಹಕರು ಒನ್‌ಪ್ಲಸ್‌, ಶಿಯೋಮಿ, ಸ್ಯಾಮ್‌ಸಂಗ್‌, ಒಪ್ಪೋ, ಟೆಕ್ನೋ, ವಿವೋ ಮತ್ತು ರಿಯಲ್‌ಮಿ ಸೇರಿದಂತೆ ಬ್ರಾಂಡ್‌ಗಳಲ್ಲಿ 10% ರಷ್ಟು ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಸರಣಿಯ ಮೇಲೆ ವಿಶೇಷ ಆಫರ್‌ ಅನ್ನು ಕೂಡ ನೀಡುತ್ತಿದೆ. ಹಾಗಾದ್ರೆ ಅಮೆಜಾನ್‌ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ವಿಶೇಷತೆ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್‌ ಜನವರಿ 10 2022 ರವರೆಗೆ ಲೈವ್ ಆಗಿರಲಿದೆ. ಈ ಸೇಲ್‌ನಲ್ಲಿ ಗ್ರಾಹಕರು ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು 1,000ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳಲ್ಲಿ 1,250ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಅಮೆಜಾನ್‌ ಹಲವಾರು ಗ್ಯಾಜೆಟ್ಸ್‌ಗಳ ಮೇಲೆ ಎಕ್ಸ್‌ಚೇಂಜ್‌ ಆಫರ್‌ ಅನ್ನು ಕೂಡ ನೀಡುತ್ತಿದೆ. ಜೊತೆಗೆ ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ 12 ತಿಂಗಳವರೆಗೆ ನೋ-ಕಾಸ್ಟ್‌ EMI ಅನ್ನು ಸಹ ನೀಡುತ್ತಿದೆ. ಹಾಗೆಯೇ ಅಮೆಜಾನ್ ಪ್ರೈಮ್ ಸದಸ್ಯರು HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡುವವರು 6 ತಿಂಗಳ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಮತ್ತು ಹೆಚ್ಚುವರಿ 3 ತಿಂಗಳ ನೋ ಕಾಸ್ಟ್ EMI ನಂತಹ ಹೆಚ್ಚುವರಿ ಪರ್ಕ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

ಸೇಲ್‌ನಲ್ಲಿ

ಇನ್ನು ಈ ಸೇಲ್‌ನಲ್ಲಿ ಟೆಕ್ನೋ ಸ್ಪಾರ್ಕ್‌ 8T, ಟೆಕ್ನೋ ಸ್ಪಾರ್ಕ್‌ 8 ಪ್ರೊ, ಒನ್‌ಪ್ಲಸ್‌ ನಾರ್ಡ್‌ CE, ಒನ್‌ಪ್ಲಸ್‌ ನಾರ್ಡ್‌ 2, ಸ್ಯಾಮ್‌ಸಂಗ್‌ S20 FE 5G, ಮಿ 11X, ಶಿಯೋಮಿ 11 ಲೈಟ್‌ NE 5G, ರೆಡ್ಮಿ ನೋಟ್‌ 10S, ರೆಡ್ಮಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಈ ಆಫರ್‌ಗಳು ದೊರೆಯಲಿವೆ. ಇದಲ್ಲದೆ ಅಮೆಜಾನ್‌ ತನ್ನ ಪ್ರೀಮಿಯಂ ಫೋನ್‌ಗಳ ಪಾರ್ಟಿ ಈವೆಂಟ್‌ನೊಂದಿಗೆ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಬೆಲೆಯನ್ನು ಕ್ಲೈಮ್ ಮಾಡುತ್ತಿದೆ. ಇದು ಜನವರಿ 12 ರವರೆಗೆ ಲೈವ್ ಆಗಿರುತ್ತದೆ. ಇದಲ್ಲದೆ ಅಮೆಜಾನ್ ಕೂಪನ್‌ಗಳ ಮೂಲಕ ಹೆಚ್ಚುವರಿ 5,000ರೂ.ಗಳ ರಿಯಾಯಿತಿಯನ್ನು ಸಹ ನೀಡುತ್ತಿದೆ. ಜೊತೆಗೆ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಮೇಲೆ ಬಳಕೆದಾರರು 40% ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಸರಣಿಯ ಮೇಲೆ ಹೊಸ ಆಫರ್
ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌3, Z ಫ್ಲಿಪ್‌3 ಸ್ಮಾರ್ಟ್‌ಫೋನ್‌ಗಳ ಮೇಲೆ ಎರಡು ಹೊಸ ಆಫರ್‌ಗಳನ್ನು ಸಹ ಘೋಷಿಸಿದೆ. ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರು ಗ್ಯಾಲಕ್ಸಿ ಬಡ್ಸ್ 2 ಅನ್ನು ಸಾಮಾನ್ಯ ಬೆಲೆ 11,999ರೂ. ಬದಲಿಗೆ 1,999ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕಂಪನಿಯು HDFC ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ 7,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ. ಈ ಎಲ್ಲಾ ಆಫರ್‌ಗಳು ತಕ್ಷಣವೇ ಜಾರಿಗೆ ಬರಲಿದ್ದು, ಜನವರಿ 31, 2022 ರವರೆಗೆ ಮಾನ್ಯವಾಗಿರುತ್ತವೆ. ಇದನ್ನು ಗ್ರಾಹಕರು Samsung.com/in, Samsung ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಮತ್ತು ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Here's all you need to know about the new Amazon sale and what offers to expect on smartphones and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+