ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಫ್ಲಿಪ್‌ಕಾರ್ಟ್‌ಗೆ ಬಿಗ್ ಶಾಕ್..!
ಭಾರತೀಯ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ದೊಡ್ಡ ಸೇಲ್ ಗಳನ್ನು ಖರೀದಿದಾರರು ನೋಡಬಹುದಾಗಿದೆ. ಮತ್ತೊಂದು ದೊಡ್ಡ ಮಟ್ಟದ ಸೇಲ್ ಗೆ ಫ್ಲಿಪ್ಕಾರ್ಟ್ ರೆಡಿಯಾದ ಬೆನ್ನಲೇ ಅಮೆಜಾನ್ ಸಹ ಗ್ರೇಟ್ ಇಂಡಿಯನ್ ಅನ್ನು ಮತ್ತೇ ಆಯೋಜಿಸಲು ಸಿದ್ಧತೆ ನಡೆಸಿದೆ, ಈಗಾಗಲೇ ಫ್ಲಿಪ್ಕಾರ್ಟ್ ಬಿಗೆಸ್ಟ್ ಎವರ್ ಸೇಲ್ ಎಂಬ ಹೆಸರಿನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಅನ್ನು ಆಯೋಜಿಸಲು ಮುಂದಾಗಿದ ಈ ಹಿನ್ನೆಲೆಯಲ್ಲಿ ಅಮೆಜಾನ್ ಸಹ ತನ್ನ ಗ್ರೇಟ್ ಇಂಡಿಯನ್ ಸೇಲ್ ಅನ್ನು ಮತ್ತೇ ಆಯೋಜಿಸಲು ಮುಂದಾಗಿದೆ.
ಫ್ಲಿಪ್ಕಾರ್ಟ್ ತನ್ನ ಸೇಲ್ ನಲ್ಲಿ hdfc ಬ್ಯಾಂಕ್ ಕಾರ್ಡ್ ದಾರರಿಗೆ ಹೆಚ್ಚು ಲಾಭವನ್ನು ಮಾಡಿಕೊಟ್ಟರೆ, ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಸೆಲ್ ನಲ್ಲಿ sbi ಕಾರ್ಡ್ ದಾರರಿಗೆ ಹೆಚ್ಚಿನ ಲಾಭವನ್ನು ಮಾಡಿ ಕೊಡಲು ಮುಂದಾಗಿದೆ. ಎಕ್ಸ್ ಚೇಂಜ್ ಸೇರಿದಂತೆ ನೋ ಕಾಸ್ಟ್ emi ಸೇರಿದಂತೆ ಹಲವು ಮಾದರಿಯ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡಲು ಅಮೆಜಾನ್ ಸಿದ್ದತೆ ನಡೆಸಿದೆ.

ಇದಲ್ಲದೆ ಈ ಬಾರಿ ಸೇಲ್ ನಲ್ಲಿ ಅಮೆಜಾನ್ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ವಸ್ತುಗಳ ಮೇಲೆ ಹೆಚ್ಚಿನ ಡಿಸ್ಕೌಂಟ್, ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಮಾದರಿಯ ಆಫರ್ ಗಳ ನೀಡಲಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಗೆ ಹಲವು ಹೊಸ ಆಯ್ಕೆಗಳನ್ನು ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ.
ಫ್ಲಿಪ್ಕಾರ್ಟ್ ಮಾದರಿಯಲ್ಲೇ ಅಮೆಜಾನ್ ಸಹ ಈ ಬಾರಿ ಸ್ಮಾರ್ಟ್ ಫೋನ್ ಮೇಲೆ ಹೆಚ್ಚಿನ ಆಫರ್ ಗಳನ್ನು ನೀಡಲಿದ್ದು, ಒನ್ ಪ್ಲಸ್, ಶಿಯೋಮಿ ಮತ್ತು ನೋಕಿಯಾ ಫೋನ್ ಗಳ ಮೇಲೆ ಹೆಚ್ಚಿನ ಆಫರ್ ಗಳನ್ನು ಕಾಣಬಹುದಾಗಿದೆ.

ಇದಲ್ಲದೆ, ಈ ಬಾರಿ ಎಕ್ಸ್ಚೇಂಜ್, no cost emi, ಟೋಟಲ್ ಡ್ಯಾಮೇಜ್ ಪ್ರೊಟೆಕ್ಷನ್ ಸೇರಿದಂತೆ ಹಲವು ಮಾದರಿಯ ಆಫರ್ ಗಳನ್ನು ಹೊಸದಾಗಿ ಅಮೆಜಾನ್ ಪರಿಚಯಿಸುತ್ತದೆ. ಇದರಿಂದಾ ಈ ಬಾರಿಯ ಹಬ್ಬದ ಸಿಜನ್ ಇನ್ನಷ್ಟು ಕಳೆಕಟ್ಟಲಿದೆ.
ಇದಲ್ಲದೆ ಈ ಬಾರಿ ಸೆಲ್ ನಲ್ಲಿ ಲ್ಯಾಪ್ಟಾಪ್ ಸ್ಪೀಕರ್ ಸೇರಿದಂತೆ ಕ್ಯಾಮೆರಾಗಳ ಮೇಲೆ ಆಫರ್ ಗಳನ್ನು ನೀಡುವ ಸಾಧ್ಯತೆ ಅಧಿಕವಾಗಿದೆ ಇದರೊಂದಿಗೆ ಸ್ಮಾರ್ಟ್ ಟಿವಿ ಗಳು ಸಹ ಉತ್ತಮವಾಗಿ ಮಾರಾಟಗೊಳ್ಳುತ್ತಿದೆ.


Click it and Unblock the Notifications








