ಜಗತ್ತಿನ ಶ್ರೀಮಂತ ವ್ಯಕ್ತಿಯ ಸುದೀರ್ಘ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್!!

|

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್ ಬೆಜೋಸ್ ದಂಪತಿಗಳು ತಮ್ಮ 25 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್ ಇಡಲು ಮುಂದಾಗಿದ್ದಾರೆ. ಈ ಬಗ್ಗೆ ಜೆಫ್ ಬೆಜೋಸ್ ಮತ್ತು ಅವರ ಪತ್ನಿ ಮೆಕೆಂಜಿ ಬೆಜೋಸ್ ಸೇರಿ ಬುಧವಾರ ಜಂಟಿಯಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಬಗ್ಗೆ ತಿಳಿಸಿದ್ದಾರೆ.

ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಮಾಹಿತಿ ಇರಲಿ ಎಂದು ಹೇಳುತ್ತಿದ್ದೇವೆ, ನಮ್ಮ ಕುಟುಂಬ ಮತ್ತು ಗೆಳೆಯರಿಗೆ ತಿಳಿದಿರುವಂತೆ ನಮ್ಮ ದೀರ್ಘ ಸಮಯದ ಯಶಸ್ವಿ ಬದುಕ್ಕನ್ನು ನಾವು ಸಂತೋಷದಿಂದಲೇ ಮುಗಿಸುತ್ತಿದ್ದೇವೆ. ನಾವು ವಿಚ್ಚೇದನ ಪಡೆದುಕೊಂಡು ಮುಂದೆ ಉತ್ತಮ ಸ್ನೇಹಿತರಾಗಿ ಇರಲು ನಿರ್ಧರಿಸಿದ್ದೇವೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ .

ಜಗತ್ತಿನ ಶ್ರೀಮಂತ ವ್ಯಕ್ತಿಯ ಸುದೀರ್ಘ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್!!

ಕಳೆದ 25 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿರುವ ಬೆಜೋಸ್ ಮತ್ತು ಮೆಕೆಂಜಿ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಆದರೂ ಸಹ ಇಬ್ಬರೂ ತಮ್ಮ ಇಚ್ಚೆಯ ಪ್ರಕಾರವೇ ವಿಚ್ಚೇದನವನ್ನು ಪಡೆಯುತ್ತಿರುವ ಬಗ್ಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಸುದೀರ್ಘ ದಾಂಪತ್ಯ ಜೀವನದಿಂದ ಅವರೇಕೆ ವಿಮುಕ್ತರಾಗುತ್ತಿದ್ದಾರೆ ಎಂಬುದು ಈಗಲೂ ಕೂಡ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಅಂದು ಮೆಕ್ ಡೊನಾಲ್ಡ್ಸ್​ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಹುಡುಗ ಇಂದು ಧನಿಕನಾಗಿ ಬೆಳೆದಿದ್ದಾನೆ. ಇಡೀ ವಿಶ್ವದ ನಂಬರ್​ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದಾನೆ. ಆದರೆ, ಆತ ತನ್ನ ಸುದೀರ್ಘ 25 ವರ್ಷಗಳ ದಾಂಪತ್ಯವನ್ನು ಕಡಿದುಕೊಳ್ಳುತ್ತಿರುವುದು ಹೇಗೆ ಎಂಬುದನ್ನು ನಿಜವಾಗಿಯೂ ನನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂಬ ಒಂದು ಕಮೆಂಟ್ ಭಾರೀ ಲೈಕ್ ಪಡೆದಿದೆ.

ಜಗತ್ತಿನ ಶ್ರೀಮಂತ ವ್ಯಕ್ತಿಯ ಸುದೀರ್ಘ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್!!

ಅಮೆಜಾನ್ ಉದ್ಯಮ ಸಮೂಹ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಜೆಫ್ ಬೆಜೋಸ್ ಅವರೀಗ ಒಟ್ಟು 137 ಬಿಲಿಯನ್ ಡಾಲರ್ (9,67,289 ಕೋಟಿ ರೂ.) ಮೌಲ್ಯದ ಸಂಪತ್ತು ಹೊಂದಿದ್ದಾರೆ. ಆರಂಭದಲ್ಲಿ ಅಮೆಜಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮೆಕೆಂಜಿ ಬೆಜೋಸ್ ಅವರು 2014ರಲ್ಲಿ ಬೈಸ್ಟಾಂಡರ್ ರಿವೊಲ್ಯೂಶನ್ ಎಂಬ ಸಂಸ್ಥೆಯನ್ನು ಸಹ ಆರಂಭಿಸಿದ್ದರು.

Best Mobiles in India

English summary
Amazon boss Jeff Bezos and wife MacKenzie divorce. Amazon CEO Jeff Bezosand his wife, MacKenzie, are to divorce after a 25-year marriage.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X