ಅಮೆಜಾನ್ ಸಂಸ್ಥೆ‌ ಮೇಲೆ ತನಿಖೆಗೆ ಮೊಬೈಲ್‌ ರಿಟೇಲರ್‌ಗಳ ಆಗ್ರಹ

By Gizbot Bureau
|

ಭಾರತದಲ್ಲಿ ಅಮೆಜಾನ್‌ನ ವ್ಯವಹಾರ ಪದ್ಧತಿಗಳ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 1,50,000 ಮೊಬೈಲ್ ಫೋನ್ ಮಳಿಗೆಗಳನ್ನು ಪ್ರತಿನಿಧಿಸುವ ವ್ಯಾಪಾರ ಸಮೂಹ ಸೋಮವಾರ ಒತ್ತಾಯಿಸಿದೆ. ಅದಲ್ಲದೇ ಆನ್‌ಲೈನ್‌ ಮೊಬೈಲ್‌ ಮಾರಾಟದ ಮೇಲೆ ದೈನಂದಿನ ತೆರಿಗೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಅಮೆಜಾನ್ ಸಂಸ್ಥೆ‌ ಮೇಲೆ ತನಿಖೆಗೆ ಮೊಬೈಲ್‌ ರಿಟೇಲರ್‌ಗಳ ಆಗ್ರಹ

ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ರಾಯಿಟರ್ಸ್‌ ಕಳೆದ ತಿಂಗಳು ಪ್ರಕಟಿಸಿದ ವಿಶೇಷ ವರದಿಯನ್ನು ಉಲ್ಲೇಖಿಸಲಾಗಿದೆ. ಅಮೆಜಾನ್‌ ತನ್ನ ಭಾರತೀಯ ವೇದಿಕೆಯಲ್ಲಿ ಸಣ್ಣ ಗುಂಪಿನ ಮಾರಾಟಗಾರರಿಗೆ ವಿಶೇಷ ಆದ್ಯತೆ ನೀಡಿದೆ. ಹಾಗೂ ದೇಶದ ಕಠಿಣ ವಿದೇಶಿ ಹೂಡಿಕೆ ನಿಯಮಗಳಿಂದ ಪಾರಾಗಲು ಅವುಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.

2012 ಮತ್ತು 2019ರ ನಡುವಿನ ಅಮೆಜಾನ್‌ನ ಆಂತರಿಕ ದಾಖಲೆಗಳನ್ನು ಆಧರಿಸಿ ರಾಯಿಟರ್ಸ್‌ ವರದಿ ಪ್ರಕಟಿಸಿತ್ತು. ಅಮೆಜಾನ್‌ನ ಚಿಂತನೆ ಪ್ರಕ್ರಿಯೆ ಮತ್ತು ಕಾರ್ಯತಂತ್ರದ ಬಗ್ಗೆ ನಮಗೆ ಈಗಾಗಲೇ ತಿಳಿದಿತ್ತು ಎಂದು ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಭಾರತದಲ್ಲಿ ಅಮೆಜಾನ್‌ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಯುವವರೆಗೆ ಭಾರತದಲ್ಲಿ ಅಮೆಜಾನ್‌ನ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಎಐಎಂಆರ್‌ಎ ಸರಕಾರವನ್ನು ಒತ್ತಾಯಿಸಿದೆ. ಆದರೆ, ಅಮೆಜಾನ್‌ ತನ್ನ ಮಾರುಕಟ್ಟೆಯಲ್ಲಿ ಯಾವುದೇ ಮಾರಾಟಗಾರರಿಗೆ ಆದ್ಯತೆ ನೀಡಿಲ್ಲ ಹಾಗೂ ಯಾವಾಗಲೂ ಭಾರತೀಯ ಕಾನೂನನ್ನು ಪಾಲಿಸುತ್ತದೆ ಎಂದು ಹೇಳುತ್ತದೆ.

ಅಮೆಜಾನ್ ಮತ್ತು ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ನಿಯಮಗಳನ್ನು ಮೀರಿವೆ. ಅವರ ವ್ಯಾಪಾರ ಅಭ್ಯಾಸಗಳು ಸಣ್ಣ ವ್ಯಾಪಾರಿಗಳಿಗೆ ನಷ್ಟವನ್ನುಂಟು ಮಾಡುತ್ತವೆ ಎಂದು ಚಿಲ್ಲರೆ ವ್ಯಾಪಾರಿಗಳು ಬಹಳ ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ. ಆದರೆ, ಭಾರತದ ಎರಡು ದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮಾತ್ರ ಈ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿವೆ.

ರಾಯಿಟರ್ಸ್ ವರದಿಯಂತೆ ಅಮೆಜಾನ್‌ ಅಲ್ಪ ಸಂಖ್ಯೆಯ ಮಾರಾಟಗಾರರ ಅಭಿವೃದ್ಧಿಗೆ ಸಹಾಯ ಮಾಡಿದೆ. ಅವರಿಗೆ ಶುಲ್ಕದಲ್ಲಿ ರಿಯಾಯಿತಿ, ಆಪಲ್‌ ಸಂಸ್ಥೆಯಂತಹ ದೊಡ್ಡ ತಂತ್ರಜ್ಞಾನ ಕಂಪನಿಗಳೊಂದಿಗೆ ವಿಶೇಷ ಒಪ್ಪಂದಗಳನ್ನು ಕಡಿತಗೊಳಿಸಲು ಅಮೆಜಾನ್‌ ಸಹಾಯ ಮಾಡಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ.

ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಮತ್ತು ಈ ಆನ್‌ಲೈನ್‌ ಮಾರಾಟ ಕಂಪನಿಗಳ ನಡುವಿನ ಸಂಬಂಧವನ್ನು ತನಿಖೆ ಮಾಡಲು ಎಐಎಂಆರ್‌ಎ ಸರಕಾರವನ್ನು ಒತ್ತಾಯಿಸಿದೆ. ಫ್ಲಿಪ್‌ಕಾರ್ಟ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ, ಅಮೆಜಾನ್‌ ಮಾತ್ರ ಆರೋಪಗಳನ್ನು ನಿರಾಕರಿಸಿದ್ದು, ಎಲ್ಲಾ ಮಾರಾಟಗಾರರನ್ನು ನ್ಯಾಯಯುತವಾಗಿ ಪರಿಗಣಿಸುತ್ತಿದ್ದೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Best Mobiles in India

Read more about:
English summary
Amazon Business Practices Probe Requested By Mobile Retailers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X