ಅಮೆಜಾನಿನಲ್ಲಿ ವಂಚಕನ ಬೇಕಾಬಿಟ್ಟಿ ಶಾಪಿಂಗ್: ಬಿಲ್ ಮಾತ್ರ ಮತ್ತೊಬ್ಬನಿಗೆ!

|

ವಂಚಕನೋರ್ವ ಅಮೆಜಾನಿನಲ್ಲಿ ಬೇಕಾಬಿಟ್ಟಿ ಶಾಪಿಂಗ್ ಮಾಡಿದ್ದಾನೆ. ಆ ವಂಚಕ ಶಾಪಿಂಗ್ ಮಾಡಿದ ಬಿಲ್ ಅನ್ನು ಮಾತ್ರ ಓರ್ವ ಖಾಸಗಿ ಉದ್ಯೋಗಿಯೋರ್ವ ಕಟ್ಟಬೇಕಾಗಿದೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ನಿಜ. ಬೆಂಗಳೂರಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಆನ್​ಲೈನ್ ಕಂಪನಿಗಳು ನೀಡುವ 'ಪೇ ಲೇಟರ್' ಹಣವನ್ನು ಎಗರಿಸಿರುವ ಸೈಬರ್ ಕಳ್ಳನೋರ್ವ ಖಾಸಗಿ ಉದ್ಯೋಗಿಯೋರ್ವನಿಗೆ 38 ಸಾವಿರ ರೂ. ವಂಚನೆ ನಡೆಸಿರುವ ಘಟನೆ ನಡೆದಿದೆ.

ಅಮೆಜಾನಿನಲ್ಲಿ ವಂಚಕನ ಬೇಕಾಬಿಟ್ಟಿ ಶಾಪಿಂಗ್: ಬಿಲ್ ಮಾತ್ರ ಮತ್ತೊಬ್ಬನಿಗೆ!

ಹೌದು, ಅಮೆಜಾನ್, ಫ್ಲಿಪ್​ಕಾರ್ಟ್, ಪೇಟಿಎಂ ಸೇರಿದಂತೆ ಆನ್​ಲೈನ್ ಶಾಪಿಂಗ್ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನೋಂದಾಯಿತ ಗ್ರಾಹಕನ ಖಾತೆಗೆ ಒಂದಿಷ್ಟು ಮುಂಗಡ ಹಣ ಜಮೆ ಮಾಡುತ್ತವೆ. ಇದನ್ನು ಸಾಲರೂಪದ ಮುಂಗಡ ಹಣ (ಪೇ ಲೇಟರ್) ಎಂದು ಕರೆಯುತ್ತಾರೆ. ಇಂತಹ ಹಣಕ್ಕೂ ಇದೀಗ ಖದೀಮರು ಕನ್ನ ಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಇಂತಹದೊಂದು ಪ್ರಕರಣವು ಸೈಬರ್ ಪೊಲೀಸರ ನಿದ್ದೆಗೆಡಿಸಿದ್ದು, ಆ ವಂಚಕನನ್ನು ಹಿಡಿಯುವುದು ಸವಾಲಾಗಿದೆ.

ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಇ-ಮೇಲ್ ಹ್ಯಾಕ್ ಮಾಡಿದ ಸೈಬರ್ ಕಳ್ಳ ಶಾಪಿಂಗ್ ಖಾತೆಗೆ ಲಗ್ಗೆ ಇಟ್ಟಿದ್ದಾನೆ. ಖಾತೆಗೆ ಪ್ರವೇಶಿಸಿದ ನಂತರ ಉದ್ಯೋಗಿ ಖಾತೆಯಲ್ಲಿದ್ದ ಹಣ ಬಳಸಿ 38 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸಿದ್ದಾನೆ. ಇತ್ತ ಅಮೆಜಾನ್ ಅಧಿಕಾರಿಗಳು ಮೊಬೈಲ್​ಗೆ ಬಿಲ್ ಕಳುಹಿಸಿದ್ದಾರೆ. ಇದರ ಅರಿವಿಲ್ಲದ ಉದ್ಯೋಗಿಯು ತನ್ನ ಅಮೆಜಾನ್ ಖಾತೆ ನೋಡಿಕೊಂಡಾಗ 38 ಸಾವಿರ ರೂ. ಕಡಿತ ಆಗಿರುವುದು ಗೊತ್ತಾಗಿದೆ. ನಂತರ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ.

ಅಮೆಜಾನಿನಲ್ಲಿ ವಂಚಕನ ಬೇಕಾಬಿಟ್ಟಿ ಶಾಪಿಂಗ್: ಬಿಲ್ ಮಾತ್ರ ಮತ್ತೊಬ್ಬನಿಗೆ!

ಈ ವಹಿವಾಟಿನ ವಿವರವನ್ನು ಸೈಬರ್ ಕ್ರೈಮ್ ಪೊಲೀಸರು ಪರಿಶೀಲಿಸಿದಾಗ ಸೈಬರ್ ಖದೀಮ ಹಣ ದೋಚಿರುವುದು ಬೆಳಕಿಗೆ ಬಂದಿದೆ. ಆದರೂ ದೂರು ನೀಡಿರುವ ಉದ್ಯೋಗಿ 38 ಸಾವಿರ ರೂ. ಪಾವತಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಏಕೆಂದರೆ, ಪೇ ಲೇಟರ್ ಹಣ ಬಳಸಿಕೊಂಡ 1 ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಇಲ್ಲವಾದರೆ ವ್ಯಾಲೆಟ್​ಗೆ ಹಣ ಜಮೆ ಆದ ಕೂಡಲೇ ಕಡಿತ ಮಾಡಿಕೊಳ್ಳುತ್ತಾರೆ ಅಥವಾ ಆತನ ಮೇಲೆ ಅಮೆಜಾನ್ ಸಂಸ್ಥೆಯು ಪೊಲೀಸರಿಗೂ ದೂರು ನೀಡುವ ಸಾಧ್ಯತೆ ಇದೆ.

ಭಾರತದ 5ಜಿ ತಂತ್ರಜ್ಞಾನಕ್ಕೆ ಚೀನೀಯರಿಗಿಲ್ಲ ಅವಕಾಶ!ಭಾರತದ 5ಜಿ ತಂತ್ರಜ್ಞಾನಕ್ಕೆ ಚೀನೀಯರಿಗಿಲ್ಲ ಅವಕಾಶ!

ಈ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವ ಉದ್ಯೋಗಿಯ ಇ ಮೇಲ್ ಹ್ಯಾಕ್ ಆಗಿರುವುದು ಏಕೆ ಎಂಬುದನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ಈ ಪ್ರಕರಣದ ಅಂತ್ಯ ಅದೇನೇ ಆಗಲಿ, ನೀವು ಮಾತ್ರ ಕಾಲಕಾಲಕ್ಕೆ ನಿಮ್ಮ ಇಮೇಲ್ ಪಾಸ್​ವರ್ಡ್ ಬದಲಾಯಿಸಿ. ಅಂಕಿ, ಚಿಹ್ನೆ, ವಿಶೇಷ ಚಿಹ್ನೆ ಎಲ್ಲವನ್ನೂ ಒಳಗೊಂಡಿರುವ ಪಾಸ್‌ವರ್ಡ್ ಅನ್ನು ಇಡಿ. ಮೊಬೈಲ್​ಗೆ ಒಟಿಪಿ ಬರುವಂತೆ ಮಾಡಿಕೊಳ್ಳುವ ಸೆಕ್ಯುರಿಟಿ ಹಂತವನ್ನು ಅನುಸರಿಸಿ. ಇಲ್ಲವಾದರೆ, ಇಂತಹ ಸಮಸ್ಯೆಗೆ ನೀವು ಸಿಲುಕಬಹುದು ಎಚ್ಚರ.

Best Mobiles in India

English summary
Amazon buy now pay later feature misused by hacker. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X