ಅಮೆಜಾನ್‌ ಸಿಇಒ ಸ್ಥಾನದಿಂದ ಕೆಳಗಿಳಿಯಲು ಜೆಫ್‌ ಬೆಜೋಸ್‌ ಸಿದ್ಧತೆ!

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಅಮೆಜಾನ್‌ ಸಿಇಒ ಜೆಫ್ ಬೆಜೋಸ್ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ವರದಿ ಆಗಿದೆ. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಟಾಪ್‌ ಟೆನ್‌ನಲ್ಲಿ ಇರುವ ಜೆಫ್‌ ಬೆಜೂಸ್‌ ಇತ್ತೀಚಿಗಷ್ಟೇ ವಿಶ್ವದ ನಂಬರ್‌ ಒನ್‌ ಶ್ರೀಮಂತ ಸ್ಥಾನ ಕಳೆದುಕೊಂಡಿದ್ದರು. ಇನ್ನು ಅಮೆಜಾನ್‌ ಸಿಇಒ ಸ್ಥಾನದಿಂದ ಕೆಳಗಿಳಿದ ನಂತರ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ ಎಂದು ಅಮೆಜಾನ್ ಡಾಟ್ ಕಾಮ್ ಪ್ರಕಟಿಸಿದೆ.

ಅಮೆಜಾನ್‌

ಹೌದು, ವಿಶ್ವದ ಮೂಲೆ ಮೂಲೆಗೂ ತನ್ನ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಅನ್ನು ವಿಸ್ತರಿಸಿರುವ ಅಮೆಜಾನ್‌ ಡಾಟ್‌.ಕಾಮ್‌ ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿದೆ. ಇಷ್ಟು ದಿನ ಇದರ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಜೆಫ್‌ ಬೆಜೋಸ್ ತಮ್ಮ ಸ್ಥಾನದಿಂದ ಕೆಳಗಿಳಿಯುವುದು ಪಕ್ಕಾ ಆಗಿದೆ. ಅಷ್ಟೇ ಅಲ್ಲ ಅಮೆಜಾನ್‌ ಕ್ಲೌಡ್ ವಿಭಾಗದ ಮುಖ್ಯಸ್ಥ ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ಆಂಡಿ ಜಾಸ್ಸಿ ಬೆಜೋಸ್‌ನ ನಂತರ ಉತ್ತರಾಧಿಕಾರಿಯಾಗಲಿದ್ದು, ಮುಂದಿನ ಅಮೆಜಾನ್ ಸಿಇಒ ಆಗುತ್ತಾರೆ ಎಂದು ಕಂಪನಿ ದೃಡಪಡಿಸಿದೆ. ಹಾಗಾದ್ರೆ ಅಮೆಜಾನ್‌.ಕಾಮ್‌ ಮುಂದಿನ ನಡೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

27 ವರ್ಷಗಳ ಹಿಂದೆ ಶುರುವಾದ ಅಮೆಜಾನ್‌ ಇಂದು ವಿಶ್ವದ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿ ಬೆಳೆದಿದೆ. ಇದರ ಬೆಳವಣಿಗೆಯ ಹಿಂದೆ ಅಮೆಜಾನ್‌.ಕಾಮ್‌ ಸಿಇಒ ಜೆಫ್‌ ಬೆಜೋಸ್‌ ಅವರ ಅಗಾದ ಶ್ರಮವಿದೆ. ಸದ್ಯ ಅಮೆಜಾನ್ ಪ್ರಸ್ತುತ ತನ್ನ ತ್ರೈಮಾಸಿಕ ಮಾರಾಟದಲ್ಲಿ 100 ಬಿಲಿಯನ್‌ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿದೆ ಎಂಬ ವರದಿ ಇತ್ತೀಚಿಗಷ್ಟೇ ಬಂದಿತ್ತು. ಈ ವರದಿ ಬಂದ ಕೆಲವೇ ದಿನಗಳಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿಯುವ ಬೆಜೋಸ್ ನಿರ್ಧಾರದ ಸುದ್ದಿ ಬಂದಿದೆ.

ಅಮೆಜಾನ್

ಇನ್ನು ಮುಂದಿನ ಅಮೆಜಾನ್ ಸಿಇಒ ಆಗಿರುವ ಜಾಸ್ಸಿ 1997 ರಲ್ಲಿ ಕಂಪನಿಗೆ ಸೇರಿದರು. ಕ್ಲೌಡ್ ಡಿವಿಷನ್ ಎಡಬ್ಲ್ಯೂಎಸ್ ಅನ್ನು ಬೆಳೆಸುವ ಜವಾಬ್ದಾರಿಯನ್ನು ಅವರು ಮುಖ್ಯವಾಗಿ ಹೊಂದಿದ್ದರು.ಇದನ್ನು ಇಂದು ಲಕ್ಷಾಂತರ ಗ್ರಾಹಕರು ಬಳಸುತ್ತಾರೆ. ರಾಯಿಟರ್ಸ್ ಪ್ರಕಾರ, ಜಾಗತಿಕ ಮಾರುಕಟ್ಟೆ ಸಂಸ್ಥೆ ಮೈಂಡ್‌ಶೇರ್‌ನ ಮುಖ್ಯ ರೂಪಾಂತರ ಅಧಿಕಾರಿ ಟಾಮ್ ಜಾನ್ಸನ್, "ಜಾಸ್ಸಿಯ ಪ್ರಚಾರವು ವೆಬ್ ಹೋಸ್ಟಿಂಗ್ ವ್ಯವಹಾರದ ಕೇಂದ್ರೀಯತೆಯನ್ನು ಅಮೆಜಾನ್‌ನ ಕಾರ್ಯತಂತ್ರಕ್ಕೆ ಒತ್ತಿಹೇಳುತ್ತದೆ" ಎಂದು ಹೇಳಿದ್ದಾರೆ.

ಬೆಜೋಸ್‌

ಇದಲ್ಲದೆ ಜಾಸ್ಸಿಯ ಹಿನ್ನೆಲೆ ನೋಡುವುದಾದರೆ ಅಮೆಜಾನ್‌ನ ವ್ಯವಹಾರ ತಂತ್ರಕ್ಕೆ ಇವರ ಸೇವೆಗಳು ಅಆದವಾಗಿವೆ. ಇದೇ ಕಾರಣಕ್ಕೆ ಜೆಫ್‌ ಬೆಜೋಸ್‌ ನಂತರ ಸಿಇಒ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬ ನಿರ್ಧಾರ ಅಮೆಜಾನ್‌.ಕಾಮ್‌ ನಿಂದ ಹೊರ ಬಿದ್ದಿದೆ. ಮುಂದಿನ ದಿನಗಳಲ್ಲಿ ಇವರ ಕಾರ್ಯತಂತ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಬೆಳೆಯುತ್ತಿರುವ ಜಾಹೀರಾತು ವ್ಯವಹಾರ ಮತ್ತು ವಾಣಿಜ್ಯ ಬೆಹೆಮೊಥ್‌ನೊಂದಿಗೆ ಆ ಆದ್ಯತೆಯನ್ನು ಸಮತೋಲನಗೊಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Best Mobiles in India

English summary
Amazon.com announced that CEO Jeff Bezos will step down from his position.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X