ಅಮೆಜಾನ್ ಡೆಲಿವರಿ ಬಾಯ್ ಆಗಿದ್ದ ಬಡ ಹುಡುಗ ಲಕ್ಷ ಆದಾಯದ ಸ್ವಂತ ಉದ್ಯಮ ಕಟ್ಟಿದ!!

|

ಒಂದು ಉದ್ಯಮ ವನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ದೃಡವಾದ ಮನಸ್ಸಿದ್ದರೆ ಓರ್ವ ಸಾಮಾನ್ಯನು ಕೂಡ ಏನನ್ನಾರೂ ಸಾಧಿಸಬಹುದು ಎಂದುಕ್ಕೆ ಅಮೆಜಾನ್‌ ಮಾಡಿ ಡೆಲಿವರಿ ಬಾಯ್‌ನ ಯಶೋಗಾಥೆ ಉದಾಹರಣೆಯಾಗಿದೆ. ತಿಂಗಳ ಸಂಬಳಕ್ಕೆ ಕೈ ಒಡ್ಡದೆ ತನ್ನದೆ ಒಂದು ಸಣ್ಣ ಉದ್ಯಮವನ್ನು ಸಾಧಿಸಿರುವ ಬಡ ಹುಡುಗನೋರ್ವನ ಯಶಸ್ಸು ಯುವಕರನ್ನು ಪ್ರೇರೇಪಿಸುವಂತಿದೆ.

ಹೌದು, ಜೈಪುರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ರಘುವೀರ್ ಸಿಂಗ್ ಚೌಧರಿ ಎಂಬ ಯುವಕನ ಯಶೋಗಾಥೆ ಇಂದು ನಮ್ಮ ಕಣ್ಣ ಮುಂದಿದೆ. ಶಿಕ್ಷಣ ಪಡೆಯಲು ಆಸೆಯಿದ್ದರೂ, ಸಹ ಬಡತನದ ಕಾರಣದಿಂದ ಶಿಕ್ಷನ ಪೂರೈಸಲು ಸಾಧ್ಯವಾಗದ ರಘುವೀರ್ ಸಿಂಗ್ ಚೌಧರಿ ಎಂದು ಮಹತ್ವಾಕಾಂಕ್ಷಿ ಇಂದು ಲಕ್ಷಕ್ಕೂ ಹೆಚ್ಚು ಹಣಗಳಿಸುವ ತನ್ನದೇ ಒಂದು ಉದ್ಯಮವನ್ನು ಸ್ಥಾಪಿಸಿ ಯುವಕರಿಗೆ ಮಾದರಿಯಾಗಿದ್ದಾನೆ.

ಅಮೆಜಾನ್ ಡೆಲಿವರಿ ಬಾಯ್ ಆಗಿದ್ದ ಬಡ ಹುಡುಗ ಲಕ್ಷ ಆದಾಯದ ಸ್ವಂತ ಉದ್ಯಮ ಕಟ್ಟಿದ!!

ಮಾಸಿಕ ವೇತನ ಕೇವಲ 9,000 ರೂಪಾಯಿಗಳಿಗೆ ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಘುವೀರ್ ಸಿಂಗ್ ಚೌಧರಿ ಅವರು ಈಗ ಯಶಸ್ಸಿನ ದಾರಿ ತುಳಿದಿದ್ದಾರೆ. ಒಂದು ಕಾಲದಲ್ಲಿ ಬೈಕ್ ಪೆಟ್ರೋಲ್ ಉಳಿಸುವ ಸಲುವಾಗಿ ಸೈಕಲ್‌ ಮೂಲಕ ಮನೆ ಮನೆಗೆ ವಸ್ತುಗಳನ್ನು ನೀಡುತ್ತಿದ್ದ ರಘುವೀರ್ ಅವರ ಇಂದಿನ ಜೀವನ ಸುಖಮಯವಾಗಿದೆ. ಹಾಗಾದರೆ, ಯಶಸ್ಸಿನ ಒಂದೊಂದೇ ಮೆಟ್ಟಿಲನ್ನೇರಿರುವ ರಘುವೀರ್ ಸಿಂಗ್ ಚೌಧರಿ ಅವರ ಕಥೆಯನ್ನೊಮ್ಮೆ ಕೇಳೋಣ ಬನ್ನಿ.

ಸಾಧನೆಗೆ ಸಮಸ್ಯೆ ಅಡ್ಡಿಯಾಗದು!

ಸಾಧನೆಗೆ ಸಮಸ್ಯೆ ಅಡ್ಡಿಯಾಗದು!

ಹೆಚ್ಚಿನ ಉದ್ಯಮಶೀಲತಾ ಸಾಹಸಗಳು ಅವಶ್ಯಕತೆಯಿಂದ ಜನಿಸುತ್ತವೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಗುರಿಯನ್ನು ಹೊಂದಿವೆ ಎಂದರೆ ತಪ್ಪಾಗಲಾರದು. ಇದೆ ಹಾದಿಯಲ್ಲಿ ರಘುವೀರ್ ಸಿಂಗ್ ಚೌಧರಿ ಅವರಿದ್ದರು. ಬದುಕಲು ಕೂಡ ಸಿಗದಷ್ಟು ಹಣದ ಕಷ್ಟದ ಪರಿಸ್ಥಿಯಲ್ಲಿದ್ದ ರಘುವೀರ್ ಸಿಂಗ್ ಚೌಧರಿ ಅವರು ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡು ತನ್ನದೇ ಚಿಕ್ಕದೊಂದು ಉದ್ಯಮ ಶುರು ಮಾಡಿ ಯಶಸ್ವಿಯಾದರು.

ಬೆಳೆಯುವ ಸಿರಿ ಮೊಳೆಕೆಯಲ್ಲಿ.

ಬೆಳೆಯುವ ಸಿರಿ ಮೊಳೆಕೆಯಲ್ಲಿ.

ಇಂದಿನ ತಾಂತ್ರಿಕ ಯುಗದಲ್ಲಿ ವಿಧ್ಯಾಭ್ಯಾಸ ಇಲ್ಲದಿದ್ದರೆ ಕಷ್ಟ ಅನ್ನುವುದು ನಿಜ. ಆದರೆ, ವಿಧ್ಯಾಭ್ಯಾಸವನ್ನು ಪಡೆಯದಿದ್ದರು ಸಹ ಅನುಭವವನ್ನೇ ವಿಧ್ಯೆಯನ್ನಾಗಿ ಪಡೆದ ರಘುವೀರ್ ಸಿಂಗ್ ಚೌಧರಿ ಅವರು ಸ್ವಂತ ಉದ್ಯಮದಲ್ಲಿ ಯಶಸ್ವಿಯಾದರು. ತನಗೆ ಸಿಕ್ಕ ಸಿಕ್ಕ ಸಂಬಳದಲ್ಲಿಯೇ ಸಾಕಷ್ಟು ಹಣ ಉಳಿಸಿದ ಅವರು ಸ್ವಂತ ಉದ್ಯಮಕ್ಕೆ ಸಜ್ಜಾಗಿ ನಿಂತರು. ಈಗ 'ಟೀ ಸ್ಟಾರ್ಟ್ ಆಪ್' ಒಂದನ್ನು ಶುರು ಮಾಡಿ ಬೆಳೆಯುವ ಸಿರಿ ಮೊಳೆಕೆಯಲ್ಲಿಯೇ ಎಂಬುದನ್ನು ಸಾಧಿಸಿ ತೋರಿದರು.

'ಟೀ ಸ್ಟಾರ್ಟ್ ಆಪ್' ಉದ್ಯಮ!

'ಟೀ ಸ್ಟಾರ್ಟ್ ಆಪ್' ಉದ್ಯಮ!

ಹೌದು, ನೀವು ಕೇಳುತ್ತಿರುವುದು ನಿಜ. ಇಂದು ರಘುವೀರ್ ಸಿಂಗ್ ಚೌಧರಿ ಅವರು ಸ್ವಂತ ಉದ್ಯಮ ಕಂಡುಕೊಂಡಿರುವುದು ಬಿದಿ ಬದಿಯಲ್ಲಿ ಮಾರುವ ಟೀ ಮಾರುವ ಯೋಜನೆಯಿಂದಲೇ. ಆದರೆ, ಇವರು ಮಾರುಕಟ್ಟೆಯನ್ನು ಬಲ್ಲಬರಾಗಿದ್ದರು. ಹಾಗಾಗಿ, ಯಾವುದೋ ಒಂದು ಸ್ಥಳದಲ್ಲಿ ಟೀ ಅಂಗಡಿಯನ್ನೇ ತೆರೆಯದೇ, ಟೀ ಡೆಲಿವರಿ ನೀಡುವ ಸ್ಟಾರ್ಟ್ಆಪ್ ಒಂದನ್ನು ಹುಟ್ಟುಹಾಕಿದರು. ಇಲ್ಲಿ ಅಮೆಜಾನ್ ಡೆಲಿವರಿ ಕೆಲಸ ಅವರಿಗೆ ಹೆಚ್ಚು ಅನುಭವವನ್ನು ನೀಡಿತು.

ಚಹಾ ಉದ್ಯಮ ಕಲ್ಪನೆ ಹುಟ್ಟಿದ್ದೇಗೆ?

ಚಹಾ ಉದ್ಯಮ ಕಲ್ಪನೆ ಹುಟ್ಟಿದ್ದೇಗೆ?

ರಘುವೀರ್ ಸಿಂಗ್ ಚೌಧರಿ ಅವರು ಅಮೆಜಾನ್ ಉತ್ಪನ್ನಗಳನ್ನು ವಿತರಿಸುವಾಗ ಚಹಾವನ್ನು ಸೇವಿಸುವ ಸೂಕ್ತ ತಾಣವನ್ನು ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ಜೊತೆಗೆ ಕೆಲ ಕಂಪೆನಿಗಳಲ್ಲಿ ಉತ್ತಮ ಚಹಾ ಸಿಗುವುದಿಲ್ಲ ಎಂಬ ಉದ್ಯೋಗಿಗಳ ಮಾತು ಅವರ ಕಿವಿಗೆ ಬಿದ್ದವು. ಇದನ್ನೇ ಅವಕಾಶವನ್ನಾಗಿ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿದ ರಘುವೀರ್ ತಾನು ಉಳಿಸಿದ ಹಣದಲ್ಲಿಯೇ ಸ್ನೇಹಿತರ ಸಹಾಯದಿಂದ 'ಟೀ ಸ್ಟಾರ್ಟ್ ಆಪ್' ಒಂದನ್ನು ಶುರು ಮಾಡಿದರು.

'ಟೀ ಸ್ಟಾರ್ಟ್ ಆಪ್' ಉದ್ಯಮ ಶುರು!

'ಟೀ ಸ್ಟಾರ್ಟ್ ಆಪ್' ಉದ್ಯಮ ಶುರು!

ತಾನು ಉಳಿಸಿದ ಹಣದಲ್ಲಿ ಜೈಪುರದಲ್ಲಿಯೇಒಂದು ಸ್ಥಳವನ್ನು ಬಾಡಿಗೆಗೆ ತೆಗೆದುಕೊಂಡ ರಘುವೀರ್ ಸಿಂಗ್ ಚೌಧರಿ, ತನ್ನ ಮೂವರ ಸ್ನೇಹಿತರ ಸಹಾಯದಿಂದ 'ಟೀ ಸ್ಟಾರ್ಟ್ ಆಪ್' ಅನ್ನು ಶುರು ಮಾಡಿದರು. ನಂತರ ಓರ್ವ ಯುವನನ್ನು ಕೆಲಸಕ್ಕೆ ಇಟ್ಟುಕೊಂಡ ರಘುವೀರ್ ದೂರವಾಣಿ ಮತ್ತು ವಾಟ್ಸ್‌ಆಪ್ ಮೂಲಕ ಚಹಾ ಡೆಲಿವರಿ ಮಾಡುವ ಕೆಲಸಕ್ಕೆ ಕೈ ಹಾಕಿ ಈಗ ಕೆಲವೇ ತಿಂಗಳುಗಳಲ್ಲಿ ಯಶಸ್ವಿಯಾಗಿದ್ದಾರೆ.

'ಟೀ ಸ್ಟಾರ್ಟ್ ಆಪ್' ಉದ್ಯಮ ಯಶಸ್ವಿ.

'ಟೀ ಸ್ಟಾರ್ಟ್ ಆಪ್' ಉದ್ಯಮ ಯಶಸ್ವಿ.

ದೂರವಾಣಿ ಮತ್ತು ವಾಟ್ಸ್‌ಆಪ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದ್ದ ರಘುವೀರ್ ಸಿಂಗ್ ಚೌಧರಿ ಅವರು, ಮೊದಲು 100 ಕ್ಕೂ ಹೆಚ್ಚು ಮಾರಾಟಗಾರರೊಂದಿಗೆ ಮಾತನಾಡಿ ಅವರಿಗೆ ಗುಣಮಟ್ಟದ ಚಹಾ ಪೂರಯಸಿದಾಗಿ ವಿನಂತಿಸಿಕೊಂಡರು. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಚಹಾವನ್ನು ನೀಡುವುದಾಗಿ ಕೆಲವು ಕಂಪೆನಿಗಳ ಬಳಿ ಒಪ್ಪಂದ ಮಾಡಿಕೊಂಡು ಟೀ ಪೂರೈಕೆ ಮಾಡಿದರು. ಮೊದಲು ಗ್ರಾಹಕರನ್ನು ಹುಡುಕುವುದು ಸ್ವಲ್ಪ ಕಷ್ಟವಾದರೂ, ನಂತರದ ದಿನಗಳಲ್ಲಿ ಚಹಾದ ಸ್ವಾದಿಷ್ಟಕ್ಕೆ ಕಂಪೆನಿಗಳು ಮನಸೋತವು.

ಲಕ್ಷಕ್ಕೂ ಹೆಚ್ಚು ಆದಾಯ!

ಲಕ್ಷಕ್ಕೂ ಹೆಚ್ಚು ಆದಾಯ!

ಈಗ ತನ್ನೇದೇ ಸ್ಟಾರ್ಟ್‌ಆಪ್ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಚಹಾವನ್ನು ನೀಡುತ್ತಿರುವ ರಘುವೀರ್ ಸಿಂಗ್ ಚೌಧರಿ ಅವರು ಈಗ ಲಕ್ಷಕ್ಕೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ಸ್ನೇಹಿತರನ್ನೂ ಸಹ ಉದ್ಯಮಕ್ಕೆ ಜೊತೆಗೂಡಿಸಿಕೊಂಡಿರುವಅವರ ಉದ್ಯಮದಲ್ಲಿ ಈಗ ಚಹಾ ವಿತರಣೆಗೆಂದೇ ನಾಲ್ಕು ಬೈಕುಗಳಿವೆ. ಪ್ರತಿದಿನ 500 ರಿಂದ 700 ಟೀ ಆರ್ಡರ್‌ಗಳನ್ನು ಅವರ ಚಹಾ ಕಂಪೆನಿ ಪಡೆದುಕೊಳ್ಳುತ್ತದೆ.

ಸಾಧಿಸುವ ಚಲಬೇಕಷ್ಟೆ!

ಸಾಧಿಸುವ ಚಲಬೇಕಷ್ಟೆ!

ಚಹಾ ಮಾರಿ ಉದ್ದಾರವಾಗಲು ಸಾಧ್ಯವಿವೇ ಎನ್ನುವವರಿಗೆ ರಘುವೀರ್ ಸಿಂಗ್ ಚೌಧರಿ ಮಾದರಿಯಾಗಿದ್ದಾರೆ. ಚಹಾ ಮಾರುವುದರಿಂದ ಹಣ ಸಂಪಾದನೆಯಾಗುತ್ತದೆ. ಆದರೆ, ಚಹಾವನ್ನು ಹೇಗೆ ಮಾರಬೇಕು ಎನ್ನುವ ಕಲೆ ಅವರನ್ನು ಉದ್ಯಮಿಯಾಗಿರಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿ, ನಾವು ಏನನ್ನೇ ಮಾಡಲು ಹೊರಟರೂ ಅದನ್ನು ಸಾಧಿಸುವ ಚಲ ಇರಬೇಕು. ಸಾಧಿಸುವ ಚಲವಿದ್ದರೆ, ಸಾಧನೆ ಎಂಬುದು ನಮ್ಮ ಕಾಲಿನ ಕೆಳಗೆ ಇರುತ್ತದೆ.

Best Mobiles in India

English summary
Raghuveer used to deliver packages for Amazon, and now has his own start-up, proving that hard work does pay off.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X