3 ದಿನಗಳ ಅಮೆಜಾನ್ ಫೆಸ್ಟಿವಲ್ ಸೇಲ್ ನಾಳೆಯಿಂದ ಆರಂಭ!!..ಏನೆನೆಲ್ಲಾ ಡಿಸ್ಕೌಂಟ್ಸ್?
ಅಮೆಜಾನ್ ಯಾವ ಯಾವ ಮಾದರಿಗಳಲ್ಲಿ ಏನೆಲ್ಲಾ ಆಫರ್ ನೀಡಿದೆ?
ಅಮೆಜಾನ್ ದಿ ಗ್ರೇಟ್ ಇಂಡಿಯನ್ ಸೇಲ್‌ನಂತರ ಅಮೆಜಾನ್ ಇದೀಗ ದಿವಾಲಿ ಬಿಗ್ ಸೇಲ್ ಅನ್ನು ಆಯೋಜಿಸಿದೆ!! ಈ ದಿವಾಲಿ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಉತ್ಪನ್ನಗಳ ಮೇಲೆ ಭಾರಿ ಆಫರ್ ನೀ ಡಲಾಗುವುದು ಎಂದು ಅಮೆಜಾನ್ ಹೇಳಿದೆ.!!
ಅಕ್ಟೋಬರ್ 14 ಅಂದರೆ ನಾಳೆಯಿಂದ ಅಮೆಜಾನ್ ಫೆಸಸ್ಟಿವಲ್ ಸೇಲ್ ಆರಂಭವಾಗಲಿದ್ದು, 30,000 ಕ್ಕಿಂತ ಹೆಚ್ಚು ಪ್ರಾಡೆಕ್ಟ್‌ಗಳ ಮೇಲೆ "ನೊ ಕಾಸ್ಟ್ ಇಎಮ್‌ಐ" ಆಫರ್ ಅನ್ನು ನೀಡಿದೆ. ಹಾಗಾದರೆ, ಅಮೆಜಾನ್ ಯಾವ ಯಾವ ಮಾದರಿಗಳಲ್ಲಿ ಏನೆಲ್ಲಾ ಆಫರ್ ನೀಡಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಮೊಬೈಲ್‌ಗಳ ಮೇಲೆ 40% ಡಿಸ್ಕೌಂಟ್ಸ್.!
ದಿವಾಲಿ ಬಿಗ್ ಸೇಲ್‌ನಲ್ಲಿ ಅಮೆಜಾನ್ ಮೊಬೈಲ್‌ಗಳ ಮೇಲೆ ಭಾರಿ ಕೊಡುಗೆ ನೀಡಲಿದ್ದು, ಮೊಬೈಲ್ ಮೇಲೆ 4O% ಡಿಸ್ಕೌಂಟ್ಸ್ ನೀಡುವುದಾಗಿ ಹೇಳಿದೆ.!! ಎಲ್ಲಾ ಮೊಬೈಲ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಈ ಡಿಸ್ಕೌಂಟ್ಸ್ ಇರಲಿದೆ ಎಂದು ತಿಳಿಸಿದೆ.!!

ಮೊಬೈಲ್ ಪರಿಕರಗಳಿಗೆ ಸೂಪರ್ ಆಫರ್!!
ಅಮೆಜಾನ್ ಮೊಬೈಲ್‌ಗಳ ಮೆಲೆ 40% ಪರ್ಸೆಂಟ್ ಡಿಸ್ಕೌಂಟ್ಸ್ ನೀಡಿದ್ದರೆ, ಮೊಬೈಲ್ ಪರಿಕರಗಳು ಇನ್ನು ಹೆಚ್ಚಿನ ಡಿಸ್ಕೌಂಟ್ಸ್ ಹೊಂದಿವೆ. ಮೊಬೈಲ್ ಬಿಡಿಭಾಗಗಳ ಮೇಲೆ 80 ಪರ್ಸೆಂಡ್ ಡಿಸ್ಕೌಂಟ್ಸ್ ನೀಡಿದ್ದು, ಬ್ಲೂಟೂತ್ ಮತ್ತು ಪವರ್‌ಬ್ಯಾಂಕ್‌ಗಳ ಮೇಲೆ ಕ್ರಮವಾಗಿ 20% ಮತ್ತು 60% ಡಿಸ್ಕೌಂಟ್ಸ್ ನೀಡುವುದಾಗಿ ತಿಳಿಸಿದೆ.!!

TV ಮತ್ತು ಲ್ಯಾಪ್‌ಟಾಪ್ ಮೇಲೂ ಆಫರ್!!
ಫೆಸ್ಟಿವಲ್ ಸೇಲ್‌ನಲ್ಲಿ ಟಿವಿಗಳ ಮೇಲೆ 40 ಪ್ರತಿಶತದಷ್ಟು ಆಫ್ ನಿರೀಕ್ಷಿಸಬಹುದು ಎಂದು ಅಮೆಜಾನ್ ಹೇಳಿದ್ದು, ಟಿವಿ ಖರೀದಿಸಲು ಈ ಮೂರು ದಿವಸಗಳು ಬೆಸ್ಟ್ ಎನ್ನಬಹುದು.!! ಡ್‌ಫೋನ್ ಮತ್ತು ಸ್ಪೀಕರ್‌ಳ ಮೇಲೆ 60 ಪ್ರತಿಶತ ಹಾಗೂ ಲ್ಯಾಪ್‌ಟಾಪ್‌ಗಳ ಮೇಲೆ 20000 ರೂ. ವರೆಗೂ ಡಿಸ್ಕೌಂಟ್ಸ್ ನೀಡುವುದಾಗಿ ಅಮೆಜಾನ್ ತಿಳಿಸಿದೆ.!!

ಯಾವ ಯಾವ ಬ್ರಾಂಡ್‌ಗಳ ಮೇಲೆ ಡಿಸ್ಕೌಂಟ್ಸ್?
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಶಿಯೋಮಿ, ಲೆನೊವೊ, ಒನ್‌ಪ್ಲಸ್, ಆಪಲ್, ಸ್ಯಾಮ್ಸಂಗ್, ಎಲ್‌ಜಿ, ಡೆಲ್, ಟೈಟಾನ್ ಮತ್ತು ಫಾಸ್ಟ್ರ್ಯಾಕ್‌ನಂತಹ ಬ್ರ್ಯಾಂಡ್ಗಳ ಮೇಲೆ ರಿಯಾಯಿ ನಿಡುವುದಾಗಿ ಅಮೆಜಾನ್ ತಿಳಿಸಿದೆ.!! ಅಮೆಜಾನ್ ಫೈರ್ ಟಿವಿ ಸ್ಟಿಕ್ ಬೆಲೆ ಸಹ ಕಡಿಮೆಯಾಗಲಿದೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.!!

ಅಮೆಜಾನ್ ಗೋಲ್ಡನ್ ಅವರ್ಸ್!!
ಅಮೆಜಾನ್ ಗೋಲ್ಡನ್ ಅವರ್ಸ್ ಡೀಲ್‌ಗಳನ್ನು ಸಹ ನೀಡಲಿದೆ, 8 ರಿಂದ 12 ಗಂಟೆಗೆ ವಿಶೇಷ ಕೊಡುಗೆಗಳು ಸಹ ಇರಲಿವೆ. ಇನ್ನು ಅಮೆಜಾನ್ ಪ್ರೈಮ್ ಗ್ರಾಹಕರು ವಿಶೇಷ ಆಫರ್‌ಗಳನ್ನು ನಿರೀಕ್ಷಿಸಬಹುದಾದರೂ ಸಹ ಈ ಬಗ್ಗೆ ಅಮೆಜಾನ್ ಯಾವುದೇ ಮಾಹಿತಿ ನೀಡಿಲ್ಲ.!!


Click it and Unblock the Notifications








