ಶೀಘ್ರವೇ ಅಮೆಜಾನ್ ಇಕೋದಲ್ಲಿ ಆಲ್ ಇಂಡಿಯಾ ರೆಡಿಯೋ..!

Written By: Lekhaka

ಅಮೆಜಾನ್ ಇಕೋ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಎಬ್ಬಿಸಿದೆ. ಈಗಾಗಲೇ ಇಕೋ ಹಲವಾರು ಸೇವೆಗಳನ್ನು ನೀಡುತ್ತಿದ್ದು, ಮೂಲಗಳ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಇಕೋದಲ್ಲಿ ಆಲ್ ಇಂಡಿಯಾ ರೆಡಿಯೋ ಪ್ರಸಾರವನ್ನು ಕೇಳಬಹುದು ಎನ್ನಲಾಗಿದೆ.

ಶೀಘ್ರವೇ ಅಮೆಜಾನ್ ಇಕೋದಲ್ಲಿ ಆಲ್ ಇಂಡಿಯಾ ರೆಡಿಯೋ..!

ಸರಕಾರಿ ಒಡೆತನಕ್ಕೆ ಸೇರಿರುವ ಆಲ್ ಇಂಡಿಯಾ ರೆಡಿಯೋ ಇನ್ನು ಮೂರರಿಂದ ಆರು ತಿಂಗಳ ಒಳಗಾಗಿ ಅಮೆಜಾನ್ ಇಕೋದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅಮೆಜಾನ್ ನಿರ್ಮಿಸಿರುವ ಈ ಇಕೋ ಸ್ಮಾರ್ಟ್ ಸ್ವೀಕರ್ ಈಗಾಗಲೇ ದೇಶ ವಿದೇಶಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಅಲೆಕ್ಸ್ ಎಂಬ ವಾಯ್ಸ್ ಅಸಿಸ್ಟೆಂಟ್ ಮೂಲಕ ಕಾರ್ಯನಿರ್ವಹಿಸುವ ಅಮೆಜಾನ್ ಇಕೋ ಈಗಾಗಲೇ ತನ್ನ ಕಾರ್ಯಚರಣೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಸಿದೆ. ಈ ಹಿನ್ನಲೆಯಲ್ಲಿ AIR ನೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ.

ಯಾರಿಗೂ ತಿಳಿದಿಲ್ಲ ಈ ಟ್ರಿಕ್: ಅಮೆಜಾನ್ ಪ್ರೈಮ್ ವಿಡಿಯೋ ಡೌನ್‌ಲೋಡ್ ಮಾಡಿ, ಸ್ನೇಹಿತರಿಗೂ ಹಂಚಿ..!

ಈಗಾಗಲೇ AIR ಮೊಬೈಲ್ ಆಪ್ ಬಿಡುಗಡೆಗೆ ಮಾಡಲು ಸಿದ್ಧತೆ ನಡೆಸಿದ್ದು, ಶೀಘ್ರವೇ ಇದು ಸಹ ಲಾಂಚ್ ಆಗಲಿದೆ. 20 ಲೈವ್ ರೆಡಿಯೋ ಚಾನಲ್ ಗಳನ್ನು ಇಲ್ಲಿ ಕೇಳಬಹುದಾಗಿದೆ. ಪ್ರಸಾರ ಭಾರತೀಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಈ ಸೇವೆಯು ಆರಂಭವಾಗಿದೆ.

ಈಗಾಗಲೇ ವಿಶ್ವದಲ್ಲದೇ ಅತೀ ಹೆಚ್ಚು ಸುದ್ದಿಯನ್ನು ಪ್ರಸಾರ ಮಾಡುವ ಪ್ಲಾಟ್ ಫಾರಂ ಎಂದು ಗುರುತಿಸಲಾಗಿದ್ದು, ಅತೀ ಹೆಚ್ಚು ಮಂದಿ AIR ಸೇವೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ತಲೆಮಾರಿಗೂ ರೆಡಿಯೋವನ್ನು ತಲುಪಿಸುವ ಸಲಯವಾಗಿ ಅಮೆಜಾನ್ ನೊಂದಿಗೆ ಕೈ ಜೋಡಿಸಲಿದೆ ಎನ್ನಲಾಗಿದೆ.

Read more about:
English summary
Amazon Echo Dot will soon get the All India Radio services, claims a new IANS report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot