ಅಕ್ಟೋಬರ್ 31ಕ್ಕೆ ಭಾರತದಲ್ಲಿ ಅಮೇಜ಼ಾನ್ 'ಅಲೆಕ್ಸಾ'!..ನೀವು ಖರೀದಿಸಲೇಬೇಕು!!?
ಸ್ಪೀಕರ್‌ಅನ್ನು ಸ್ಪರ್ಶಿಸದೇ ಕೇವಲ "ಅಲೆಕ್ಸಾ" ಎಂದು ಹೇಳುವುದರ ಮೂಲಕ ಸ್ಪೀಕರ್‌ಗಳನ್ನು ಆಕ್ಟಿವೇಟ್ ಮಾಡಬಹುದಾಗಿದೆ.!!
ಇದೇ ಅಕ್ಟೋಬರ್ 31, 2017 ರಿಂದು ಭಾರತದಲ್ಲಿ ಅಮೇಜ಼ಾನ್ 'ಅಲೆಕ್ಸಾ' ಸ್ಪೀಕರ್ ಮಾರಾಟ ಪ್ರಾರಂಭವಾಗಲಿದ್ದು, ಭಾರತೀಯರು ಕುತೋಹಲದಿಂದ ಕಾಯುತ್ತಿದ್ದಾರೆ.! ಪ್ರಪಂಚದೆಲ್ಲೆಡೆ ಯಶಸ್ವಿಯಾಗಿರುವ ಅಮೇಜ಼ಾನ್‍ನ ವರ್ಚುವಲ್ ಅಸಿಸ್ಟಂಟ್ 'ಅಲೆಕ್ಸಾ' ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ಇದೀಗ ಭಾರತೀಯರಿಗೆ ಲಭ್ಯವಾಗುತ್ತಿವೆ.!!
ಸಾಮಾನ್ಯ ಜನರು ನಿಬ್ಬೆರಗಾಗುವಷ್ಟು ಸೇವೆಗಳನ್ನು 'ಅಲೆಕ್ಸಾ' ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗ ನೀಡಲಿವೆದ್ದು, ಸ್ಪೀಕರ್‌ಅನ್ನು ಸ್ಪರ್ಶಿಸದೇ ಕೇವಲ "ಅಲೆಕ್ಸಾ" ಎಂದು ಹೇಳುವುದರ ಮೂಲಕ ಸ್ಪೀಕರ್‌ಗಳನ್ನು ಆಕ್ಟಿವೇಟ್ ಮಾಡಬಹುದಾಗಿದೆ.!!ಹಾಗಾದರೆ, ಅಮೆಜಾನ್ ಹೊರತಂದಿರುವ ನೂತನ ಎಕೊ ಸ್ಪೀಕರ್ ಏನೆಲ್ಲಾ ತಂತ್ರಜ್ಞಾನವನ್ನು ಹೊಂದಿದೆ.? ಜನರು ಈ ಸ್ಪೀಕರ್‌ಗೆ ನಿಬ್ಬೆರಗಾಗಿರುವುದು ಏಕೆ? ಈ ಸ್ಪೀಕರ್ ಫೀಚರ್ಸ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಧ್ವನಿ-ಸಕ್ರಿಯ ಸ್ಮಾರ್ಟ್ ಅಸಿಸ್ಟಂಟ್!!
ಅಮೇಜ಼ಾನ್ ಎಕೊ ಒಂದು ಧ್ವನಿ-ಸಕ್ರಿಯ ಸ್ಮಾರ್ಟ್ ಅಸಿಸ್ಟಂಟ್ ಆಗಿದೆ. ಅಲೆಕ್ಸಾ ಸಹಾಯದಿಂದ ಎಕೊ ಸ್ಪೀಕರ್‌ಗಳು ಬಹಳಷ್ಟು ಕೆಲಸಗಳನ್ನು ಸರಾಗವಾಗಿ ನಡೆಸುತ್ತವೆ.!! ಆಂಡ್ರಾಯ್ಡ್‌ನ 'ಗೂಗಲ್ ನೌ' ಮತ್ತು ಐಫೋನಿನ 'ಸಿರಿ' ಮತ್ತು ವಿಂಡೋಸಿನ 'ಕೊರ್ಟಾನಾ' ಇದ್ದಂತೆ. ಅಮೇಜ಼ಾನ್ ಅಲೆಕ್ಸಾ ಹಲವು ಕೆಲಸಗಳನ್ನು ಮಾಡಬಲ್ಲದು.

ಸುದ್ದಿ ಓದುತ್ತದೆ, ಕಾಲ್ ಮಾಡುತ್ತದೆ.!!
ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ಭಿವಿಷ್ಯದ ಟೆಕ್ನಾಲಿಜಿಯನ್ನು ಹೊಂದಿದ್ದು, ಒಂದೇ ಸ್ಪೀಕರ್‌ನಲ್ಲಿ ಹಲವು ಕಾರ್ಯಗಳನ್ನು ನಡೆಸಬಹುದಾಗಿದೆ. ಸ್ಪೀಕರ್‌ಗಳು ಸುದ್ದಿ ಓದುತ್ತದೆ, ಕಾಲ್ ಮಾಡುತ್ತದೆ, ಸಂಚಾರ ಮತ್ತು ಹವಾಮಾನ ವರದಿ ಮಾಡುತ್ತವೆ, ಕ್ರೀಡಾ ಸ್ಕೋರ್ ಮತ್ತು ವೇಳಾಪಟ್ಟಿಗಳನ್ನು ಒದಗಿಸುತ್ತದೆ ಜೊತೆಗೆ ಫೈರ್ ಟಿವಿಯಲ್ಲಿ ಅಮೆಜಾನ್ ವೀಡಿಯೊವನ್ನು ಸಹ ನಿಯಂತ್ರಿಸುತ್ತದೆ.!!

ಸ್ಪೀಕರ್‌ಗಳಿಗೆ ನಿಬ್ಬೆರಗಾಗಿದ್ದಾರೆ ಎಲ್ಲರೂ!!
ಎಕೊ ಮತ್ತು ಎಕೊ ಡಾಟ್ ಸ್ಪೀಕರ್‌ಗಳು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಎಲ್ಲರೂ ನಿಬ್ಬರಗಾಗಿರುವುದಕ್ಕೆ ಹಲವು ಕಾರಣಗಳಿವೆ. 360 ಡಿಗ್ರಿಯಲ್ಲಿ ಶಬ್ದ ಹೊರಡಿಸುವ ಎಕೊ ಸ್ಪೀಕರ್ ವೂಫರ್ ಅನ್ನು ಹೊಂದಿದೆ.ಬ್ಲೂಟೂತ್ ಮತ್ತು ವೈಫೈಗೆ ಕನೆಕ್ಟ್ ಆಗುವ ಈ ಸ್ಪೀಕರ್ ಅಲೆಕ್ಸಾ ಮೂಲಕ ಕಾಯನಿರ್ವಹಣೆ ನೀಡಲಿದೆ.!!

ಟಿವಿ, ಬಾಗಿಲು ಎಲ್ಲವೂ ಕಂಟ್ರೂಲ್!!
ಟಿವಿಗಳು, ಸ್ವಿಚ್‌ಗಳು, ಥರ್ಮೋಸ್ಟಾರ್ಟ್‌ಗಳು, ಗ್ಯಾರೇಜ್ ಬಾಗಿಲುಗಳು, ಬೀಗ ಎಲ್ಲವನ್ನು ನಿಯಂತ್ರಿಸಲು ತಂತ್ರಜ್ಞಾನ ಒಂದೆ ಸ್ಪೀಕರ್‌ನಲ್ಲಿ ಅಡಕವಾಗಿದೆ. ಹೆಚ್ಚಿನವುಗಳನ್ನು ಈಗಾಗಲೇ ಅಮೇಜ಼ಾನ್ ಭಾರತದ ಕೆಲವು ನೌಕರರು ಎಕೊ ಮತ್ತು ಅಲೆಕ್ಸಾವನ್ನು ಭಾರತದಲ್ಲಿ ಪರೀಕ್ಷಿಸುತ್ತಿದ್ದಾರೆ.!!

ಭಾಷೆ ಕಾರ್ಯನಿರ್ವಹಣೆ?
ಎಕೊ ಸ್ಪೀಕರ್‌ನಲ್ಲಿ ಅಡಕವಾಗಿರುವ ಅಲೆಕ್ಸಾ ಸದ್ಯಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹಿಂದಿ ಮತ್ತಿತರ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ತಜ್ನರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಯಾವ ಯಾವ ಭಾಷೆಗಳಿಗೆ ಭವಿಷ್ಯದಲ್ಲಿ ಅಲೆಕ್ಸಾ ಸಪೋರ್ಟ್ ಆಗಲಿದೆ ಎಂದು ಹೇಳಲು ಸಾಧ್ಯವಿಲ್ಲ.!!


Click it and Unblock the Notifications








