ಈ ದೀಪಾವಳಿಗಾಗಿ ಅಮೆಜಾನ್‌ನಿಂದ ಬಂಪರ್ ಉತ್ಪನ್ನ

By: Shwetha PS

ನಮಗೆಲ್ಲಾ ಈಗಾಗಲೇ ತಿಳಿದಿರುವಂತೆ ಅಮೆಜಾನ್, ಭಾರತವನ್ನು ವಿಶ್ವದ ತನ್ನ ಮಾರುಕಟ್ಟೆಗಳಲ್ಲಿ ಒಂದು ಎಂಬುದಾಗಿ ಮಾನ್ಯತೆಯನ್ನು ನೀಡಿದೆ. ಅದಕ್ಕನುಗುಣವಾಗಿ ಇಲ್ಲಿನ ಬಳಕೆದಾರರಿಗೆ ತಕ್ಕಂತಹ ನವೀನ ಉತ್ಪನ್ನಗಳನ್ನು ಅದು ಮಾರುಕಟ್ಟೆಗೆ ಲಾಂಚ್ ಮಾಡಿದೆ ಕೂಡ. ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಫೈರ್ ಟಿವಿ ಡಾಂಗಲ್ ಅನ್ನು ಭಾರತದಲ್ಲಿ ಲಾಂಚ್ ಮಾಡಿ ಉತ್ಪನ್ನಗಳು ಯಶಸ್ಸನ್ನು ಕಂಡುಕೊಂಡಿವೆ.

ಈ ದೀಪಾವಳಿಗಾಗಿ ಅಮೆಜಾನ್‌ನಿಂದ ಬಂಪರ್ ಉತ್ಪನ್ನ

ಈಗ ಅಮೆಜಾನ್ ಸ್ಮಾರ್ಟ್ ಹೋಮ್ ಸ್ಪೀಕರ್ ಮಾರ್ಕೆಟ್ ಮೇಲೆ ತನ್ನ ದೃಷ್ಟಿಯನ್ನು ಇರಿಸಿದೆ. ಈ ವರ್ಷದ ಕೊನೆಯಲ್ಲಿ ಭಾರತದಕ್ಕೆ ಅಮೆಜಾನ್ ತನ್ನ ಇಕೋ ಸಿಸ್ಟಮ್ ಹೋಮ್ ಸ್ಪೀಕರ್ ಅನ್ನು ಪ್ರಾಯೋಜಿಸಲಿದೆ. ಇದರೊಂದಿಗೆ ಅಲೆಕ್ಸಾ ವಾಯ್ಸ್ ಸರ್ವೀಸ್ ಕೂಡ ಭಾರತಕ್ಕೆ ಜೊತೆಯಾಗಿ ಕಾಲಿಡಲಿದೆ.

ಅಮೆಜಾನ್ ಇಕೋ ಸಿಸ್ಟಮ್ ವಿಶೇಷತೆಗಳನ್ನು ಒಳಗೊಂಡಿದ್ದು ಆಂಡ್ರಾಯ್ಡ್ ಸೆಂಟ್ರಲ್ ಈ ಕುರಿತು ಸುದ್ದಿಯನ್ನು ಬಿತ್ತರಿಸಿದೆ. ಇದರ ಬೆಲೆ ರೂ 11,000 ದಿಂದ 12,000 ವೆಂದು ಅಂದಾಜಿಸಲಾಗಿದ್ದು ಯುಎಸ್‌ನ ಬೆಲೆಗೆ ಸಮಾನವಾಗಿದೆ. ಸಣ್ಣ ಇಕೋ ಡಾಟ್ ಬೆಲೆ ರೂ 5,000 ದಿಂದ 6,000 ದವರೆಗೆ ಎಂಬುದಾಗಿ ಅಂದಾಜಿಸಲಾಗಿದೆ.

ಹೋಟೆಲ್‌ ಬಿಲ್‌ನಲ್ಲಿ GST ಸೇರಿಸಿ ಪಾವತಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ.!

ಸ್ಥಳೀಯ ಭಾಷೆಯನ್ನು ಅಮೆಜಾನ್ ಅಲೆಕ್ಸಾಗಾಗಿ ಸೇರಿಸುತ್ತಿದ್ದು ಇದು ಧ್ವನಿ ಆಧಾರಿತ ಸಹಾಯಕವಾಗಿದೆ. ಸ್ಥಳೀಯ ಭಾಷೆಗಳಾದ ಹಿಂದಿ, ತಮಿಳನ್ನು ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಭಾಷೆಗಳನ್ನು ಇದಕ್ಕೆ ಸೇರಿಸುವ ಇರಾದೆಯನ್ನು ಅಮೆಜಾನ್ ಹೊಂದಿದೆ.

ಸಂಸ್ಥೆಯು ಈ ಉತ್ಪನ್ನವನ್ನು ಅಕ್ಟೋಬರ್ ಮಾಸದಲ್ಲಿ ದೀಪಾವಳಿಯಂದು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈ ಸಂದರ್ಭದಲ್ಲಿ ಹಬ್ಬದ ಮಾರಾಟ ಮೇಳ ಆರಂಭವಾಗಲಿದ್ದು ಬಳಕೆದಾರರು ಹೊಸ ಉತ್ಪನ್ನವನ್ನು ಎದುರು ನೋಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಈ ಉತ್ಪನ್ನ ಅವರಿಗೆ ಹಬ್ಬದ ಉಡುಗೊರೆಯಾಗಿದೆ ಎಂಬುದಾಗಿ ಕಂಪೆನಿ ಹೇಳಿಕೊಂಡಿದೆ.

Read more about:
English summary
Amazon Echo, the smart home speaker could be released in India sometime in October at a price point of Rs. 12,000.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot