ಅಮೆಜಾನ್‌ನಿಂದ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆ! ಬೆಲೆ 4,999ರೂ.

|

ಟೆಕ್‌ಲೋಕದಲ್ಲಿ ಈಗಾಗ್ಲೆ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿರುವಂತೆ ವಾಯರ್‌ ಲೆಸ್‌ ಸ್ಪೀಕರ್‌ಗಳ ಮಾರಾಟ ಕೂಡ ಜೋರಾಗಿಯೇ ಇದೆ. ಬಾರಿ ಗಾತ್ರದಲ್ಲಿ ಬರುತ್ತಿದ್ದ ಸ್ಪೀಕರ್‌ಗಳೆಲ್ಲಾ ಇದೀಗ ಸ್ಮಾರ್ಟ್‌ ಆಗಿ ಸಾಮಾನ್ಯ ಗಾತ್ರದಲ್ಲಿ ಬಂದಿರೋದು ಗೊತ್ತೇ ಇದೆ. ಇದೀಗ ಅಮೆಜಾನ್‌ ಕಂಪೆನಿ ತನ್ನ ಸ್ಪೀಕರ್‌ ಸಿಸ್ಟಮ್‌ ಅನ್ನ ಸುಧಾರಿಸಿದ್ದು ಅಮೆಜಾನ್‌ ಎಕೋ ಇನ್‌ಪುಟ್‌ ಪೋರ್ಟಬಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಕಂಪೆನಿಯು ಹೊಸದಾಗಿ ಎಕೋ ಇನ್‌ಪುಟ್‌ ಸಿಸ್ಟಂ ಅನ್ನು ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದೆ. ಹ್ಯಾಂಡ್ಸ್-ಫ್ರೀ ಸ್ಪೀಕರ್‌ ಆಗಿರೋ ಈ ಹೊಸ ಪ್ರಾಡಕ್ಟ್‌ ಯಾವೆಲ್ಲಾ ವಿನ್ಯಾಸವನ್ನ ಒಳಗೊಂಡಿದೆ. ಈ ಹೊಸ ಸ್ಮಾರ್ಟ್ ಸ್ಪೀಕರ್ ಅಮೆಜಾನ್ ಎಕೋ ಇನ್‌ಪುಟ್‌ ಪೋರ್ಟಬಲ್ ನಲ್ಲಿ ಅಲೆಕ್ಸಾ ಅಸಿಸ್ಟೆಂಟ್‌ ಇದ್ದು ಧ್ವನಿ ಸಂಕೇತದ ಮೂಲಕವೆ ಇದನ್ನ ನಿರ್ವಹಣೆ ಮಾಡಬಹುದಾಗಿದೆ.

ಆಡಿಯೊ

ಅಲ್ಲದೆ ಇದರಿಂದ 360 ಡಿಗ್ರಿ ವ್ಯಾಪ್ತಿಯಲ್ಲೂ ಆಡಿಯೊ ಅನುಭವವನ್ನು ಕೇಳಬಹುದಾಗಿದೆ. ಜೊತೆಗೆ ಇದರಲ್ಲಿರೋ ಅಲೆಕ್ಸಾ ಅಸಿಸ್ಟೆಂಟ್‌ ನಿಂದ ಸಂಭಾಷಣೆ ನಡೆಸಬಹುದಾಗಿದ್ದು ಇದಕ್ಕಾಗಿ ಸ್ಮಾರ್ಟ್ ಸ್ಪೀಕರ್ ನಾಲ್ಕು ಮೈಕ್ರೊಫೋನ್‌ಗಳನ್ನ ಒಳಗೊಂಡಿದೆ. ಇನ್ನು ಇದರಲ್ಲಿ ಹಾಡನ್ನು ಕೇಳುವುದರ ಜೊತೆಗೆ, ಇತ್ತೀಚಿನ ಸುದ್ದಿ ಅಥವಾ ಹವಾಮಾನ ಎಚ್ಚರಿಕೆಗಳನ್ನು ಕೇಳುವ ಅವಕಾಶವನ್ನು ಸಹ ಇದರಲ್ಲಿ ನೀಡಲಾಗಿದೆ.

 ಸ್ಪೀಕರ್‌

ಅಷ್ಟೇ ಅಲ್ಲ ವಾತಾವರಣದ ಬದಲಾವಣೆಗೆ ಅನುಗುಣವಾಗಿ ಈ ಸ್ಮಾರ್ಟ್‌ ಸ್ಪೀಕರ್‌ ಧ್ವನಿ ಆಜ್ಞೆಗಳನ್ನು ನೀಡುವ ಮೂಲಕ ಅಲಾರಂ ಬಾರಿಸುತ್ತದೆ. ಅಲ್ಲದೆ ಧ್ವನಿ ಸಂಕೇತಗಳನ್ನ ಎಕೋ ಇನ್‌ಪುಟ್‌ ಪೋರ್ಟಬಲ್‌ಗೆ ನೀಡುವ ಮೂಲಕ ಗ್ರಾಹಕರು ತಮ್ಮ ಸ್ಮಾರ್ಟ್ ಹೋಮ್ ಸಾಧನಗಳಾದ ಸ್ಮಾರ್ಟ್ ದೀಪಗಳು ಅಥವಾ ಪ್ಲಗ್‌ಗಳನ್ನು ಕೂಡ ಕುಳಿತಲ್ಲಿಯೇ ನಿಯಂತ್ರಿಸಬಹುದಾಗಿದೆ.

ಸ್ಮಾರ್ಟ್‌

ಜೊತೆಗೆ ಈ ಸ್ಮಾರ್ಟ್‌ ಸ್ಪೀಕರ್‌ ಅಮೆಜಾನ್ ಪ್ರೈಮ್ ಮ್ಯೂಸಿಕ್, ಆಪಲ್ ಮ್ಯೂಸಿಕ್, ಜಿಯೋ ಸಾವ್ನ್, ಗಾನಾ, ಮತ್ತು ಹಂಗಮಾ ಮ್ಯೂಸಿಕ್‌ನಂತಹ ಸೇವೆಗಳಿಂದ ಸಂಗೀತವನ್ನು ಸ್ಟ್ರೀಮ್ ಮಾಡಲು ಅವಕಾಶ ಕಲ್ಪಿಸಿದೆ. ಅಲ್ಲದೆ ಮಕ್ಕಳಿಗೆ ಸಂಬಂಧಿಸಿದ ಆಡಿಯೊ ಪುಸ್ತಕಗಳ ಸಂಭಾಷಣೆ ಕೇಳುವ ಅವಕಾಶವನ್ನು ಸಹ ನೀಡಿದೆ. ಆಡಿಯೊವನ್ನು ವೈರ್‌ಲೆಸ್ ಸ್ಪೀಕರ್‌ಗಳಿಗೆ ಸ್ಟ್ರೀಮ್ ಮಾಡಲು ಬ್ಲೂಟೂತ್ ಸಂಪರ್ಕವೂ ಕೂಡ ನೀಡಿದೆ.

ಇನ್‌ಪುಟ್‌

ಅಮೆಜಾನ್‌ ಎಕೋ ಇನ್‌ಪುಟ್‌ ಪೋರ್ಟಬಲ್‌ ಸ್ಪೀಕರ್‌ 4,800mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು. ಒಂದೇ ಚಾರ್ಜ್‌ನಲ್ಲಿ 10 ಗಂಟೆಗಳ ನಿರಂತರ ಸಂಗೀತ ಪ್ಲೇಬ್ಯಾಕ್ ಅನ್ನು ಕೇಳಬಹುದಾಗಿದೆ. ಇನ್ನು ಸ್ಪೀಕರ್‌ನಲ್ಲಿ ಆಡಿಯೋ ಸೌಂಡ್‌ ಹೆಚ್ಚಿಸೋದಕ್ಕೆ ಇಲ್ಲವೇ ಕಡಿಮೆ ಮಾಡೋದಕ್ಕೆ ಇದರಲ್ಲಿ ಪವರ್ ಬಟನ್ ನೀಡಲಾಗಿದೆ. ಇದಲ್ಲದೆ, ಆನ್ಬೋರ್ಡ್ ಮೈಕ್ರೊಫೋನ್ಗಳನ್ನು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮ್ಯೂಟ್ ಬಟನ್ ಲಭ್ಯವಿದೆ.

ಚಾರ್ಜ್

ಇನ್ನು ಎಕೋ ಇನ್ಪುಟ್ ಪೋರ್ಟಬಲ್ ಅನ್ನು ಚಾರ್ಜ್ ಮಾಡಲು ಅಮೆಜಾನ್ ಮೈಕ್ರೋ-ಯುಎಸ್ಬಿ ಪೋರ್ಟ್ ಅನ್ನು ಒದಗಿಸಿದೆ. ಸದ್ಯ ಈ ಸ್ಮಾರ್ಟ್‌ ಸ್ಪೀಕರ್‌ ಕಪ್ಪು ಬಣ್ಣದ ವಿನ್ಯಾಸದಲ್ಲಿ ಲಭ್ಯವಿದ್ದು, ಇದರ ಪ್ರಾಂರಭಿಕ ಬೆಲೆ 4,999 ರೂ ಇರಲಿದೆ. ಅಮೆಜಾನ್ ಇಂಡಿಯಾ ಸೈಟ್ ಮೂಲಕ ಗ್ರಾಹಕರು ಸ್ಮಾರ್ಟ್ ಸ್ಪೀಕರ್ ಅನ್ನು ಮೊದಲೇ ಆರ್ಡರ್ ಮಾಡಬಹುದಾಗಿದ್ದು ಇದೇ ಡಿಸೆಂಬರ್ 18 ರಿಂದ ಮಾರಾಟಕ್ಕೆ ಲಭ್ಯವಿರಲಿದೆ.

Most Read Articles
Best Mobiles in India

English summary
Amazon Echo Input Portable, a new smart speaker that is designed to deliver hands-free Alexa access on-the-move, has been launched in India. With looks similar to the existing Echo speakers, the Echo Input Portable is touted to deliver 360-degree audio experience to customers alongside offering far-field voice recognition.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X