ಭಾರತಕ್ಕೆ ಎಂಟ್ರಿ ನೀಡಿದ ಅಮೆಜಾನ್‌ ಎಕೋ ಶೋ8 ಸ್ಮಾರ್ಟ್‌ ಸ್ಪೀಕರ್‌!

|

ಪ್ರಸ್ತುತ ಟೆಕ್‌ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಸ್ಪೀಕರ್‌ಗಳು ಲಭ್ಯವಿದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಂತೆಯೆ ಸ್ಮಾರ್ಟ್‌ ಸ್ಪೀಕರ್‌ ಮಾರುಕಟ್ಟೆಯಲ್ಲೂ ಬಾರಿ ಡಿಮ್ಯಾಂಡ್‌ ಇದ್ದು, ಈಗಾಗ್ಲೆ ಹಲವು ಕಂಪೆನಿಗಳು ತಮ್ಮ ಸ್ಮಾರ್ಟ್‌ ಸ್ಪೀಕರ್‌ಗಳನ್ನ ಪರಿಚಯಿಸಿವೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೈವಿಧ್ಯಮಯ ಸ್ಮಾರ್ಟ್‌ಸ್ಪೀಕರ್‌ಗಳು ಲಭ್ಯವಿದ್ದರೂ ಸಹ ಗ್ರಾಹಕರು ನೆಚ್ಚಿನ ಬ್ರ್ಯಾಂಡ್‌ ಸ್ಪೀಕರ್‌ ಅನ್ನೇ ಖರೀದಿಸುತ್ತಾರೆ. ಸದ್ಯ ಇದೀಗ ಅಮೆಜಾನ್‌ ಕಂಪೆನಿ ತನ್ನ ಹೊಸ ಅಮೆಜಾನ್‌ ಎಕೋ ಶೋ 8 ಸ್ಮಾರ್ಟ್‌ಸ್ಪೀಕರ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು, ಅಮೆಜಾನ್ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಸ್ಪೀಕರ್‌ ಎಕೋ ಶೋ 8 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಸ್ಪೀಕರ್ ನಲ್ಲಿ ಬಳಕೆದಾರರು ಸಂಗೀತ, ಸುದ್ದಿ ಸಂಕ್ಷಿಪ್ತತೆ, ಸ್ಪೋರ್ಟ್ಸ್‌ ಹೈಲೆಟ್ಸ್‌ ಅನ್ನು ಕೇಳಬಹುದು ಹಾಗೂ ವೀಕ್ಷಿಸಬಹುದು. ಜೊತೆಗೆ ಹ್ಯಾಂಡ್ಸ್-ಫ್ರೀ ಕರೆಗಳನ್ನು ಸಹ ಮಾಡಬಹುದು. ಇದಲ್ಲದೆ ನಿಮ್ಮ ನೆಚ್ಚಿನ ಶೋಗಳನ್ನ ಅಮೆಜಾನ್ ಪ್ರೈಮ್ ವಿಡಿಯೋ, ವೂಟ್ ನಲ್ಲಿ ನೀವು ವೀಕ್ಷಿಸಲು ಅಥವಾ ಹುಡುಕಲು ಇದರಲ್ಲಿ ಅಲೆಕ್ಸಾ ಬೆಂಬಲವನ್ನು ಪಡೆಯಬಹುದಾಗಿದ್ದು, ಇದು ಅಲೆಕ್ಸಾವನ್ನ ಬೆಂಬಲಿಸಲಿದೆ.

ಅಮೆಜಾನ್‌

ಅಮೆಜಾನ್‌ ಎಕೋ ಶೋ 8, 8 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಸ್ಮಾರ್ಟ್ ಸ್ಪೀಕರ್ ಸ್ಟಿರಿಯೊ ಸೌಂಡ್ ಅನ್ನು ಸಹ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ ಸ್ಪೀಕರ್‌ ವೀಡಿಯೊ ಕರೆ ಮತ್ತು ಸಂದೇಶ ಕಳುಹಿಸುವಿಕೆಯನ್ನು ಸಹ ಬೆಂಬಲಿಸುತ್ತದೆ. ಆದರೆ ಎಕೋ ಶೋ ಬಳಕೆದಾರರು ಸ್ಕೈಪ್, ಅಥವಾ ಅಲೆಕ್ಸಾ ಅಪ್ಲಿಕೇಶನ್ ಹೊಂದಿರುವ ಸ್ನೇಹಿತರು ಮತ್ತು ಕುಟುಂಬದ ಜೊತೆ ಮಾತ್ರ ವೀಡಿಯೊ ಕರೆಗಳನ್ನು ಮಾಡಬಹುದಾಗಿದೆ.

ಸ್ಪೀಕರ್

ಇದಲ್ಲದೆ ಈ ಸ್ಮಾರ್ಟ್ ಸ್ಪೀಕರ್ ಮೂಲಕ, ನಿಮ್ಮ ಸ್ಮಾರ್ಟ್ ಮನೆಯನ್ನು ನೀವು ನಿಯಂತ್ರಿಸಬಹುದು. ಅಲ್ಲದೆ ಮನೆಯೊಳಗಿರುವ ಸೆಕ್ಯೂರಿಟಿ ಕ್ಯಾಮೆರಾಗಳು ಹಾಗೂ ಸ್ಮಾರ್ಟ್‌ಬಲ್ಬ್‌ಗಳನ್ನ ಸಹ ನಿಯಂತ್ರಿಸಬಹುದಾಗಿದೆ. ಜೊತೆಗೆ ಗೀಸರ್ ಅಥವಾ ಎಸಿಯನ್ನು ಬದಲಾಯಿಸಲು ಎಕೋ ಶೋ ನಲ್ಲಿ ಅಲೆಕ್ಸಾವನ್ನು ಕೇಳಿದರೆ ಅದು ಬದಲಾಯಿಸುತ್ತದೆ. ಇನ್ನು ಮೈಕ್ರೊಫೋನ್ ಮತ್ತು ಕ್ಯಾಮೆರಾವನ್ನು ಸಹ ಸ್ಮಾರ್ಟ್‌ ಸ್ಪೀಕರ್‌ ಮೂಲಕ ಸಂಪರ್ಕ ಕಡಿತಗೊಳಿಸುವಂತೆ ಮಾಡಬಹುದಾಗಿದೆ.

ಸ್ಮಾರ್ಟ್‌

ಅಮೆಜಾನ್‌ ಎಕೋ ಶೋ 8 ಸ್ಮಾರ್ಟ್‌ ಸ್ಪೀಕರ್‌ ಪ್ರಸ್ತುತ ಜಮಾನಕ್ಕೆ ತಕ್ಕಂತೆ ವಿನ್ಯಾಸಗೊಂಡಿದ್ದು, ಹೊಸ ಮಾದರಿಯ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇದು ಸಂಗೀತದ ಅಲಾಪನೆಯಾಗಲಿ, ವಿಡಿಯೋ ಕರೆಗಳ ಅನುಭವವಾಗಲಿ ಸದಾ ಉತ್ತಮವಾಗಿರುವಂತೆ ನೋಡಿಕೊಳ್ಳಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಇತರೆ ಸ್ಮಾರ್ಟ್‌ ಸ್ಪಿಕರ್‌ಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದ್ದು ಅಲೆಕ್ಸಾ,ವನ್ನು ಬೆಂಬಲಿಸಲಿದೆ.

ಅಮೆಜಾನ್

ಸದ್ಯ ಈ ಸ್ಮಾರ್ಟ್‌ಸ್ಪೀಕರ್‌ ಬೆಲೆ 8,999 ರೂ. ಆಗಿದ್ದು, ಅಮೆಜಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಮೊದಲೇ ಬುಕ್ ಮಾಡಬಹುದಾಗಿದೆ. ಕಂಪನಿಯು ಫೆಬ್ರವರಿ 26, 2020 ರಿಂದ ತನ್ನ ಹೊಸ ಸ್ಮಾರ್ಟ್ ಸ್ಪೀಕರ್ ಅನ್ನು ಮಾರಾಟ ಮಾಡಲಿದ್ದು, ಉತ್ತಮ ಸ್ಟಿರಿಯೊ ಸೌಂಡ್ ಮತ್ತು ಸ್ಪೀಕರ್‌ ಅನ್ನು ಒಳಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆ ಇದೆ.

Most Read Articles
Best Mobiles in India

English summary
The Amazon Echo Show 8 smart speaker is priced at Rs 8,999 in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X