ನಿಮ್ಮ ಮನೆಯಲ್ಲಿ ಅಮೆಜಾನ್ ಕ್ಲೌಡ್ ಕ್ಯಾಮ್ ಇದೆಯಾ?..ಈ ಶಾಕಿಂಗ್ ನ್ಯೂಸ್ ನೋಡಿ!

|

ಕೃತಕ ಬುದ್ಧಿಮತ್ತೆ ಮತ್ತು ಖಾಸಗಿತನದ ಹಕ್ಕು ಎರಡು ಒಂದಕ್ಕೊಂದು ಬೆಸೆದುಕೊಂಡಿರುವ ಆತಂಕಕಾರಿ ವಿಷಯಗಳು ಎಂಬ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಅಮೆಜಾನ್ ಕ್ಲೌಡ್ ಕ್ಯಾಮ್​ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಈಗ ಇದಕ್ಕೆ ಕಾರಣವಾಗಿದ್ದು, ಕ್ಲೌಡ್ ಕ್ಯಾಮ್ ಚಿತ್ರೀಕರಿಸಿದ ವಿಡಿಯೋ ದೃಶ್ಯಗಳನ್ನು ಭಾರತ ಮತ್ತು ರೊಮಾನಿಯಾದಲ್ಲಿರುವ ಡಜನ್​ಗೂ ಹೆಚ್ಚು ಅಮೆಜಾನ್ ಉದ್ಯೋಗಿಗಳು ಪರಾಮರ್ಶೆಗೊಳಪಡಿಸುತ್ತಾರೆ. ಇದು ಖಾಸಾಗಿತನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ನಿಮ್ಮ ಮನೆಯಲ್ಲಿ ಅಮೆಜಾನ್ ಕ್ಲೌಡ್ ಕ್ಯಾಮ್ ಇದೆಯಾ?..ಈ ಶಾಕಿಂಗ್ ನ್ಯೂಸ್ ನೋಡಿ!

ಹೌದು, ಅಮೆಜಾನ್ ಕ್ಲೌಡ್ ಕ್ಯಾಮ್ ಕ್ಯಾಮೆರಾವು ಕೃತಕ ಬುದ್ಧಿಮತ್ತೆಯೊಂದಿಗೆ ಕಾರ್ಯನಿರ್ವಹಿಸುವ ಉಪಕರಣವಾಗಿದ್ದು, ಅದರ ಕಾರ್ಯಕ್ಷಮತೆ ವೃದ್ಧಿಸುವ ಸಲುವಾಗಿ ಕ್ಯಾಮರಾ ಮೂಲಕ ಸೆರೆಹಿಡಿದ ವಿಡಿಯೋ ದೃಶ್ಯಾವಳಿಗಳನ್ನು ಅಮೆಜಾನ್ ಉದ್ಯೋಗಿಗಳು ವೀಕ್ಷಿಸುತ್ತಾರೆ. ಆ ಮೂಲಕ ಎಐ ಆಲ್ಗರಿಥಂಗೆ ತರಬೇತಿ ನೀಡುವ ಕೆಲಸಕ್ಕೆ ಈ ವಿಡಿಯೋಗಳನ್ನು ಬಳಸಲಾಗುತ್ತದೆ ಎಂದು ಈ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಿದ ಉದ್ಯೋಗಿಗಳ ಪೈಕಿ ಐವರು ನೀಡಿದ ಮಾಹಿತಿಯನ್ನು ಆಧರಿಸಿ ಬ್ಲೂಮ್​ ಬರ್ಗ್​ ವರದಿ ಮಾಡಿದೆ. ಇದು ಈಗ ವೈರಲ್ ಆಗಿದೆ.

ನಿಮ್ಮ ಮನೆಯಲ್ಲಿ ಅಮೆಜಾನ್ ಕ್ಲೌಡ್ ಕ್ಯಾಮ್ ಇದೆಯಾ?..ಈ ಶಾಕಿಂಗ್ ನ್ಯೂಸ್ ನೋಡಿ!

ಮನೆಯೊಳಗೆ ಅಮೆಜಾನ್ ಕ್ಲೌಡ್ ಕ್ಯಾಮ್ ಇರಿಸುವುದರಿಂದಾಗಿ ಮನೆಯ ಸದಸ್ಯರ ಎಲ್ಲ ಚಲನವಲನಗಳು ಕೂಡ ಸ್ವಯಂಚಾಲಿತವಾಗಿ ಚಿತ್ರೀಕರಿಸಲ್ಪಟ್ಟಿರುತ್ತವೆ. ದೃಶ್ಯಗಳ ಪ್ರೈವೆಸಿ ರೈಟ್ ಕ್ಲೌಡ್​ ಕ್ಯಾಮ್​ ಗ್ರಾಹಕರದ್ದೇ ಆಗಿರುತ್ತದೆ ಎಂದು ಅಮೆಜಾನ್ ಹೇಳುತ್ತಿದೆ. ಆದರೆ, ಇವುಗಳನ್ನು ಸಹ ಪರಾಮರ್ಶೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಒಂದು ವೇಳೆ ಹೀಗಾದಲ್ಲಿ ಆ ದೃಶ್ಯಗಳಲ್ಲಿ ಕೆಲವು ಪತಿ-ಪತ್ನಿಯರ ಆಪ್ತ ಕ್ಷಣಗಳ ದೃಶ್ಯಗಳೂ ಇದ್ದರೆ ಆಗಬಹುದಾದ ಪರಿಣಾಮ ಏನು ಎಂಬುದಾಗಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ.

ನಿಮ್ಮ ಮನೆಯಲ್ಲಿ ಅಮೆಜಾನ್ ಕ್ಲೌಡ್ ಕ್ಯಾಮ್ ಇದೆಯಾ?..ಈ ಶಾಕಿಂಗ್ ನ್ಯೂಸ್ ನೋಡಿ!

ಆಪಲ್, ಗೂಗಲ್ ಮತ್ತು ಅಮೆಜಾನ್ ಸೇರಿದಂತೆ ಸಾಕಷ್ಟು ಟೆಕ್ ದೈತ್ಯ ಕಂಪೆನಿಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿವೆ. ಇದೇ ಕಾರಣಕ್ಕಾಗಿ ತನ್ನ ಒಡೆತನದಲ್ಲಿರುವ ಕೃತಕ ಬುದ್ದಿಮತ್ತೆ ಸಾಧನಗಳಿಂದ ಸಾಕಷ್ಟು ಡೇಟಾ ಪಡೆದು ಪರಾಮರ್ಶೆಗೊಳಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜನರ ಭಾವನೆ ಮತ್ತು ಅವರ ಆಸೆ ಆಕಾಂಕ್ಷೆಗಳನ್ನು ಅಳೆಯುತ್ತಿರುವ ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸಾಕಷ್ಟು ಹದಗೊಳಿಸಿ ಸರಳಗೊಳಿಸುವ ಆಶಯವನ್ನು ಎಲ್ಲ ಸಂಸ್ಥೆಗಳು ಹೊತ್ತಿವೆ.

ನಿಮ್ಮ ಮನೆಯಲ್ಲಿ ಅಮೆಜಾನ್ ಕ್ಲೌಡ್ ಕ್ಯಾಮ್ ಇದೆಯಾ?..ಈ ಶಾಕಿಂಗ್ ನ್ಯೂಸ್ ನೋಡಿ!

ಈ ಎಲ್ಲ ಟೆಕ್ ಕಂಪೆನಿಗಳ ಆಶಯ ಉತ್ತಮವೇ ಇರಬಹುದು. ಆದರೆ, ಇದರಿಂದ ಜನರ ಖಾಸಗಿತನದ ಹಕ್ಕನ್ನು ಕಸಿದಂತಾಗುತ್ತದೆ. ಹೆಚ್ಚು ಹೆಚ್ಚು ಮಾಹಿತಿಗಳನ್ನು ಬಳಸಿಕೊಂಡು ಕೃತಕ ಬುದ್ದಿಮತ್ತೆ ಅಲ್ಗರಿಥಂ ಅಭಿವೃದ್ದಿ ಪಡಿಸುವುದು ಒಂದು ಹಂತಕ್ಕಷ್ಟೇ ಸೀಮಿತವಾಗಿರಬೇಕು. ಇಲ್ಲವಾದಲ್ಲಿ ಜನರ ಖಾಸಾಗಿತನ ಎಂಬುದಕ್ಕೆ ಅರ್ಥವೇ ಇರುವುದಿಲ್ಲ ಎಂದು ಟೆಕ್ ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈಗ ಕೃತಕ ಬುದ್ಧಿಮತ್ತೆ ಮತ್ತು ಖಾಸಗಿತನದ ಹಕ್ಕು ಮತ್ತೆ ಮುನ್ನೆಲೆಗೆ ಬಂದಿದೆ. ಮುಂದೆ ಏನಾಗುತ್ತದೆಯೋ ಕಾದುನೋಡಬೇಕು.

ಇದೀಗ ಏರ್‌ಟೆಲ್, ಐಡಿಯಾ ಕೊಡಲಿವೆ ಬಿಗ್ ಶಾಕ್!..ನೀವು ಬೆಚ್ಚಿಬೀಳುವುದು ಗ್ಯಾರಂಟಿ!

Most Read Articles
Best Mobiles in India

English summary
Teams in India and Romania use video snippets sent by customers for troubleshooting purposes and to train artificial intelligence algorithms. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more