Home
ಸುದ್ದಿಜಾಲ

ಅಮೆಜಾನ್‌ ಇಯರ್‌ ಎಂಡ್‌ ಸೇಲ್: ಈ ಸ್ಮಾರ್ಟ್‌ಫೋನ್‌ಗಳಿಗೆ ಸಿಗಲಿದೆ ಬಿಗ್‌ ಡಿಸ್ಕೌಂಟ್‌!

ಹೊಸ ವರ್ಷಕ್ಕೆ ಕಾಲಿಡಲು ಕೆಲವು ದಿನಗಳು ಮಾತ್ರವೇ ಬಾಕಿ ಇದೆ. ಈ ಸಂದರ್ಭದಲ್ಲಿ ಜನಪ್ರಿಯ ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳು ಇಯರ್‌ ಎಂಡ್‌ ಸೇಲ್‌ ಅನ್ನು ಆಯೋಜಿಸಿವೆ. ಇಯರ್‌ ಎಂಡ್‌ ಸೇಲ್‌ ಮೂಲಕ ವಿಶೇಷ ಆಫರ್‌ಗಳನ್ನು ನೀಡುತ್ತಿವೆ. ಈ ಪೈಕಿ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ವಿಶೇಷ ಡಿಸ್ಕೌಂಟ್‌ ನೀಡುತ್ತಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿವೆ.

ಅಮೆಜಾನ್‌

ಹೌದು, ಅಮೆಜಾನ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಬಿಗ್‌ ಆಫರ್‌ ದೊರೆಯಲಿದೆ. ಈ ಸೇಲ್‌ ಡಿಸೆಂಬರ್ 25 ರಿಂದಲೇ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಲೈವ್ ಆಗಿದ್ದು, ಡಿಸೆಂಬರ್ 31 ರವರೆಗೆ ಇರುತ್ತದೆ. ಅಮೆಜಾನ್‌ ಇಯರ್‌ ಎಂಡ್‌ ಸೇಲ್‌ ಸಮಯದಲ್ಲಿ ಶಿಯೋಮಿ, ಸ್ಯಾಮ್‌ಸಂಗ್‌, ರೆಡ್ಮಿ, ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳು ಡಿಸ್ಕೌಂಡ್‌ ನೀಡುತ್ತಿವೆ. ಅದರಲ್ಲೂ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 40% ರಷ್ಟು ರಿಯಾಯಿತಿಯನ್ನು ನೀಡುತ್ತಿವೆ. ಹಾಗಾದ್ರೆ ಅಮೆಜಾನ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌ ಇಯರ್‌ ಎಂಡ್‌ ಸೇಲ್‌

ಅಮೆಜಾನ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಮಾತ್ರವಲ್ಲ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ 1,500 ವರೆಗಿನ ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಅಮೆಜಾನ್‌ ಪೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಇದಲ್ಲದೆ ಎಕ್ಸ್‌ಚೇಂಜ್‌ ಆಫರ್‌, ಹಾಗೂ 12 ತಿಂಗಳವರೆಗೆ ಸುಲಭವಾದ ನೋ ಕಾಸ್ಟ್‌ EMI ಗಳ ಲಾಭವನ್ನು ಸಹ ಪಡೆಯಬಹುದು. ಇನ್ನು ಅಮೆಜಾನ್‌ ಪ್ರೈಮ್ ಸದಸ್ಯರು ಅಡ್ವಾಂಟೇಜ್ ಜಸ್ಟ್ ಫಾರ್ ಪ್ರೈಮ್‌ನೊಂದಿಗೆ 20,000ರೂ. ವರೆಗೆ ಉಳಿಸಬಹುದು. ಇದರಲ್ಲಿ 6-ತಿಂಗಳ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಮತ್ತು HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಹೆಚ್ಚುವರಿ 3-ತಿಂಗಳ No Cost EMI ನಂತಹ ವಿಶೇಷತೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ನೀವು ಆಪರ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 5G

ಇನ್ನು ಅಮೆಜಾನ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್‌ ಬಿಗ್‌ ಆಫರ್‌ ಪಡೆದುಕೊಂಡಿದೆ. 74,990ರೂ. ಮೂಲಬೆಲೆಯ ಈ ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ 39,990ರೂ.ಗಳಿಗೆ ಖರೀದಿಸಬಹುದಾಗಿದೆ. ಅಮೆಜಾನ್‌ ಪೇ ICICI ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ನೀವು ಹೆಚ್ಚುವರಿ 1,500ರೂ. ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಆಪರೇಟಿಂಗ್‌ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ರೆಡ್ಮಿ ನೋಟ್‌ 10S

ರೆಡ್ಮಿ ನೋಟ್‌ 10S

ಅಮೆಜಾನ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್‌ ಅನ್ನು 14,999ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 1000ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಫೋನ್ 13,950ರೂ.ಗಳಿಗೆ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.43 ಇಚಿನ AMOLED ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ರೆಡ್‌ಮಿ ನೋಟ್ 10s ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G

ಅಮೆಜಾನ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಕೂಡ ಸೇರಿದೆ. ಈ ಸ್ಮಾರ್ಟ್‌ಫೋನಿನ 6GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯು ನಿಮಗೆ ಕೇವಲ 29,000ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಅಮೆಜಾನ್‌ನಿಂದ ಲಭ್ಯವಿರುವ EMI ಆಫರ್‌ ಮೂಲಕ 1,412 ಮತ್ತು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 3000ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್-ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿಯನ್ನು ಒಳಗೊಂಡಿದ್ದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಶಿಯೋಮಿ 11 ಲೈಟ್‌ NE 5G

ಶಿಯೋಮಿ 11 ಲೈಟ್‌ NE 5G

ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಇತ್ತೀಚಿಗೆ ಬಿಡುಗಡೆಯಾದ ಶಿಯೋಮಿ 11 ಲೈಟ್‌ NE 5G ವಿಶೇಷ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 2,500ತೂ.ವರೆಗಿನ ಡಿಸ್ಕೌಂಟ್‌ ದೊರೆಯಲಿದೆ. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಂಡರೆ ಈ ಸ್ಮಾರ್ಟ್‌ಫೋನ್‌ ಅನ್ನು 19,950ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಜೊತೆಗೆ 4,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Amazon end-of-year sale massive discounts on Xiaomi, Redmi, Samsung phones announced.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+