ಟಾಯ್ಲೆಟ್ ಕವರ್ ಮೇಲೆ ಹಿಂದೂ ದೇವರ ಚಿತ್ರ!..'ಅಮೆಜಾನ್' ವಿರುದ್ಧ ಕರೆ
ಟಾಯ್ಲೆಟ್ ಕವರ್, ಯೋಗಾ ಮ್ಯಾಟ್ ಹಾಗೂ ಶೂಗಳಂತಹ ವಸ್ತುಗಳ ಮೇಲೆ ಹಿಂದೂ ದೇವರುಗಳ ಚಿತ್ರವನ್ನು ಬಳಸಿ ಮಾರುತ್ತಿರುವ ಹಿನ್ನೆಲೆಯಲ್ಲಿ ಅಮೆಜಾನ್ ಡಾಟ್ ಕಾಮ್ ವಿರುದ್ಧ ಹೆಚ್ಚು ಭಾರತೀಯರು ರೊಚ್ಚಿಗೆದ್ದಿದ್ದಾರೆ. BoycottAmazon ಹ್ಯಾಷ್‌ಟ್ಯಾಗ್‌ನಡಿ ಈ ಬಗ್ಗೆ ಆಕ್ರೋಶ ಹೊರಹಾಕತ್ತಿರುವ ಭಾರತೀಯರು ತಮ್ಮ ಮೊಬೈಲ್‌ಗಳಿಂದ ಅಮೆಜಾನ್ ಆಪ್ ಅನ್‌ಇನ್‌ಸ್ಟಾಲ್ ಮಾಡುತ್ತಿರುವ ಸ್ಕ್ರೀನ್‌ಶಾಟ್‌ಗಳೊಂದಿಗೆ ಅಮೆಜಾನ್ ಬಹಿಷ್ಕರಿಸಿ ಎಂದು ಕರೆ ನೀಡುತ್ತಿದ್ದಾರೆ.
ಹೌದು, ಭಾರತದ ಜನಪ್ರಿಯ ಇ ಕಾಮರ್ಸ್ ಜಾಲತಾಣವೂ ಆಗಿರುವ ಯುಎಸ್ನ ಅಮೆಜಾನ್ ವೆಬ್ಸೈಟ್ನಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಚಿತ್ರಗಳು ಕಂಡು ಬಂದಿದ್ದರಿಂದ ಬಾಯಕಟ್ ಅಮೆಜಾನ್ ಅಂತ ಇಂಟರ್ನೆಟ್ನಲ್ಲಿ ಜನರು ಆಕ್ರೋಶ ಹೊರಹಾಕಿದ್ದಾರೆ. ಟ್ವಿಟರ್ನಲ್ಲಿ ಬ್ಯಾನ್ ಅಮೆಜಾನ್ ಅಂತ ಲಕ್ಷಾಂತರ ಟ್ವೀಟ್ಗಳು ಹರಿದಾಡುತ್ತಿದ್ದು. ಈ ಬಗ್ಗೆ ದೇಶದಾದ್ಯಂತ ಅಮೆಜಾನ್ ಬಾಯ್‌ಕಾಟ್ ಮಾಡುತ್ತಿರುವುದು ಇದೀಗ ಭಾರತದಲ್ಲಿ ಟ್ರೆಂಡ್ ಆಗಿದೆ.

ಬಹುತೇಕ ನೆಟ್ಟಿಗಳು ತಮ್ಮ ಟ್ವಿಟ್‌ಗಳನ್ನು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ಯಾಗ್ ಮಾಡಿದ್ದು, ಅಮೆಜಾನ್ ಕಂಪೆನಿಯ ಹಿಂದೂ ವಿರೋಧಿ ನಿಲುವನ್ನು ಗಮನಿಸಿ, ತಕ್ಷಣ ಕ್ರಮ ಕೈಗೊಳ್ಳಿ ಎಂದು ಕೋರಿದ್ದರು. ಇದಾದ ನಂತರ ಒಂದು ವೇಳೆ ವೆಬ್ಸೈಟ್ಗಳಿಂದ ಆ ಪ್ರಾಡಕ್ಟ್ಗಳ ಚಿತ್ರಗಳನ್ನ ಹಿಂಪಡೆಯದಿದ್ದಲ್ಲಿ ಅಮೆಜಾನ್ ಸಿಬ್ಬಂದಿಗಳ ವೀಸಾಗೆ ಕಂಟಕ ಕಟ್ಟಿಟ್ಟ ಬುತ್ತಿ ಅಂತ ಸುಷ್ಮಾ ಸ್ವರಾಜ್ ಗುಡುಗಿದ್ದಾರೆ ಎನ್ನಲಾಗಿದ್ದು, ಇದರಿಂದ ಎಚ್ಚೆತ್ತಿರುವ ಅಮೆಜಾನ್ ಸಮಜಾಯಿಷಿ ನೀಡಿದೆ.
ಜನರ ಆಕ್ರೋಶಕ್ಕೆ ಎಚ್ಚೆತ್ತ ಅಮೆಜಾನ್ ಕಂಪೆನಿ, ಯಾರಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಅಂಥಹ ಉತ್ಪನ್ನಗಳನ್ನು ಆನ್‌ಲೈನ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ಅಮೆಜಾನ್ ತಿಳಿಸಿದೆ. ಅಮೆಜಾನ್‌ನಲ್ಲಿ ಉತ್ತಪನ್ನಗಳನ್ನು ಮಾರು ಎಲ್ಲಾ ವ್ಯಾಪಾರಿಗಳು ನಮ್ಮ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು. ನಮ್ಮ ಸೂಚನೆ ಉಲ್ಲಂಘಿಸುವವರ ಖಾತೆಗಳನ್ನು ತೆಗೆದುಹಾಕಬೇಕಾಗುತ್ತದೆ ಎಂದು ತನ್ನ ವ್ಯಾಪಾರಿಗಳಿಗೆ ಅಮೆಜಾನ್ ಎಚ್ಚರಿಸಿದೆ.

ಕಳೆದ ಕೆಲ ವರ್ಷಗಳ ಹಿಂದೆಯಿಂದಲೂ ಇಂತಹ ಘಟನೆಗಳು ಜರುಗುತ್ತಿವೆ. ಅವುಗಳನ್ನು ಅರಿಯದೇ ಅಥವಾ ಅರಿತು ಕೂಡ ಅಮೆಜಾನ್‌ನಂತಹ ಜನಪ್ಪರಿ ಕಂಪೆನಿಗಳಲ್ಲಿ ಇಂತಹ ಘಟನೆ ಜರುಗಿದ್ದು ಕಳವಳಕಾರಿಯಾಗಿದೆ. ಏಕೆಂದರೆ, ಒಬ್ಬರ ಅಥವಾ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ಮಾಡುವುದು ತಪ್ಪು ಎಂಬುದನ್ನು ಎಲ್ಲರೂ ತಿಳಿಯಬೇಕು. ನೋವುಂಟು ಮಾಡುವ ಉದ್ದೇಶವಿಲ್ಲವಾದರೂ, ಈ ಬಗ್ಗೆ ಎಚ್ಚರಿಕೆಯನ್ನು ಹೊಂದಿರಬೇಕು.


Click it and Unblock the Notifications








