ಗ್ರಾಹಕರಿಗೆ ಪಂಗನಾಮ ಹಾಕೊದನ್ನ Amazon ನೋಡಿ ಕಲಿಯಬೇಕು?

|

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ವಸ್ತುಗಳನ್ನು ಖರೀದಿಸುವ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಲೇಬೇಕು. ಸ್ಟಾರ್‌ ರೇಟಿಂಗ್‌ ನೋಡಿ ಪ್ರಾಡಕ್ಟ್‌ಗಳನ್ನು ಆರ್ಡರ್‌ ಮಾಡುವ ಗ್ರಾಹಕರು ಈ ಸ್ಟೋರಿಯನ್ನು ಗಮನಸಿಬೇಕು. ಏಕೆಂದರೆ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಅಕ್ರಮವೊಂದು ಹೊರಬಿದ್ದಿದೆ. ಅಮೆಜಾನ್‌ನಲ್ಲಿ ಗ್ರಾಹಕರನ್ನು ಹೇಗೆ ಯಾಮಾರಿಸಲಾಗುತ್ತಿದೆ ಅನ್ನೊ ಕಟು ಸತ್ಯವೊಂದು ಇದೀಗ ಬಹಿರಂಗವಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಮ್ಮೆ ನಕಲಿ ವಿಮರ್ಶೆ ಹಗರಣ ಪತ್ತೆಯಾಗಿದೆ. ಈ ನಕಲಿ ವಿಮರ್ಶೆಗಳು ಹೆಚ್ಚು ಕಡಿಮೆ 200,000 ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಆಗಿದೆ. ಅಮೆಜಾನ್‌ ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಪ್ಲಾಟ್‌ಫಾರ್ಮ್‌ನಲ್ಲಿನ ಮಾರಾಟಗಾರರು ನಕಲಿ ವಿಮರ್ಶೆಗಳನ್ನು ಖರೀದಿಸುತ್ತಿದ್ದಾರೆ. ನಕಲಿ ವಿಮರ್ಶೆ ಮಾಡುವವರಿಗೆ ಇಂತಿಷ್ಟು ಹಣದ ಜೊತೆಗೆ ಭಾರಿ ಬಹುಮಾನಗಳನ್ನು ಸಹ ನೀಡಲಾಗ್ತಿದೆ ಎನ್ನಲಾಗಿದೆ. ಅಮೆಜಾನ್‌ನಲ್ಲಿ ನಡೆಯುತ್ತಿರುವ ಈ ನಕಲಿ ವಿಮರ್ಶೆ ಹಗರಣ ಜನರ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಅಮೆಜಾನ್‌ನಂತಹ ಬೃಹತ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಸರ್ಫಿಂಗ್ ಮಾಡುವಾಗ ಏನಾದರೂ ಖರೀದಿಸಬೇಕಾದರೆ ಇತರೆ ಬಳಕೆದಾರರು ನೀಡುವ ವಿಮರ್ಶೆಗಳ ಆಧಾರದ ಮೇಲೆ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಇಲ್ಲಿ ನಿಜವಾದ ಗ್ರಾಹಕರು ನೀಡುವ ವಿಮರ್ಶೆಗಳಿಗಿಂತ ನಕಲಿ ವಿಮರ್ಶೆಗಳೇ ಹೆಚ್ಚಿವೆ ಅನ್ನೊದು ಬಹಿರಂಗವಾಗಿದೆ. ಅಷ್ಟೇ ಅಲ್ಲ ಈ ನಕಕಲಿ ವಿಮರ್ಶೆಗಳನ್ನು ಮಾರಾಟಗಾರರು ವ್ಯವಸ್ಥಿತವಾಗಿ ಹಣ ಕೊಟ್ಟು ಖರೀದಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ನಕಲಿ ವಿಮರ್ಶೆ ಹಗರಣ 200,000 ಕ್ಕೂ ಹೆಚ್ಚು ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಅಮೆಜಾನ್

ಚೀನಾ ಮೂಲದ ಸರ್ವರ್ ಮೂಲಕ ಸೇಫ್ಟಿ ಡಿಟೆಕ್ಟಿವ್ಸ್‌ನ ಭದ್ರತಾ ಸಂಶೋಧಕರು ಬಹಿರಂಗಪಡಿಸಿದ ಹೊಸ ದತ್ತಾಂಶದ ಪ್ರಕಾರ ಅಮೆಜಾನ್ ಕಾಮೆಂಟ್‌ ಸೆಕ್ಷನ್‌ ಕೆಲವು ಸಮಯದಿಂದ ನಕಲಿ ವಿಮರ್ಶೆಗಳು ಮತ್ತು ಉತ್ಪನ್ನಗಳಿಗೆ ಪ್ರಶಂಸಾಪತ್ರಗಳೊಂದಿಗೆ ಪರಿಣಾಮ ಬೀರಿದೆ. ಈ ರೀತಿ ಪ್ರಾಡಕ್ಟ್‌ಗಳ ಗುಣಮಟಟ ಅರಿಯದೇ ನೀಡುವ ನಕಲಿ ವಿಮರ್ಶೆಗಳ ಕಾರಣದಿಂದ ಹೆಚ್ಚಿನ ಬಳಕೆದಾರರು ಉತ್ಪನ್ನವನ್ನು ಖರೀದಿಸಲು ಕಾರಣವಾಗುತ್ತದೆ. ಹೆಚ್ಚಿನ ರೇಟಿಂಗ್‌ಗಳೊಂದಿಗೆ, ನೀವು ‘ಬಳಕೆದಾರರ ರೇಟಿಂಗ್' ಫಿಲ್ಟರ್ ಆಧರಿಸಿ ಹುಡುಕಿದಾಗ ಈ ಉತ್ಪನ್ನಗಳು ಸಲಹೆಯ ಪಟ್ಟಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಗ್ರಾಹಕರು ಸುಲಭವಾಗಿ ಮೋಸ ಹೋಗುತ್ತಿದ್ದಾರೆ.

ಅಮೆಜಾನ್‌ನಲ್ಲಿ ನಕಲಿ ವಿಮರ್ಶೆ ಹೇಗೆ ಕಾರ್ಯನಿರ್ವಹಿಸುತ್ತಿದೆ?

ಅಮೆಜಾನ್‌ನಲ್ಲಿ ನಕಲಿ ವಿಮರ್ಶೆ ಹೇಗೆ ಕಾರ್ಯನಿರ್ವಹಿಸುತ್ತಿದೆ?

ಅಮೆಜಾನ್ ಮಾರಾಟಗಾರರು ಉತ್ಪನ್ನಗಳ ಪಟ್ಟಿಯನ್ನು ವಿಮರ್ಶಕರಿಗೆ ಕಳುಹಿಸುತ್ತಾರೆ. ಇವುಗಳು ಹೆಚ್ಚಿನ (ಸಾಮಾನ್ಯವಾಗಿ 5-ಸ್ಟಾರ್) ರೇಟಿಂಗ್ ಬಯಸುವ ಉತ್ಪನ್ನಗಳಾಗಿವೆ. ಈ ವಿಮರ್ಶಕರು ಮೊದಲು ಉತ್ಪನ್ನಗಳನ್ನು ಖರೀದಿಸುತ್ತಾರೆ ಮತ್ತು ಅದಕ್ಕಾಗಿ 5-ಸ್ಟಾರ್ ರೇಟಿಂಗ್ ನೀಡುತ್ತಾರೆ. ಇದರ ಪರಿಣಾಮವಾಗಿ ಉತ್ಪನ್ನವು ಸಲಹೆಗಳ ಪಟ್ಟಿಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತದೆ ಮತ್ತು ಬ್ರೌಸ್ ಮಾಡುವಾಗ ಅದು ನಿಮ್ಮ ದೃಷ್ಟಿಯಲ್ಲಿ ಹೆಚ್ಚು ಗೋಚರಿಸುತ್ತದೆ. ಅಮೆಜಾನ್‌ನಲ್ಲಿ ವಿಮರ್ಶೆಯನ್ನು ನೀಡಿದ ನಂತರ, ವಿಮರ್ಶಕರು ಮತ್ತೆ ಮಾರಾಟಗಾರರಿಗೆ ಸಂದೇಶವನ್ನು ಕಳುಹಿಸುತ್ತಾರೆ, ಇದು ಅಮೆಜಾನ್ ಪ್ರೊಫೈಲ್‌ಗೆ ಲಿಂಕ್ ಮತ್ತು ಪೇಪಾಲ್ ವಿವರಗಳನ್ನು ಸಹ ಒಳಗೊಂಡಿದೆ. ವಿಮರ್ಶಕರು ಖರೀದಿಸಿದ ಐಟಂಗೆ ಮರುಪಾವತಿಯನ್ನು ಪಡೆಯುತ್ತಾರೆ. ಅಲ್ಲದೆ ಖರೀದಿಸಿ ಉತ್ಪನ್ನವನ್ನು ಸಹ ಉಳಿಸಿಕೊಳ್ಳುತ್ತಾರೆ. ವರದಿಯ ಪ್ರಕಾರ ಕೆಲವರು ಹೆಚ್ಚುವರಿ ನಗದು ಬಹುಮಾನವನ್ನೂ ಪಡೆಯುತ್ತಾರೆ.

ಡೇಟಾಬೇಸ್

ಸದ್ಯ ಭದ್ರತಾ ಸಂಶೋಧಕರು ಕಂಡುಕೊಂಡ ಡೇಟಾಬೇಸ್ ಮಾರ್ಚ್ 1, 2021 ರಂದು ನಡೆಸಿದ ಒಂದು ಕಾರ್ಯಾಚರಣೆಗೆ ಸಂಬಂಧಿಸಿದೆ. ಇದರಲ್ಲಿ 13 ಮಿಲಿಯನ್ ದಾಖಲೆಗಳನ್ನು (7GB ಮೌಲ್ಯದ ಡೇಟಾ) ಯಾವುದೇ ಪಾಸ್‌ವರ್ಡ್ ರಕ್ಷಣೆಯಿಲ್ಲದೆ ಹೋಸ್ಟ್ ಮಾಡಲಾಗಿದೆ. ಡೇಟಾಬೇಸ್ ಕೇವಲ ಇಮೇಲ್ ವಿಳಾಸಗಳನ್ನು ಮಾತ್ರವಲ್ಲದೆ ಈ ಅಮೆಜಾನ್ ವಿಮರ್ಶೆ ಹಗರಣದಲ್ಲಿ ಭಾಗವಹಿಸಿದ ಮಾರಾಟಗಾರರಿಗೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಫೋನ್ ಸಂಖ್ಯೆಗಳನ್ನೂ ಒಳಗೊಂಡಿದೆ. ಪೇಪಾಲ್ ಖಾತೆ ವಿವರಗಳು ಮತ್ತು ಬಳಕೆದಾರ ಹೆಸರುಗಳೊಂದಿಗೆ ಅಮೆಜಾನ್ ಖಾತೆಗಳಿಗೆ ಸುಮಾರು 75,000 ಲಿಂಕ್‌ಗಳು ಸಹ ಕಂಡುಬಂದಿವೆ. ಆಆದರೆ ಅಮೆಜಾನ್ ಈ ನಕಲಿ ವಿಮರ್ಶೆಗಳನ್ನು ಎದುರಿಸಲು ಮತ್ತು ದೋಷಯುಕ್ತ ಉತ್ಪನ್ನವನ್ನು ಖರೀದಿಸುವುದನ್ನು ತಡೆಯಲು ಇನ್ಮುಂದೆ ಯಾವ ರೀತಿಯ ಯೋಜನೆ ರೂಪಿಸಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
Amazon review section has been affected with fake reviews and testimonials for products since quite some time. This often leads to more product visilbity in suggestions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X