ಆನ್‌ಲೈನ್‌ ಫುಡ್‌ ಡೆಲಿವರಿ ಸೇವೆ ಪ್ರಾರಂಭಿಸಿದ ಅಮೆಜಾನ್‌!

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಫುಡ್‌ ಡೆಲಿವರಿ ಸೇವೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ನೀವು ಬಯಸುವ ಆಹಾರವನ್ನು ನಿಮ್ಮ ಮನೆ ಬಾಗಿಲಿಗೆ ತಂದು ಕೊಡುವ ಸೇವೆ ಎಲ್ಲರನ್ನು ಆಕರ್ಷಿಸಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ಫುಡ್‌ ಡೆಲಿವರಿ ಅಪ್ಲಿಕೇಶನ್‌ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಅಮೆಜಾನ್‌ ಕೂಡ ಬೆಂಗಳೂರಿನಲ್ಲಿ ಫುಡ್‌ ಡೆಲಿವರಿ ಸೇವೆ ನಿಡುವ ಅಮೆಜಾನ್‌ ಫುಡ್‌ ಅನ್ನು ಪ್ರಾರಂಭಿಸಿದೆ. ಇದು ಬೆಂಗಳೂರಿನ 62 ಪಿನ್‌ ಕೋಡ್‌ಗಳಲ್ಲಿ ತನ್ನ ಸೇವೆಯನ್ನು ಶುರುಮಾಡಿದೆ ಎಂದು ಅಮೆಜಾನ್‌ ಸಂಸ್ಥೆ ಹೇಳಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸಂಸ್ಥೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಅಮೆಜಾನ್‌ ಫುಡ್‌ ಸೇವೆಯನ್ನು ಶುರುಮಾಡಿದೆ. ಇದರಲ್ಲಿ ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಹೆಚ್‌ಎಸ್‌ಆರ್‌ ಲೇ ಔಟ್‌, ಸರ್ಜಾಪುರ, ವೈಟ್‌ಫೀಲ್ಡ್‌ ಸೇರಿದಂತೆ ಹಲವು ಏರಿಯಾಗಳಲ್ಲಿ ತನ್ನ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ಶುಚಿ ರುಚಿಯಾದ ಆಹಾರವನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ. ಹಾಗಾದ್ರೆ ಅಮೆಜಾನ್‌ ಪುಡ್‌ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್

ಅಮೆಜಾನ್ ಫುಡ್ ಭಾರತದ ಒಂದು ಪ್ರಮುಖ ಮಾರುಕಟ್ಟೆಗೆ ಸೀಮಿತವಾಗಿದ್ದರೂ ಸಹ, ಕಂಪನಿಯು ನಗರದಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಈ ಮೂಲಕ ಆನ್‌ಲೈನ್‌ ಫುಡ್‌ ಡೆಲಿವರಿಯಲ್ಲಿ ಮುಂಚೂಣಿಯಲ್ಲಿರುವ ಜೊಮಾಟೊ ಮತ್ತು ಸ್ವಿಗ್ಗಿ ಸೇವೆಗಳಿಗೆ ಟಕ್ಕರ್‌ ನೀಡಲು ಮುಂದಾಗಿದೆ. ಇನ್ನು ಅಮೆಜಾನ್‌ ಫುಡ್‌ ಸೇವೆ ಪಡೆಯಬೇಕಾದರೆ ಪ್ರೈಮ್‌ ಮೆಂಬರ್‌ಗಳಿಗೆ ಫುಡ್‌ ಡೇಲಿವರಿ ಉಚಿತವಾದರೆ, ಇತರರು 19ರೂ.ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಸ್ವಿಗ್ಗಿ ಮತ್ತು ಜೊಮಾಟೊ ವಿಧಿಸುವ ಶುಲ್ಕಕ್ಕಿಂತ ಅಗ್ಗವಾಗಿದೆ.

ಅಮೆಜಾನ್‌ ಪುಡ್‌

ಇನ್ನು ತನ್ನ ಅಮೆಜಾನ್‌ ಪುಡ್‌ ಮೂಲಕ ಭಾರತದಲ್ಲಿ $6.5 ಬಿಲಿಯನ್ ಹೂಡಿಕೆ ಮಾಡಲು ಬದ್ಧವಾಗಿರುವ ಅಮೆಜಾನ್‌ ಬೆಂಗಳೂರಿನಲ್ಲಿ 2,500 ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳನ್ನು ಸಂಗ್ರಹಿಸಿದೆ. ಬೆಂಗಳೂರಿನಲ್ಲಿ ಅತ್ಯಂತ ಜನಪ್ರಿಯ ಹಾಗೂ ಶುಚಿತ್ವ ಕಾಪಾಡಿಕೊಳ್ಳುವ ಸರ್ಟಿಫೈಡ್ ಹೊಂದಿರುವ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳನ್ನು ಪಟ್ಟಿ ಮಾಡಿದೆ. ಇವುಗಳ ಮೂಲಕ ಗ್ರಾಹಕರು ತಮಗಿಷ್ಟವಾಗಿರುವ ತಿಂಡಿ-ತಿನಿಸುಗಳನ್ನು ಗ್ರಾಹಕರು ಆರ್ಡರ್ ಮಾಡಿ ಹೋಮ್ ಡೆಲಿವರಿ ಪಡೆಯಬಹುದಾಗಿದೆ.

ಅಮೆಜಾನ್ ಫುಡ್

ಬೆಂಗಳೂರಿನಲ್ಲಿ ಅಮೆಜಾನ್ ಫುಡ್ ವಿಸ್ತರಣೆಯೊಂದಿಗೆ, ಜನರ ದೈನಂದಿನ ಜೀವನದ ಒಂದು ಭಾಗವಾಗಿರುವ ಊಟದ ಸೇವೆಯನ್ನು ನೀಡುವ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ. ಅಮೆಜಾನ್ ಫುಡ್ ರಾಷ್ಟ್ರೀಯ ಮಳಿಗೆಗಳು ಮತ್ತು ಸ್ಥಳೀಯ ಹೋಟೆಲ್‌ಗಳನ್ನು ಒಳಗೊಂಡಂತೆ ನಗರದ ಕೆಲವು ಉನ್ನತ ರೆಸ್ಟೋರೆಂಟ್‌ಗಳನ್ನು ಹೊಂದಿರಲಿದೆ. ಇವು ಕಟ್ಟುನಿಟ್ಟಾದ ವಿತರಣೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತವೆ "ಎಂದು ಅಮೆಜಾನ್ ಇಂಡಿಯಾದ ಡೈರೆಕ್ಟರ್‌ ಆಫ್‌ ಕ್ಯಾಟಗರಿ ಮ್ಯಾನೇಜ್‌ಮೆಂಟ್‌ ಸಮೀರ್ ಖೇತರ್‌ಪಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Best Mobiles in India

English summary
Amazon food delivery now available in Bengaluru is now serviceable at 62 zip codes.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X