Just In
- 59 min ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 1 hr ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 2 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 2 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Movies
11 ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್: ಈ ಕಾಮಿಡಿ ಚಿತ್ರದಲ್ಲಿ ಅಂಥದ್ದೇನಿದೆ?
- News
Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಗಸ್ಟ್ 8 ರಿಂದ ಆರಂಭವಾಗಲಿದೆ ಅಮೇಜಾನ್ ಫ್ರೀಡಂ ಸೇಲ್- ಹಲವು ಪ್ರೊಡಕ್ಟ್ ಗಳಿಗೆ 80% ರಿಯಾಯಿತಿ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೇಜಾನ್ ಇಂಡಿಯಾ ವಿಶೇಷ ಮಾರಾಟವನ್ನು ಪ್ರಕಟಿಸಿದೆ. ಯುಸ್ ಮೂಲದ ಇ-ಕಾಮರ್ಸ್ ವೆಬ್ ಸೈಟ್ ಅಗಸ್ಟ್ 8 ರಿಂದ ಅಗಸ್ಟ್ 11 ರ ವರೆಗೆ ಫ್ರೀಡಂ ಸೇಲ್ ನ್ನು ಆಯೋಜಿಸಿದೆ. ಸಂಪ್ರದಾಯದಂತೆ ಪ್ರೈಮ್ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿಯೇ ಸೇಲ್ ಆರಂಭವಾಗಲಿದ್ದು ಪ್ರೈಮ್ ಬಳಕೆದಾರರು ಅಗಸ್ಟ್ 7 ರಂದು ಮಧ್ಯಾಹ್ನ 12 ಘಂಟೆಯಿಂದ ಮಾರಾಟದ ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು.

ಅಮೇಜಾನ್ ಪ್ರೀಡಂ ಸೇಲ್ : ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು
ವಿಶೇಷ ಮಾರಾಟದ ಅಂಗವಾಗಿ ಅಮೇಜಾನ್ ಹಲವು ರೀತಿಯ ರಿಯಾಯಿತಿಯನ್ನು ಮೊಬೈಲ್, ಆಕ್ಸಸರೀಸ್, ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡುಗೆ ಮನೆ ವಸ್ತುಗಳು ಸೇರಿದಂತೆ ಇತರೆ ಹಲವಾರು ವಸ್ತುಗಳಿಗೆ ನೀಡುತ್ತಿದೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು 10% ಇನ್ಸೆಂಟ್ ರಿಯಾಯಿತಿಯನ್ನು ಹೊಂದಿರುತ್ತಾರೆ. ಬಜಾಜ್ ಫಿನ್ ಸರ್ವ್ ಅವರಿಗೆ ನೋ ಕಾಸ್ಟ್ ಇಎಂಐ ಆಯ್ಕೆ ಇರುತ್ತದೆ. ಜೊತೆಗೆ ಹೆಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆಯ ಸೌಲಭ್ಯವಿರುತ್ತದೆ.
ಈಗಾಗಲೇ ಅಮೇಜಾನ್ ಫ್ರೀಡಂ ಸೇಲ್ ನಲ್ಲಿ ಯಾವೆಲ್ಲಾ ವಸ್ತುಗಳು ರಿಯಾಯಿತಿಯಲ್ಲಿ ಇರುತ್ತದೆ ಎಂಬ ಕೆಲವು ವಸ್ತುಗಳ ಮಾಹಿತಿಯನ್ನು ಅಮೇಜಾನ್ ಬಿಟ್ಟುಕೊಟ್ಟಿದೆ. ಅವುಗಳ ವಿವರ ಇಲ್ಲಿದೆ.

ಮೊಬೈಲ್ ಮತ್ತು ಆಕ್ಸಸರೀಸ್ ಗಳು
40% ದ ವರೆಗೆ ರಿಯಾಯಿತಿ ಹಾನರ್ ವ್ಯೂ 20, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30, ಶಿಯೋಮಿ ರೆಡ್ಮಿ ವೈ3, ರಿಯಲ್ ಮಿ ಯು1 ಸೇರಿದಂತೆ ಹಲವು ಹ್ಯಾಂಡ್ ಸೇಟ್ ಗಳು ಇದುವರೆಗೂ ಲಭ್ಯವಿರದಷ್ಟು ಅತೀ ಕಡಿಮೆ ಬೆಲೆಯಲ್ಲಿ ಈ ಸೇಲ್ ನಲ್ಲಿ ಖರೀದಿಸಬಹುದು ಎಂದು ಅಮೇಜಾನ್ ಹೇಳಿದೆ. ಒನ್ ಪ್ಲಸ್ 7, ಒನ್ ಪ್ಲಸ್ 7 ಪ್ರೋ, ಒಪ್ಪೋ ರೆನೋ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಒಪ್ಪೋ ಎಫ್11 ಪ್ರೋ ಮತ್ತು ಇತ್ಯಾದಿ ಫೋನ್ ಗಳಿಗೆ ಅಮೇಜಾನ್ ಎಕ್ಸ್ ಚೇಂಜ್ ಆಫರ್ ನೀಡುತ್ತಿದೆ.

ಎಲೆಕ್ಟ್ರಾನಿಕ್ಸ್: 50% ದ ವರೆಗೆ ರಿಯಾಯಿತಿ
ಎಲೆಕ್ಟ್ರಾನಿಕ್ಸ್ ಕೆಟಗರಿಯ ಅಡಿಯಲ್ಲಿ ಕ್ಯಾಮರಾಗಳನ್ನು 50% ರಿಯಾಯಿತಿಯವರೆಗೆ ಮಾರಾಟ ಮಾಡಲಾಗುತ್ತಿದೆ. ಹೆಡ್ ಫೋನ್ ಗಳು ಮತ್ತು ಸ್ಪೀಕರ್ ಗಳಿಗೆ 60%ಧ ವರೆಗೆ ರಿಯಾಯಿತಿ ಸಿಗುತ್ತದೆ, ಸ್ಮಾರ್ಟ್ ವಾಚ್ ಗಳಿಗೆ 50% ರಿಯಾಯಿತಿ, ಸ್ಪೀಕರ್ ಗಳಿಗೆ 50% ರಿಯಾಯಿತಿ, ಮಾನಿಟರ್ ಗಳಿಗೆ 50% ರಿಯಾಯಿತಿ , ಗೇಮಿಂಗ್ ಆಕ್ಸಸರೀಸ್ ಗಳಿಗೆ 30% ಮತ್ತು ಅಲೆಕ್ಸಾ ಬಿಲ್ಟ್ ಇನ್ ಡಿವೈಸ್ ಗಳಿಗೆ 30% ರಿಯಾಯಿತಿ ಸಿಗುತ್ತದೆ.

ಟಿವಿ ಮತ್ತು ಅಪ್ಲಯನ್ಸಸ್ ಗಳು:60% ರಿಯಾಯಿತಿ
ದೊಡ್ಡ ಸ್ಕ್ರೀನಿನ ಟಿವಿಗಳು ಮತ್ತು ಸ್ಮಾರ್ಟ್ ಟಿವಿಗಳು ಎರಡೂ ಕೂಡ 50% ರಿಯಾಯಿತಿಯಲ್ಲಿ ಸಿಗುತ್ತದೆ. ಪ್ರೀಮಿಯಂ ಟಿವಿಗಳನ್ನು 45% ರಿಯಾಯಿತಿಯಲ್ಲಿ ಸೇಲ್ ಮಾಡಲಾಗುತ್ತದೆ. 32 ಇಂಚಿನ ಟಿವಿಯನ್ನು 40% ರಿಯಾಯಿತಿಯಲ್ಲಿ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತದೆ.
ಒಟ್ಟಾರೆ ಅಮೇಜಾನ್ ಫ್ರೀಡಂ ಸೇಲ್ ನಲ್ಲಿ ಬಂಪರ್ ಆಫರ್ ಇರುವುದಂತೂ ಸತ್ಯ. ನೀವೂ ಕೂಡ ಈ ಆಫರ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470