ಇದೇ 9 ರಿಂದ 12ರವರೆಗೆ ಅಮೆಜಾನ್ ಫ್ರೀಡಂ ಸೇಲ್..! ಭರ್ಜರಿ ಆಫರ್..!
ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು. ಈ ಸಂಭ್ರದ ದಿನವನ್ನು ದೇಶಾದ್ಯಂತ ಅದ್ಧೂರಿಯಿಂದ ಆಚರಿಸಬೇಕು ಎಂಬ ಕಾರಣದಿಂದಾಗಿ ಅಮೇಜಾನ್ ಇಂಡಿಯಾ ನಾಲ್ಕು ದಿನಗಳ ಭರ್ಜರಿ ಆಫರ್ ಗಳ ಸೇಲ್ ಒಂದನ್ನು ಹಮ್ಮಿಕೊಂಡಿದೆ. ಅದು ಅಗಸ್ಟ್ 9 ರಿಂದ 12 ರ ವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಸುಮಾರು 20,000 ಕ್ಕೂ ಹೆಚ್ಚು ಡೀಲ್ ಗಳು ಲಭ್ಯವಿದ್ದು ಸ್ಮಾರ್ಟ್ ಫೋನ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್, ದಿನಬಳಕೆ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಾಗುತ್ತದೆ.

ಈಗಾಗಲೇ ಕಂಪೆನಿ ಪ್ರಕಟಪಡಿಸಿರುವಂತೆ, ಅಗಸ್ಟ್ 9 ನೇ ತಾರೀಖು ಮಧ್ಯಾಹ್ನ 12 ಘಂಟೆಯಿಂದ ಸೇವ್ ಪ್ರಾರಂಭವಾಗುತ್ತದೆ ಮತ್ತು ಅಗಸ್ಟ್ 12 ತಾರೀಕು 11.59 ರ ಮಧ್ಯರಾತ್ರಿಗೆ ಮುಗಿಯುತ್ತದೆ. ಈ ಸೇಲ್ ನಲ್ಲೂ ಕೂಡ ಹೊಸ ಪ್ರೊಡಕ್ಟ್ ಗಳನ್ನು ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ಬಿಡುಗಡೆಗೊಳಿಸಲಿದೆ. ಅದರಲ್ಲಿ ಒನ್ ಪ್ಲಸ್, ಹುವಾಯಿ, ಹಾನರ್, ಸ್ಯಾಮ್ ಸಂಗ್, ವಿವೋ, ರಿಯಲ್ ಮಿ ಹೀಗೆ ಹಲವಾರು ಕಂಪೆನಿಯ ವಸ್ತುಗಳು ಬಿಡುಗಡೆಗೊಳ್ಳುತ್ತದೆ.
ರಿಯಾಯಿತಿ ದರದ ಜೊತೆಗೆ ಈ ಸೇಲ್ ನಲ್ಲಿ ಗ್ರಾಹಕರು 10 ಶೇಕಡಾ ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಪಡೆಯಬಹುದು. ಅದಕ್ಕಾಗಿ ಎಸ್ ಬಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಗ್ರಾಹಕರು ಖರೀದಿಯನ್ನು ಮಾಡಬೇಕಾಗುತ್ತದೆ. ಇಎಂಐ ಆಯ್ಕೆಯೂ ಕೂಡ ಈ ಬ್ಯಾಂಕಿನ ಡೆಬಿಟ್ ಕಾರ್ಡ್ ಗಳಿಂದ ಲಭ್ಯವಿರುತ್ತದೆ. 4 ದಿನದ ಸೇಲ್ ನಲ್ಲಿ ಅಮೇಜಾನ್ ಇಕೋ ಡಿವೈಸ್ ಗಳು, ಫೈಯರ್ ಟಿವಿ ಸ್ಟಿಕ್ ಮತ್ತು ಕಿಂಡಲ್ ಇ ರೀಡರ್ಸ್ ಗಳೂ ಕೂಡ ಈ ರಿಯಾಯಿತಿ ಮಾರಾಟದಲ್ಲಿ ಲಭ್ಯ.
“ಭಾರತದಲ್ಲಿ ಬಹಳ ನಂಬಿಕೆಯ ಮತ್ತು ಅತೀ ಹೆಚ್ಚು ಗ್ರಾಹಕರು ಭೇಟಿ ನೀಡುವ ಆನ್ ಲೈನ್ ವೆಬ್ ಸೈಟ್ ಅಮೇಜಾನ್ ಆಗಿರುವುದರಿಂದಾಗಿ ನಾವು ಭಾರತದ ಪ್ರತಿಯೊಂದು ಹಬ್ಬವನ್ನು ಆಚರಿಸುವುದಕ್ಕೆ ಇಚ್ಛಿಸುತ್ತೇವೆ. ಈ ಸೀಸನ್ ನಲ್ಲಿ ಗ್ರಾಹಕರು ಬಯಸುತ್ತಿರುವ ಆಫರ್ ಗಳನ್ನು ಖಂಡಿತವಾಗಿಯೂ ನಾವು ಅಮೇಜಾನ್ ಫ್ರೀಡಂ ಸೇಲ್ ನಲ್ಲಿ ನೀಡಲಿದ್ದೇವೆ. ಒಂದಷ್ಟು ಹೊಸ ವಸ್ತುಗಳ ಬಿಡುಗದೆ, ಗ್ರೇಟ್ ಡೀಲ್ಸ್, ಹೆಚ್ಚುವರಿ ಕ್ಯಾಷ್ ಬ್ಯಾಕ್ ಗಳು , ಕಡಿಮೆ ಬಡ್ಡಿದರ ಇಎಂಐ, ಉತ್ತಮ ಎಕ್ಸ್ ಚೇಂಜ್ ಆಫರ್ ಗಳನ್ನು ಈ ಬಾರಿಯ ಸೇಲ್ ನಲ್ಲಿ ಗ್ರಾಹಕರು ನಿರೀಕ್ಷಿಸಬಹುದು “ ಎಂದು ಅಮೇಜಾನ್ ಇಂಡಿಯಾದ ಕೆಟಗರಿ ಮ್ಯಾನೇಜ್ ಮೆಂಟ್ ನ ಉಪಾಧ್ಯಕ್ಷರಾಗಿರುವ ಮನೀಶ್ ತಿವಾರಿ ತಿಳಿಸಿದ್ದಾರೆ.
ಅಮೇಜಾನ್ ಜುಲೈ 2018 ರಲ್ಲಿ ಸೆಕೆಂಡ್ ಪ್ರೈಮ್ ಡೇ ಸೇಲ್ ನ್ನು ಆಯೋಜಿಸಿತ್ತು.ಈ ಸೇಲ್ 17 ದೇಶಗಳಲ್ಲಿ ಎರಡು ದಿನ ಅಂದರೆ ಜುಲೈ 16 ಮತ್ತು 17 ರಂದು ನಡೆದಿತ್ತು. ಒಟ್ಟಿನಲ್ಲಿ ತಿಂಗಳಿಗೊಂದು ನೆಪದಂತೆ ಅಮೇಜಾನ್ ನಲ್ಲಿ ಭರ್ಜರಿ ಆಫರ್ ಗಳಲ್ಲಿ ವಸ್ತುಗಳನ್ನು ಖರೀದಿಸುವುದಕ್ಕೆ ಅವಕಾಶಗಳಂತೂ ಲಭ್ಯವಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.


Click it and Unblock the Notifications








