ನಿಮ್ಮ ಮನೆಗೆ ಫ್ರಿಡ್ಜ್ ಖರೀದಿಸಬೇಕಾ? ಈ ಆಫರ್ ಮತ್ತೆ ಸಿಗೋದಿಲ್ಲ, ಕೂಡಲೇ ಖರೀದಿಸಿ!
ನಿಮ್ಮ ಮನೆಗೊಂದು ರೆಫ್ರಿಜರೇಟರ್ ತರಬೇಕೆನ್ನುವ ಆಲೋಚನೆ ಇದೆಯಾ. ಇನ್ಯಾಕೆ ತಡ ಆಮೆಜಾನ್ ನಲ್ಲಿ ನಿಮಗೆ ಒಪ್ಪುವ ರೆಫ್ರಿಜರೇಟರ್ ಅನ್ನು ಆರ್ಡರ್ ಮಾಡಿಬಿಡಿ. ಅದರಲ್ಲೂ ಡಬಲ್ ಡೋರ್ ರೆಪ್ರಿಜರೇಟರ್ ಖರೀದಿಸಬೇಕೆಂದು ಕೊಂಡಿದ್ದರೆ ಕೂಡಲೇ ಆರ್ಡರ್ ಮಾಡಿಬಿಡಿ, ಯಾಕಂದ್ರೆ ಡಿಸ್ಕೌಂಟ್‌ನಲ್ಲಿ ಖರೀದಿಸುವುದಕ್ಕೆ ಇದಕ್ಕಿಂತ ಬೆಸ್ಟ್ ಟೈಂ ಮತ್ತೆ ಸಿಗೋದಿಲ್ಲ.
ಹೌದು, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಡಬಲ್ ಡೋರ್ ರೆಫ್ರಿಜರೇಟರ್‌ಗಳ ಮೇಲೆ ಬಿಗ್ ಆಫರ್ ನೀಡಲಾಗ್ತಿದೆ. ನಿಮ್ಮ ಊಹೆಗೂ ಮೀರಿದ ಡಿಸ್ಕೌಂಟ್ ಬೆಲೆಯಲ್ಲಿ ಡಬಲ್ ಡೋರ್ ರೆಫ್ರಿಜರೇಟರ್‌ಗಳನ್ನು ಖರೀದಿಸಬಹುದಾಗಿದೆ. ಇವುಗಳಲ್ಲಿ ಜನಪ್ರಿಯ ರೆಫ್ರಿಜಿರೇಟರ್ ಬ್ರ್ಯಾಂಡ್‌ಗಳ ಪ್ರಾಡಕ್ಟ್‌ಗಳು ಕೂಡ ದೊರೆಯುತ್ತಿವೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ನೀವು ಬಿಗ್ ಆಫರ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ರೆಫ್ರಿಜರೇಟರ್ ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನಾಸೋನಿಕ್ NR-TH272CVHN
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಪ್ಯಾನಾಸೋನಿಕ್ NR-TH272CVHN ರೆಫ್ರಿಜರೇಟರ್ 21% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 34,100ರೂ. ಬೆಲೆಯ ರೆಫ್ರಿಜರೇಟರ್ ಅನ್ನು ನೀವು ಕೇವಲ 26,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಫ್ರಿಡ್ಜ್ AI ಸಕ್ರಿಯಗೊಳಿಸಿದ ಇನ್ವರ್ಟರ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಜೊತೆಗೆ 3 ಸ್ಟಾರ್ ಪವರ್ ದಕ್ಷತೆಯ ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಡಬಲ್-ಡೋರ್ ರೆಫ್ರಿಜರೇಟರ್ ಆಗಿದ್ದು, 10 ವರ್ಷದ ಕಂಪ್ರೆಸರ್ ವಾರಂಟಿಯನ್ನು ಪಡೆದುಕೊಂಡಿದೆ.
ಲಾಯ್ಡ್ (Lloyd) GLFF312AMWT1PB
ಈ ರೆಫ್ರಿಜರೇಟರ್ ಅಮೆಜಾನ್ ಸೇಲ್‌ನಲ್ಲಿ ಬರೋಬ್ಬರಿ 30% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಇದನ್ನು ನೀವು ರಿಯಾಯಿತಿ ದರದಲ್ಲಿ ಕೇವಲ 27,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ರೆಫ್ರಿಜರೇಟರ್ ಆಟೋ-ಡಿಫ್ರಾಸ್ಟ್ ಪಂಕ್ಷನ್ ಅನ್ನು ಹೊಂದಿದೆ. ಇದು 2-ಸ್ಟಾರ್ ಎನರ್ಜಿ ಎಫಿಷಿಯನ್ಸಿ ರೇಟಿಂಗ್ ಹೊಂದಿದ್ದು, ಕಂಪ್ರೆಸರ್ ಮೇಲೆ 10 ವರ್ಷಗಳ ವಾರಂಟಿಯನ್ನು ನೀಡುತ್ತದೆ. ಇದಲ್ಲದೆ ಈ ರೆಫ್ರಿಜರೇಟರ್‌ನಲ್ಲಿ ಏಕರೂಪದ ಕೂಲಿಂಗ್, ಫ್ಲೆಕ್ಸಿಮ್ಯಾಕ್ಸ್ ವಿನ್ಯಾಸ, ಟೆನ್-ವೆಂಟ್ ಟೆಕ್ನಾಲಜಿ, ಬ್ಯಾಕ್ಟ್‌ಶೀಲ್ಡ್ನಂತಹ ಫಿಚರ್ಸ್‌ಗಳನ್ನು ಕಾಣಬಹುದಾಗಿದೆ.
ಸ್ಯಾಮ್‌ಸಂಗ್ RT30C3733BX/HL
ಸ್ಯಾಮ್‌ಸಂಗ್ RT30C3733BX/HL ರೆಫ್ರಿಜರೇಟರ್ ಅಮೆಜಾನ್‌ನಲ್ಲಿ 34% ಡಿಸ್ಕೌಂಟ್ ಪಡೆದುಕೊಂಡಿದೆ. ಇದನ್ನು ನೀವು ಕೇವಲ 29,490ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಈ ಉಪಕರಣಕ್ಕಾಗಿ ಅಮೆಜಾನ್ ಹೆಚ್ಚುವರಿ 1,000ರೂ. ಡಿಸ್ಕೌಂಟ್ ವೋಚರ್ ಅನ್ನು ಸಹ ನೀಡುತ್ತಿದೆ. ಇನ್ನು ಈ ಫ್ರೀಡ್ಜ್ ಡಿಜಿಟಲ್ ಡಿಸ್‌ಪ್ಲೇ ಕಂಟ್ರೋಲ್ ಪ್ಯಾನಲ್ ಅನ್ನು ಹೊಂದಿದೆ. ಜೊತೆಗೆ ಸ್ಯಾಮ್‌ಸಂಗ್ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್‌ನಲ್ಲಿ 20 ವರ್ಷಗಳ ವಾರಂಟಿಯನ್ನು ನೀಡುತ್ತದೆ.
ವರ್ಲ್‌ಪೂಲ್ FP 263D ಪ್ರೋಟಾನ್ ರಾಯ್
ವರ್ಲ್‌ಪೂಲ್ FP 263D ಪ್ರೋಟಾನ್ ರಾಯ್ ಫ್ರಿಡ್ಜ್ ಅಮೆಜಾನ್‌ನಲ್ಲಿ 16% ರಿಯಾಯಿತಿ ಪಡೆದುಕೊಂಡಿದೆ. ಇದರಿಂದ ಇದರ ಮೂಲಬೆಲೆಯಲ್ಲಿ ಬದಲಾವಣೆ ಆಗಿದ್ದು, ಇದನ್ನು ನೀವು ಕೇವಲ 25,790ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ರೆಫ್ರಿಜರೇಟರ್ 240-ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, 60W CFL ಗಿಂತ ಕಡಿಮೆ ಎನರ್ಜಿಯನ್ನು ಬಳಸಿಕೊಳ್ಳಲಿದೆ. ಜೊತೆಗೆ ಕಂಪ್ರೆಸರ್‌ನಲ್ಲಿ 10 ವರ್ಷಗಳ ವಾರಂಟಿಯನ್ನು ಸಹ ನೀಡಲಿದೆ ಎಂದು ಹೇಳಲಾಗಿದೆ.

LG GL-I292RPZX
LG GL-I292RPZX ರೆಪ್ರಿಜರೇಟರ್ ಅಮೆಜಾನ್‌ನಲ್ಲಿ 33% ಡಿಸ್ಕೌಂಟ್ ಪಡೆದುಕೊಂಡಿದೆ. ಇದು ನಿಮಗೆ ರಿಯಾಯಿತಿಯ ನಂತರ 24,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಫ್ರಿಜ್ 242-ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, 3-ಸ್ಟಾರ್ ಎನರ್ಜಿ ರೇಟಿಂಗ್‌ನೊಂದಿಗೆ ಬರುತ್ತದೆ. ಇದಲ್ಲದೆ ಈ ರೆಫ್ರಿಜರೇಟರ್ ಕಂಪ್ರೆಸರ್ ಮೇಲೆ 10 ವರ್ಷಗಳ ವಾರಂಟಿಯನ್ನು ನೀಡಲಾಗಿದೆ. ಇದು ಮೇಲ್ಭಾಗದಲ್ಲಿ ಮೂರು LED ಇಂಡಿಕೇಟರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಡೋರ್ ಕೂಲಿಂಗ್+, ಸ್ಮಾರ್ಟ್ ಡಯಾಗ್ನೋಸಿಸ್, ಸ್ಮಾರ್ಟ್ ಕನೆಕ್ಟ್‌ನಂತಹ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ.
ಗೋದ್ರೇಜ್ RF EON 265C RCIF
ಗೋದ್ರೇಜ್ RF EON 265C RCIF ರೆಪ್ರಿಜರೇಟರ್ ಅಮೆಜಾನ್‌ನಲ್ಲಿ 22% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ ಇದನ್ನು ನೀವು ಕೇವಲ 24,490ರೂಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಫೀಚರ್ಸ್‌ಗಳ ವಿಚಾರಕ್ಕೆ ಬಂದರೆ ಈ ರೆಫ್ರಿಜರೇಟರ್ 3-ಸ್ಟಾರ್ ಎನರ್ಜಿ ರೇಟಿಂಗ್ ಅನ್ನು ಹೊಂದಿದ್ದು, 244-ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಇದು 6 ರಲ್ಲಿ 1 ಕನ್ವರ್ಟಿಬಲ್ ಫ್ರೀಜರ್ ಟೆಕ್ನಾಲಜಿಯನ್ನು ಹೊಂದಿದೆ.


Click it and Unblock the Notifications








