ಅಮೆಜಾನ್ ಫ್ರೀಡಂ ಸೇಲ್: ಬ್ಲೂಟೂತ್ ಸ್ಪೀಕರ್, ಹೆಡ್‌ಫೋನ್ ಮೇಲೆ ಭಾರೀ ರಿಯಾಯಿತಿ..!
ಸ್ವಾತಂತ್ರ್ಯ ದಿನಚರಣೆ ಹತ್ತಿರ ಬಂದ ಹಿನ್ನೆಲೆಯಲ್ಲಿ ಅಮೇಜಾನ್ ಕೂಡ ತನ್ನ ಫ್ರೀಡಂ ಸೇಲ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದೆ. ಅಮೇಜಾನ್ ನಲ್ಲಿ ಭಾರೀ ರಿಯಾಯಿತಿ ಬೆಲೆಯ ಮಾರಾಟವು 4 ದಿನಗಳ ಕಾಲ ನಡೆಯಲಿದೆ. ಅದರಲ್ಲೂ ಪ್ರಮುಖವಾಗಿ ಹೆಡ್ ಫೋನ್ ಗಳು ಮತ್ತು ಸ್ಪೀಕರ್ ಗಳ ಮೇಲೆ ಭರ್ಜರಿ ಡಿಸ್ಕೌಂಡ್ ಲಭ್ಯವಿದೆ.

ನೀವು ಒಂದು ವೇಳೆ ಉತ್ತಮ ಬೆಲೆಯಲ್ಲಿ ಹೆಡ್ ಫೋನ್ ಅಥವಾ ಬ್ಯೂ ಟೂತ್ ಸ್ಪೀಕರ್ ಗಳನ್ನು ಖರೀದಿಸಬೇಕು ಎಂದಿದ್ದರೆ ಇಲ್ಲಿದೆ ನೋಡಿ ಆಫರ್ ಗಳ ವಿವರಗಳು.ಕೇವಲ ರಿಯಾಯಿತಿ ಬೆಲೆ ಮಾತ್ರವಲ್ಲ , ಎಸ್ ಬಿ ಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿ ಮಾಡುವವರಿಗೆ ಶೇಕಡಾ 10 ರ ರಿಯಾಯಿತಿ ಬೆಲೆ ಯೂ ಲಭ್ಯವಿದೆ ಜೊತೆಗೆ ಕ್ಯಾಷ್ ಲೆಸ್ ಪೇಮೆಂಟ್ ಮಾಡುವ ಗ್ರಾಹಕರಿಗೆ ಶೇಕಡಾ 50 ರಷ್ಟು ರಿಯಾಯಿತಿ ಕೂಡ ಸಿಗಲಿದೆ.

ಮುವೆ ಅಕೌಸ್ಟಿಕ್ಸ್ ಇಂಪಲ್ಸ್ MA-1500FB ಹೆಡ್ ಫೋನ್ ಗಳು: ರಿಯಾಯಿತಿ ಬೆಲೆ 1,700ರುಪಾಯಿಗಳು
ಈ ಹೆಡ್ ಫೋನ್ ಗಳನ್ನು ರಿಯಾಯಿತಿ ಬೆಲೆ 1,700 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರ ನಿಜವಾದ ಬೆಲೆ 2,499 ರುಪಾಯಿಗಳಾಗಿದ್ದು ಗ್ರಾಹಕರು ಕೇವಲ 799 ರುಪಾಯಿಗೆ ಖರೀದಿಸುವ ಅವಕಾಶ ಲಭ್ಯವಿದೆ. ಮುವೆ ಅಕೌಸ್ಟಿಕ್ಸ್ ಇಂಪಲ್ಸ್ MA-1500FB ಹೆಡ್ ಫೋನ್ ಗಳು ಗಳು ಡಿಟ್ಯಾಚೇಬಲ್ ಇನ್ ಲೈನ್ ಮೈಕ್ರೋಫೋನ್ ಗಳಾಗಿದೆ ಮತ್ತು ಪ್ಲೇಬ್ಯಾಕ್ ಕಂಟ್ರೋಲ್ ಕೇಬಲ್ಇದೆ ಜೊತೆಗೆ ಹೆಚ್ಚಿನ ಸ್ಮಾರ್ಟ್ ಫೋನ್ ಗಳಿಗೆ ಬಳಕೆ ಮಾಡಬಹುದು.

ಬೋಟ್ ರಾಕರ್ಜ್ 400 ಬ್ಲೂಟೂತ್ ಹೆಡ್ ಫೋನ್ : ರಿಯಾಯಿತಿ ಬೆಲೆ 1,991ರುಪಾಯಿಗಳು
ಬೋಟ್ ನ ಈ ಬ್ಲೂಟೂತ್ ಇಯರ್ ಫೋನ್ ಶೇಕಡಾ 67 ರ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರು ಇದನ್ನು 999 ರುಪಾಯಿಗೆ ಖರೀದಿಸಬಹುದು ಮತ್ತು ಅಂದರೆ ಸುಮಾರು 1,991 ರುಪಾಯಿಯ ರಿಯಾಯಿತಿ ಬೆಲೆ ಈ ಅಮೇಜಾನ್ ಮಾರಾಟದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಈ ಡಿವೈಸ್ 40ಎಂಎಂ ಡ್ರೈವರ್ ಗಳನ್ನು ಒಳಗೊಂಡಿದೆ ಮತ್ತು ಇನ್ ಬಿಲ್ಟ್ ನಾಯ್ಸ್ ಕ್ಯಾಲ್ಸಲೇಷನ್ ಮೈಕ್ರೋಫೋನ್ ಇದಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 8 ಘಂಟೆಗಳ ಕಾಲ ಬಳಕೆ ಮಾಡಬಹುದಾದ ಭರವಸೆಯನ್ನು ಕಂಪೆನಿ ನೀಡುತ್ತದೆ.

ಜೆಬಿಎಲ್ ಸಿ200ಎಸ್ಐ ಇಯರ್ ಫೋನ್: ರಿಯಾಯಿತಿ ಬೆಲೆ 700ರುಪಾಯಿಗಳು
ಜೆಬಿಎಲ್ ಇಯರ್ ಫೋನ್ ಗಳನ್ನು ಖರೀದಿಸಿ ಗ್ರಾಹಕರು 700 ರುಪಾಯಿಯನ್ನು ಉಳಿತಾಯ ಮಾಡಬಹುದು. 1,299 ರುಪಾಯಿಯ ಜೆಬಿಎಲ್ ಇಯರ್ ಫೋನ್ ಗಳು ಅಮೇಜಾನ್ ಫ್ರೀಡಂ ಸೇಲ್ ನಲ್ಲಿ ಕೇವಲ 599 ರುಪಾಯಿಗೆ ಲಭ್ಯವಿದೆ. ಈ ಇಯರ್ ಫೋನ್ ಗಳು ಕಡಿಮೆ ತೂಕವನ್ನು ಹೊಂದಿರುತ್ತದೆ ಮತ್ತು ಮೂರು ಸೈಜಿನ ಇಯರ್ ಬಡ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಡಿವೈಸ್ ಗಳ ಪ್ರೀಕ್ವೆನ್ಸಿ ರೇಂಜ್ 20Hz ನಿಂದ 20kHz ಆಗಿದೆ ಜೊತೆಗೆ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಬಳಕೆ ಮಾಡಬಹುದಾದ ಇಯರ್ ಫೋನ್ ಗಳು ಇದಾಗಿದೆ.

ಮೊಟೊರೊಲಾ ಪಲ್ಸ್ ಎಸ್ಕೇಪ್ ವಯರ್ ಲೆಸ್ ಹೆಡ್ ಫೋನ್: ರಿಯಾಯಿತಿ ಬೆಲೆ 4,000 ರುಪಾಯಿಗಳು
ಮೊಟೊರೊಲಾ ಕಂಪೆನಿಯ ಹೆಡ್ ಫೋನ್ ಗಳನ್ನು ಭರ್ಜರಿ ಡಿಸ್ಕೌಂಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹೌದು ಸುಮಾರು 4,000 ರುಪಾಯಿಯ ರಿಯಾಯಿತಿ ಬೆಲೆ ಫ್ರೀಡಂ ಸೇಲ್ ನಲ್ಲಿ ಮೊಟೋರೊಲಾ ಇಯರ್ ಫೋನ್ ಗಳ ಮೇಲೆ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಬಿಡುಗಡೆಗೊಂಡಾಗ 6,499 ರುಪಾಯಿ ಬೆಲೆ ನಿಗದಿ ಮಾಡಲಾಗಿದ್ದು ಮೊಟೋರೋಲಾ ಪ್ಲಸ್ ಎಸ್ಕೇಪ್ ವಯರ್ ಲೆಸ್ ಹೆಡ್ ಫೋನ್ ನ್ನು ಗ್ರಾಹಕರು 2,499 ರುಪಾಯಿಗೆ ಅಂದರೆ ಶೇಕಡ್ 62 ರಷ್ಟು ರಿಯಾಯಿತಿ ಪಡೆದು ಖರೀದಿಸುವ ಅವಕಾಶವಿದೆ.
ಅಮೇಜಾನ್ ಅಲೆಕ್ಸಾ ಅನೇಬಲ್ ಆಗಿರುವ ಈ ಹೆಡ್ ಫೋನ್ ಗಳು ಬ್ಲೂಟೂತ್ 4.1 ಬೆಂಬಲದೊಂದಿಗೆ ಬರುತ್ತದೆ ಮತ್ತು ನಾಯ್ಸ್ ಐಸೋಲೇಷನ್ ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಇದು 40ಎಂಎಂ ಡ್ರೈವರ್ ಗಳನ್ನು ಹೊಂದಿದ್ದು ಎರಡು ಡಿವೈಸ್ ಗಳಿಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿರುತ್ತದೆ.

ಹೌಸ್ ಆಫ್ ಮಾರ್ಲಿ ಸ್ಮೈಲ್ ಜಮೈಕಾ ಇಯರ್ ಫೋನ್ : ರಿಯಾಯಿತಿ ಬೆಲೆ 991 ರುಪಾಯಿಗಳು
ಹೌಸ್ ಆಫ್ ಮಾರ್ಲಿ ಸ್ಮೈಲ್ ಜಮೈಕಾ ಇಯರ್ ಫೋನ್ ಗಳನ್ನು ಕೇವಲ 999 ರುಪಾಯಿಗೆ ಖರೀದಿಸುವ ಅವಕಾಶ ಗ್ರಾಹಕರದ್ದು. 52 ಇಂಚಿನ ಫ್ಯಾಬ್ರಿಕ್ ಕಾರ್ಡ್ ಮತ್ತು ಫ್ರೀಕ್ವೆನ್ಸಿ ರೇಂಜ್ 18Hz ನಿಂದ 20kHz ಇರುವ ಈ ಹೆಡ್ ಫೋನ್ ಉತ್ತಮ ರಿಯಾಯಿತಿಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.ಈ ಡಿವೈಸ್ 1 ಬಟನ್ ಮಿಕ್ಸ್ ಮತ್ತು ನಾಯ್ಸ್ ಕ್ಯಾಲ್ಸಲೇಷನ್ ತಂತ್ರಜ್ಞಾನವನ್ನು ಒಳಗೊಂಡಿದೆ.
ಉತ್ತಮ ರಿಯಾಯಿತಿಯಲ್ಲಿ ಲಭ್ಯವಾಗುತ್ತಿರುವ ಅಮೇಜಾನ್ ಫ್ರೀಡಂ ಸೇಲ್ ನ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದು.


Click it and Unblock the Notifications