ಅಮೆಜಾನ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ 50% ವರೆಗೂ ಡಿಸ್ಕೌಂಟ್.. ಕೂಡಲೇ ಖರೀದಿಸಿ!
ಇ-ಕಾಮರ್ಸ್ ದೈತ್ಯ ಅಮೆಜಾನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೇ ವಿಕೆಂಡ್, ಮಂತ್‌ಎಂಡ್ ಸೇಲ್‌ಗಳನ್ನು ಸಹ ನಡೆಸುತ್ತಾ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್ ಗ್ರಾಂಡ್ ಓಣಂ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಬಿಒಗ್ ಆಫರ್ ಲಭ್ಯವಾಗುತ್ತಿದೆ.
ಹೌದು, ಅಮೆಜಾನ್ ಗ್ರಾಂಡ್ ಓಣಂ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಹೊಸ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ 50% ವರೆಗೂ ಡಿಸ್ಕೌಂಟ್ ದೊರೆಯಲಿದೆ. ಇನ್ನು ಈ ಸೇಲ್ ಇದೇ ಆಗಸ್ಟ್ 29 ರಂದು ಕೊನೆಗೊಳ್ಳಲಿದ್ದು, ಗ್ರಾಹಕರು ಕೂಡಲೇ ಖರೀದಿಸಿದರೆ ಇನ್ನಷ್ಟು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಅಮೆಜಾನ್ ಗ್ರಾಂಡ್ ಓಣಂ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಡಿಸ್ಕೌಂಟ್ ಪಡೆದುಕೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG 4K ಅಲ್ಟ್ರಾ HD ಸ್ಮಾರ್ಟ್ OLED ಟಿವಿ
ಅಮೆಜಾನ್ ಗ್ರಾಂಡ್ ಓಣಂ ಸೇಲ್‌ನಲ್ಲಿ LG 4K ಅಲ್ಟ್ರಾ HD ಸ್ಮಾರ್ಟ್ OLED ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದೆ. ಈ ಸ್ಮಾರ್ಟ್‌ಟಿವಿ ಮೂಲ ಬೆಲೆ 1,09,990ರೂ. ಆಗಿದ್ದು ಬರೋಬ್ಬರಿ 41% ಡಿಸ್ಕೌಂಟ್ ಪಡೆದುಕೊಂಡಿದೆ. ಜೊತೆಗೆ 3,000ರೂ ಕೂಪನ್ ಆಫರ್ ಕೂಡ ಲಭ್ಯವಿದ್ದು, ಈ ಟಿವಿ ಕೇವಲ 61,999ರೂ. ಬೆಲೆಗೆ ದೊರೆಯಲಿದೆ. ಇನ್ನು ಸ್ಮಾರ್ಟ್‌ಟಿವಿಯನ್ನು ನೋ ಕಾಸ್ಟ್ EMI ಆಯ್ಕೆಯಲ್ಲಿ ಸಹ ದೊರೆಯಲಿದೆ. ಇದು ಫ್ಲಿಕರ್-ಫ್ರೀ ಸ್ಕ್ರೀನ್ ಮತ್ತು 0.1ms ರೆಸ್ಪಾನ್ಸ್ ಟೈಂ ಅನ್ನು ಹೊಂದಿದೆ. ಜೊತೆಗೆ ಡಾಲ್ಬಿ ಅಟ್ಮೋಸ್, ಡಾಲ್ಬಿ ವಿಷನ್ IQ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಸೋನಿ ಬ್ರಾವಿಯಾ 4K ಅಲ್ಟ್ರಾ HD ಸ್ಮಾರ್ಟ್ ಟಿವಿ
ಸೋನಿ ಕಂಪೆನಿಯ 50 ಇಂಚಿನ 4K ಬ್ರಾವಿಯಾ ಸ್ಮಾರ್ಟ್‌ಟಿವಿ ಕೂಡ ಅಮೆಜಾನ್‌ನಲ್ಲಿ ಡಿಸ್ಕೌಮಟ್ ಪಡೆದುಕೊಂಡಿದೆ. ಇದನ್ನು ನೀವು ಕೇವಲ 51,990ರೂ. ಬೆಲೆಗೆ ಖರೀದಿಸಬಹುದಾಗಿದೆ. ಆಫರ್‌ನಲ್ಲಿ 1,000ರೂ ಕೂಪನ್ ಮತ್ತು 2,000ರೂ ಬ್ಯಾಂಕ್ ಆಫರ್ ಕೂಡ ಸೇರಿದೆ. ಜೊತೆಗೆ ನೋ ಕಾಸ್ಟ್ ಇಎಂಐ ಆಯ್ಕೆಯು ಕೂಡ ಲಭ್ಯವಿದೆ. ಇನ್ನು ಸ್ಮಾರ್ಟ್‌ಟಿವಿ 3 HDMI ಪೋರ್ಟ್‌ಗಳು, ಡಾಲ್ಬಿ ಅಟ್ಮೋಸ್ ಆಡಿಯೋ ಮತ್ತು ಆಪಲ್ ಏರ್‌ಪ್ಲೇ ಬೆಂಬಲವನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ ಐಸ್ಮಾರ್ಟ್ 4K ಟಿವಿ
ಸ್ಯಾಮ್‌ಸಂಗ್ ನ 55 ಇಂಚಿನ ಕ್ರಿಸ್ಟಲ್ ಐಸ್ಮಾರ್ಟ್ 4K TV ಕೂಡ ಡಿಸ್ಕೌಂಟ್ ಪಡೆದಿದೆ. ಈ ಸ್ಮಾರ್ಟ್‌ಟಿವಿ ವಿಶೇಷ ಕೂಪನ್‌ಗಳು ಮತ್ತು ಇತರ ಆಫರ್‌ಗಳ ಮೂಲಕ ನಿಮಗೆ ಕೇವಲ 40,000ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯನ್ನು ನೀವು 12 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಸಹ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಮೋಷನ್ Xcelerator ಬೆಂಬಲವನ್ನು ಹೊಂದಿದೆ. ಇದು ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಪ್ರೈಮ್ ವಿಡಿಯೋ ಮತ್ತು ಇತರರಿಗೆ ಹಾಟ್‌ಕೀಗಳೊಂದಿಗೆ ಸ್ಮಾರ್ಟ್ ರಿಮೋಟ್‌ನೊಂದಿಗೆ ಬರುತ್ತದೆ.
ಮಿ X ಸರಣಿ 4K ಟಿವಿ
ಅಮೆಜಾನ್ ಗ್ರಾಂಡ್ ಓಣಂ ಸೇಲ್‌ನಲ್ಲಿ ಶಿಯೋಮಿ ಸಂಸ್ಥೆಯ 55 ಇಂಚಿನ X ಸರಣಿ 4K TV ಮೇಲೆ ಭರ್ಜರಿ ಆಫರ್ ಲಭ್ಯವಿದೆ. ಇದನ್ನು ಇದೀಗ ನೀವು 35,000ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇದರಲ್ಲಿ 3,000 ಡಿಸ್ಕೌಂಟ್ ಕೂಪನ್ ಮತ್ತು 2,000ರೂ ಬ್ಯಾಂಕ್ ಡಿಸ್ಕೌಂಟ್‌ಗಳು ಕೂಡ ಸೇರಿದೆ. ಜೊತೆಗೆ ಇದು 6 ತಿಂಗಳ ನೋಕಾಸ್ಟ್ EMI ಆಯ್ಕೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 30W ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.


Click it and Unblock the Notifications








