ಹಾರ್ಡ್‌ಡಿಸ್ಕ್‌ಗಳಿಗೆ ಅಮೆಜಾನ್ ಸೇಲ್‌ನಲ್ಲಿ ಬಿಗ್ ಆಫರ್!
ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ಆಯೋಜಿಸಿರುವ ಗ್ರೇಟ್ ಪ್ರೀಡಂ ಫೆಸ್ಟಿವಲ್ ಸೇಲ್ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದಂತೆಯೆ ಎರಡನೇ ದಿನವೂ ಕೂಡ ಆಯ್ದ ಉತ್ಫನ್ನಗಳ ಮೇಲೆ ಸಾಕಷ್ಟು ರಿಯಾಯಿತಿಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಪ್ರಾಡಕ್ಟ್‌ಗಳನ್ನು ಡಿಸ್ಕೌಂಟ್ ದರದಲ್ಲಿ ಖರೀದಿಸಲು ನಿಮಗಿದು ಅತ್ಯುತ್ತಮ ಅವಕಾಶವಾಗಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಗಳು ಮಾತ್ರವಲ್ಲದೆ ಎಕ್ಸಟ್ರನಲ್ ಹಾರ್ಡ್‌ಡಿಸ್ಕ್‌ಗಳಿಗೂ ಸಹ ಆಫರ್ ನೀಡಲಾಗಿದೆ.

ಹೌದು, ಅಮೆಜಾನ್ ಸೇಲ್‌ನಲ್ಲಿ ಎಕ್ಸಟ್ರನಲ್ ಹಾರ್ಡ್ ಡಿಸ್ಕಗಳ ಮೇಲೆ 56% ತನಕ ರಿಯಾಯಿತಿ ನೀಡಲಾಗ್ತಿದೆ. ನಿಮಗೆ ಅವಶ್ಯಕತೆ ಅನುಗುಣವಾಗಿ ಉತ್ತಮ ಹಾರ್ಡ್‌ಡಿಸ್ಕ್‌ಗಳನ್ನು ಖರೀದಿಸಬಹುದಾಗಿದೆ. ಸದ್ಯ ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ ಸ್ಟೋರೇಜ್ ಆಯ್ಕೆ ನೀಡುತ್ತಿದ್ದರೂ ಸಹ, ಪ್ರಮುಖ ದತ್ತಾಂಶಗಳನ್ನು ಸ್ಟೋರ್ ಮಾಡಲು ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಅನ್ನು ಹೆಚ್ಚಿನ ಮಂದಿ ಬಳಸುತ್ತಾರೆ. ಹಾಗಾದ್ರೆ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಯಾವೆಲ್ಲಾ ಹಾರ್ಡ್ ಡಿಸ್ಕ್‌ಗಳು ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

WD 2TB ಮೈ ಪಾಸ್‌ಪೋರ್ಟ್ ಪೋರ್ಟಬಲ್ ಎಕ್ಸಟ್ರನಲ್ ಹಾರ್ಡ್ ಡ್ರೈವ್
ಅಮೆಜಾನ್ ಸೇಲ್‌ನಲ್ಲಿ WD 2TB ಮೈ ಪಾಸ್‌ಪೋರ್ಟ್ ಪೋರ್ಟಬಲ್ ಎಕ್ಸಟ್ರನಲ್ ಹಾರ್ಡ್ ಡ್ರೈವ್ 28% ಡಿಸ್ಕೌಂಟ್ ಪಡೆದಿದೆ. 7,350 ರೂ ಮೂಲ ಬೆಲೆಯ ಈ ಹಾರ್ಡ್‌ಡಿಸ್ಕ್ 5,299 ರೂ ಬೆಲೆಯಲ್ಲಿ ಖರೀದಿಗೆ ಲಬ್ಯವಿದೆ. ಇನ್ನು ಈ ಹಾರ್ಡ್‌ಡಿಸ್ಕ್ ಯುಎಸ್‌ಬಿ 3.0 ಹೊಂದಿದ್ದು, ಪಿಸಿ, ಪಿಎಸ್ 4 ಮತ್ತು ಎಕ್ಸ್‌ಬಾಕ್ಸ್ (ಕಪ್ಪು) ಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಸ್ವಯಂಚಾಲಿತ ಬ್ಯಾಕಪ್, 256ಬಿಟ್ ಎಇಎಸ್ ಹಾರ್ಡ್‌ವೇರ್ ಎನ್‌ಕ್ರಿಪ್ಶನ್ ಮತ್ತು ಸಾಫ್ಟ್‌ವೇರ್ ಪ್ರೊಟೆಕ್ಷನ್ ಅನ್ನು ಹೊಂದಿದೆ. ಇದು ವೆಸ್ಟರ್ನ್ ಡಿಜಿಟಲ್ ಡಿಸ್ಕವರಿ ಸಾಫ್ಟ್‌ವೇರ್ ವೆಸ್ಟರ್ನ್ ಡಿಜಿಟಲ್ ಬ್ಯಾಕಪ್, ಪಾಸ್‌ವರ್ಡ್ ರಕ್ಷಣೆ ಮತ್ತು ಡ್ರೈವ್ ಮ್ಯಾನೇಜ್ ಮಾಡಬಹುದಾಗಿದೆ.

ಸೀಗೇಟ್ ಬ್ಯಾಕಪ್ ಪ್ಲಸ್ ಸ್ಲಿಮ್ 2TB ಎಕ್ಸಟ್ರನಲ್ ಹೆಚ್‌ಡಿಡಿ
ಸೀಗೇಟ್ ಬ್ಯಾಕಪ್ ಪ್ಲಸ್ ಸ್ಲಿಮ್ 2TB ಎಕ್ಸಟ್ರನಲ್ ಹೆಚ್‌ಡಿಡಿ ಹಾರ್ಡ್‌ಟ್ರೈವ್ ವಿಂಡೋಸ್ ಮತ್ತು ಮ್ಯಾಕ್‌ಗಾಗಿ ಯುಎಸ್‌ಬಿ 3.0, 3 ವರ್ಷದ ಡಾಟಾ ರಿಕವರಿ ಸೇವೆಗಳನ್ನು ಹೊಂದಿದೆ. ಇದು 7,999 ರೂ ಮೂಲಬೆಲೆಯನ್ನು ಹೊಂದಿದ್ದು, ಅಮೆಜಾನ್ ಆಫರ್‌ನಲ್ಲಿ 5,299 ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸೀಗೇಟ್ ಬ್ಯಾಕಪ್ ಪ್ಲಸ್ ಸ್ಲಿಮ್ ಈಗ 3 ವರ್ಷದ ರಿಕವರಿ ಡೇಟಾ ಸೇವೆಗಳನ್ನು ಒಳಗೊಂಡಿದೆ. ಕೇವಲ ಒಂದು ಕ್ಲಿಕ್‌ನೊಂದಿಗೆ ಫೈಲ್‌ಗಳನ್ನು ಬ್ಯಾಕಪ್ ಮಾಡಬಹುದಾಗಿದೆ.

ಸೀಗೇಟ್ Expansion 2TB ಎಕ್ಟ್ರನಲ್ ಹೆಚ್‌ಡಿಡಿ
ಸೀಗೇಟ್ Expansion 2TB ಎಕ್ಟ್ರನಲ್ ಹೆಚ್‌ಡಿಡಿ ಹಾರ್ಡ್ ಡಿಸ್ಕ್ ಪೋರ್ಟಬಲ್ ಹಾರ್ಡ್ ಡ್ರೈವ್ ಆಗಿದೆ. ಇನ್ನು ಈ ಹಾರ್ಡ್ ಡಿಸ್ಕ್ ಮೂಲಬೆಲೆ 7,499 ರೂ,ಹೊಂದಿದ್ದು, ಆಫರ್‌ನಲ್ಲಿ 5,199 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಹಾರ್ಡ್ ಡಿಸ್ಕ್ 3 ವರ್ಷಗಳ ಡಾಟಾ ರಿಕವರಿ ಸೇವೆಗಳನ್ನು ಒಳಗೊಂಡಿದೆ. ನಿಮ್ಮ ಡೇಟಾಕ್ಕಾಗಿ ಹೆಚ್ಚುವರಿ ಪ್ರೊಟೆಕ್ಷನ್ ಲೆಯರ್ ಅನ್ನು ಸಹ ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಯುಎಸ್‌ಬಿ ಡ್ರೈವ್ 18 ಇಂಚಿನ ಯುಎಸ್‌ಬಿ 3.0 ಕೇಬಲ್‌ನೊಂದಿಗೆ ಪ್ಲಗ್-ಅಂಡ್-ಪ್ಲೇ ಸರಳತೆಯನ್ನು ಒದಗಿಸುತ್ತದೆ.

ಅಮೆಜಾನ್ ಸೇಲ್‌ನಲ್ಲಿ WD 2TB ಎಲಿಮೆಂಟ್ಸ್ ಪೋರ್ಟಬಲ್ ಎಕ್ಸಟ್ರನಲ್ ಹಾರ್ಡ್ ಡ್ರೈವ್ 34% ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಈ ಹಾರ್ಡ್‌ಡ್ರೈವ್ ಯುಎಸ್‌ಬಿ 3.0, ಪಿಸಿ, ಪಿಎಸ್ 4 ಮತ್ತು ಎಕ್ಸ್‌ಬಾಕ್ಸ್‌ಗೆ ಹೊಂದಿಕೊಳ್ಳುತ್ತದೆ. ಇದು 7,905 ರೂ ಮೂಲಬೆಲೆಯನ್ನು ಹೊಂದಿದ್ದು, ರಿಯಾಯಿತಿ ದರದಲ್ಲಿ 5,199 ರೂ ಗಳಿಗೆ ದೊರೆಯಲಿದೆ. ಇನ್ನು ಈ ಹಾರ್ಡ್‌ಡ್ರೈವ್ ವೇಗದ ಡೇಟಾ ವರ್ಗಾವಣೆ, WD ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೊಂದಿದೆ.


Click it and Unblock the Notifications








