Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ ರಿಯಲ್‌ಮಿ ಬಡ್ಸ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಅಮೆಜಾನ್‌ ಗ್ರೇಟ್‌ ಪ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಜನಪ್ರಿಯ ಬ್ರಾಂಡ್‌ಗಳ ಪ್ರಾಡಕ್ಟ್‌ಗಳಿಗೆ ಡಿಸ್ಕೌಂಟ್‌ ನಿಡಲಾಗ್ತಿದೆ. ಇದರಲ್ಲಿ ರಿಯಲ್‌ಮಿ ಬ್ರಾಂಡ್‌ ಕೂಡ ಸೇರಿದೆ. ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ ಸೇರಿದಂತೆ ಇಯರ್‌ಫೋನ್‌ಗಳಿಗೂ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನ ಮೂರನೇ ದಿನವದ ಇಂದು ಕೂಡ ರಿಯಲ್‌ಮಿ ಬ್ರಾಂಡ್‌ಗಳ ಮೇಲಿನ ರಿಯಾಯಿತಿ ಮುಂದುವರೆದಿದೆ. ನೀವು ಕೂಡ ರಿಯಲ್‌ಮಿ ಪ್ರಾಡಕ್ಟ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸುವುದಕ್ಕೆ ಇದು ಉತ್ತಮ ಅವಕಾಶವಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸೇಲ್‌ನಲ್ಲಿ ರಿಯಲ್‌ಮಿ ಬ್ರಾಂಡ್‌ನ ಎಲ್ಲಾ ಪ್ರಾಡಕ್ಟ್‌ಗಳಿಗೆ ಬಿಗ್‌ ಡಿಸ್ಕೌಂಟ್‌ ದೊರೆಯುತ್ತಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಕೈ ಗೆಟಕುವ ಬೆಲೆಯಲ್ಲಿ ದೊರೆಯುತ್ತಿವೆ. ಇನ್ನು ಜನಪ್ರಿಯ ರಿಯಲ್‌ಮಿ ಇಯರ್‌ಫೋನ್‌ಗಳು ಕೂಡ ಉತ್ತಮ ಬೆಲೆಯಲ್ಲಿ ನಿಮ್ಮ ಕೈ ಸೇರಲಿವೆ. ಸದ್ಯ ನೀವು ಅಮೆಜಾನ್‌ ಸೇಲ್‌ನಲ್ಲಿ ರಿಯಲ್‌ಮಿ ಇಯರ್‌ಫೋನ್‌ಗಳಿಗೆ 43% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯುವ ರಿಯಲ್‌ಮಿ ಇಯರ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ ಬಡ್ಸ್ 2

ರಿಯಲ್‌ಮಿ ಬಡ್ಸ್ 2

ರಿಯಲ್‌ಮಿ ಬಡ್ಸ್ 2 ಅಮೆಜಾನ್‌ ಸೇಲ್‌ನಲ್ಲಿ 25% ರಿಯಾಯಿತಿಯನ್ನು ಪಡೆದುಕೊಂಡಿದೆ. 799 ರೂ, ಎಂಆರ್‌ಪಿ ಹೊಂದಿರುವ ಈ ಇಯರ್‌ಫೋನ್‌ ಆಫರ್‌ನಲ್ಲಿ ನಿಮಗೆ ಕೇವಲ 599 ರೂ ಗಳಿಗೆ ಲಭ್ಯವಾಗಲಿದೆ. ಇನ್ನು ಈ ಇಯರ್‌ಫೋನ್‌ ಮಲ್ಟಿ-ಲೇಯರ್ ಕಾಂಪೋಸಿಟ್ ಡಯಾಫ್ರಾಮ್ ಅನ್ನು ಒಳಗೊಂಡಿರುವ ಶಕ್ತಿಯುತ 11.2 ಎಂಎಂ ಬಾಸ್ ಬೂಸ್ಟ್ ಡ್ರೈವರ್ ಹೊಂದಿದೆ. ಇದು ಇನ್ಲೈನ್ ರಿಮೋಟ್ ತ್ರೀ ಟಚ್ ಬಟನ್‌ ಮತ್ತು ಮೈಕ್ ಅನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಸಂಗೀತ ಮತ್ತು ವೀಡಿಯೋಗಳು, ಒಳಬರುವ ಕರೆಗಳನ್ನು ನಿಯಂತ್ರಿಸಬಹುದು.

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2 ನಿಯೋ

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2 ನಿಯೋ

ಅಮೆಜಾನ್‌ ಸೇಲ್‌ನಲ್ಲಿ ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2 ನಿಯೋ ಇಯರ್‌ಫೋನ್‌ 44% ಡಿಸ್ಕೌಂಟ್‌ ಪಡೆದುಕೊಂಡಿದೆ. ಇನ್ನು ಈ ಇಯರ್‌ಬಡ್ಸ್‌ ಟೈಪ್-ಸಿ ಫಾಸ್ಟ್ ಚಾರ್ಜ್ ಅನ್ನು ಹೊಂದಿದ್ದು, 17-ಗಂಟೆಗಳ ಬ್ಯಾಟರಿ ಸಾಮರ್ಥ್ಯವನ್ನಯ ಪಡದುಕೊಂಡಿದೆ. ಇದರ ಮೂಲ ಬೆಲೆ 2,499 ರೂ ಆಗಿದ್ದು ಆಫರ್‌ನಲ್ಲಿ 1,399 ರೂ, ಬೆಲೆಗೆ ಲಭ್ಯವಾಗಲಿದೆ. ಇದು 11.2 ಎಂಎಂ ಡೈನಾಮಿಕ್ ಬಾಸ್ ಬೂಸ್ಟ್ ಡ್ರೈವರ್ ಹೊಂದಿದ್ದು, ಆಡಿಯೋ ಸಂಪರ್ಕಕ್ಕಾಗಿ ಆಟೋ ಆನ್/ಆಫ್ ಅನ್ನು ಸಹ ಸಕ್ರಿಯಗೊಳಿಸುತ್ತದೆ.

ರಿಯಲ್‌ಮಿ ಬಡ್ಸ್ ಕ್ಲಾಸಿಕ್ ವೈರ್ಡ್ ಇಯರ್‌ಫೋನ್‌

ರಿಯಲ್‌ಮಿ ಬಡ್ಸ್ ಕ್ಲಾಸಿಕ್ ವೈರ್ಡ್ ಇಯರ್‌ಫೋನ್‌

ರಿಯಲ್‌ಮಿ ಬಡ್ಸ್ ಕ್ಲಾಸಿಕ್ ವೈರ್ಡ್ ಇಯರ್‌ಫೋನ್‌ 14.2 ಎಂಎಂ ಆಡಿಯೋ ಡ್ರೈವರ್‌ ಅನ್ನು ಹೊಂದಿದೆ. ಇದು ಅರ್ಧ ಕಿವಿಯ ಆರಾಮದಾಯಕ ವಿನ್ಯಾಸವು ದೀರ್ಘಾವಧಿಯ ಬಳಕೆಯ ನಂತರವೂ ಯಾವುದೇ ಅಸ್ವಸ್ಥತೆ ಇಲ್ಲ ಎಂದು ಖಚಿತಪಡಿಸುತ್ತದೆ. ಇನ್ನು ಈ ಇಯರ್‌ಫೋನ್‌ ಸ್ಪಷ್ಟ ಕರೆಯ ಅನುಭವ ನೀಡುವುದಕ್ಕಾಗಿ ಇನ್-ಲೈನ್ HD ಮೈಕ್ರೊಫೋನ್ ಒಳಗೊಂಡಿದೆ. ಇನ್ನುಳಿದಂತೆ ಇದು 699ರೂ ಮೂಲಬೆಲೆ ಹೊಂದಿದ್ದು, ಆಫರ್‌ನಲ್ಲಿ 399ರೂ,ಬೆಲೆಗೆ ಖರೀದಿಸಬಹುದಾಗಿದೆ.

ರಿಯಲ್‌ಮಿ ಬಡ್ಸ್ ಕ್ಯೂ 2

ರಿಯಲ್‌ಮಿ ಬಡ್ಸ್ ಕ್ಯೂ 2

ರಿಯಲ್‌ಮಿ ಬಡ್ಸ್ ಕ್ಯೂ 2 ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಹೊಂದಿದೆ. ಇದು ಬ್ಲೂಟೂತ್ v5.2 ಹೊಂದಿದ್ದು, 28-ಗಂಟೆಗಳ ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಇಯರ್‌ಫೋನ್‌ IPX5 ವಾಟರ್‌ ಪ್ರೂಫ್‌ ಅನ್ನು ಸಹ ಒಳಗೊಂಡಿದೆ. ಇದು ಪ್ರೀಮಿಯಂ, ಶ್ರೀಮಂತ ಮತ್ತು ತಲ್ಲೀನಗೊಳಿಸುವ ಆಲಿಸುವ ಅನುಭವವನ್ನು ನೀಡುತ್ತದೆ. ಈ ಇಯರ್‌ಫೋನ್‌ 88 ಎಂಎಂ ಸೂಪರ್ ಲೋ ಲೇಟೆನ್ಸಿ ಗೇಮಿಂಗ್ ಮೋಡ್ ಮತ್ತು ಡ್ಯುಯಲ್ ಚಾನೆಲ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಆಡಿಯೋ ಮತ್ತು ವೀಡಿಯೋ ನಡುವೆ ಪರಿಪೂರ್ಣ ಸಿಂಕ್ ಅನ್ನು ಖಚಿತಪಡಿಸುತ್ತದೆ. ಇದರ ಮೂಲ ಬೆಲೆ 3,499 ರೂ ಹೊಂದಿದ್ದು, ಆಫರ್‌ನಲ್ಲಿ 2,299ರೂ,ಗಳಿಗೆ ಲಭ್ಯವಾಗಲಿದೆ.

Best Mobiles in India

English summary
Amazon is hosting its Great Freedom Festival in India and it offers buyers a great chance to get products they needed at much cheaper than market rates.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+