ಇಯರ್‌ಫೋನ್‌ಗಳಿಗೆ ಅಮೆಜಾನ್ ಸೇಲ್‌ನಲ್ಲಿ ಭರ್ಜರಿ ಆಫರ್!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಂತೆಯೇ ಇಯರ್‌ಫೋನ್ ಮಾರುಕಟ್ಟೆ ಕೂಡ ಸಾಕಷ್ಟು ವಿಶಾಲವಾಗಿದೆ. ಹಲವಾರು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿವೆ. ಇನ್ನು ಬಳಕೆದಾರರು ಕೂಡ ತಮಗಿಷ್ಟದ ಬ್ರಾಂಡ್‌ನ ಇಯರ್‌ಬಡ್ಸ್‌ಗಳನ್ನು ಖರೀದಿಸುವುದಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಸದ್ಯ ಇದೀಗ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ತನ್ನ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಇಯರ್‌ಬಡ್ಸ್‌ಗಳ ಮೇಲೆ 75% ಕ್ಕಿಂತ ಹೆಚ್ಚಿನ ರಿಯಾಯಿತಿ ಘೋಷಿಸಿದೆ.

ಹೌದು, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಇಂದಿನಿಂದ ಆರಂಭವಾಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗಿದೆ. ಅದರಲ್ಲೂ ಇಯರ್‌ಬಡ್ಸ್‌ಗಳ ಮೇಲೆ 75% ಡಿಸ್ಕೌಂಟ್ ನೀಡಲಾಗಿದೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಯಾವೆಲ್ಲಾ ಇಯರ್‌ಬಡ್ಸ್‌ಗಳನ್ನು ಖರೀದಿಸಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಏರ್‌ಡೂಪ್ಸ್ 121v2 TWS ಇಯರ್‌ಬಡ್ಸ್
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಬೋಟ್ ಏರ್‌ಡೂಪ್ಸ್ 121v2 TWS ಇಯರ್‌ಬಡ್ಸ್ 67% ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಈ ಇಯರ್‌ಬಡ್ಸ್ ಮೂಲಬೆಲೆ 2,990 ರೂ ಆಗಿದ್ದು, ರಿಯಾಯಿತಿ ದರದಲ್ಲಿ 999ರೂ,ಬೆಲೆಗೆ ಲಭ್ಯವಾಗಲಿದೆ. ಈ ಇಯರ್‌ಬಡ್ಸ್ ಬ್ಲೂಟೂತ್ V5.0, ಇಮ್ಮರ್ಶಿವ್ ಆಡಿಯೋ, 14H ವರೆಗಿನ ಒಟ್ಟು ಪ್ಲೇಬ್ಯಾಕ್ ಅನ್ನು ಹೊಂದಿದೆ. ಇನ್ನು ಬೋಟ್ ಏರ್‌ಡೋಪ್ಸ್ 121v2 ಪ್ರತಿ ಚಾರ್ಜ್‌ನೊಂದಿಗೆ 3.5H ವರೆಗಿನ ತಡೆರಹಿತ ಪ್ಲೇಬ್ಯಾಕ್ ಮತ್ತು ಹೆಚ್ಚುವರಿ 10.5H ಪ್ಲೇಟೈಮ್ ಅನ್ನು ಒಳಗೊಂಡಿದೆ. ಖರೀದಿಸಿದ ದಿನಾಂಕದಿಂದ 1 ವರ್ಷದ ಖಾತರಿಯನ್ನು ಸಹ ಪಡೆದುಕೊಂಡಿದೆ.
ಬೋಟ್ ರಾಕರ್ಜ್ 255 ಇನ್-ಇಯರ್ ಇಯರ್‌ಫೋನ್
ಬೋಟ್ ರಾಕರ್ಜ್ 255 ಇನ್-ಇಯರ್ ಇಯರ್‌ಫೋನ್ ಅಮೆಜಾನ್ ಸೇಲ್‌ನಲ್ಲಿ 70% ಡಿಸ್ಕೌಂಟ್ ಪಡೆದಿದೆ. ಈ ಇಯರ್‌ಫೋನ್ ಇನ್ಲೈನ್ ಕಂಟ್ರೋಲ್ ಹೊಂದಿದ್ದು, ವಾಲ್ಯೂಮ್ ಅನ್ನು ಟಾಗಲ್ ಮಾಡಬಹುದು. ಜೊತೆಗೆ ಸಿರಿ ಅಥವಾ ಗೂಗಲ್ ನೌ ಧ್ವನಿ ನಿಯಂತ್ರಿತ ಸ್ಮಾರ್ಟ್‌ಫೋನ್ ಸಹಾಯಕರನ್ನು ಸಕ್ರಿಯಗೊಳಿಸಬಹುದು. ಇನ್ನು ಈ ಇಯರ್‌ಬಡ್ಸ್ 8 ಗಂಟೆಗಳ ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಬ್ಲೂಟೂತ್ V5.0 ಮತ್ತು ವಾಯ್ಸ್ ಅಸಿಸ್ಟೆಂಟ್ ಅನ್ನು ಒಳಗೊಂಡಿದೆ. ಅಮೆಜಾನ್ ಸೇಲ್‌ನಲ್ಲಿ 899 ರೂ ಬೆಲೆಗೆ ಲಭ್ಯವಾಗಲಿದೆ.

JBL C115 TWS
ಜೆಬಿಎಲ್ ಕಂಪೆನಿಯ JBL C115 TWS ಇಯರ್‌ಬಡ್ಸ್ ಅಮೆಜಾನ್ ಸೇಲ್‌ನಲ್ಲಿ 59% ರಿಯಾಯಿತಿ ಪಡೆದುಕೊಂಡಿದೆ. ಇದು ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್ ಆಗಿದ್ದು, ಕ್ವಿಕ್ ಚಾರ್ಜ್‌ನೊಂದಿಗೆ ಜಂಬೋ 21 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ. 15 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 1 ಗಂಟೆ ಪ್ಲೇಬ್ಯಾಕ್ ಪಡೆಯಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್ ಮೊನೊ ಮತ್ತು ಸ್ಟೀರಿಯೋ ಮೋಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಅಮೆಜಾನ್ ಸೇಲ್‌ನಲ್ಲಿ 8,999 ರೂ ಮೂಲ ಬೆಲೆಯ ಈ ಇಯರ್‌ಬಡ್ಸ್ ರಿಯಾಯಿತಿ ದರದಲ್ಲಿ 3,699 ರೂ ಬೆಲೆಗೆ ಖರೀದಿಸಬಹುದಾಗಿದೆ.
ಸೋನಿ WH-1000XM4
ಸೋನಿ WH-1000XM4 ಹೆಡ್‌ಫೋನ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಇನ್ನು ಈ ಹೆಡ್‌ಫೋನ್ 30 ಗಂಟೆಗಳ ಬ್ಯಾಟರಿ ಲೈಫ್ ಹೊಂದಿದೆ. ಇದು ತ್ವರಿತ ಚಾರ್ಜ್, ಟಚ್ ಕಂಟ್ರೋಲ್ ಮತ್ತು ಅಲೆಕ್ಸಾ ವಾಯ್ಸ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು 29,990 ರೂ ಮೂಲ ಬೆಲೆಯ ಈ ಇಯರ್‌ಫೋನ್ ಅಮೆಜಾನ್ ಸೇಲ್‌ನಲ್ಲಿ 24,990 ರೂ ಬೆಲೆಗೆ ದೊರೆಯಲಿದೆ. ಇನ್ನು ಈ ಇಯರ್‌ಫೋನ್ ಸಿಂಗಲ್ ಚಾರ್ಜ್‌ನಲ್ಲಿ 30 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ. ಅಲ್ಲದೆ 10 ನಿಮಿಷಗಳ ಚಾರ್ಜ್‌ನಲ್ಲಿ 5 ಗಂಟೆಗಳ ಪ್ಲೇ ಬ್ಯಾಕ್ ನೀಡಲಿದೆ.
ರಿಯಲ್‌ಮಿ ಬಡ್ಸ್ ವಾರ್‌ಲೆಸ್ 2 ನಿಯೋ
ಅಮೆಜಾನ್ ಸೇಲ್‌ನಲ್ಲಿ ರಿಯಲ್‌ಮಿ ಬಡ್ಸ್ ವಾರ್‌ಲೆಸ್ 2 ನಿಯೋ ಇಯರ್‌ಫೋನ್ ಆಕರ್ಷಕ ಆಫರ್ ಪಡೆದುಕೊಂಡಿದೆ. ಇದು 2,499 ಎಂಆರ್‌ಪಿ ಹೊಂದಿದ್ದು, ಇದೀಗ ಆಫರ್‌ನಲ್ಲಿ 1,399 ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಇಯರ್‌ಫೋನ್ ಟೈಪ್-ಸಿ ಫಾಸ್ಟ್ ಚಾರ್ಜ್ ಅನ್ನು ಹೊಂದಿದ್ದು, 17 ಗಂಟೆಗಳ ಪ್ಲೇಬ್ಯಾಕ್ ನೀಡಲಿದೆ.


Click it and Unblock the Notifications








